Raw Milk Side Effects: ಹಸುವಿನ ಹಾಲನ್ನು ಹಸಿಯಾಗಿ ಏಕೆ ಕುಡಿಯಬಾರದು? ಅಡ್ಡ ಪರಿಣಾಮಗಳೇನು?
ಹಸಿ ಹಾಲು ಅಂದರೆ ಕಾಯಿಸದ ಹಾಲನ್ನು ಕುಡಿಯುವುದು ಒಳ್ಳೆಯದಲ್ಲ. ಯಾರೇ ಆಗಲಿ ಹಾಲನ್ನು ಬಿಸಿ ಮಾಡಿ ಅಥವಾ ಅದು ತಣಿದ ಬಳಿಕವೇ ಕುಡಿಯುವುದು ಒಳ್ಳೆಯದು. ಆದರೆ ಇದನ್ನು ತಿಳಿಯದ ಅನೇಕ ಜನರು ಹಾಲನ್ನು ಹಸಿಯಾಗಿ ಕುಡಿಯುತ್ತಾರೆ. ಹಸಿ ಹಾಲು ಹೆಚ್ಚು ಆರೋಗ್ಯಕರ ಎಂದು ನಂಬಲಾಗಿದೆ. ತಜ್ಞರ ಪ್ರಕಾರ, ಬಿಸಿ ಮಾಡದೆ ಹಾಲು ಕುಡಿಯುವುದರಿಂದ ಪ್ರಯೋಜನಕ್ಕಿಂತ ನಮ್ಮ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆಯಿದೆ. ಹಾಗಾದರೆ ಇದು ಆರೋಗ್ಯಕ್ಕೆ ಏಕೆ ಒಳ್ಳೆಯದಲ್ಲ? ಹಸಿ ಹಾಲನ್ನು ಕುಡಿಯುವುದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ? ಹಸಿ ಹಾಲಿನ ಅಡ್ಡಪರಿಣಾಮಗಳೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ದೇಹವನ್ನು ಆರೋಗ್ಯವಾಗಿಡಲು ಪ್ರತಿದಿನ ಹಾಲು ಮತ್ತು ಮೊಟ್ಟೆಗಳನ್ನು ಸೇವಿಸುವುದು ಅತ್ಯಗತ್ಯ. ಇವು ದೇಹಕ್ಕೆ ಅಗತ್ಯವಿರುವ ಅನೇಕ ಪೋಷಕಾಂಶ, ಕ್ಯಾಲ್ಸಿಯಂ ಅನ್ನು ಒದಗಿಸುತ್ತವೆ, ಜೊತೆಗೆ ಮೂಳೆಗಳನ್ನು ಬಲಪಡಿಸುತ್ತವೆ ಮತ್ತು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ. ಪ್ರತಿಯೊಬ್ಬ ಪೋಷಕರು ಸಹ ತಮ್ಮ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೊಟ್ಟೆಗಳನ್ನು ನೀಡದಿದ್ದರೂ ಹಾಲನ್ನು ಮಾತ್ರ ನೀಡುತ್ತಾರೆ. ಏಕೆಂದರೆ ಹಾಲಿನಲ್ಲಿ ಕ್ಯಾಲ್ಸಿಯಂ ಇದ್ದು ನಮ್ಮ ಮೂಳೆಗಳನ್ನು ಬಲವಾಗಿ ಮತ್ತು ಆರೋಗ್ಯಕರವಾಗಿರಿಸುತ್ತದೆ. ಆದರೆ ಹಸಿ ಹಾಲು ಅಂದರೆ ಕಾಯಿಸದ ಹಾಲನ್ನು ಕುಡಿಯುವುದು ಒಳ್ಳೆಯದಲ್ಲ. ಯಾರೇ ಆಗಲಿ ಹಾಲನ್ನು ಬಿಸಿ ಮಾಡಿ ಅಥವಾ ಅದು ತಣಿದ ಬಳಿಕವೇ ಕುಡಿಯುವುದು ಒಳ್ಳೆಯದು. ಆದರೆ ಇದನ್ನು ತಿಳಿಯದ ಅನೇಕ ಜನರು ಹಾಲನ್ನು ಹಸಿಯಾಗಿ ಕುಡಿಯುತ್ತಾರೆ. ಹಸಿ ಹಾಲು ಹೆಚ್ಚು ಆರೋಗ್ಯಕರ ಎಂದು ನಂಬಲಾಗಿದೆ. ತಜ್ಞರ ಪ್ರಕಾರ, ಬಿಸಿ ಮಾಡದೆ ಹಾಲು ಕುಡಿಯುವುದರಿಂದ ಪ್ರಯೋಜನಕ್ಕಿಂತ ನಮ್ಮ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆಯಿದೆ. ಹಾಗಾದರೆ ಇದು ಆರೋಗ್ಯಕ್ಕೆ ಏಕೆ ಒಳ್ಳೆಯದಲ್ಲ? ಹಸಿ ಹಾಲನ್ನು ಕುಡಿಯುವುದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ? ಹಸಿ ಹಾಲಿನ ಅಡ್ಡಪರಿಣಾಮಗಳೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹಸು, ಎಮ್ಮೆ ಅಥವಾ ಆಡುಗಳಿಂದ ತರುವ ಕಚ್ಚಾ ಅಥವಾ ಹಸಿ ಹಾಲಿನಲ್ಲಿರುವ ಹಾನಿಕಾರಕ ಕೀಟಾಣುಗಳು ಅಥವಾ ಬ್ಯಾಕ್ಟೀರಿಯಾಗಳು ಬಹಳ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಬಹುದು. ಗ್ರಾಮೀಣ ಭಾಗದಲ್ಲಿ ಜನರು ಹಸು ಅಥವಾ ಎಮ್ಮೆ ಹಾಲನ್ನು ಸೇವಿಸುತ್ತಾರೆ. ಆದರೆ, ಇವುಗಳ ಹಾಲನ್ನು ನೇರವಾಗಿ ಅಥವಾ ಹಸಿಯಾಗಿ ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಕಚ್ಚಾ ಹಾಲಿನಲ್ಲಿ ಕೀಟಾಣುಗಳು ಅಥವಾ ಬ್ಯಾಕ್ಟೀರಿಯಾಗಳು ಇರಬಹುದು. ಹಸಿ ಹಸುವಿನ ಹಾಲನ್ನು ಕುಡಿಯುವುದರಿಂದ ಸಂಧಿವಾತ, ಅತಿಸಾರ ಅಥವಾ ನಿರ್ಜಲೀಕರಣದಂತಹ ಅಪಾಯವನ್ನು ಹೆಚ್ಚಿಸುತ್ತದೆ.
ಗರ್ಭಾವಸ್ಥೆಯಲ್ಲಿ ಕಚ್ಚಾ ಹಾಲು ಹಾನಿಕಾರಕ:
ಹಸಿ ಹಾಲು ಗರ್ಭಾವಸ್ಥೆಯಲ್ಲಿ ಒಳ್ಳೆಯದಲ್ಲ. ಏಕೆಂದರೆ ಹಸಿ ಹಾಲು ಲಿಸ್ಟೀರಿಯಾವು ಮೊನೊಸೈಟೋಜೆನಸ್ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಇದು ಲಿಸ್ಟೆರಿಯೋಸಿಸ್ ಎಂಬ ಸೋಂಕನ್ನು ಉಂಟುಮಾಡುತ್ತದೆ. ಇದು ಗರ್ಭಿಣಿಯರು ಮತ್ತು ನವಜಾತ ಶಿಶುಗಳಿಗೆ ಅಪಾಯಕಾರಿಯಾಗಬಹುದು. ಹಸಿ ಹಾಲನ್ನು ಸೇವಿಸುವುದರಿಂದ ಗರ್ಭಪಾತ, ಅಕಾಲಿಕ ಹೆರಿಗೆ ಅಥವಾ ಮಗು ಮತ್ತು ತಾಯಿಯ ಜೀವಕ್ಕೆ ಅಪಾಯ ತರಬಹುದು.
ಹಕ್ಕಿ ಜ್ವರ ಬರುವ ಸಾಧ್ಯತೆ
ಹಸಿ ಹಾಲಿನಲ್ಲಿ ಸಾಕಷ್ಟು ಹಾನಿಕಾರಕ ಬ್ಯಾಕ್ಟೀರಿಯಾಗಳಿವೆ. ಅವುಗಳಲ್ಲಿ ಒಂದು ಎಚ್ ಪಿಎಐ ಎ (ಎಚ್ 5 ಎನ್ 1). ಇದು ಹಕ್ಕಿ ಜ್ವರಕ್ಕೆ ಕಾರಣವಾಗುತ್ತದೆ. ಹಾಲಿನಿಂದ ಹಕ್ಕಿ ಜ್ವರ ಬರಬಹುದು, ಹಾಗಾಗಿ ಕಾಯಿಸಿಯೇ ಹಾಲನ್ನು ಕುಡಿಯುವುದು ಉತ್ತಮ.
ಇದನ್ನೂ ಓದಿ: ಹಬ್ಬದ ಸಮಯದಲ್ಲಿ ತೂಕ ಹೆಚ್ಚಾಗಿದ್ದರೆ ಭಯ ಬೇಡ, ಸ್ಲಿಮ್ ಆಗಲು ತಜ್ಞರು ನೀಡಿರುವ ಸಲಹೆ ಅನುಸರಿಸಿ
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಹೆಚ್ಚಳ
ಬಿಸಿ ಮಾಡುವ ಮೊದಲು ಕಚ್ಚಾ ಹಾಲನ್ನು ಸೇವಿಸುವುದರಿಂದ ದೇಹದಲ್ಲಿ ಆಮ್ಲ ಉತ್ಪಾದನೆ ಹೆಚ್ಚಾಗುತ್ತದೆ. ಇದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು. ಹಸಿ ಹಾಲನ್ನು ಕುಡಿಯುವುದರಿಂದ ಹೊಟ್ಟೆ ನೋವು ಅಥವಾ ಆಮ್ಲೀಯತೆಯ ಸಮಸ್ಯೆಗಳು ಉಂಟಾಗಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ