Pomegranate Benefits: ಕ್ಯಾನ್ಸರ್ ವಿರುದ್ಧ ಹೋರಾಡಬಲ್ಲ ದಾಳಿಂಬೆಯ ಬಗ್ಗೆ ಉಪಯುಕ್ತ ಮಾಹಿತಿ
Pomegranate Benefits: ದಾಳಿಂಬೆ(Pomegranate)ಯು ತಿನ್ನಲು ಬಹಳ ರುಚಿ ಮಾತ್ರವಲ್ಲದೇ ಅದರ ಔಷಧೀಯ ಗುಣಗಳು ಕೂಡಾ ಅಷ್ಟೇ ಅದ್ಭುತವಾದದ್ದು. ಯಾಕೆಂದರೆ ದಾಳಿಂಬೆಯಲ್ಲಿ ಹಲವು ರೀತಿಯ ಪೋಷಕಾಂಶಗಳು ಹಾಗೂ ವಿಟಮಿನ್‌ಗಳಿದ್ದು(Vitamin), ದೇಹದ ಆರೋಗ್ಯಕ್ಕೆ (Health) ಇದು ತುಂಬಾ ಒಳ್ಳೆಯದು.
ದಾಳಿಂಬೆ(Pomegranate)ಯು ತಿನ್ನಲು ಬಹಳ ರುಚಿ ಮಾತ್ರವಲ್ಲದೇ ಅದರ ಔಷಧೀಯ ಗುಣಗಳು ಕೂಡಾ ಅಷ್ಟೇ ಅದ್ಭುತವಾದದ್ದು. ಯಾಕೆಂದರೆ ದಾಳಿಂಬೆಯಲ್ಲಿ ಹಲವು ರೀತಿಯ ಪೋಷಕಾಂಶಗಳು ಹಾಗೂ ವಿಟಮಿನ್‌ಗಳಿದ್ದು(Vitamin), ದೇಹದ ಆರೋಗ್ಯಕ್ಕೆ (Health) ಇದು ತುಂಬಾ ಒಳ್ಳೆಯದು. ಹಲವಾರು ರೋಗಗಳನ್ನು ಇದು ತಡೆಯುತ್ತದೆ.
ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ ದಾಳಿಂಬೆ ಸೇವನೆಯು ಹಲವಾರು ವಿಧದ ಕ್ಯಾನ್ಸರ್ ಅನ್ನು ತಡೆಯುವುದು ಮತ್ತು ವಿವಿಧ ಹಂತದಲ್ಲಿ ಇರುವಂತಹ ಕ್ಯಾನ್ಸರ್ ವಿರುದ್ಧ ಹೋರಾಡುವುದು ತಿಳಿದುಬಂದಿದೆ. ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣ ಮತ್ತು ಪಾಲಿಫೆನಾಲ್ ಅಂಶವು ಡಿಎನ್ಎ (DNA) ಪರಿವರ್ತನೆ ಆಗುವುದರಿಂದ ರಕ್ಷಿಸುವುದು, ಕ್ಯಾನ್ಸರ್ ಗಡ್ಡೆಗಳ ಬೆಳವಣಿಗೆ ತಡೆಯುವುದು ಮತ್ತು ಕ್ಯಾನ್ಸರ್ ಹರಡದಂತೆ ತಡೆಯುತ್ತದೆ. ಇದರ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಬೇಕಾಗಿದೆ. ಆದರೆ ದಾಳಿಂಬೆಯಿಂದ ಪ್ರಾಸ್ಟ್ರೇಟ್, ಸ್ತನ (breast), ಕರುಳು (Intestine) ಮತ್ತು ಶ್ವಾಸಕೋಶದ ಕ್ಯಾನ್ಸರ್ (Lung Cancer) ತಡೆಯಬಹುದು.
ಕೂದಲು ಬೆಳವಣಿಗೆ: ದಾಳಿಂಬೆ ಹಣ್ಣಿನಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಅಂಶವು ಕೂದಲಿನ ಕಿರುಚೀಲಗಳನ್ನು ಬಲಪಡಿಸುವುದು ಮತ್ತು ರಕ್ತ ಸಂಚಾರವನ್ನು ಸುಧಾರಿಸುವುದು. ಇದರಿಂದ ಕೂದಲಿನ ಬೆಳವಣಿಗೆ ಸರಾಗವಾಗಿ ಆಗುವುದು. ಕೂದಲು ಆರೋಗ್ಯವಾಗಿ ಇರಬೇಕಾದರೆ ನೀವು ದಾಳಿಂಬೆ ಜ್ಯೂಸ್ ನ್ನು ಬೆಳಗ್ಗಿನ ಉಪಾಹಾರದಲ್ಲಿ ಸೇವಿಸಿ.
ತ್ವಚೆಗೆ ತೇವಾಂಶ: ಚರ್ಮರೋಗ ತಜ್ಞರು ಹೇಳುವ ಪ್ರಕಾರ ಒಣ ಹಾಗೂ ನಿಸ್ತೇಜ ಚರ್ಮಕ್ಕೆ ಇದು ತುಂಬಾ ಒಳ್ಳೆಯದು. ವಿಟಮಿನ್ ಸಿ ಕೂಡ ಇದರಲ್ಲಿ ಇರುವ ಕಾರಣದಿಂದಾಗಿ ಮೈಮೇಲೆ ಇದನ್ನು ಹಚ್ಚಿಕೊಂಡರೆ ಅದು ಚರ್ಮವನ್ನು ಕಾಂತಿಯುತವಾಗಿಸುವುದು ಮತ್ತು ಹೊಳಪು ನೀಡುವುದು.
ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ: ದಾಳಿಂಬೆಯಲ್ಲಿ ಫೈಬರ್ ಪ್ರಮಾಣವು ಕಂಡುಬರುತ್ತದೆ, ಇದರೊಂದಿಗೆ, ಇದು ದೇಹದಲ್ಲಿ ನೀರಿನ ಕೊರತೆಯನ್ನು ಪೂರೈಸಲು ಸಹ ಕೆಲಸ ಮಾಡುತ್ತದೆ. ವೈದ್ಯರು ಸಹ ಹೃದ್ರೋಗದಲ್ಲಿ ದಾಳಿಂಬೆಯನ್ನು ಸೇವಿಸಲು ಶಿಫಾರಸು ಮಾಡುತ್ತಾರೆ.
ನೆನಪಿನ ಶಕ್ತಿ ವೃದ್ಧಿ ದಾಳಿಂಬೆಯಲ್ಲಿ ಇರುವಂತಹ ಪಾಲಿಫೆನಾಲ್ ಎನ್ನುವ ಅಂಶವು ನಮ್ಮ ನೆನಪಿನ ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ದಾಳಿಂಬೆ ಹಣ್ಣನ್ನು ಹಾಗೆ ತಿಂದರೆ ಅದು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ಜ್ಯೂಸ್ (Juice) ಮಾಡಿಕೊಂಡು ಕೂಡ ಕುಡಿಯಬಹುದು. ಇಂದಿನ ದಿನಗಳಲ್ಲಿ ನಿಮಗೆ ನೆನಪಿನ ಶಕ್ತಿಯು ಕಡಿಮೆ ಯಾಗುತ್ತಲಿದ್ದರೆ ಆಗ ನೀವು ಪ್ರತಿನಿತ್ಯವೂ ಬೆಳಗ್ಗೆ ಉಪಾಹಾರದ ಜತೆಗೆ ದಾಳಿಂಬೆ ಜ್ಯೂಸ್ ಸೇರಿಸಿಕೊಳ್ಳಿ. ಇದರಿಂದ ನೆನಪಿನ ಶಕ್ತಿಯು ಹೆಚ್ಚಾಗುತ್ತದೆ.
ರಕ್ತದೊತ್ತಡ ತಗ್ಗಿಸುವುದು: ಇಂದು ಅತಿಯಾದ ಒತ್ತಡದ ಜೀವನದಿಂದಾಗಿ ಪ್ರತಿಯೊಬ್ಬರಲ್ಲೂ ಅಧಿಕ ರಕ್ತದೊತ್ತಡದ (Blood Pressure) ಸಮಸ್ಯೆಯು ಕಂಡುಬರುತ್ತಲೇ ಇದೆ. ಆದರೆ ದಾಳಿಂಬೆ ಜ್ಯೂಸ್ ಪ್ರತಿನಿತ್ಯವೂ ಕುಡಿದರೆ ಅದರಿಂದ ರಕ್ತದೊತ್ತಡ ಕಡಿಮೆ ಆಗುವುದು, ಕೊಲೆಸ್ಟ್ರಾಲ್ (cholesterol) ಸುಧಾರಿಸುವುದು ಮತ್ತು ರಕ್ತನಾಳಗಳಲ್ಲಿ ಇರುವಂತಹ ಪದರಗಳನ್ನು ಇದು ತೆಗೆದುಹಾಕುವುದು. ಇದೆಲ್ಲವೂ ಹೃದಯಕ್ಕೆ ತುಂಬಾ ಒಳ್ಳೆಯದು.
ಮೂಳೆಗಳ ಆರೋಗ್ಯ ರಕ್ಷಣೆಗೆ ಸಹಕಾರಿ: ದಾಳಿಂಬೆ ಹಣ್ಣಿನಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳು ಮೂಳೆಗಳ ಸಾಂದ್ರತೆಯನ್ನು ಹೆಚ್ಚು ಮಾಡುತ್ತದೆ . ಅಧ್ಯಯನಗಳು ಹೇಳುವಂತೆ ದಾಳಿಂಬೆ ಹಣ್ಣಿನ ಸಿಪ್ಪೆಯ ಡಿಕಾಕ್ಷನ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಮೂಳೆಗಳ ಆರೋಗ್ಯ ಅತ್ಯುತ್ತಮವಾಗಿರುವ ಮೂಲಕ ಓಸ್ಟಿಯೋಪೋರೋಸಿಸ್ ಎಂಬ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
ಅಜೀರ್ಣ ಸಮಸ್ಯೆಗೆ ಪರಿಹಾರ: ಅಜೀರ್ಣ ಸಮಸ್ಯೆ ಇರುವವರು ದಾಳಿಂಬೆ ಹಣ್ಣನ್ನು ಸೇವಿಸುವುದರಿಂದ ಸಮಸ್ಯೆಯಿಂದ ಪಾರಾಗಬಹುದು. ಹೀಗಾಗಿ ಆಹಾರದ ಸೇವಿಸಿದ ಬಳಿಕ ದಾಳಿಂಬೆ ಹಣ್ಣು ತಿನ್ನುವುದು ಉತ್ತಮ.
ಇಲ್ಲಿ ನೀಡಲಾದ ಮಾಹಿತಿಗಳು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಆಧರಿಸಿರುತ್ತದೆ.
ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:49 pm, Sat, 21 May 22