ಈ ವಿಷಯದಲ್ಲಿ ಪುರುಷರು ಮಹಿಳೆಯರಿಗಿಂತ ಉತ್ತಮರು; ಅಧ್ಯಯನದಿಂದ ಬಹಿರಂಗ

ಇತ್ತೀಚಿನ ಅಧ್ಯಯನ ಮಹಿಳೆಯರಿಗಿಂತ ಪುರುಷರು ಹೆಚ್ಚು ನಿದ್ರೆ ಮಾಡುತ್ತಾರೆ ಎಂದು ಬಹಿರಂಗ ಪಡಿಸಿದೆ. ಸಂಶೋಧನೆಯ ಭಾಗವಾಗಿ, ಸಂಶೋಧಕರು ಪುರುಷರ ಮತ್ತು ಮಹಿಳೆಯರ ನಿದ್ರೆಯ ಮಾದರಿಗಳನ್ನು ಗಮನಿಸಿದ್ದು, ಇದರಲ್ಲಿ ಹಲವು ವ್ಯತ್ಯಾಸಗಳು ಕಂಡುಕೊಂಡಿದ್ದಾರೆ. ಇದರ ಫಲಿತಾಂಶವಾಗಿ ಪುರುಷರು ಮಹಿಳೆಯರಿಗಿಂತ ಹೆಚ್ಚು ನಿದ್ರೆ ಮಾಡುತ್ತಾರೆ ಎಂದು ಅದು ಬಹಿರಂಗಪಡಿಸಿದೆ. ಹಾಗಾದರೆ ಯಾಕೆ ಮಹಿಳೆಯರಿಗಿಂತ ಪುರುಷರು ಹೆಚ್ಚು ನಿದ್ರೆ ಮಾಡುತ್ತಾರೆ? ಇದಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ.

ಈ ವಿಷಯದಲ್ಲಿ ಪುರುಷರು ಮಹಿಳೆಯರಿಗಿಂತ ಉತ್ತಮರು; ಅಧ್ಯಯನದಿಂದ ಬಹಿರಂಗ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 27, 2024 | 6:02 PM

ನಮ್ಮ ಹಾರ್ಮೋನುಗಳು ನಿದ್ರೆಯ ಮೇಲೆ ಪ್ರಭಾವ ಬೀರುತ್ತವೆ ಎಂಬ ಮಾತನ್ನು ನೀವು ಕೇಳಿರಬಹುದು. ಇದಕ್ಕೆ ಪೂರಕವೆಂಬಂತೆ ಇತ್ತೀಚಿನ ಅಧ್ಯಯನ ಮಹಿಳೆಯರಿಗಿಂತ ಪುರುಷರು ಹೆಚ್ಚು ನಿದ್ರೆ ಮಾಡುತ್ತಾರೆ ಎಂದು ಬಹಿರಂಗ ಪಡಿಸಿದೆ. ಸಂಶೋಧನೆಯ ಭಾಗವಾಗಿ, ಸಂಶೋಧಕರು ಪುರುಷರ ಮತ್ತು ಮಹಿಳೆಯರ ನಿದ್ರೆಯ ಮಾದರಿಗಳನ್ನು ಗಮನಿಸಿದ್ದು, ಇದರಲ್ಲಿ ಹಲವು ವ್ಯತ್ಯಾಸಗಳು ಕಂಡುಕೊಂಡಿದ್ದಾರೆ. ಇದರ ಫಲಿತಾಂಶವಾಗಿ ಪುರುಷರು ಮಹಿಳೆಯರಿಗಿಂತ ಹೆಚ್ಚು ನಿದ್ರೆ ಮಾಡುತ್ತಾರೆ ಎಂದು ಅದು ಬಹಿರಂಗಪಡಿಸಿದೆ. ಹಾಗಾದರೆ ಯಾಕೆ ಮಹಿಳೆಯರಿಗಿಂತ ಪುರುಷರು ಹೆಚ್ಚು ನಿದ್ರೆ ಮಾಡುತ್ತಾರೆ? ಇದಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ.

ಈ ಅಧ್ಯಯನದಲ್ಲಿ ಭಾಗಿಯಾಗಿರುವ ಸಂಶೋಧಕರ ವರದಿಯ ಪ್ರಕಾರ, ಪುರುಷರು ಮತ್ತು ಮಹಿಳೆಯರು ವಿಭಿನ್ನ ನಿದ್ರೆಯ ಮಾದರಿಗಳನ್ನು ಹೊಂದಿದ್ದಾರೆ. ಪ್ರಾಣಿಗಳಲ್ಲಿ ನಿದ್ರೆಯ ಮಾದರಿಗಳನ್ನು ಸಂಶೋಧಿಸುವುದು ಇತ್ತೀಚಿನ ವರ್ಷಗಳಲ್ಲಿ ಒಂದು ಪ್ರವೃತ್ತಿಯಾಗಿದೆ. ಈ ಕ್ರಮದಲ್ಲಿ, ಪುರುಷರು ಮತ್ತು ಮಹಿಳೆಯರಲ್ಲಿ ನಿದ್ರೆಯ ಬಗ್ಗೆ ಸಂಶೋಧನೆ ನಡೆಸಲಾಗಿದ್ದು ಇದು ಮಾನವನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಈ ಸಂಶೋಧನೆಯ ಮುಖ್ಯ ಉದ್ದೇಶವಾಗಿದೆ. ಅದಲ್ಲದೆ ಮಧುಮೇಹ, ಬೊಜ್ಜು, ಅಲ್ಝೈಮರ್ ಸೇರಿದಂತೆ ದೀರ್ಘಕಾಲದ ಕಾಯಿಲೆಗಳ ಅಪಾಯವು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಹೇಗಿತ್ತು ಸಂಶೋಧನೆ?

ಈ ಅಧ್ಯಯನದಲ್ಲಿ ಅಲ್ಟ್ರಾ- ಸೆನ್ಸಿಟಿವ್ ಸೆನ್ಸರ್ಗಳನ್ನು ಬಳಸಲಾಗಿದ್ದು, ವಿಶೇಷ ಪಂಜರಗಳಲ್ಲಿ 267 ಇಲಿಗಳ ಮೇಲೆ ಸಂಶೋಧನೆ ನಡೆಸಲಾಯಿತು. 24 ಗಂಟೆಗಳಲ್ಲಿ, ಗಂಡು ಇಲಿಗಳು ಸುಮಾರು 670 ನಿಮಿಷಗಳ ಕಾಲ ಮಲಗಿದವು. ಆದರೆ ಹೆಣ್ಣು ಇಲಿಗಳು ಒಂದು ಗಂಟೆಗಿಂತಲೂ ಕಡಿಮೆ ಸಮಯ ನಿದ್ರೆ ಮಾಡುತ್ತವೆ ಎಂದು ಅವರು ಕಂಡುಕೊಂಡರು. ಮಹಿಳೆಯರಲ್ಲಿ ಹಾರ್ಮೋನುಗಳ ಬದಲಾವಣೆಗಳು, ಸ್ತ್ರೀ ಹಾರ್ಮೋನುಗಳು ತಿಂಗಳಿನಿಂದ ತಿಂಗಳಿಗೆ ಬದಲಾಗುತ್ತವೆ. ಇದು ನಿದ್ರೆಗೆ ಭಂಗ ತರಬಹುದು. ಅಲ್ಲದೆ ಅತಿಯಾದ ನಿದ್ರೆಯ ಕೊರತೆಗೆ ಕಾರಣವಾಗುತ್ತದೆ ಎಂದು ಸಂಶೋಧನೆ ವರದಿ ಮಾಡಿದೆ.

ಇದನ್ನೂ ಓದಿ: ಈ ರೀತಿ ಮಾಡುವುದರಿಂದ ನೀವು ಮರೆಗುಳಿತನವನ್ನು ಮರೆಯಬಹುದು

ಋತುಚಕ್ರದ ಸಮಯದಲ್ಲಿ ನಿದ್ರೆಗೆ ತೊಂದರೆ

ಅಧ್ಯಯನದಲ್ಲಿ ಕಂಡು ಬಂದಂತೆ ಋತುಚಕ್ರದ ಸಮಯದಲ್ಲಿ ಮಹಿಳೆಯರಲ್ಲಿ ನಿದ್ರೆಗೆ ಸಂಬಂಧಿಸಿದಂತೆ ಅನೇಕ ರೀತಿಯ ತೊಂದರೆಯನ್ನು ಗಮನಿಸಿದ್ದು, ಈ ಸಮಯದಲ್ಲಿ ಉಂಟಾಗುವ ಹಾರ್ಮೋನುಗಳ ಬದಲಾವಣೆಗಳು ನಿದ್ರೆಗೆ ತೊಂದರೆ ಉಂಟುಮಾಡಿ, ಭಂಗ ತರಬಹುದು. ಅದಲ್ಲದೆ ಈ ಸಮಯದಲ್ಲಿ, ಮಹಿಳೆಯರಲ್ಲಿ ಸೆಳೆತ, ಹೊಟ್ಟೆನೋವು ಮತ್ತು ಬೆವರುವಿಕೆಯ ಜೊತೆಗೆ ಕೆಲವು ಅಹಿತಕರ ದೈಹಿಕ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ, ಅದು ನಿದ್ರೆಗೆ ಅಡ್ಡಿಪಡಿಸುತ್ತದೆ. ಆದ್ದರಿಂದ ಇದೇ ರೀತಿಯ ಕಾರಣಗಳಿಗಾಗಿ, ಮಹಿಳೆಯರು ಜೀವನದ ಈ ಹಂತಗಳಲ್ಲಿ ನಿದ್ರಾಹೀನತೆ, ರೆಸ್ಟ್ಲೆಸ್ ಲೆಗ್ಸ್ ಸಿಂಡ್ರೋಮ್, ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾದಂತಹ ಕೆಲವು ನಿದ್ರೆಯ ಅಸ್ವಸ್ಥತೆಗಳಿಂದ ಬಳಲುತ್ತಾರೆ ಎಂದು ಅಧ್ಯಯನ ತಿಳಿಸಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ