ಋತುಚಕ್ರದ (Period) ಸಂದರ್ಭದಲ್ಲಿ ಉಂಟಾಗುವ ಹೊಟ್ಟೆ ನೋವು ಮಹಿಳೆಯರ ಜೀವವನ್ನೇ ಹಿಂಡಿಬಿಡುತ್ತದೆ. ಮುಟ್ಟಿನ ನೋವಿನಿಂದ ಬಳಲುತ್ತಿರುವವರು ಅದರಿಂದ ಪಾರಾಗಲು ಏನೇನೋ ಮಾಡುತ್ತಾರೆ. ಪ್ರತಿ ತಿಂಗಳೂ ಮಾತ್ರೆ ಸೇವಿಸುವವರು ಕೂಡ ಇದ್ದಾರೆ. ಅಂಕಿಅಂಶಗಳ ಪ್ರಕಾರ, 10ರಲ್ಲಿ 9 ಮಹಿಳೆಯರು ಋತುಚಕ್ರದ ನೋವನ್ನು (Menstrual Cramps) ಅನುಭವಿಸುತ್ತಾರೆ. ಹೊಟ್ಟೆಯ ಸೆಳೆತವು ಕೆಲವು ಜನರಿಗೆ ತುಂಬಾ ನೋವಿನಿಂದ ಕೂಡಿರುತ್ತದೆ.
ಮುಟ್ಟಿನ ನೋವನ್ನು ಕಡಿಮೆ ಮಾಡಲು ಇರುವ ಪರಿಣಾಮಕಾರಿ ಪರಿಹಾರಗಳು ಇಲ್ಲಿವೆ:
– ಕೆಳ ಹೊಟ್ಟೆಯ ಭಾಗದಲ್ಲಿ ಹಾಟ್ ಬ್ಯಾಗ್ ಇಟ್ಟುಕೊಳ್ಳುವುದು.
– ನಿಯಮಿತವಾಗಿ ಫಿಟ್ನೆಸ್ ಅಭ್ಯಾಸ ರೂಢಿಸಿಕೊಳ್ಳುವುದು.
– ಒಂದೇ ಬಾರಿ ಹೆಚ್ಚು ಆಹಾರ ಸೇವಿಸದಿರುವುದು.
– ಮಲ್ಟಿ ವಿಟಮಿನ್ ಸಪ್ಲಿಮೆಂಟ್‌ಗಳ ನಿಯಮಿತ ಸೇವನೆಯನ್ನು ಮಾಡುವುದು.
– ಉಪ್ಪು, ಕೆಫೀನ್, ಸಕ್ಕರೆ ಇತ್ಯಾದಿಗಳ ಬಳಕೆಯನ್ನು ಕಡಿಮೆ ಮಾಡುವುದು.
– 1 ಲೋಟ ಬಿಸಿ ನೀರಿಗೆ ಅರ್ಧ ಲಿಂಬೆ ರಸವನ್ನು ಹಿಂಡಿ, ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ ಕುಡಿದರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ.
ಇದನ್ನೂ ಓದಿ: Irregular Period: ಅನಿಯಮಿತ ಅವಧಿಯ ಋತುಸ್ರಾವಕ್ಕೆ ಇಲ್ಲಿದೆ ಆಯುರ್ವೇದ ಗಿಡಮೂಲಿಕೆಗಳು
– ಸಾಸಿವೆ ಎಣ್ಣೆಯನ್ನು ಹಚ್ಚಿ ಪ್ರತಿದಿನ ಹೊಟ್ಟೆಯನ್ನು ಮಸಾಜ್ ಮಾಡಿಕೊಂಡರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಸಾಸಿವೆ ಎಣ್ಣೆಯಲ್ಲಿ ಲಿನೋಲಿಕ್ ಆಮ್ಲ, ಉರಿಯೂತ ಶಮನಕಾರಿ ಗುಣ ಹಾಗೂ ಆ್ಯಂಟಿಆಕ್ಸಿಡೆಂಟ್ ಗುಣಗಳು ಇವೆ. ಋತುಚಕ್ರದ ವೇಳೆ ಸಾಸಿವೆ ಎಣ್ಣೆಯನ್ನು ಬಳಸಿಕೊಂಡು ಹೊಟ್ಟೆಯ ಕೆಳಭಾಗದಲ್ಲಿ ಮಸಾಜ್ ಮಾಡಿಕೊಂಡರೆ ಹೊಟ್ಟೆನೋವಿನಿಂದ ತಾತ್ಕಾಲಿಕ ಪರಿಹಾರ ಪಡೆಯಬಹುದು.
– ಒಣ ಶುಂಠಿ ಮತ್ತು ಕಾಳು ಮೆಣಸು ಹಾಕಿಕೊಂಡು ಚಹಾ ಮಾಡಿಕೊಂಡು ಕುಡಿಯಬಹುದು. ಆದರೆ, ಈ ಚಹಾಕ್ಕೆ ಹಾಲು ಬೆರೆಸಬೇಡಿ.
– ಜೀರಿಗೆಯನ್ನು ನೀರಿಗೆ ಹಾಕಿಕೊಂಡು ಕುದಿಸಿಕೊಳ್ಳಬಹುದು. ಅಥವಾ ಜೀರಿಗೆಯನ್ನು ಹಾಗೇ ಜಗಿದು ತಿನ್ನಬಹುದು. ಜೀರಿಗೆಯಲ್ಲಿ ಶಮನಕಾರಿ ಗುಣವಿದೆ. ಇದು ಉರಿಯೂತ ಶಮನಕಾರಿ ಗುಣವನ್ನು ಹೊಂದಿದೆ. ಇದು ಋತುಚಕ್ರದ ನೋವು ನಿವಾರಣೆ ಮಾಡಲು ತುಂಬಾ ಪರಿಣಾಮಕಾರಿ.