AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೃದಯಾಘಾತಕ್ಕೆ ಇದುವೇ ಪ್ರಮುಖ ಕಾರಣಗಳು, ಇಲ್ಲಿದೆ ನೋಡಿ

ಹೃದಯಾಘಾತಕ್ಕೆ ಕೆಲವೊಂದು ದೊಡ್ಡ ದೊಡ್ಡ ಕಾರಣಗಳನ್ನು ಹೇಳುತ್ತಾರೆ. ಆದರೆ ಹೃದಯಾಘಾತಕ್ಕೆ ಚಿಕ್ಕ ನಿರ್ಲಕ್ಷ್ಯಗಳು ಕಾರಣವಾಗಬಹುದು ಹಾಗೂ ಈ ಅಭ್ಯಾಸಗಳು ಕೂಡ ಹೃದಯಾಘಾತಕ್ಕೆ ಮುಖ್ಯ ಕಾರಣವಾಗಿರುತ್ತದೆ. ದೆಹಲಿಯ ಸಿಕೆ ಬಿರ್ಲಾ ಆಸ್ಪತ್ರೆಯ ಹೃದ್ರೋಗ ವಿಭಾಗದ ಸಲಹೆಗಾರರಾದ ಡಾ. ಸಂಜೀವ ಕುಮಾರ್ ಗುಪ್ತಾ ಈ ಬಗ್ಗೆ ಹೇಳಿದ್ದಾರೆ. ಯಾವೆಲ್ಲ ಕಾರಣಗಳಿಂದ ಹೃದಯಾಘಾತ ಆಗುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಹೃದಯಾಘಾತಕ್ಕೆ ಇದುವೇ ಪ್ರಮುಖ ಕಾರಣಗಳು, ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ Image Credit source: pinterest
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Jun 03, 2025 | 3:30 PM

Share

ಹೃದಯ ದೇಹದ (Heart health) ಪ್ರಮುಖ ಅಂಗವಾಗಿದೆ. ಇದನ್ನು ಆರೋಗ್ಯವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿದೆ. ಹೃದಯ ವೈಫಲ್ಯ ಅನೇಕ ಕಾರಣಗಳು ಇದೆ. ಇದಕ್ಕೆ ಆಹಾರ ಪದ್ಧತಿಗಳು ಕಾರಣ, ಇನ್ನು ಕೆಲವು ಸರಿಯಾದ ವ್ಯಾಯಾಮ ಇಲ್ಲದ ಕಾರಣ ಹೃದಯಾಘಾತದಂತಹ ಸಮಸ್ಯೆಗಳು ಆಗುತ್ತದೆ. ಆದರೆ ದೆಹಲಿಯ ಸಿಕೆ ಬಿರ್ಲಾ ಆಸ್ಪತ್ರೆಯ ಹೃದ್ರೋಗ ವಿಭಾಗದ ಸಲಹೆಗಾರರಾದ ಡಾ. ಸಂಜೀವ ಕುಮಾರ್ ಗುಪ್ತಾ ಅವರ ಇಂಡಿಯಾನ್​​​ ಎಕ್ಸ್​​​ಪ್ರಸ್​​​ಗೆ ನೀಡಿದ ಸಂದರ್ಶನದ ಪ್ರಕಾರ, ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುವ ಇನ್ನೂ ಅನೇಕ ಸಮಸ್ಯೆಗಳಿವೆ ಅದರ ಬಗ್ಗೆ ಕೆಲವರಿಗೆ ಅರಿವಿಲ್ಲ ಎಂದು ಹೇಳಿದ್ದಾರೆ. ನಾವು ಹಲವು ಬಾರಿ ಕಡೆಗಣಿಸಲ್ಪಡುವ ಅಂಶಗಳು ಹೃದಯದ ಆರೋಗ್ಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.

ಇಲ್ಲಿದೆ ನೋಡಿ ಹೃದಯಾಘಾತಕ್ಕೆ ಪ್ರಮುಖ ಕಾರಣ

  • ಸಾಕಷ್ಟು ನಿದ್ರೆ ಮಾಡದಿರುವುದು: ಆಗಾಗ್ಗೆ ತಡರಾತ್ರಿ ಎಚ್ಚರವಾಗಿದ್ದರೆ ಅಥವಾ ಸಾಕಷ್ಟು ವಿಶ್ರಾಂತಿ ಪಡೆಯದಿದ್ದರೆ, ನಿಮ್ಮ ಹೃದಯವನ್ನು ಅಪಾಯಕ್ಕೆ ಸಿಲುಕಿಸಬಹುದು. ದೀರ್ಘಕಾಲದ ನಿದ್ರಾಹೀನತೆಯು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಹೃದಯ ವೈಫಲ್ಯ, ಪಾರ್ಶ್ವವಾಯು ಮತ್ತು ಹಠಾತ್ ಹೃದಯಾಘಾತದ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ. ರಾತ್ರಿ ಗುಣಮಟ್ಟದ ನಿದ್ರೆ ಪಡೆಯುವುದು ಹೆಚ್ಚಿನ ಜನರು ಯೋಚಿಸುವುದಕ್ಕಿಂತ ಹೆಚ್ಚು ಮುಖ್ಯವಾಗಿದೆ – ನಿಮ್ಮ ಹೃದಯವು ಅದರ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದ್ದಾರೆ.
  • ಮಾಲಿನ್ಯ: ಸಂಚಾರದಿಂದ ಉಂಟಾಗುವ ವಾಯು ಮಾಲಿನ್ಯಕ್ಕೆ ಪ್ರತಿದಿನ ಒಡ್ಡಿಕೊಳ್ಳುವುದರಿಂದ ಅಪಧಮನಿಗಳು ಗಟ್ಟಿಯಾಗುವುದು ಹೆಚ್ಚಾಗುತ್ತದೆ. ಅಪಧಮನಿಕಾಠಿಣ್ಯದ ಅಪಾಯ ಹೆಚ್ಚಾಗುತ್ತದೆ. ನಗರದಲ್ಲಿ ಅಥವಾ ಜನನಿಬಿಡ ರಸ್ತೆಗಳ ಬಳಿ ವಾಸಿಸುತ್ತಿದ್ದರೆ, ಮಾಲಿನ್ಯದ ಗರಿಷ್ಠ ಸಮಯವನ್ನು ತಪ್ಪಿಸಲು ಪ್ರಯತ್ನಿಸಿ ಮತ್ತು ಸಾಧ್ಯವಾದಾಗಲೆಲ್ಲಾ ಮನೆಯಲ್ಲಿ ಏರ್ ಫಿಲ್ಟರ್‌ಗಳನ್ನು ಬಳಸಿ.
  • ಒತ್ತಡವು ನಿಮ್ಮ ಹೃದಯದ ಮೇಲೆ ಪರಿಣಾಮ: ಮಿತಿರಿದ ಒತ್ತಡ ಹೃದಯಕ್ಕೆ ಹೆಚ್ಚು ಒತ್ತಡ ಉಂಟು ಮಾಡುತ್ತದೆ. ಆದರೆ ಅದು ಹಾನಿಯನ್ನುಂಟುಮಾಡುತ್ತದೆ. ನಿರಂತರ ಒತ್ತಡ ಮತ್ತು ಹೆಚ್ಚು ಒತ್ತಾಯಪೂರಕವಾಗಿ ತಳ್ಳುವ ಮನಸ್ಥಿತಿಯು ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ದೀರ್ಘಕಾಲದ ಉರಿಯೂತ ಮತ್ತು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಇದನ್ನು ಕಡಿಮೆ ಮಾಡಲು ವಿಶ್ರಾಂತಿ ಪಡೆಯುವುದು, ನಡೆಯುವುದು, ಜರ್ನಲಿಂಗ್ ಮಾಡುವುದು ಅಥವಾ ಮಾತನಾಡುವುದು ದೀರ್ಘಾವಧಿಯಲ್ಲಿ ನಿಮ್ಮ ಹೃದಯವನ್ನು ರಕ್ಷಿಸಬಹುದು.
  • ಆರೋಗ್ಯಕರ ಒಸಡುಗಳು: ಒಸಡುಗಳ ಬಗ್ಗೆ ಆಗ್ಗಾಗೆ ಚಿಕಿತ್ಸೆ ಪಡೆಯದೇ ಇರುವುದು ನಿಮ್ಮ ಹೃದಯಕ್ಕೆ ಹಾನಿಯಾಗಬಹುದು.ಒಸಡು ರೋಗವು ವ್ಯವಸ್ಥಿತ ಉರಿಯೂತವನ್ನು ಹೆಚ್ಚಿಸುತ್ತದೆ, ಇದು ಹೃದಯಾಘಾತವನ್ನು ಪ್ರಚೋದಿಸುತ್ತದೆ. ಹಲ್ಲುಜ್ಜುವುದು ಮತ್ತು ಫ್ಲೋಸಿಂಗ್ ನಿಮ್ಮ ಹಲ್ಲುಗಳನ್ನು ಸ್ವಚ್ಛವಾಗಿಡುವುದು, ಇದರ ಜತೆಗೆ ದಂತ ವೈದ್ಯರನ್ನು ಭೇಟಿ ಮಾಡುವುದು ಇದಕ್ಕಿಂತ ಹೃದಯಕ್ಕೆ ಹೆಚ್ಚಿನ ಆರೋಗ್ಯ ನೀಡುತ್ತದೆ.
  • ಆರೋಗ್ಯಕರ ಆಹಾರ ಸೇವಿಸುವುದು: ಹೀಗಿನ ಕಾಲದಲ್ಲಿ ಆರೋಗ್ಯಕರ ಆಹಾರ ಸಿಗುವುದು ಬಹಳ ಕಷ್ಟವಾಗಿದೆ. ಆರೋಗ್ಯಕರ ಆಯ್ಕೆಗಳು ವಿರಳವಾಗಿರುವ ಆಹಾರ ಸಿಗುವುದು ಕಷ್ಟ. ಇದು ಸಿಗಬೇಕಾದರೆ ಮರುಭೂಮಿಗೆ ಹೋಗಬೇಕೇನು ಎಂದು ಹೇಳಿದ್ದಾರೆ. ಉತ್ತಮ ಆಹಾರ ಹೃದಯಕ್ಕೆ ಒಳ್ಳೆಯದು.
  • ಕರುಳು ಹೃದಯದ ಆರೋಗ್ಯದ ಮೇಲೆ ಪರಿಣಾಮ: ನಿಮ್ಮ ಹೊಟ್ಟೆ ಮತ್ತು ಹೃದಯಕ್ಕೆ ಹೆಚ್ಚಿನ ಸಂಪರ್ಕ ಇರುತ್ತದೆ. ಕರುಳಿನ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವುದಿಲ್ಲ. ಈ ಕಡೆಗಣನೆ ಕೊಲೆಸ್ಟ್ರಾಲ್, ರಕ್ತದೊತ್ತಡ ಮತ್ತು ಉರಿಯೂತದ ಮೇಲೆ ಅದರ ಪರಿಣಾಮದ ಮೂಲಕ ಹೃದಯರಕ್ತನಾಳದ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಹೆಚ್ಚು ಫೈಬರ್, ಹುದುಗಿಸಿದ ಆಹಾರಗಳನ್ನು ತಿನ್ನುವುದು ಮತ್ತು ಸಂಸ್ಕರಿಸಿದ ಜಂಕ್ ಫುಡ್​​​ನ್ನು ಕಡಿಮೆ ಸೇವನೆ ಮಾಡುವುದರಿಂದ ನಿಮ್ಮ ಹೃದಯಕ್ಕೂ ಸಹಾಯ ಮಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!