Health Tips: ಕುಂಬಳಕಾಯಿ ಬೀಜಗಳು ಮೀನಿಗಿಂತಲೂ 10 ಪಟ್ಟು ಬಲ: ಎಸೆಯುವ ಮುನ್ನ ಉಪಯೋಗ ತಿಳಿಯಿರಿ

BBC ಪೋಷಕಾಂಶಗಳ ಆಧಾರದ ಮೇಲೆ ವಿಶ್ವದ 100 ಅತ್ಯಂತ ಶಕ್ತಿಶಾಲಿ ಆಹಾರಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಇದರಲ್ಲಿ ಕುಂಬಳಕಾಯಿ ಬೀಜಗಳು ಆರನೇ ಸ್ಥಾನವನ್ನು ಪಡೆದಿವೆ. ಆಶ್ಚರ್ಯಕರ ವಿಷಯವೆಂದರೆ ಕುಂಬಳಕಾಯಿ ಬೀಜಗಳು ಪೌಷ್ಠಿಕಾಂಶದ ವಿಷಯದಲ್ಲಿ ಮೀನಿಗಿಂತಲೂ ಹೆಚ್ಚು ಶಕ್ತಿಯುತವಾಗಿವೆ. ಮುಂದಿನ ಬಾರಿ ನೀವು ಕುಂಬಳಕಾಯಿ ಬೀಜಗಳನ್ನು ಎಸೆಯುವ ತಪ್ಪನ್ನು ಮಾಡಬೇಡಿ.

Health Tips: ಕುಂಬಳಕಾಯಿ ಬೀಜಗಳು ಮೀನಿಗಿಂತಲೂ 10 ಪಟ್ಟು ಬಲ: ಎಸೆಯುವ ಮುನ್ನ ಉಪಯೋಗ ತಿಳಿಯಿರಿ
ಕುಂಬಳಕಾಯಿ ಬೀಜ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 20, 2024 | 4:49 PM

ಕುಂಬಳಕಾಯಿ ತರಕಾರಿ ಭಾರತದಲ್ಲಿ ಬಹಳಷ್ಟು ಪ್ರಸಿದ್ಧಿ ಪಡೆದಿದ್ದು ಹೆಚ್ಚಿನ ಜನರು ಸೇವಿಸುತ್ತಾರೆ. ವಿಶೇಷವಾಗಿ ಚಳಿಗಾಲದಲ್ಲಿ ಇದನ್ನು ಹೇರಳವಾಗಿ ಉತ್ಪಾದಿಸಲಾಗುತ್ತದೆ. ಕುಂಬಳಕಾಯಿ ತರಕಾರಿಯನ್ನು ಅಡಿಗೆಗೆ ಮಾಡುವಾಗ, ಹೆಚ್ಚಿನ ಜನರು ಅದರ ಬೀಜಗಳನ್ನು ಎಸೆಯುತ್ತಾರೆ. ಆದರೆ ಕುಂಬಳಕಾಯಿಯ ಬೀಜಗಳು ಹೆಚ್ಚಿನ ಶಕ್ತಿಯನ್ನು ಹೊಂದಿದೆ ಎಂಬುದು ನಿಮಗೆ ತಿಳಿದಿದೆಯೇ?. BBC ಪೋಷಕಾಂಶಗಳ ಆಧಾರದ ಮೇಲೆ ವಿಶ್ವದ 100 ಅತ್ಯಂತ ಶಕ್ತಿಶಾಲಿ ಆಹಾರಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಇದರಲ್ಲಿ ಕುಂಬಳಕಾಯಿ ಬೀಜಗಳು ಆರನೇ ಸ್ಥಾನವನ್ನು ಪಡೆದಿವೆ. ಆಶ್ಚರ್ಯಕರ ವಿಷಯವೆಂದರೆ ಕುಂಬಳಕಾಯಿ ಬೀಜಗಳು ಪೌಷ್ಠಿಕಾಂಶದ ವಿಷಯದಲ್ಲಿ ಮೀನಿಗಿಂತಲೂ ಹೆಚ್ಚು ಶಕ್ತಿಯುತವಾಗಿವೆ.

ಮುಂದಿನ ಬಾರಿ ನೀವು ಕುಂಬಳಕಾಯಿ ಬೀಜಗಳನ್ನು ಎಸೆಯುವ ತಪ್ಪನ್ನು ಮಾಡಬೇಡಿ. ಕುಂಬಳಕಾಯಿ ಬೀಜಗಳ ವಿಶೇಷತೆ ಏನು ಮತ್ತು ಅದು ಹೇಗೆ ಶಕ್ತಿಯುತವಾಗಿಸುತ್ತದೆ, ಅದನ್ನು ನಿಮ್ಮ ಆಹಾರದಲ್ಲಿ ಹೇಗೆ ಸೇರಿಸಿಕೊಳ್ಳಬಹುದು ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.

ಕಬ್ಬಿಣ ಮತ್ತು ಮ್ಯಾಂಗನೀಸ್:

ಕುಂಬಳಕಾಯಿ ಬೀಜಗಳು ಕಬ್ಬಿಣ ಮತ್ತು ಮ್ಯಾಂಗನೀಸ್‌ನ ಅತ್ಯುತ್ತಮ ಸಸ್ಯ ಆಧಾರಿತ ಮೂಲವಾಗಿದೆ. ದೇಹದಲ್ಲಿನ ರಕ್ತಹೀನತೆಯನ್ನು ತೆಗೆದುಹಾಕುವಲ್ಲಿ ಕಬ್ಬಿಣವು ಸಹಾಯಕವಾಗಿದೆ, ಹಾಗೆಯೆ ದೇಹ ಮತ್ತು ಮೂಳೆಗಳನ್ನು ಬಲಪಡಿಸಲು ಮ್ಯಾಂಗನೀಸ್ ಅಗತ್ಯವಿದೆ.

ಹೃದಯವನ್ನು ಆರೋಗ್ಯವಾಗಿಡಲು ಸಹಕಾರಿ:

ಕುಂಬಳಕಾಯಿ ಬೀಜಗಳಲ್ಲಿ ಮೆಗ್ನೀಸಿಯಮ್ ಸಮೃದ್ಧವಾಗಿದೆ, ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯದ ಲಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಒಮೆಗಾ -3 ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳು ಉರಿಯೂತವನ್ನು ಮತ್ತು ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಡಿಮೆ ಮಾಡುತ್ತದೆ.

ರೋಗನಿರೋಧಕ ಶಕ್ತಿ ಬಲಪಡಿಸುತ್ತದೆ:

ಕುಂಬಳಕಾಯಿ ಬೀಜಗಳಲ್ಲಿ ಇರುವ ಸತುವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ದೇಹವು ಸೋಂಕುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಮಾಡುತ್ತದೆ. ವಿಟಮಿನ್ ಇ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಕ್ಯಾರೊಟಿನಾಯ್ಡ್‌ಗಳು ಮತ್ತು ವಿಟಮಿನ್ ಇ ನಂತಹ ಆಂಟಿಆಕ್ಸಿಡೆಂಟ್‌ಗಳು ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತವೆ.

ಇದನ್ನೂ ಓದಿ: ತುಪ್ಪ ಅಥವಾ ತೆಂಗಿನ ಎಣ್ಣೆ: ಅಡುಗೆಗೆ ಆರೋಗ್ಯಕರ ಆಯ್ಕೆ ಯಾವುದು? ಇಲ್ಲಿದೆ ನೋಡಿ

ಮೂಳೆಗಳಿಗೆ ಬಲ ತುಂಬಿಸುತ್ತದೆ:

ಮೆಗ್ನೀಸಿಯಮ್, ರಂಜಕ ಮತ್ತು ಸತುವು ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಆಸ್ಟಿಯೊಪೊರೋಸಿಸ್ ಅನ್ನು ತಡೆಯಲು ಅಗತ್ಯವಾದ ಅಂಶಗಳಾಗಿವೆ. ಕುಂಬಳಕಾಯಿ ಬೀಜಗಳಲ್ಲಿ ಈ ಮೂರು ಅಂಶಗಳು ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತವೆ. ಇದರ ನಿಯಮಿತ ಸೇವನೆಯಿಂದ ಮೂಳೆಗಳು ಬಲಗೊಳ್ಳುತ್ತವೆ.

ಕೂದಲು ಉದುರುವಿಕೆಯನ್ನು ತಡೆಯುತ್ತವೆ:

ಕುಂಬಳಕಾಯಿ ಬೀಜಗಳಲ್ಲಿನ ಫೈಟೊಕೆಮಿಕಲ್ ಸಂಯುಕ್ತಗಳು ಕೂದಲು ಉದುರುವಿಕೆಗೆ ಕಾರಣವಾಗುವ ಹಾರ್ಮೋನ್ ಡೈಹೈಡ್ರೊಟೆಸ್ಟೊಸ್ಟೆರಾನ್ (ಡಿಎಚ್ ಟಿ) ಉತ್ಪಾದನೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಡಿಎಚ್ ಟಿ ಮಟ್ಟವನ್ನು ಕಡಿಮೆ ಮಾಡುವ ಮೂಲಕ, ಕುಂಬಳಕಾಯಿ ಬೀಜಗಳು ಕೂದಲು ಉದುರುವಿಕೆಯನ್ನು ನಿಧಾನಗೊಳಿಸಲು ಮತ್ತು ಇರುವ ಕೂದಲನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ.

ಬಿಪಿ ಮತ್ತು ತೂಕವನ್ನು ನಿಯಂತ್ರಣದಲ್ಲಿಡುತ್ತದೆ:

ಕುಂಬಳಕಾಯಿ ಬೀಜಗಳು ಇನ್ಸುಲಿನ್ ಅನ್ನು ಸುಧಾರಿಸುತ್ತದೆ ಮತ್ತು ಮಧುಮೇಹದ ತೊಂದರೆಗಳನ್ನು ತಡೆಯುತ್ತದೆ. ಇದರ ಗ್ಲೈಸೆಮಿಕ್ ಇಂಡೆಕ್ಸ್ ಕೂಡ ಕಡಿಮೆ. ಇದರಲ್ಲಿರುವ ಪ್ರೋಟೀನ್ ಮತ್ತು ಫೈಬರ್ ಹಸಿವನ್ನು ಮತ್ತು ತೂಕವನ್ನು ನಿಯಂತ್ರಿಸುತ್ತದೆ. ಒಳ್ಳೆಯ ವಿಷಯವೆಂದರೆ 100 ಗ್ರಾಂ ಕುಂಬಳಕಾಯಿ ಬೀಜಗಳು ಕೇವಲ 164 ಕ್ಯಾಲೊರಿಗಳನ್ನು ಹೊಂದಿರುತ್ತವೆ.

ನಿಮ್ಮ ಆಹಾರದಲ್ಲಿ ಕುಂಬಳಕಾಯಿ ಬೀಜಗಳನ್ನು ಹೇಗೆ ಸೇರಿಸುವುದು?:

ಅವುಗಳನ್ನು ಹಸಿ, ಹುರಿದ ಅಥವಾ ಉಪ್ಪಿನಕಾಯಿಯಾಗಿ ಸೇವಿಸಿ.

ಪೌಷ್ಟಿಕಾಂಶ ಮತ್ತು ಸುವಾಸನೆಗಾಗಿ ಸಲಾಡ್‌ಗಳ ಮೇಲೆ ಸಿಂಪಡಿಸಿ.

ಬ್ರೆಡ್‌ಗಳು, ಮಫಿನ್‌ಗಳು ಅಥವಾ ಗ್ರಾನೋಲಾ ಬಾರ್‌ಗಳಲ್ಲಿ ಬಳಸಿ.

ಸೂಪ್, ಗಂಜಿ ಅಥವಾ ಮೊಸರಿನ ಜೊತೆ ಸೇರಿಸಿ ಕುಡಿಯಿರಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರವಿ ಮನೆಯಲ್ಲಿ ಪ್ರಾಣೇಶ್ ಜೊತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು
ರವಿ ಮನೆಯಲ್ಲಿ ಪ್ರಾಣೇಶ್ ಜೊತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು
ಸ್ಪರ್ಧಿಗಳಿಗೆ ಇನ್ನಷ್ಟು ಕಷ್ಟ ಕೊಟ್ಟ ಬಿಗ್ ಬಾಸ್; ಭವ್ಯಾ, ಐಶ್ವರ್ಯಾ ಪರದಾಟ
ಸ್ಪರ್ಧಿಗಳಿಗೆ ಇನ್ನಷ್ಟು ಕಷ್ಟ ಕೊಟ್ಟ ಬಿಗ್ ಬಾಸ್; ಭವ್ಯಾ, ಐಶ್ವರ್ಯಾ ಪರದಾಟ
ಮಾಜಿ ಗೃಹ ಸಚಿವನಾದ ತನ್ನನ್ನು ಠಾಣೆಯೊಳಗೆ ಬರಗೊಡಲಿಲ್ಲ: ಅಶೋಕ
ಮಾಜಿ ಗೃಹ ಸಚಿವನಾದ ತನ್ನನ್ನು ಠಾಣೆಯೊಳಗೆ ಬರಗೊಡಲಿಲ್ಲ: ಅಶೋಕ
ನೀರಾಹಾರವಿಲ್ಲದೆ ರವಿ ದೈಹಿಕ ಮತ್ತು ಮಾನಸಿಕವಾಗಿ ವಿಪರೀತ ಬಳಲಿದ್ದಾರೆ: ವಕೀಲ
ನೀರಾಹಾರವಿಲ್ಲದೆ ರವಿ ದೈಹಿಕ ಮತ್ತು ಮಾನಸಿಕವಾಗಿ ವಿಪರೀತ ಬಳಲಿದ್ದಾರೆ: ವಕೀಲ
ನಾವು ಠಾಣೆಗೆ ಹೋಗಿದ್ದನ್ನು ಪ್ರಶ್ನಿಸಲು ಶಿವಕುಮಾರ್ ಯಾರು? ಅಶೋಕ
ನಾವು ಠಾಣೆಗೆ ಹೋಗಿದ್ದನ್ನು ಪ್ರಶ್ನಿಸಲು ಶಿವಕುಮಾರ್ ಯಾರು? ಅಶೋಕ
ರವಿ ತಲೆಗೆ ಗಾಯ ಯಾಕೆ, ಹಲ್ಲೆ ಮಾಡಿದ್ಯಾರು? ಪರಮೇಶ್ವರ್ ಹೇಳಿದ್ದೇನು ನೋಡಿ
ರವಿ ತಲೆಗೆ ಗಾಯ ಯಾಕೆ, ಹಲ್ಲೆ ಮಾಡಿದ್ಯಾರು? ಪರಮೇಶ್ವರ್ ಹೇಳಿದ್ದೇನು ನೋಡಿ
ರವಿಯವರನ್ನು ಇವತ್ತು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ: ಪರಮೇಶ್ವರ್
ರವಿಯವರನ್ನು ಇವತ್ತು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ: ಪರಮೇಶ್ವರ್
ಅಶ್ಲೀಲ ಪದ ಬಳಕೆ: ಸದನದಲ್ಲಿ ನಡೆದಿದ್ದೇನು? ಹೆಬ್ಬಾಳ್ಕರ್​ ಹೇಳಿದ್ದಿಷ್ಟು
ಅಶ್ಲೀಲ ಪದ ಬಳಕೆ: ಸದನದಲ್ಲಿ ನಡೆದಿದ್ದೇನು? ಹೆಬ್ಬಾಳ್ಕರ್​ ಹೇಳಿದ್ದಿಷ್ಟು
ಚಿಕ್ಕಮಗಳೂರಲ್ಲಿ ಕೊಳಕು ಬಾಯಿ ರವಿ ಬಿಟ್ಟರೆ ಬೇರೆಲ್ಲ ಸಂಸ್ಕಾರವಂತರು:ಡಿಕೆಶಿ
ಚಿಕ್ಕಮಗಳೂರಲ್ಲಿ ಕೊಳಕು ಬಾಯಿ ರವಿ ಬಿಟ್ಟರೆ ಬೇರೆಲ್ಲ ಸಂಸ್ಕಾರವಂತರು:ಡಿಕೆಶಿ
ಇದೇನು ತಾಲಿಬಾಲಿಗಳ ಸರ್ಕಾರವಾ? ದೌರ್ಜನ್ಯ ನಡೆಯಲ್ಲ: ಆರ್ ಅಶೋಕ
ಇದೇನು ತಾಲಿಬಾಲಿಗಳ ಸರ್ಕಾರವಾ? ದೌರ್ಜನ್ಯ ನಡೆಯಲ್ಲ: ಆರ್ ಅಶೋಕ