Parrot Fever: ಯುರೋಪ್​ನಲ್ಲಿ ಗಿಳಿ ಜ್ವರಕ್ಕೆ ಐವರು ಬಲಿ; ಈ ರೋಗದ ಬಗ್ಗೆ ನಿಮಗೂ ತಿಳಿದಿರಲಿ

|

Updated on: Mar 10, 2024 | 2:29 PM

ಗಿಳಿ ಜ್ವರ ಯುರೋಪಿಯನ್ನರಲ್ಲಿ ಸಂಚಲನವನ್ನು ಸೃಷ್ಟಿಸಿದೆ. ಯುರೋಪ್​ನಲ್ಲಿ ಈಗಾಗಲೇ ಗಿಳಿ ಜ್ವರದಿಂದ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಹತ್ತಾರು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಿಳಿ ಜ್ವರ ಸಾಂಕ್ರಾಮಿಕವೇ? ಈ ರೋಗ ಹೇಗೆ ಬರುತ್ತದೆ? ಇದನ್ನು ಹೇಗೆ ತಡೆಯಬಹುದು? ಈ ರೋಗದ ಲಕ್ಷಣಗಳೇನು? ಎಂಬ ಕುರಿತು ಮಾಹಿತಿ ಇಲ್ಲಿದೆ.

Parrot Fever: ಯುರೋಪ್​ನಲ್ಲಿ ಗಿಳಿ ಜ್ವರಕ್ಕೆ ಐವರು ಬಲಿ; ಈ ರೋಗದ ಬಗ್ಗೆ ನಿಮಗೂ ತಿಳಿದಿರಲಿ
ಗಿಳಿ ಜ್ವರ
Image Credit source: iStock
Follow us on

ಯುರೋಪ್‌ನಲ್ಲಿ ಗಿಳಿ ಜ್ವರ (Parrot Fever) ಏಕಾಏಕಿ ಹೆಚ್ಚಾಗಿದೆ. ಇದೊಂದು ಉಸಿರಾಟದ ಬ್ಯಾಕ್ಟೀರಿಯಾದ ಸೋಂಕಾಗಿದ್ದು, ಯುರೋಪಿನಾದ್ಯಂತ ಈ ವರ್ಷ 5 ಜನರನ್ನು ಬಲಿ ಪಡೆದಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಡೆನ್ಮಾರ್ಕ್‌ನಲ್ಲಿ 4 ಜನರು ಗಿಳಿ ಜ್ವರದಿಂದ ಸಾವನ್ನಪ್ಪಿದ್ದಾರೆ. ನೆದರ್ಲೆಂಡ್​ನಲ್ಲಿ ಒಬ್ಬರು ಮತ್ತು ಆಸ್ಟ್ರಿಯಾ, ಜರ್ಮನಿ ಮತ್ತು ಸ್ವೀಡನ್‌ನಾದ್ಯಂತ ಡಜನ್​ಗಟ್ಟಲೆ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದ ಬೇರೆ ದೇಶಗಳಲ್ಲಿಯೂ ಗಿಳಿ ಜ್ವರದ ಆತಂಕ ಹೆಚ್ಚಾಗಿದೆ.

ಗುರುಗ್ರಾಮದ ಫೋರ್ಟಿಸ್ ಮೆಮೋರಿಯಲ್ ರಿಸರ್ಚ್ ಇನ್‌ಸ್ಟಿಟ್ಯೂಟ್​ನ ಡಾ. ನೇಹಾ ರಸ್ತೋಗಿ ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್‌ನೊಂದಿಗೆ ಮಾತನಾಡುತ್ತಾ, “ಗಿಳಿ ಜ್ವರವನ್ನು ಸಿಟ್ಟಾಕೋಸಿಸ್ ಎಂದೂ ಕರೆಯುತ್ತಾರೆ. ಇದು ಅಪರೂಪದ ಆದರೆ ಗಂಭೀರವಾದ ಬ್ಯಾಕ್ಟೀರಿಯಂ ಕ್ಲಮೈಡಿಯಾ ಸಿಟ್ಟಾಸಿ ಎಂಬ ಬ್ಯಾಕ್ಟೀರಿಯಾದ ಸೋಂಕಾಗಿದೆ. ಈ ಸೋಂಕು ಮುಖ್ಯವಾಗಿ ಪಕ್ಷಿಗಳು ಅದರಲ್ಲೂ ವಿಶೇಷವಾಗಿ ಗಿಳಿಗಳು, ಪಾರಿವಾಳಗಳು ಮತ್ತು ಕೋಳಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಬ್ಯಾಕ್ಟೀರಿಯಾದಿಂದ ಕಲುಷಿತಗೊಂಡ ವಾಯುಗಾಮಿ ಕಣಗಳನ್ನು ಉಸಿರಾಡುವ ಮೂಲಕ ಇದು ಮನುಷ್ಯರಿಗೆ ಹರಡುತ್ತದೆ” ಎಂದಿದ್ದಾರೆ.

ಇದನ್ನೂ ಓದಿ: ಡೆಂಗ್ಯೂ ಜ್ವರ ಬಂದಾಗ ಈ ಆಹಾರಗಳಿಂದ ದೂರವಿರಿ

2023ರಲ್ಲಿ ಮತ್ತು 2024ರ ಆರಂಭದಲ್ಲಿ ವಿಶೇಷವಾಗಿ 2023ರ ನವೆಂಬರ್-ಡಿಸೆಂಬರ್ ತಿಂಗಳಿಂದ ಸಿಟ್ಟಾಕೋಸಿಸ್ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ. ಸಿಟ್ಟಾಕೋಸಿಸ್ ಅನ್ನು ಗಿಳಿ ಜ್ವರ ಎಂದೂ ಕರೆಯುತ್ತಾರೆ. ಇದು ಕ್ಲಮೈಡೋಫಿಲಾ ಸಿಟ್ಟಾಸಿಯಿಂದ ಉಂಟಾಗುವ ಉಸಿರಾಟದ ಸೋಂಕು. ಇದು ಸಾಮಾನ್ಯವಾಗಿ ಪಕ್ಷಿಗಳಲ್ಲಿ ಕಂಡುಬರುತ್ತದೆ. ಮಾನವನ ಸೋಂಕುಗಳು ಸಾಮಾನ್ಯವಾಗಿ ಸೋಂಕಿತ ಪಕ್ಷಿಗಳ ಸಂಪರ್ಕದ ಮೂಲಕ ಸಂಭವಿಸುತ್ತವೆ. ಇದು ಸೋಂಕಿತ ಪಕ್ಷಿಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಸಾಕುಪ್ರಾಣಿಗಳು, ಕೋಳಿ, ಪಶುವೈದ್ಯರು ಮತ್ತು ತೋಟಗಾರರೊಂದಿಗೆ ಕೆಲಸ ಮಾಡುವ ವ್ಯಕ್ತಿಗಳಲ್ಲಿ ಕಂಡುಬರುತ್ತದೆ.

ಗಿಳಿ ಜ್ವರ ಮನುಷ್ಯರ ಮೇಲೆ ಹೇಗೆ ಪರಿಣಾಮ ಬೀರುತ್ತದೆ?:

ಒಬ್ಬ ವ್ಯಕ್ತಿಯು ಬ್ಯಾಕ್ಟೀರಿಯಾದ ಸಂಪರ್ಕಕ್ಕೆ ಬಂದಾಗ ಅವರು ಜ್ವರ, ಶೀತ, ತಲೆನೋವು, ಸ್ನಾಯು ನೋವು ಮತ್ತು ಆಯಾಸದಂತಹ ಜ್ವರದ ತರಹದ ರೋಗಲಕ್ಷಣಗಳು ಉಂಟಾಗಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಇದು ನ್ಯುಮೋನಿಯಾ ಮತ್ತು ಇತರ ಉಸಿರಾಟದ ತೊಂದರೆಗಳಿಗೆ ಕಾರಣವಾಗಬಹುದು.

ಗಿಳಿ ಜ್ವರವು ಕ್ಲಮೈಡಿಯ ಸಿಟ್ಟಾಸಿ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಬ್ಯಾಕ್ಟೀರಿಯಾದ ಸೋಂಕು. ಇದು ಸೋಂಕಿತ ಪಕ್ಷಿಗಳ ನೇರ ಸಂಪರ್ಕದ ಮೂಲಕ ಅಥವಾ ಅವುಗಳ ಹಿಕ್ಕೆಗಳು, ಗರಿಗಳು ಅಥವಾ ಉಸಿರಾಟದ ಸ್ರವಿಸುವಿಕೆಯ ಮೂಲಕ ಮನುಷ್ಯರಿಗೆ ಹರಡುತ್ತದೆ. ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ಅಥವಾ ಮೊದಲೇ ಅಸ್ತಿತ್ವದಲ್ಲಿರುವ ಉಸಿರಾಟದ ತೊಂದರೆಗಳನ್ನು ಹೊಂದಿರುವ ಜನರು ಈ ಸೋಂಕಿಗೆ ಹೆಚ್ಚು ಒಳಗಾಗುತ್ತಾರೆ.

ಇದನ್ನೂ ಓದಿ: ಜ್ವರದಿಂದ ಬಳಲುತ್ತಿದ್ದರೆ ಈ ತಪ್ಪುಗಳನ್ನು ಮಾಡಬೇಡಿ

ಗಿಳಿ ಜ್ವರದಿಂದ ಸುರಕ್ಷಿತವಾಗಿರುವುದು ಹೇಗೆ?:

ಗಿಳಿ ಜ್ವರವನ್ನು ತಡೆಗಟ್ಟಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ, ಪಕ್ಷಿಗಳನ್ನು ನಿರ್ವಹಿಸುವಾಗ ಅಥವಾ ಪಕ್ಷಿಗಳು ಇರುವ ಪ್ರದೇಶಗಳಲ್ಲಿ ಕೆಲಸ ಮಾಡುವಾಗ ಉತ್ತಮ ನೈರ್ಮಲ್ಯವನ್ನು ರೂಢಿಸಿಕೊಳ್ಳುವುದು ಮುಖ್ಯ. ನೀವು ಪಕ್ಷಿಗಳು ಅಥವಾ ಅವುಗಳ ಪಂಜರಗಳನ್ನು ನಿರ್ವಹಿಸುವಾಗ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ. ಪಕ್ಷಿಯ ಪಂಜರಗಳನ್ನು ಸ್ವಚ್ಛಗೊಳಿಸುವಾಗ ಗ್ಲೌಸ್​ ಮತ್ತು ಮಾಸ್ಕ್​ಗಳನ್ನು ಧರಿಸಲು ಮರೆಯಬೇಡಿ.

ಗಿಳಿ ಜ್ವರದ ಲಕ್ಷಣಗಳು ಮತ್ತು ಚಿಕಿತ್ಸೆಗಳೇನು?:

ಗಿಳಿ ಜ್ವರ ಜ್ವರ, ಶೀತ, ತಲೆನೋವು, ಸ್ನಾಯು ನೋವು ಮತ್ತು ಒಣ ಕೆಮ್ಮು ಸಿಟ್ಟಾಕೋಸಿಸ್ ರೋಗಲಕ್ಷಣಗಳನ್ನು ಒಳಗೊಂಡಿರುತ್ತದೆ. WHO ಪ್ರಕಾರ, ಹೆಚ್ಚಿನ ಜನರು ಬ್ಯಾಕ್ಟೀರಿಯಾಕ್ಕೆ ಒಡ್ಡಿಕೊಂಡ ನಂತರ 5ರಿಂದ 14 ದಿನಗಳಲ್ಲಿ ಈ ರೋಗಲಕ್ಷಣಗಳನ್ನು ಅನುಭವಿಸಲು ಪ್ರಾರಂಭಿಸುತ್ತಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ