Health Tips : ಈ ನಾಲ್ಕು ಅಭ್ಯಾಸಗಳನ್ನು ಪಾಲಿಸಿದ್ರೆ ವಯಸ್ಸು 60 ದಾಟಿದರೂ 30ರ ಯುವಕರಂತೆ ಕಾಣುವಿರಿ

ನಮಗೆ ಎಷ್ಟೇ ವಯಸ್ಸಾಗುತ್ತಿದ್ದರೂ ನಾವೆಲ್ಲರೂ ಯುವಕ ಯುವತಿಯರಂತೆ ಕಾಣಲು ಬಯಸುತ್ತೇವೆ. ಆದರೆ ಇಂದಿನ ಜೀವನ ಶೈಲಿ ಹಾಗೂ ಆಹಾರ ಕ್ರಮದಿಂದಾಗಿ ಸಣ್ಣ ವಯಸ್ಸಿನವರು ವಯಸ್ಸಾದವರಂತೆ ಕಾಣುತ್ತಾರೆ. ಹೀಗಾಗಿ ಈ ಕೆಲವು ಅಭ್ಯಾಸಗಳು ವಯಸ್ಸು 60 ದಾಟಿದರೂ 30 ರ ಯುವಕರಂತೆ ಕಾಣುವಂತೆ ಮಾಡಬಹುದು. ಹಾಗಾದ್ರೆ ದೈನಂದಿನ ಅಭ್ಯಾಸಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Health Tips : ಈ ನಾಲ್ಕು ಅಭ್ಯಾಸಗಳನ್ನು ಪಾಲಿಸಿದ್ರೆ ವಯಸ್ಸು 60 ದಾಟಿದರೂ 30ರ ಯುವಕರಂತೆ ಕಾಣುವಿರಿ
Health Tips
Follow us
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ

Updated on: Nov 28, 2024 | 5:49 PM

ಯಾರಿಗೆ ತಾನೇ ಯಂಗ್ ಆಗಿ ಕಾಣಲು ಇಷ್ಟ ಇಲ್ಲ ಹೇಳಿ, ವಯಸ್ಸು ಆಗಿದ್ದರೂ ಕೂಡ ತಮ್ಮ ದೇಹವನ್ನು ಫಿಟ್ ಆಗಿರಿಸಿಕೊಳ್ಳಲು ಅನೇಕ ರೀತಿಯ ಡಯಟ್ ಮತ್ತು ವ್ಯಾಯಾಮಗಳನ್ನು ಮಾಡುತ್ತಿರುವವರನ್ನು ನೋಡಬಹುದು. ಆದರೆ ಮುಖದ ಮೇಲಿನ ಚರ್ಮ ನಮ್ಮ ವಯಸ್ಸನ್ನು ರಿವೀಲ್ ಮಾಡುತ್ತದೆ. ಹೀಗಾಗಿ ಅರವತ್ತು ಆಗಿದ್ದರೂ ಯಂಗ್ ಆಗಿ ಕಾಣಲು ಬಯಸಿದರೆ ಈ ಕೆಲವು ಸರಳವಾದ ದೈನಂದಿನ ಅಭ್ಯಾಸಗಳನ್ನು ಪಾಲಿಸುವುದು ಬಹಳಷ್ಟು ಪರಿಣಾಮಕಾರಿಯಾಗಿದೆ.

ಸಾಕಷ್ಟು ನಿದ್ದೆ ಮಾಡಿ:

ವಯಸ್ಸಾಗುವಿಕೆಯನ್ನು ತಪ್ಪಿಸಲು ಯುವಕರಾಗಿ ಕಾಣಲು ಬಯಸಿದರೆ, ನಿದ್ರೆಯ ಮೇಲೆ ಹೆಚ್ಚು ಗಮನಹರಿಸಿ. ಹೆಚ್ಚು ನಿದ್ರೆ ಆಲಸ್ಯವನ್ನು ಉಂಟುಮಾಡಿದರೆ, ಕಡಿಮೆ ನಿದ್ರೆಯೂ ಆರೋಗ್ಯವನ್ನು ಹದಗೆಡಿಸುತ್ತದೆ. ಹೀಗಾಗಿ ಪ್ರತಿದಿನ ಇಂತಿಷ್ಟು ಗಂಟೆಗಳ ಕಾಲ ನಿದ್ರೆ ಮಾಡುವುದು ಬಹಳ ಮುಖ್ಯ. ನಿದ್ದೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಯೌವನ ಹಾಗೂ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ದಿನಕ್ಕೆ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರಿಸುವ ಮೂಲಕ ದೇಹಕ್ಕೆ ವಿಶ್ರಾಂತಿ ನೀಡಿ.

ರಾಸಾಯನಿಕ ಮುಕ್ತ, ಸಂಸ್ಕರಿಸಿದ ಆಹಾರ ಸೇವಿಸಿ :

ಒಬ್ಬ ವ್ಯಕ್ತಿಯೂ ಆರೋಗ್ಯವಂತನಾಗಿ ಯೌವನದಿಂದ ಕೂಡಿರಲು ಸೇವಿಸುವ ಆಹಾರವು ಅಷ್ಟೇ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ದಿನನಿತ್ಯ ಸೇವಿಸುವ ಆಹಾರದಲ್ಲಿ ರಾಸಾಯನಿಕ ಮುಕ್ತವಾಗಿರಲಿ ಹಾಗೂ ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ಸೇವಿಸಿ. ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಆಹಾರದಲ್ಲಿ ಸೇವಿಸುವುದು ಮುಖ್ಯ. ಹೆಚ್ಚು ಮಾಂಸ ತಿನ್ನುವುದನ್ನು ಹಾಗೂ ಹೆಚ್ಚು ಕರಿದ ಆಹಾರವನ್ನು ತಪ್ಪಿಸುವುದು ಉತ್ತಮ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ವಿಚಾರವು ತಿಳಿದಿರಲಿ.

ಇದನ್ನೂ ಓದಿ: ನೀವು ಅತಿಯಾದ ಚಳಿಯಿಂದ ಬಳಲುತ್ತಿದ್ದೀರಾ? ಈ ಪೋಷಕಾಂಶದ ಕೊರತೆಯೇ ಕಾರಣ

ದೈಹಿಕವಾಗಿ ಚಟುವಟಿಕೆಯಿಂದಿರಿ:

ನಿಮ್ಮನ್ನು ಸದೃಢವಾಗಿರಿಸಿಕೊಳ್ಳಲು, ಮಾನಸಿಕ ಆರೋಗ್ಯವೂ ಬಹಳ ಮುಖ್ಯ. ಆದ್ದರಿಂದ, ನೀವು ಪ್ರತಿದಿನ ವ್ಯಾಯಾಮ ಅಥವಾ ಧ್ಯಾನ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ದೈಹಿಕ ಚಟುವಟಿಕೆಯನ್ನು ಮಾಡುವುದರಿಂದ ನೀವು ಯಾವಾಗಲೂ ಫಿಟ್ ಆಗಿರುತ್ತೀರಿ. ವಯಸ್ಸಾಗಿದ್ದರೂ ಕೂಡ ಯುವಕರಂತೆ ಕಾಣಲು ಸಾಧ್ಯವಾಗುತ್ತದೆ.

ಮದ್ಯ ಮತ್ತು ಸಿಗರೇಟ್ ತ್ಯಜಿಸಿ :

ಆಲ್ಕೋಹಾಲ್ ಮತ್ತು ಸಿಗರೇಟ್ ಕುಡಿಯುವ ಅಭ್ಯಾಸವಿದ್ದರೆ, ತಕ್ಷಣವೇ ನಿಲ್ಲಿಸುವುದು ಉತ್ತಮ. ಅತಿಯಾದ ಮದ್ಯಪಾನವು ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಚರ್ಮವನ್ನು ಶುಷ್ಕ ಮತ್ತು ಮಂದವಾಗಿ ಕಾಣುವಂತೆ ಮಾಡುತ್ತದೆ. ಈ ಅಭ್ಯಾಸಗಳು ವಯಸ್ಸಿಗೆ ಮುಂಚೆಯೇ ನಿಮ್ಮನ್ನು ವಯಸ್ಸಾಗುವಂತೆ ಮಾಡುತ್ತದೆ. ಹೀಗಾಗಿ ಈ ಅಭ್ಯಾಸವನ್ನು ಪ್ರಾರಂಭದಿಂದಲೂ ರೂಢಿಸಿಕೊಂಡರೆ ಸಣ್ಣ ವಯಸ್ಸಿನವರಂತೆ ಕಾಣಿಸಿಕೊಳ್ಳಲು ಸಾಧ್ಯ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ವಿರಾಟ್ ಕೊಹ್ಲಿ ಒಂದಂಕಿಗೆ ಔಟ್ ಆಗುತ್ತಿದ್ದಂತೆ ಸ್ಟೇಡಿಯಂ ಖಾಲಿ ಖಾಲಿ
ವಿರಾಟ್ ಕೊಹ್ಲಿ ಒಂದಂಕಿಗೆ ಔಟ್ ಆಗುತ್ತಿದ್ದಂತೆ ಸ್ಟೇಡಿಯಂ ಖಾಲಿ ಖಾಲಿ
ರೀಲ್ಸ್​​ ನೋಡುತ್ತಾ ಸರ್ಕಾರಿ ಬಸ್ ​ಚಲಾಯಿಸಿದ್ದ ಚಾಲಕ ಅಮಾನತು
ರೀಲ್ಸ್​​ ನೋಡುತ್ತಾ ಸರ್ಕಾರಿ ಬಸ್ ​ಚಲಾಯಿಸಿದ್ದ ಚಾಲಕ ಅಮಾನತು
ಪಿಡಿಓಗಳು ಕುಬೇರರು ಅನ್ನೋದನ್ನು ಸಾಬೀತು ಮಾಡಿರುವ ಹಿರೇಮಠ
ಪಿಡಿಓಗಳು ಕುಬೇರರು ಅನ್ನೋದನ್ನು ಸಾಬೀತು ಮಾಡಿರುವ ಹಿರೇಮಠ
ಸಂಸತ್ತಿನ ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ
ಸಂಸತ್ತಿನ ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ
ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ದಾವಣಗೆರೆಯ ಈಜುಪಟು
ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ದಾವಣಗೆರೆಯ ಈಜುಪಟು
Budget Session 2025: ಬಜೆಟ್ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಮಾತು
Budget Session 2025: ಬಜೆಟ್ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಮಾತು
ನಮ್ಮ ಮನೆಯಲ್ಲಿ ನಾನು ಆಸ್ತಿಕ ಅದರೆ ನಮ್ಮ ತಂದೆ ನಾಸ್ತಿಕ: ಯತೀಂದ್ರ
ನಮ್ಮ ಮನೆಯಲ್ಲಿ ನಾನು ಆಸ್ತಿಕ ಅದರೆ ನಮ್ಮ ತಂದೆ ನಾಸ್ತಿಕ: ಯತೀಂದ್ರ
ಮನೆಯೊಡತಿ ಸಾವಿನ ಸುದ್ದಿ ತಿಳಿದು ಸಾಕು ನಾಯಿಯ ಮೂಕರೋಧನೆ
ಮನೆಯೊಡತಿ ಸಾವಿನ ಸುದ್ದಿ ತಿಳಿದು ಸಾಕು ನಾಯಿಯ ಮೂಕರೋಧನೆ