AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tips for Amnesia: ಈ ರೀತಿ ಮಾಡುವುದರಿಂದ ನೀವು ಮರೆಗುಳಿತನವನ್ನು ಮರೆಯಬಹುದು

ತಜ್ಞರು ನೀಡಿರುವ ಕೆಲವು ಮಾಹಿತಿಯ ಪ್ರಕಾರ, ನಿಮ್ಮ ಮರೆಗುಳಿತನವನ್ನು ಸುಲಭವಾಗಿ ಮರೆಯಲು ಕೆಲವು 'ರೀಕಾಲ್ ಮೆಥಡ್' ಗಳನ್ನು ಅನುಸರಿಸುವುದು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಅಗತ್ಯ ವಿಷಯಗಳನ್ನು ನೀವು ಮರೆಯದಂತೆ ನೋಡಿಕೊಳ್ಳುತ್ತದೆ. ಹಾಗಾದರೆ ಏನು ಮಾಡಬೇಕು? ವಿಷಯ ಅಥವಾ ವಸ್ತುಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳುವುದು ಹೇಗೆ? ಮರೆಗುಳಿತನವನ್ನು ಹೋಗಲಾಡಿಸಲು ಈ ಸರಳ ವಿಧಾನಗಳನ್ನು ಅನುಸರಿಸಿ.

Tips for Amnesia: ಈ ರೀತಿ ಮಾಡುವುದರಿಂದ ನೀವು ಮರೆಗುಳಿತನವನ್ನು ಮರೆಯಬಹುದು
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 27, 2024 | 12:31 PM

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲಿಯೂ ಒಂದು ರೀತಿಯ ಮರೆಗುಳಿತನ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಇದನ್ನು ಹಾಗೆಯೇ ಬಿಡುವ ಬದಲು ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಅದಲ್ಲದೆ ಸಣ್ಣ ಸಣ್ಣ ವಿಷಯಗಳನ್ನು ಮರೆಯದೆಯೇ ಚೆನ್ನಾಗಿ ನೆನಪಿಟ್ಟುಕೊಳ್ಳುವುದಕ್ಕೆ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ಮನುಷ್ಯ ಸಣ್ಣ ವಸ್ತು ಅಥವಾ ಚಿಕ್ಕ ಕೆಲಸಗಳನ್ನು ಮರೆಯುವುದು ತುಂಬಾ ಸಾಮಾನ್ಯ. ಆದರೆ ಸಮಸ್ಯೆ ತುಂಬಾ ಹೆಚ್ಚಿದ್ದರೆ, ತೊಂದರೆಗಳು ಇರುತ್ತವೆ. ನಿಮಗೂ ಆಗಾಗ ಮರೆಯುವ ಅಭ್ಯಾಸ ಇದ್ದಲ್ಲಿ ಕೆಲವು ತಂತ್ರವನ್ನು ಅನುಸರಿಸಿ. ಇದರಿಂದ ವಿಷಯವನ್ನು ತುಂಬಾ ಸುಲಭವಾಗಿ ನೆನಪಿಟ್ಟುಕೊಳ್ಳಬಹುದು ಅದಲ್ಲದೆ ಪದೇ ಪದೇ ಮರೆಯುವುದು ಗಣನೀಯವಾಗಿ ಇಳಿಕೆಯಾಗುತ್ತದೆ.

ತಜ್ಞರು ನೀಡಿರುವ ಕೆಲವು ಮಾಹಿತಿಯ ಪ್ರಕಾರ, ನಿಮ್ಮ ಮರೆಗುಳಿತನವನ್ನು ಸುಲಭವಾಗಿ ಮರೆಯಲು ಕೆಲವು ‘ರೀಕಾಲ್ ಮೆಥಡ್’ ಗಳನ್ನು ಅನುಸರಿಸುವುದು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಅಗತ್ಯ ವಿಷಯಗಳನ್ನು ನೀವು ಮರೆಯದಂತೆ ನೋಡಿಕೊಳ್ಳುತ್ತದೆ. ಹಾಗಾದರೆ ಏನು ಮಾಡಬೇಕು? ವಿಷಯ ಅಥವಾ ವಸ್ತುಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳುವುದು ಹೇಗೆ? ಮರೆಗುಳಿತನವನ್ನು ಹೋಗಲಾಡಿಸಲು ಈ ಸರಳ ವಿಧಾನಗಳನ್ನು ಅನುಸರಿಸಿ.

*ನೀವು ಯಾವ ವಿಷಯ ಅಥವಾ ವಸ್ತುವನ್ನು ನೆನಪಿಟ್ಟುಕೊಳ್ಳಬೇಕೋ ಅದರ ಮೊದಲ ಅಕ್ಷರವನ್ನು ಮನನ ಮಾಡಿಕೊಳ್ಳಿ. ಆ ಅಕ್ಷರದ ಸಹಾಯದಿಂದ ನೀವು ಸುಲಭವಾಗಿ ನೆನಪಿಟ್ಟುಕೊಳ್ಳಬಹುದು. ಸಾಮಾನ್ಯವಾಗಿ ಇದು ಬೇಗ ಮರೆತು ಹೋಗುವುದಿಲ್ಲ. ಅದಲ್ಲದೆ ಚಿಕ್ಕ ಮಕ್ಕಳಿಗೂ ಈ ಟೆಕ್ನಿಕ್ ತುಂಬಾ ಉಪಯೋಗಕ್ಕೆ ಬರುತ್ತದೆ.

*R ಎಂದರೆ ಪುನರಾವರ್ತನೆ. ಅಂದರೆ ಒಮ್ಮೆ ಓದಿ. ನೀವು ಮತ್ತೆ ಮತ್ತೆ ಅದನ್ನು ಓದುತ್ತಲೇ ಇರಬೇಕು. ಇದನ್ನು ಓದುವ ಮೂಲಕ, ವಿಷಯವು ಮೆದುಳಿನಲ್ಲಿ ಸುಲಭವಾಗಿ ನೆನಪಿನಲ್ಲಿ ಉಳಿಯುತ್ತದೆ. ಇದರಿಂದ ಆ ವಿಷಯ ಬೇಗ ಮರೆತು ಹೋಗುವುದಿಲ್ಲ.

ಇದನ್ನೂ ಓದಿ: Health News: ಚಳಿಗಾಲದಲ್ಲಿ ಸೊಪ್ಪು ತರಕಾರಿ ತಿನ್ನಬಾರದೇ? ಇಲ್ಲಿದೆ ತಜ್ಞರ ಸಲಹೆ

*ತುಂಬಾ ಉದ್ದವಿರುವ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಕಷ್ಟವಾದಾಗ, ಅವುಗಳನ್ನು ಮೂರು ಭಾಗಗಳಾಗಿ ವಿಂಗಡಿಸಿ ನೆನೆಪಿಟ್ಟುಕೊಳ್ಳಬಹುದು. ಅಂದರೆ ನಿಮಗೆ ಅಗತ್ಯವಿರುವ ವಿಷಯಗಳನ್ನು ಸಣ್ಣ ಭಾಗಗಳಾಗಿ ವಿಭಜಿಸಿ. ಪ್ರತಿಯೊಂದು ಭಾಗವನ್ನು ಮರುಸಂಪರ್ಕಿಸಬೇಕು ಮತ್ತು ಆ ಅಕ್ಷರಗಳನ್ನು ನೆನಪಿಟ್ಟುಕೊಳ್ಳಬೇಕು. ಈ ರೀತಿ ಮಾಡುವುದರಿಂದ, ನೀವು ಏನನ್ನೂ ಮರೆಯದೆ ನೆನಪಿಟ್ಟುಕೊಳ್ಳಬಹುದು. ವಿದ್ಯಾರ್ಥಿಗಳಿಗೂ ಕೂಡ ಓದಿದ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಈ ವಿಧಾನ ತುಂಬಾ ಸಹಕಾರಿಯಾಗುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ