ದೇಶದ ಹಲವು ಭಾಗಗಳಲ್ಲಿ ವಾಯುಮಾಲಿನ್ಯದ ಮಟ್ಟವು ಸಾಕಷ್ಟು ಹೆಚ್ಚಾಗಿದೆ. ಇದು ಉಸಿರಾಟದ ಮೇಲೆ ಪರಿಣಾಮ ಬೀರುತ್ತದೆ ಜೊತೆಗೆ ಅನೇಕ ರೀತಿಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ ಇದು ಚರ್ಮದ ಮೇಲೂ ಪರಿಣಾಮ ಬೀರುತ್ತದೆ. ಪ್ರಸ್ತುತ ನಿಮ್ಮ ಚರ್ಮದ ಮೇಲೆ ಊತ, ತುರಿಕೆ, ದದ್ದುಗಳು ಮತ್ತು ಕಪ್ಪು ಕಲೆಗಳು ಪದೇ ಪದೇ ಕಂಡುಬರುತ್ತಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ. ಇವು ಮಾಲಿನ್ಯದಿಂದ ಉಂಟಾಗುವ ಚರ್ಮ ರೋಗಗಳ ಆರಂಭಿಕ ಚಿಹ್ನೆಗಳಾಗಿವೆ. ಹಾಗಾದರೆ ಮಾಲಿನ್ಯದಿಂದ ಯಾವ ರೀತಿಯ ಚರ್ಮ ರೋಗಗಳು ಬರುತ್ತವೆ?ಅವುಗಳನ್ನು ಹೇಗೆ ತಡೆಗಟ್ಟಬಹುದು? ಇಲ್ಲಿದೆ ವೈದ್ಯರು ನೀಡಿದ ಸಲಹೆ.
ಚರ್ಮರೋಗ ತಜ್ಞ ಡಾ. ಭಾವುಕ್ ಧೀರ್ ಅವರು ಹೇಳಿರುವ ಪ್ರಕಾರ, ಮಾಲಿನ್ಯದಿಂದ ವಿವಿಧ ರೀತಿಯ ಚರ್ಮ ರೋಗಗಳು ಕಂಡು ಬರಬಹುದು. ಮಾಲಿನ್ಯವು ಎಸ್ಜಿಮಾ ಎಂಬ ಚರ್ಮದ ಸ್ಥಿತಿಗೆ ಕಾರಣವಾಗಬಹುದು, ಇದು ಚರ್ಮದಲ್ಲಿ ಉರಿಯೂತ ಮತ್ತು ತುರಿಕೆಗೆ ಕಾರಣವಾಗುತ್ತದೆ. ಅದಲ್ಲದೆ ಮಾಲಿನ್ಯದಿಂದಾಗಿ ಮೊಡವೆ ಸಮಸ್ಯೆಗಳು ಸಹ ಕಂಡುಬರಬಹುದು, ಇದು ಚರ್ಮದ ಮೇಲೆ ದದ್ದುಗಳು ಮತ್ತು ಕಲೆಗಳಿಗೆ ಕಾರಣವಾಗುತ್ತದೆ. ಕೆಲವರಿಗೆ ಚರ್ಮದಲ್ಲಿ ತುರಿಕೆ ಕಂಡು ಬರುತ್ತದೆ. ಈ ಎಲ್ಲಾ ಸಮಸ್ಯೆಗಳು ಮೊದಲಿಗೆ ಸಾಕಷ್ಟು ಸೌಮ್ಯವೆಂದು ತೋರಬಹುದು, ಆದರೆ ಕ್ರಮೇಣ ಉಲ್ಬಣಗೊಳ್ಳಲು ಪ್ರಾರಂಭಿಸುತ್ತವೆ. ಆದ್ದರಿಂದ, ಆರಂಭಿಕ ಹಂತದಲ್ಲಿ ಗುರುತಿಸುವುದು ಬಹಳ ಒಳ್ಳೆಯದು.
ಮಾಲಿನ್ಯದಲ್ಲಿರುವ ಕಣಗಳು ಚರ್ಮದೊಂದಿಗೆ ಸಂಪರ್ಕಕ್ಕೆ ಬಂದು ಅಲ್ಲಿ ಸಂಗ್ರಹವಾಗುತ್ತವೆ ಎಂದು ಡಾ. ಧೀರ್ ವಿವರಿಸುತ್ತಾರೆ. ಮಾಲಿನ್ಯವು ಧೂಳು, ಕೊಳೆ ಮತ್ತು ಚರ್ಮಕ್ಕೆ ಹಾನಿ ಮಾಡುವ ಸಣ್ಣ ಪಿಎಂ 2.5 ಕಣಗಳನ್ನು ಹೊಂದಿರುತ್ತದೆ. ಅನೇಕ ಗಂಟೆಗಳ ಕಾಲ ಹೊರಗೆ ಇರುವ ಜನರು ಮಾಲಿನ್ಯದಿಂದಾಗಿ ಚರ್ಮ ರೋಗಗಳಿಗೆ ತುತ್ತಾಗುವ ಅಪಾಯದಲ್ಲಿರುತ್ತಾರೆ.
ಇದನ್ನೂ ಓದಿ: ನೀವು ಅತಿಯಾದ ಚಳಿಯಿಂದ ಬಳಲುತ್ತಿದ್ದೀರಾ? ಈ ಪೋಷಕಾಂಶದ ಕೊರತೆಯೇ ಕಾರಣ
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ