ಸಾಮಾನ್ಯವಾಗಿ ಈರುಳ್ಳಿಗಳನ್ನು ನಿಮ್ಮ ದಿನ ನಿತ್ಯದ ಆಹಾರಗಳಲ್ಲಿ ಬಳಸಲಾಗುತ್ತದೆ. ಈರುಳ್ಳಿಯು ದೇಹದ ಪ್ರತಿಯೊಂದು ಭಾಗಗಳಿಗೂ ಅತ್ಯಂತ ಪ್ರಯೋಜನಕಾರಿಯಾಗಿದೆ. ಕೂದಲಿನ ಹೊಳಪಿಗಾಗಿ ಈರುಳ್ಳಿಯನ್ನು ತಲೆಗೂ ಹಚ್ಚಲಾಗುತ್ತದೆ. ಜೊತೆಗೆ ಈರುಳ್ಳಿಯನ್ನು ಪ್ರತಿದಿನ ಸೇವಿಸುವುದ್ದರಿಂದ ರಕ್ತವನ್ನು ಶುದ್ದೀಕರಿಸುವ ಶಕ್ತಿಯನ್ನು ಇದು ಹೊಂದಿದೆ. ಆದರೆ ಇಂದು ನಿಮಗಾಗಿ ಈರುಳ್ಳಿಯಿಂದ ನಿಮ್ಮ ಆರೋಗ್ಯಕ್ಕಾಗುವ ಇನ್ನೊಂದು ಪ್ರಯೋಜನದ ಕುರಿತು ಮಾಹಿತಿ ಇಲ್ಲಿದೆ.
ಪ್ರತಿ ದಿನ ಮಲಗುವ ಮುನ್ನ ನೀವು ಕಾಲಿಗೆ ಹಾಕುವ ಸಾಕ್ಸ್ ಒಳಗಡೆ ಈರುಳ್ಳಿಯ ಅರ್ಧಭಾಗವನ್ನು ಹಾಕಿ ಮಲಗಿ. ನೀವು ಈ ರೀತಿ ಮಾಡುವುದ್ದರಿಂದ ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಬ್ಯಾಕ್ಟೀರಿಯಾ:
ನಿಮ್ಮ ಪಾದವು ದೇಹದ 7,000 ಕ್ಕೂ ಹೆಚ್ಚು ನರಗಳ ಸಂಪರ್ಕವನ್ನು ಹೊಂದಿದೆ ಎಂದು ವಿಜ್ಞಾನವು ಈಗಾಗಲೇ ಸಾಬೀತು ಪಡಿಸಿದೆ. ಅದಕ್ಕಾಗಿಯೇ ಸಾಕ್ಸ್ ಒಳಗಡೆ ಈರುಳ್ಳಿಯನ್ನು ಹಾಕಿವುದರಿಂದ ಅದು ನಿಮ್ಮ ಸಂಪೂರ್ಣ ದೇಹವನ್ನು ಸ್ವಚ್ಛಗೊಳಿಸುತ್ತದೆ. ದೇಹದಿಂದ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಾಣುಗಳನ್ನು ಹೀರಿಕೊಳ್ಳುತ್ತದೆ ಜತೆಗೆ ನಿಮ್ಮ ಪಾದಗಳ ಚರ್ಮವು ತುಂಬಾ ತೆಳುವಾಗಿರುವುದರಿಂದ ಉತ್ತಮ ಬ್ಯಾಕ್ಟೀರಿಯಾ ಮತ್ತು ರಾಸಾಯನಿಕಗಳು ನಿಮ್ಮ ರಕ್ತದಲ್ಲಿ ತ್ವರಿತವಾಗಿ ಹೀರಲ್ಪಡುತ್ತವೆ. ಆ ಮೂಲಕ ಈರುಳ್ಳಿ ನಿಮ್ಮ ರಕ್ತವನ್ನು ಶುದ್ಧಗೊಳಿಸುತ್ತದೆ.
ಚಳಿ ಶೀತದಿಂದ ರಕ್ಷಿಸುತ್ತದೆ:
ಮಲಗುವ ಮೊದಲು ನಿಮ್ಮ ಸಾಕ್ಸ್ ಒಳಗಡೆ ಈರುಳ್ಳಿಯನ್ನು ಹಾಕಿವುದರಿಂದ ನಿಮ್ಮ ದೇಹದ ಶೀತವನ್ನು ತ್ವರಿತವಾಗಿ ತೊಡೆದುಹಾಕಲು ಸಹಾಯ ಮಾಡುತ್ತದೆ. ಈರುಳ್ಳಿಯು ಬ್ಯಾಕ್ಟೀರಿಯಾವನ್ನು ಹೀರಿಕೊಳ್ಳುತ್ತದೆ ಮತ್ತು ನಿಮ್ಮ ರಕ್ತವನ್ನು ಶುದ್ಧೀಕರಿಸುತ್ತದೆ. ರಾಸಾಯನಿಕಗಳೊಂದಿಗೆ ಸಂಸ್ಕರಿಸದ ಸಾವಯವ, ಅಥವಾ ನೈಸರ್ಗಿಕವಾಗಿ ಬೆಳೆಸಿದ ಈರುಳ್ಳಿಯನ್ನು ಬಳಸುವುದು ಮುಖ್ಯವಾಗಿದೆ.
ಪ್ರತಿ ದಿನ ಈ ಅಭ್ಯಾಸವನ್ನು ರೂಢಿಸಿಕೊಳ್ಳವುದರಿಂದ ಶೀತ, ಗುಳ್ಳೆಯ ಸೋಂಕುಗಳು, ಕಿವಿ ನೋವು ಮತ್ತು ಹಲ್ಲುನೋವುಗಳ ವಿರುದ್ಧ ಸಹಾಯ ಮಾಡುತ್ತದೆ ಎಂದು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿರುವ ಹೋಮಿಯೋಪತಿ ವೈದ್ಯರಾದ ಡಾ ಲಾರೆನ್ ಫೆಡರ್ ಹೇಳಿದ್ದಾರೆ.
ಇದನ್ನು ಓದಿ: ಚಳಿಗಾಲದಲ್ಲಿ ಕ್ಯಾನ್ಸರ್ ಅಪಾಯದಿಂದ ದೂರವಿರಲು ಈ ಆಹಾರಗಳನ್ನು ಸೇವಿಸಿ
ಆದ್ದರಿಂದ, ಈರುಳ್ಳಿಯನ್ನು ಅರ್ಧದಷ್ಟು ಕತ್ತರಿಸಿ, ಮಲಗುವ ಮೊದಲು ನಿಮ್ಮ ಹಿಮ್ಮಡಿಯ ಭಾಗಕ್ಕೆ ವಿರುದ್ಧ ನಿಮ್ಮ ಸಾಕ್ಸ್ ನಲ್ಲಿ ಇರಿಸಿ. ಬೆಳಿಗ್ಗೆ ನಿಮ್ಮ ಪಾದಗಳನ್ನು ಸ್ವಲ್ಪ ಹೆಚ್ಚುವರಿಯಾಗಿ ಸ್ಕ್ರಬ್ ಮಾಡುವುದು ಒಳ್ಳೆಯದು. ಯಾಕೆಂದರೆ ಈರುಳ್ಳಿ ವಾಸನೆ ತುಂಬಾ ಸಮಯದ ವರೆಗೆ ಇರುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:42 pm, Sat, 26 November 22