
ನಿಮಗೆ ಕೂದಲು ಉದುರುವಿಕೆ ಸಮಸ್ಯೆ ಬಾಧಿಸುತ್ತಿದ್ದು, ಎಷ್ಟೇ ಪ್ರಯತ್ನಿಸಿದರೂ ಪರಿಹಾರ ಸಿಗುತ್ತಿಲ್ಲವಾ? ಚಿಂತಿಸುವ ಅಗತ್ಯ ಇಲ್ಲ. ಪತಂಜಲಿ ಸಂಸ್ಥೆಯು (Patanjali Ayurveda) ಈ ಸಮಸ್ಯೆಗೆ ಅಚ್ಚರಿಯ ಪರಿಹಾರ ಕಂಡು ಹಿಡಿದಿದೆ. ಈ ಕ್ಷೇತ್ರದಲ್ಲಿ ಪತಂಜಲಿಯ ಸಂಶೋಧಕರು ಸಾಕಷ್ಟು ರಿಸರ್ಚ್ ನಡೆಸಿದ್ದು, ಕೂದಲು ಉದುರುವುದನ್ನು (Hair fall problem) ನಿಲ್ಲಿಸುವುದು ಮಾತ್ರವಲ್ಲ, ಹೊಸ ಕೂದಲು ಬೆಳವಣಿಗೆಯನ್ನು ಸಾಧ್ಯವಾಗುವಂತಹ ಪರಿಹಾರ ಹುಡುಕಿದೆ. ಪತಂಜಲಿಯ ಆವಿಷ್ಕರಿಸಿದ ಈ ಪ್ರಯೋಗವು ಬೋಳು ಸಮಸ್ಯೆಯಿಂದ (Bald head) ಬಳಲುತ್ತಿರುವವರಿಗೂ ಪರಿಣಾಮಕಾರಿಯಾಗಬಹುದು. ಪತಂಜಲಿಯ ಆಯುರ್ವೇದ ಸಂಸ್ಥೆಯ ವೈದ್ಯರ ತಂಡವೊಂದು 6 ವಾರಗಳ ಕಾಲ ಅನೇಕ ರೋಗಿಗಳ ಮೇಲೆ ಸಂಶೋಧನೆ ನಡೆಸಿತು. ಸಂಶೋಧನೆಯ ಸಮಯದಲ್ಲಿ, ಅವರಿಗೆ ವಿವಿಧ ವಿಧಾನಗಳಿಂದ ಚಿಕಿತ್ಸೆ ನೀಡಲಾಯಿತು. ಈ ವೇಳೆ ಕೂದಲು ಉದುರುವುದು ನಿಂತಿದ್ದು ಮಾತ್ರವಲ್ಲದೆ ಹೊಸ ಕೂದಲು ಬೆಳೆಯಲು ಪ್ರಾರಂಭಿಸಿತು. ಈ ಸಂಶೋಧನೆಯನ್ನು ಪತಂಜಲಿ ಸಂಸ್ಥೆ ಪ್ರಕಟಿಸಿದೆ.
ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಕೂದಲು ಉದುರುವಿಕೆ ಮತ್ತು ಬೋಳು ಸಮಸ್ಯೆ ಸಾಮಾನ್ಯವಾಗುತ್ತಿದೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಯುವಕರು ಲಕ್ಷಾಂತರ ರೂನು ಖರ್ಚು ಮಾಡುತ್ತಿದ್ದಾರೆ. ವಿಗ್ ಮತ್ತು ಕೂದಲು ಕಸಿ ಮಾಡುವಿಕೆಯಂತಹ ವಿಧಾನಗಳು ಸಾಮಾನ್ಯವಾಗಿವೆ. ಕೂದಲು ಕಸಿ ಮಾಡುವ ತಂತ್ರ ಸಂಪೂರ್ಣ ಪರಿಣಾಮಕಾರಿ ಎಂದು ಸಾಬೀಗಾಗಿಲ್ಲ. ಬೋಳು ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪತಂಜಲಿಯವರು ಇದರ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಿದರು. ಅಚ್ಚರಿಯ ಫಲಿತಾಂಶಗಳು ಹೊರಬಂದವು. ಸಂಶೋಧನೆಯ ನಂತರ, ಬೋಳು ಸಮಸ್ಯೆಗೆ ಶಾಶ್ವತ ಪರಿಹಾರವೂ ಕಂಡುಬಂದಿದೆ. ಪತಂಜಲಿ ಈ ಸಂಶೋಧನೆಯನ್ನು ನ್ಯಾಷನಲ್ ಲೈಬ್ರಿರಿ ಆಫ್ ಮೆಡಿಸಿನ್ ಜರ್ನಲ್ನಲ್ಲಿ ಪ್ರಕಟಿಸಿದೆ.
ಇದನ್ನೂ ಓದಿ: ಪತಂಜಲಿಯಿಂದ ನ್ಯಾನೋಟೆಕ್ನಾಲಜಿ ಮತ್ತು ಕೋವಿಡ್ ಬಗ್ಗೆ ಸಂಶೋಧನೆ; ಅಚ್ಚರಿ ಫಲಿತಾಂಶ ಬಹಿರಂಗ
ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದ ಕೆಲವು ರೋಗಿಗಳನ್ನು ಪತಂಜಲಿ ಸಂಸ್ಥೆ ತನ್ನ ಸಂಶೋಧನೆಗೆ ಆಯ್ಕೆ ಮಾಡಿತು. ತಲೆಯ ಜೊತೆಗೆ ದೇಹದ ಹಲವು ಭಾಗಗಳಿಂದ ಕೂದಲು ಉದುರುತ್ತಿತ್ತು ಮತ್ತು ರೋಗಿಗಳು ವಿವಿಧ ವಿಧಾನಗಳ ಮೂಲಕ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಅವ್ಯಾವ ಚಿಕಿತ್ಸೆಯಿಂದ ಯಾವುದೇ ಪ್ರಯೋಜನವಾಗಲಿಲ್ಲ. ಕೂದಲು ಉದುರುವ ಕಾಯಿಲೆಯಾದ ಅಲೋಪೆಸಿಯಾ ಅರೆಟಾದಿಂದ (Alopecia Areata) ಬಳಲುತ್ತಿರುವ ಕೆಲವು ರೋಗಿಗಳನ್ನು ಪತಂಜಲಿಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಆಯುರ್ವೇದದ ತತ್ವಗಳ ಆಧಾರದ ಮೇಲೆ ನೋಡಿದಾಗ, ವಾತ ಮತ್ತು ಪಿತ್ತಗಳ ಕ್ಷೀಣತೆಯಿಂದ ಕೂದಲು ಉದುರುವಿಕೆ ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ಸಂಶೋಧನೆಯಲ್ಲಿ ಪರಿಗಣಿಸಲಾಗಿದೆ. ಇದಲ್ಲಿ ಶುದ್ಧೀಕರಣ, ನಿವಾರಣೆ ಮತ್ತು ಚಿಕಿತ್ಸೆಯನ್ನು ಒಳಗೊಂಡಿದೆ. 6 ವಾರಗಳಲ್ಲಿ, ಕೂದಲು ಉದುರುವುದು ನಿಂತಿದ್ದು ಮಾತ್ರವಲ್ಲದೆ, ಹೊಸ ಕೂದಲು ಬೆಳೆಯಲು ಪ್ರಾರಂಭಿಸಿತು.
ಇದನ್ನೂ ಓದಿ: ಮಲ್ಲಿಗೆ ಹೂವೇ ನಿನ್ನ ಔಷಧದ ಗುಣ ಎಂಥ ಚೆನ್ನ..! ಪತಂಜಲಿ ಸಂಶೋಧನೆಯಲ್ಲಿ ಅಚ್ಚರಿ ಫಲಿತಾಂಶ
ಬಹು ವಿಧಾನಗಳಿಂದ ಚಿಕಿತ್ಸೆ ಪಡೆದರೂ ಪರಿಹಾರ ಸಿಗದ ರೋಗಿಗಳನ್ನು ಪತಂಜಲಿ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಮೊದಮೊದಲು ಪರಿಹಾರ ಕಂಡರೂ ಮತ್ತೆ ಕೂದಲು ಉದುರಿಕೆ ಸಮಸ್ಯೆ ಮರುಕಳಿಸಿದವರಿಗೂ ಮತ್ತೆ ಪತಂಜಲಿಯಿಂದ ಚಿಕಿತ್ಸೆ ನೀಡಲಾಯಿತು. ರೋಗಿಗಳನ್ನು 6 ವಾರಗಳ ಕಾಲ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಅವರಿಗೆ ನಿಯಮಿತವಾಗಿ ಪಂಚಕರ್ಮ ವಿಧಾನದ ಮೂಲಕ ಶುದ್ಧೀಕರಣ ಚಿಕಿತ್ಸೆಯನ್ನು ನೀಡಲಾಯಿತು. ಇದಲ್ಲದೆ, ಬಾಯಿ ಮತ್ತು ಮೂಗಿನ ಮೂಲಕವೂ ಔಷಧಿಗಳನ್ನು ನೀಡಲಾಗುತ್ತಿತ್ತು. ತಲೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡಲಾಯಿತು. ಅದರ ನಂತರ ರೋಗಿಗಳ ತಲೆ ಮತ್ತು ದೇಹದ ಇತರ ಭಾಗಗಳಲ್ಲಿ ಹೊಸ ಕೂದಲು ಬೆಳೆಯಲು ಪ್ರಾರಂಭಿಸಿತು. ವಾತ ಮತ್ತು ಪಿತ್ತವನ್ನು ನಿಯಂತ್ರಿಸುವ ಮೂಲಕ ಚಿಕಿತ್ಸೆಯನ್ನು ನೀಡಿದರೆ, ಕೂದಲು ಉದುರುವಿಕೆಯ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ಹೊಸ ಕೂದಲು ಬೆಳೆಯಲು ಪ್ರಾರಂಭಿಸುತ್ತದೆ ಎಂದು ಸಂಶೋಧನೆಯು ಕಂಡುಹಿಡಿದಿದೆ. ಇದರ ಪರಿಣಾಮ ಮತ್ತು ಪರಿಹಾರ ಶಾಶ್ವತ ಎನ್ನಲಾಗಿದೆ.
ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ