Heerekayi: ಹೀರೇಕಾಯಿಯ ತರಹೇವಾರಿ ಆರೋಗ್ಯಕಾರಿ ಲಾಭಗಳನ್ನು ತಿಳಿದರೆ ಹಿಗ್ಗಿ ಹೀರೇಕಾಯಿ ಆಗ್ತೀರಿ, ಏನದು ತಿಳಿಯಿರಿ!

Ridge Gourd: ಜನಪ್ರಿಯ ಹೀರೇಕಾಯಿ ತರಕಾರಿಯಲ್ಲಿನ ತರಹೇವಾರಿ ಆರೋಗ್ಯಕಾರಿ ಲಾಭಗಳ ತಿಳಿದರೆ ಹಿಗ್ಗಿ ಹೀರೇಕಾಯಿ ಆಗ್ತೀರಿ, ಏನದು ತಿಳಿಯಿರಿ!

Heerekayi: ಹೀರೇಕಾಯಿಯ ತರಹೇವಾರಿ ಆರೋಗ್ಯಕಾರಿ ಲಾಭಗಳನ್ನು ತಿಳಿದರೆ ಹಿಗ್ಗಿ ಹೀರೇಕಾಯಿ ಆಗ್ತೀರಿ, ಏನದು ತಿಳಿಯಿರಿ!
ಹೀರೇಕಾಯಿಯ ತರಹೇವಾರಿ ಆರೋಗ್ಯಕರ ಲಾಭಗಳು ಹೀಗಿವೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Oct 23, 2022 | 6:06 AM

ಹೀರೇಕಾಯಿ ಎಂಬುದು ನಾವು ಸರ್ವೆಸಾಧಾರಣವಾಗಿ ಕೊಂಡುಕೊಳ್ಳುವ ತರಕಾರಿಗಳಲ್ಲಿ ಒಂದು. ಇದನ್ನು ಇಷ್ಟಪಟ್ಟು ತಿನ್ನುತ್ತೇವೆ. ಆದರೆ ಅದರಿಂದಾಗುವ ಹಲವು ಔಷಧೀಯ ಉಪಯೋಗಗಳ ಬಗ್ಗೆ ನಾವು ಯೋಚಿಸುವುದೇ ಇಲ್ಲ. ಆದ್ದರಿಂದ ನೆಕ್ಟ್​​ ಟೈಮ್ ಇದನ್ನು ಸೇವಿಸುವ ಮುನ್ನ ಅದರ ಬಗ್ಗೆ ನಾವು ಒಂದಿಷ್ಟು ತಿಳಿದುಕೊಳ್ಳೋಣಾ ಅಂತಾ ಈ ಲೇಖನ. ಚಿಕನ್ ಗುನ್ಯಾ, ಡೆಂಗ್ಯೂ, ವೈರಲ್ ಫಿವರ್ ಎಂದೆಲ್ಲ ಹೇಳಲಾಗುವ ಎಷ್ಟೋ ಜ್ವರಗಳು ಇವೆ. ಆದರೆ ಅವೆಲ್ಲಕ್ಕೂ ಕಾರಣ ಜ್ವರ ಒಂದೇ. ಈ ಜ್ವರಗಳಿಗೆಲ್ಲ ರಾಮಬಾಣದಂತೆ ಇರುವ ಹೀರೆಕಾಯಿಯನ್ನು ಹೇಗೆ ಉಪಯೋಗ ಮಾಡುವುದೆಂದು ಇಲ್ಲಿ ನೋಡೋಣ (Ridge Gourd or Heerekayi).

100 ಗ್ರಾಂ ಹೀರೇಕಾಯಿ, ಅರ್ಧ ಹೋಳು ನಿಂಬೆ ಹಣ್ಣು, ಚಿಕ್ಕ ಲೋಟ ನೀರು…

ಮೊದಲು ಹೀರೇಕಾಯಿ ಮತ್ತು ನಿಂಬೆರಸವನ್ನು ಚೆನ್ನಾಗಿ ಜ್ಯೂಸ್ ಮಾಡಿ ನೀರಿನಲ್ಲಿ ಮಿಕ್ಸ್ ಮಾಡಿಕೊಳ್ಳುವುದು. ನಂತರ ಆ ಜ್ಯೂಸನ್ನು ಜ್ವರವಿದ್ದವರು ಬಾಯಿಯಲ್ಲಿ ಸ್ವಲ್ಪಸ್ವಲ್ಪವೇ ಹಾಕಿಕೊಂಡು ಬಾಯಿ ಮುಕ್ಕಳಿಸುವ ರೀತಿಯಲ್ಲಿ, ನಮ್ಮ ಎಂಜಲ ಸಮೇತ ಆ ಜ್ಯೂಸನ್ನು ಕುಡಿಯಬೇಕು. ಕುಡಿದ ಅರ್ಧಗಂಟೆ ಕಾಲ ಮಲಗಿದರೆ ಎಂತಹ ಜ್ವರವೂ ಕಮ್ಮಿಯಾಗಿಬಿಡುತ್ತದೆ!

ಸಿವಿಯರ್ ಫೀವರ್ ಇದ್ದಾಗಲೂ ಕೂಡ ಮೂರು ದಿನಗಳ ಕಾಲ ಇದನ್ನು ಕುಡಿದರೆ ಎಂತಹ ಜ್ವರವೇ ಇದ್ದರೂ ಬಿಟ್ಟುಬಿಡುತ್ತದೆ. ಮತ್ತು ಅದು ತಕ್ಷಣಕ್ಕೆ ಮತ್ತೆ ಬರುವುದಿಲ್ಲ ಎನ್ನುತ್ತಾರೆ ಹಿರಿಯರು. ಮನುಷ್ಯನ ದೇಹಕ್ಕೆ ಹೊಕ್ಕುಳಬಳ್ಳಿಯಲ್ಲಿ ಅದೆಷ್ಟು ಔಷಧೀಯ ಗುಣಗಳನ್ನು ಒಳಗೊಂಡಿರುತ್ತವೆಯೋ, ಹಾಗೆಯೇ ಹೀರೆಕಾಯಿಯಲ್ಲಿಯೂ ಅಷ್ಟೇ ಔಷಧೀಯ ಸತ್ವವಿರುತ್ತದೆ.

ಆಫೀಸಿನಿಂದ ಸಾಮಾನ್ಯವಾಗಿ ಬರುವಾಗಲೇ ಸುಸ್ತು/ ಟೆನ್ಶನ್ ಮಾಡಿಕೊಂಡಿರುವವರು ಈ ಜ್ಯೂಸನ್ನು ಕುಡಿದರೆ ಒಳ್ಳೆಯದು. ಹತ್ತೇ ನಿಮಿಷದಲ್ಲಿ ಎಂತಹ ಸುಸ್ತ್ ಇದ್ದರೂ ಚೇತರಿಸಿಕೊಳ್ಳುತ್ತಾರೆ. ಅಂದರೆ ಇವರು ಮಾಮೂಲಿ ಜ್ಯೂಸ್ನಂತೆ ಮೇಲಿನ ಜ್ಯೂಸ್ ಕುಡಿದರೆ ಸಾಕು.

ಇನ್ನು, ನರದೌರ್ಬಲ್ಯ ಇರುವವರು ಕೂಡ ಇದೇ ಜ್ಯೂಸನ್ನು ಕುಡಿದರೆ ಬಹಳ ಪರಿಣಾಮಕಾರಿಯಾಗಿರುತ್ತದೆ. ಹೆಂಗಸರ ಆದಿಯಾಗಿ ಗಂಡಸರ ತನಕ ಕಾಡುವ ಸಮಸ್ಯೆ ಎಂದರೆ ತಲೆ ಕೂದಲು ಉದುರುವುದು. ಹೀರೆಕಾಯಿಯನ್ನು ಸಿಪ್ಪೆ ತೆಗೆಯಬೇಕಾದರೆ ಬರುವ ನಾರನ್ನು ತೆಗೆದು ಸಣ್ಣ ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. 50 ಗ್ರಾಂ ಕೊಬ್ಬರಿ ಎಣ್ಣೆಯಲ್ಲಿ ಎರಡು ದಿನ ನೆನಸಬೇಕು.

ನಂತರ ತಲೆಗೆ ಎಣ್ಣೆ ಹಚ್ಚಿ ಕೊಳ್ಳುವ ದಿನ ಒಂದೆರಡು ಚಿಕ್ಕ ಸಾಂಬಾರ್ ಈರುಳ್ಳಿಯನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಅದನ್ನು ತಲೆಯ ಬುಡಕ್ಕೆ ಸುತ್ತಲೂ ಚೆನ್ನಾಗಿ ಹಚ್ಚಿಕೊಳ್ಳಿ. ಹಚ್ಚಿ ಕೊಳ್ಳಬೇಕಾದರೆ ಉಗುರಿನಿಂದ ನಮ್ಮ ಸ್ಕಾಲ್ ಪನ್ನು ಉಜ್ಜುತ್ತಾ ಹಚ್ಚಿಕೊಳ್ಳಬೇಕು. ನಂತರ ಅರ್ಧ ಹೋಳು ನಿಂಬೆ ಹಣ್ಣನ್ನು ತಲೆಗೆ ಚೆನ್ನಾಗಿ ಉಜ್ಜಿಕೊಳ್ಳಬೇಕು. ಸ್ವಲ್ಪ ಉರಿಯಾದರೂ ಪರವಾಗಿಲ್ಲ ತಡೆದುಕೊಳ್ಳಿ. ಏನೂ ಆಗುವುದಿಲ್ಲ. ನಂತರ ಈರೇಕಾಯಿ ನಾರು ನೆನೆಸಿದ ಎಣ್ಣೆಯನ್ನು ತಲೆಗೆ ಚೆನ್ನಾಗಿ ಹಚ್ಚಿ ಎರಡು ಗಂಟೆಗಳ ಕಾಲ ನೆನೆಯಬೇಕು. ನೀವು ಸ್ನಾನ ಮಾಡುವ ನೀರಿಗೆ ನೀಲಗಿರಿ ಎಲೆ, ಅಥವಾ ಬೇವಿನ ಎಲೆ ಮತ್ತು ಅರ್ಧ ಹೋಳು ನಿಂಬೆ ರಸವನ್ನು ಹಾಕಿ ಚೆನ್ನಾಗಿ ಕಾಯಿಸಿದ ನೀರಿನಿಂದ ನಿಮ್ಮ ಹಿತಕ್ಕೆ ತಕ್ಕಂತೆ ತಲೆಗೆ ಸ್ನಾನ ಮಾಡಬೇಕು.

ಯಾವುದೇ ಕಾರಣಕ್ಕೂ ಸೀಗೆಪುಡಿಯನ್ನೇ ಉಪಯೋಗಿಸಬೇಕು. ವಾರಕ್ಕೆ ಎರಡು ದಿನ ಈ ರೀತಿ ಸ್ನಾನ ಮಾಡಿದರೆ ಕೂದಲು ಉದುರುವ ಸಮಸ್ಯೆ ಪರಿಹಾರವಾಗುತ್ತದೆ. ತಲೆನೋವು ಎಂದು ಹಪಹಪಿಸುವಾಗ ಈ ಜ್ಯೂಸನ್ನು ಕುಡಿದರೆ ಬಹಳ ಪರಿಣಾಮಕಾರಿಯಾಗಿರುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚು ಉತ್ಪತ್ತಿ ಮಾಡುತ್ತದೆ. ಹಸಿಯಾಗಿ ತಿಂದರೆ ನಮ್ಮ ದೇಹಕ್ಕೆ ಹೆಚ್ಚು ಕ್ಷೇಮ.

ಹೀರೇಕಾಯಿಯ ಇನ್ನಿತರೆ ಪ್ರಯೋಜನಗಳು ಹೀಗಿವೆ:

* ಇದು ಹೆಚ್ಚಿನ ಪ್ರಮಾಣದಲ್ಲಿ ನಾರಿನಂಶ, ವಿಟಮಿನ್‌-ಸಿ, ಸತು, ಕಬ್ಬಿಣಾಂಶ, ರೈಬೋಫ್ಲಾವಿನ್‌, ಮೆಗ್ನೇಶಿಯಂ, ಥಯಾಮಿನ್‌ ಹೊಂದಿರುವ ತರಕಾರಿ. * ಇದು ಕಡಿಮೆ ಸ್ಯಾಚುರೇಟೆಡ್‌ ಫ್ಯಾಟ್‌, ಕೊಲೆಸ್ಟ್ರಾಲ್‌ ಮತ್ತು ಕ್ಯಾಲೊರಿ ಹೊಂದಿದೆ. ಸಾಕಷ್ಟು ಸೆಲ್ಯುಲೋಸ್‌ ಮತ್ತು ನೀರಿನಂಶ ಹೊಂದಿದ್ದು, ಮಲಬದ್ಧತೆಯಿಂದ ಮುಕ್ತಿ ಕೊಡುವುದಲ್ಲದೆ, ಪೈಲ್ಸ್‌ ತಡೆಗಟ್ಟುತ್ತದೆ. * ಮೂತ್ರ ಮತ್ತು ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಪೆಪ್ಟೆಡ್ಸ್‌, ಆಲ್ಕಲಾಯಿಡ್ಸ್‌ ಅಂತಹ ಇನ್ಸುಲಿನ್‌ ಅಂಶ ಹೊಂದಿರುತ್ತದೆ. * ಹೀರೇಕಾಯಿಯು ರಕ್ತ ಶುದ್ಧಿಗೆ ಸಹಾಯಕ. ಯಕೃತ್‌ನ ಆರೋಗ್ಯವನ್ನು ಇದು ಹೆಚ್ಚಿಸುವುದಲ್ಲದೆ, ಯಕೃತ್‌ನ್ನು ಆಲ್ಕೋಹಾಲ್‌ನಿಂದ ರಕ್ಷಿಸುತ್ತದೆ. * ಹೀರೇಕಾಯಿಯ ಜ್ಯೂಸ್‌ನ್ನು ಜಾಂಡಿಸ್‌ ಗುಣಪಡಿಸಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. * ಮೊಡವೆಗಳನ್ನು ನಿವಾರಿಸುವುದರಿಂದ ಚರ್ಮದ ಆರೈಕೆಗೂ ಉತ್ತಮ. ಆ್ಯಸಿಡಿಟಿ, ಅಲ್ಸರ್‌ ಕಡಿಮೆ ಮಾಡುವ ಹೀರೇಕಾಯಿ, ಉರಿಮೂತ್ರ ಶಮನಕ್ಕೂ ಹೆಸರುವಾಸಿ. * ಕಣ್ಣಿನ ಕಾಯಿಲೆಗಳನ್ನು ತಡೆಗಟ್ಟುವ ಶಕ್ತಿಯೂ ಇದಕ್ಕಿದೆ. ಇದರಲ್ಲಿರುವ ವಿಟಮಿನ್‌ ಎ ಅಂಧತ್ವಕ್ಕೆ ಕಾರಣವಾಗುವ ಮಸ್ಕ್ಯುಲಾರ್‌ ಡಿಜನರೇಶನ್‌ನ್ನು ತಡೆಯುತ್ತದೆ. ಉತ್ತಮ ದೃಷ್ಟಿಗೆ ಸಹಾಯಕವಾದ ಬೀಟಾ ಕೆರೋಟಿನ್‌ ಅಂಶವನ್ನು ಹೀರೆಕಾಯಿ ಒಳಗೊಂಡಿದೆ. * ಅಷ್ಟೇ ಅಲ್ಲ- ಮ್ಯಾಂಗನೀಸ್‌ ಅಂಶವು ಗ್ಲೂಕೋನಿಯೋಜಿನೇಸಿಸ್‌ ಎನ್ನುವ ಪ್ರಕ್ರಿಯೆಗೆ ಕಾರಣವಾದ ಜೀರ್ಣಕಾರಕ ಕಿಣ್ವಗಳ ಉತ್ಪಾದನೆಗೆ ಅವಶ್ಯ. ಹೀರೆಕಾಯಿಯಲ್ಲಿರುವ ಮ್ಯಾಂಗನೀಸ್‌ ಅಂಶದಿಂದ ಇನ್ಸುಲಿನ್‌ ಸ್ರವಿಕೆ ಹೆಚ್ಚಾಗುವುದಲ್ಲದೆ, ಮೈಟೋಕಾಂಡ್ರಿಯಾ ಕಾರ್ಯಚಟುವಟಿಕೆ ಉತ್ತೇಜನಗೊಳ್ಳುತ್ತದೆ. * ಇದನ್ನು ಕಾಯಿ ರೂಪದಲ್ಲಾದರೂ, ಪಲ್ಯ, ಅಥವಾ ಚಟ್ನಿ ರೂಪದಲ್ಲಿ, ಜ್ಯೂಸ್ ಮಾಡಿಕೊಂಡು ಕುಡಿದರೂ ಮಧುಮೇಹವನ್ನು ನಿಯಂತ್ರಿಸುತ್ತದೆ. ಇಷ್ಟೆಲ್ಲಾ ರೋಗಗಳು ಹೀರೇಕಾಯಿಯಿಂದ ಸಾಧ್ಯವಾಗುತ್ತದೆ ಎಂದರೆ ಯಾರು ತಾನೆ ಹೀರೇಕಾಯಿ ತಿನ್ನಲ್ಲ ಹೇಳಿ. ಈಗ ಹೆಚ್ಚಾಗಿ ಸಿಗುವ ತರಕಾರಿ ಇದು. ಎಲ್ಲಾ ಕಾಯಿಲೆಗಳಿಗೂ ಇದು ಉತ್ತಮ ಔಷಧ ಇದ್ದಂತೆ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್