
ಕುಂಬಳಕಾಯಿ ಬೀಜ (Pumpkin Seeds) ಗಳ ಆರೋಗ್ಯ (Health) ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿರಬಹುದು. ಇವುಗಳನ್ನು ನಿಯಮಿತವಾಗಿ ಆಹಾರದಲ್ಲಿ ಬಳಕೆ ಮಾಡುವುದರಿಂದ ಸಾಕಷ್ಟು ರೀತಿಯ ಲಾಭಗಳಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಬೀಜಗಳಲ್ಲಿ ವಿಟಮಿನ್ ಐ, ಫೈಬರ್, ಐರನ್, ಕಾಲ್ಶಿಯಂ, ಬಿ 2, ಫೋಲೆಟ್, ಬೀಟಾ ಕೆರೋಟಿನ್, ಮೆಗ್ನೀಷಿಯಂ, ಜಿಂಕ್ ಮುಂತಾದ ಪೌಷ್ಟಿಕಾಂಶಗಳು ಹೇರಳವಾಗಿದೆ. ಇವೆಲ್ಲವೂ ನಮ್ಮ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಉಪಯುಕ್ತವಾಗಿವೆ. ಹಾಗಾಗಿ ಇವುಗಳನ್ನು ನಿಯಮಿತವಾಗಿ ಸೇವಿಸುವುದು ತುಂಬಾ ಒಳ್ಳೆಯದು. ಆದರೆ ಒಳ್ಳೆಯದು ಎಂದು ಅತಿಯಾಗಿ ಸೇವನೆ ಮಾಡಿದರೆ ಅಮೃತ ಕೂಡ ವಿಷವಾಗುತ್ತದೆ ಎಂಬ ಮಾತನ್ನು ನೀವು ಕೇಳಿರಬಹುದು. ಹಾಗಯೇ ಕುಂಬಳಕಾಯಿ ಬೀಜ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಅತಿಯಾಗಿ ತಿಂದರೆ ತೀವ್ರ ರೀತಿಯ ಅಡ್ಡ ಪರಿಣಾಮಕ್ಕೆ (Disadvantages of pumpkin seeds) ದಾರಿ ಮಾಡಿಕೊಡಬಹುದು. ಹಾಗಾದರೆ ಇವುಗಳನ್ನು ಅತಿಯಾಗಿ ಸೇವನೆ ಮಾಡಿದರೆ ಏನಾಗುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ತಜ್ಞರು ಹೇಳುವ ಪ್ರಕಾರ, ಕುಂಬಳಕಾಯಿ ಬೀಜಗಳನ್ನು ಸರಿಯಾದ ರೀತಿಯಲ್ಲಿ ಸೇವಿಸಿದಾಗ ಮಾತ್ರ ಸಂಪೂರ್ಣ ಪ್ರಯೋಜನಗಳು ದೊರೆಯುತ್ತವೆ. ಇವುಗಳನ್ನು ಅತಿಯಾಗಿ ಸೇವನೆ ಮಾಡಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಹಾಗಾಗಿ ಇವುಗಳ ಸೇವನೆ ಮೇಲೆ ಗಮನವಿರಲಿ. ನೀವು ಕುಂಬಳಕಾಯಿ ಬೀಜಗಳನ್ನು ಸಲಾಡ್‌ಗಳು, ಗ್ರಾನೋಲಾ ಬಾರ್‌ಗಳು ಮತ್ತು ಸ್ಮೂಥಿಗಳಂತಹ ಭಕ್ಷ್ಯಗಳಲ್ಲಿ ಸೇರಿಸಬಹುದು. ಪರ್ಯಾಯವಾಗಿ, ಅವುಗಳನ್ನು ಲಘುವಾಗಿ ಹುರಿದು ಸೇವಿಸಬಹುದು. ಆದರೆ ಇವು ನಾಲಿಗೆಗೆ ರುಚಿ ನೀಡುತ್ತದೆ ಎಂದು ಅತಿಯಾಗಿ ನಿಮ್ಮ ಆಹಾರಗಳಲ್ಲಿ ಬಳಕೆ ಮಾಡಿ ಸೇವನೆ ಮಾಡಬಾರದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ