ಒಂದು ತಿಂಗಳು ಚಹಾ ಕುಡಿಯುವುದನ್ನು ನಿಲ್ಲಿಸಿದರೆ, ಏನಾಗುತ್ತೆ?

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 23, 2025 | 4:31 PM

ಕೆಲವರು ದಿನಕ್ಕೆ ಲೆಕ್ಕವಿಲ್ಲದಷ್ಟು ಚಹಾ ಕುಡಿಯುತ್ತಾರೆ. ಏಕೆಂದರೆ ಇದೊಂದು ರೀತಿಯ ಶಕ್ತಿಯ ಜೊತೆಗೆ ತಾಜಾತನ ನೀಡುತ್ತದೆ ಎಂಬುದು ಹಲವರ ನಂಬಿಕೆ. ಅದಕ್ಕಾಗಿಯೇ ತಲೆನೋವು ಬರಲಿ, ಚಿಂತೆ ಹೆಚ್ಚಾಗಲಿ ಹೀಗೆ ಯಾವುದೇ ರೀತಿಯ ಸಮಸ್ಯೆಯಾದರೂ ಚಹಾ ಕುಡಿಯುವವರಿದ್ದಾರೆ. ಆದರೆ ನಾವು ಪ್ರತಿನಿತ್ಯ ಕುಡಿಯುವ ಚಹಾದಲ್ಲಿ ಸಕ್ಕರೆ ಬೆರೆಸುವ ಪ್ರಮಾಣದಿಂದ ನಮ್ಮಲ್ಲಿ ಆರೋಗ್ಯ ಸಮಸ್ಯೆಗಳು ಉಲ್ಭಣಗೊಳ್ಳುತ್ತದೆ. ಹಾಗಾದರೆ ಇದಕ್ಕೆ ಪರಿಹಾರವೇನು? ಆರೋಗ್ಯ ಹಾಳಾಗದಿರಲು ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು? ಒಂದು ತಿಂಗಳ ಕಾಲ ಚಹಾವನ್ನು ತ್ಯಜಿಸಿದರೆ ಏನಾಗುತ್ತದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಒಂದು ತಿಂಗಳು ಚಹಾ ಕುಡಿಯುವುದನ್ನು ನಿಲ್ಲಿಸಿದರೆ, ಏನಾಗುತ್ತೆ?
ಸಾಂದರ್ಭಿಕ ಚಿತ್ರ
Follow us on

ಚಹಾವು ನಮ್ಮ ದೇಶದ ಸುಮಾರು 90 ಪ್ರತಿಶತದಷ್ಟು ಜನರ ನೆಚ್ಚಿನ ಪಾನೀಯವಾಗಿದೆ. ಅದೆಷ್ಟೋ ಜನರಿಗೆ ಬೆಳಿಗ್ಗೆ ಎದ್ದ ತಕ್ಷಣ, ಚಹಾ ಕುಡಿಯಬೇಕು ಎಂದು ಅನಿಸುತ್ತದೆ. ಕೆಲವರು ದಿನಕ್ಕೆ ಲೆಕ್ಕವಿಲ್ಲದಷ್ಟು ಚಹಾ ಕುಡಿಯುತ್ತಾರೆ. ಏಕೆಂದರೆ ಇದೊಂದು ರೀತಿಯ ಶಕ್ತಿಯ ಜೊತೆಗೆ ತಾಜಾತನ ನೀಡುತ್ತದೆ ಎಂಬುದು ಹಲವರ ನಂಬಿಕೆ. ಅದಕ್ಕಾಗಿಯೇ ತಲೆನೋವು ಬರಲಿ, ಚಿಂತೆ ಹೆಚ್ಚಾಗಲಿ ಹೀಗೆ ಯಾವುದೇ ರೀತಿಯ ಸಮಸ್ಯೆಯಾದರೂ ಚಹಾ ಕುಡಿಯುವವರಿದ್ದಾರೆ. ಆದರೆ ನಾವು ಪ್ರತಿನಿತ್ಯ ಕುಡಿಯುವ ಚಹಾದಲ್ಲಿ ಸಕ್ಕರೆ ಬೆರೆಸುವ ಪ್ರಮಾಣದಿಂದ ನಮ್ಮಲ್ಲಿ ಆರೋಗ್ಯ ಸಮಸ್ಯೆಗಳು ಉಲ್ಭಣಗೊಳ್ಳುತ್ತದೆ. ಹಾಗಾದರೆ ಇದಕ್ಕೆ ಪರಿಹಾರವೇನು? ಆರೋಗ್ಯ ಹಾಳಾಗದಿರಲು ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು? ಒಂದು ತಿಂಗಳ ಕಾಲ ಚಹಾವನ್ನು ತ್ಯಜಿಸಿದರೆ ಏನಾಗುತ್ತದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಒಂದು ತಿಂಗಳ ಕಾಲ ಚಹಾ ಸೇವನೆ ಮಾಡದಿರುವುದು ಚಹಾ ಪ್ರೀಯರಿಗೆ ನಿಜಕ್ಕೂ ದೊಡ್ಡ ಸವಾಲು. ಆದರೆ ನಿಮ್ಮ ಆರೋಗ್ಯ ದೃಷ್ಟಿಯಿಂದ ಮನಸ್ಸನ್ನು ಗಟ್ಟಿಮಾಡಿಕೊಂಡು ಇದನ್ನು ಮಾಡಬಹುದು. ಸಾಮಾನ್ಯವಾಗಿ ನಾವು ಕುಡಿಯುವ ಚಹಾದಲ್ಲಿ ಸಕ್ಕರೆ ಅಧಿಕವಾಗಿರುತ್ತದೆ. ಇದು ಕ್ಯಾಲೊರಿಗಳನ್ನು ಹೆಚ್ಚಿಸುತ್ತದೆ. ಅಲ್ಲದೆ ಆರೋಗ್ಯ ತಜ್ಞರ ಪ್ರಕಾರ, ಚಹಾದಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿರುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಹಾಗಾಗಿ ನೀವು ಒಂದು ತಿಂಗಳ ಕಾಲ ಸಿಹಿ ಚಹಾ ಕುಡಿಯುವುದನ್ನು ನಿಲ್ಲಿಸಿದರೆ ನಿಮ್ಮ ಜೀರ್ಣಕ್ರಿಯೆ ಸುಧಾರಿಸುತ್ತದೆ. ಜೊತೆಗೆ ತೂಕವು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ. ಹಾಗಾದರೆ ಇದರಿಂದ ಸಿಗುವ ಇನ್ನಿತರ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

  • ಸಾಮಾನ್ಯವಾಗಿ ಒಂದು ತಿಂಗಳ ಕಾಲ ಸಿಹಿ ಚಹಾವಿಲ್ಲದೆ ಇರುವುದು ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ ಎಂಬುದು ಹಲವಾರು ಸಂಶೋಧನೆಗಳಿಂದ ಸಾಬೀತಾಗಿದೆ. ಅತಿಯಾಗಿ ಸಿಹಿಯಾಗಿರುವ ಚಹಾ ಸೇವನೆಯು ಚರ್ಮದ ಮೇಲೆ ಮೊಡವೆ ಮತ್ತು ಗುಳ್ಳೆಗಳನ್ನು ಉಂಟು ಮಾಡುತ್ತದೆ. ಹಾಗಾಗಿ ನೀವು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಡಲು ಬಯಸಿದಲ್ಲಿ ಸಿಹಿ ಚಹಾವನ್ನು ಕುಡಿಯದಿರುವುದು ಉತ್ತಮ.
  • ಅಲ್ಲದೆ ಒಂದು ತಿಂಗಳ ಕಾಲ ಚಹಾ ಕುಡಿಯದಿದ್ದರೆ ದೇಹದಲ್ಲಿನ ಕೆಫೀನ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದು ಉತ್ತಮ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಇದು ನಮ್ಮ ಒತ್ತಡವನ್ನು ಸಹ ಕಡಿಮೆ ಮಾಡುತ್ತದೆ.
  • ನೀವು ಒಂದು ತಿಂಗಳ ಕಾಲ ಸಿಹಿ ಚಹಾವನ್ನು ಕುಡಿಯದಿದ್ದರೆ, ನಿರ್ಜಲೀಕರಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆಯಾಗುತ್ತದೆ. ಅಲ್ಲದೆ ಇದು ಜೀವಕೋಶಗಳಿಗೆ ಹಾನಿ ಮಾಡುವ ಫ್ರೀ ರಾಡಿಕಲ್ಗಳನ್ನು ಸಹ ಕಡಿಮೆ ಮಾಡುತ್ತದೆ.
  • ಚಹಾ ಕುಡಿಯುವ ಅಭ್ಯಾಸವನ್ನು ತ್ಯಜಿಸುವುದರಿಂದ ಎದೆಯುರಿ, ತಲೆತಿರುಗುವಿಕೆ ಮತ್ತು ಹೃದಯ ಬಡಿತದಲ್ಲಿ ಏರಿಳಿತಗಳಂತಹ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಕೈಗಳು ನಡುಗುತ್ತಿದ್ದರೆ ಚಹಾ ಕುಡಿಯುವುದರಿಂದ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಅದಲ್ಲದೆ ನೀವು ಚಹಾ ಕುಡಿಯುವುದನ್ನು ನಿಲ್ಲಿಸಿದರೆ, ಅಧಿಕ ರಕ್ತದೊತ್ತಡವು ಸಾಮಾನ್ಯ ಸ್ಥಿತಿಗೆ ಮರಳುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ