ಪದೇ ಪದೇ ಪಾದಗಳು ಮರಗಟ್ಟಿದಂತಾಗುತ್ತಾ; ಈ ರೀತಿ ಆಗುವುದರ ಹಿಂದಿರುವ ಕಾರಣ ತಿಳಿದುಕೊಳ್ಳಿ

ಕೊಲೆಸ್ಟ್ರಾಲ್ ದೇಹಕ್ಕೆ ಅತ್ಯಗತ್ಯ. ಆದರೆ ಇದು ಹೆಚ್ಚಾದರೆ ಅಪಾಯ ಕಟ್ಟಿಟ್ಟಬುತ್ತಿ. ಕೆಟ್ಟ ಕೊಲೆಸ್ಟ್ರಾಲ್ ನಾವು ಸೇವನೆ ಮಾಡುವ ಆಹಾರಗಳ ಮೂಲಕ ನಮಗಿರಿವಿಲ್ಲದಂತೆ ಹೆಚ್ಚಾಗುತ್ತದೆ. ಇದು ಹೆಚ್ಚಾಗುವಾಗ ನಮಗೆ ಕೆಲವು ಸೂಚನೆಗಳನ್ನು ನೀಡುತ್ತದೆ ಅದನ್ನು ನಿರ್ಲಕ್ಷ್ಯ ಮಾಡದೆಯೇ ವೈದ್ಯರ ಸಂಪರ್ಕ ಮಾಡಿ ಅದಕ್ಕೆ ಪರಿಹಾರ ಕಂಡು ಕೊಳ್ಳಬೇಕಾಗುತ್ತದೆ. ಹಾಗಾದರೆ ಕೊಲೆಸ್ಟ್ರಾಲ್ ಹೆಚ್ಚಾದಾಗ ಯಾವ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ? ಯಾವುದನ್ನು ಕಡೆಗಣಿಸಬಾರದು ಎಂಬುದನ್ನು ತಿಳಿದುಕೊಳ್ಳಿ. ಈ ವಿಷಯದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಪದೇ ಪದೇ ಪಾದಗಳು ಮರಗಟ್ಟಿದಂತಾಗುತ್ತಾ; ಈ ರೀತಿ ಆಗುವುದರ ಹಿಂದಿರುವ ಕಾರಣ ತಿಳಿದುಕೊಳ್ಳಿ
High Cholesterol Signs And Symptoms

Updated on: Aug 25, 2025 | 4:22 PM

ಕೊಲೆಸ್ಟ್ರಾಲ್ ದೇಹಕ್ಕೆ ಅತ್ಯಗತ್ಯ, ಆದರೆ ಅಗತ್ಯಕ್ಕಿಂತ ಹೆಚ್ಚಾದರೆ ಅದು ಅಪಾಯಕಾರಿಯಾಗಬಹುದು. ಇದರ ಪರಿಣಾಮ ಹೃದಯಾಘಾತ (Heart attack), ಪಾರ್ಶ್ವವಾಯು ಮುಂತಾದ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಾಗಬಹುದು. ಈ ಕೊಲೆಸ್ಟ್ರಾಲ್ (Cholesterol) ನಾವು ಪ್ರತಿನಿತ್ಯ ಅನುಸರಿಸುವ ಕೆಲವು ಆಹಾರ ಪದ್ಧತಿಗಳಿಂದಲೇ ನಮ್ಮ ದೇಹದಲ್ಲಿ ತಿಳಿಯದಂತೆ ಸಂಗ್ರಹವಾಗುತ್ತದೆ. ಇದನ್ನು ಹಾಗೆಯೇ ನಿರ್ಲಕ್ಷ್ಯ ಮಾಡಿದರೆ ಅದು ದೀರ್ಘಾವಧಿಯಲ್ಲಿ ನಮ್ಮ ದೇಹದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಆದ್ದರಿಂದ, ಅದರ ಲಕ್ಷಣಗಳನ್ನು ಗುರುತಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳುವುದು ಬಹಳ ಮುಖ್ಯ. ಹಾಗಾದರೆ ಕೊಲೆಸ್ಟ್ರಾಲ್ ಹೆಚ್ಚಾದಾಗ ಯಾವ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ? ಯಾವುದನ್ನು ಕಡೆಗಣಿಸಬಾರದು ಎಂಬುದನ್ನು ತಿಳಿದುಕೊಳ್ಳಿ. ಈ ವಿಷಯದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಾಲುಗಳಲ್ಲಿ ಜುಮ್ಮೆನಿಸುವಿಕೆ

ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ, ಮೊದಲ ಕಂಡು ಬರುವ ಲಕ್ಷಣವೆಂದರೆ ಕಾಲುಗಳಲ್ಲಿ ನೋವು ಕಂಡು ಬರುವುದು ಅಥವಾ ಜುಮ್ಮೆನಿಸುವಿಕೆ. ನಡೆಯುವಾಗ ಅಥವಾ ವಿಶ್ರಾಂತಿ ಪಡೆಯುವಾಗ ಕಾಲುಗಳು ಭಾರವಾಗಿ ಜುಮ್ಮೆನಿಸುವುದು ಗಮನಕ್ಕೆ ಬಂದರೆ ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂದರ್ಥ. ಇದು ಕಾಲುಗಳಲ್ಲಿ ಮಾತ್ರವಲ್ಲ ಕೆಲವರಲ್ಲಿ ಕೈ ಮತ್ತು ಪಾದಗಳು ಮರಗಟ್ಟುತ್ತದೆ ಇದು ಕೂಡ ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣಗಳಾಗಿವೆ. ಇನ್ನು ಕೆಲವರಲ್ಲಿ, ಪಾದ ನೀಲಿ ಬಣ್ಣಕ್ಕೆ ತಿರುಗುತ್ತದೆ ಇದು ಕೂಡ ಕೊಲೆಸ್ಟ್ರಾಲ್‌ ಹೆಚ್ಚಳದ ಸಂಕೇತವಾಗಿದೆ.

ಎದೆಯಲ್ಲಿ ನೋವು, ಒತ್ತಡ

ಸಾಮಾನ್ಯವಾಗಿ ಎದೆಯಲ್ಲಿ ನೋವು ಅಥವಾ ಒತ್ತಡ ಉಂಟಾಗುವುದು ಕೂಡ ಅಧಿಕ ಕೊಲೆಸ್ಟ್ರಾಲ್‌ನ ಪ್ರಮುಖ ಲಕ್ಷಣವಾಗಿದೆ. ವಾಸ್ತವದಲ್ಲಿ, ಕೊಲೆಸ್ಟ್ರಾಲ್ ಅಪಧಮನಿಗಳನ್ನು ಮುಚ್ಚಿಕೊಂಡಾಗ, ಅದು ಎದೆಯಲ್ಲಿ ಸುಡುವ ಅಥವಾ ಬಿಗಿಯಾದ ಅನುಭವವನ್ನು ಉಂಟುಮಾಡಬಹುದು. ಮಾತ್ರವಲ್ಲ ಇದು ಹೃದಯಾಘಾತ ಅಥವಾ ಇನ್ನಿತರ ಹೃದಯ ಸಂಬಂಧಿ ಕಾಯಿಲೆಯ ಸಂಕೇತವಾಗಿರಬಹುದು.

ಭುಜದಲ್ಲಿ ನೋವು

ಕುತ್ತಿಗೆ, ದವಡೆ ಅಥವಾ ಭುಜದಲ್ಲಿ ನೋವು ಕಂಡುಬರುವುದು ಕೂಡ ಕೊಲೆಸ್ಟ್ರಾಲ್‌ ಹೆಚ್ಚಳದ ಸಂಕೇತವಾಗಿರಬಹುದು. ದೇಹದಲ್ಲಿ ರಕ್ತದ ಹರಿವು ಕಡಿಮೆಯಾದಾಗ, ಈ ಪ್ರದೇಶಗಳಲ್ಲಿ ಅಸಹಜ ನೋವು ಅಥವಾ ಬಿಗಿತ ಉಂಟಾಗುತ್ತದೆ. ಆದರೆ ಇದನ್ನು ಕೇವಲ ಸ್ನಾಯು ನೋವು ಎಂದು ನಿರ್ಲಕ್ಷಿಸುವವರೇ ಹೆಚ್ಚಾಗಿರುತ್ತಾರೆ.

ಇದನ್ನೂ ಓದಿ: ಕೆಟ್ಟ ಕೊಲೆಸ್ಟ್ರಾಲ್ ನಿಂದ ಹೃದಯವನ್ನು ರಕ್ಷಿಸಿಕೊಳ್ಳಲು ಈ ರೀತಿ ಮಾಡಿ; ಹೃದಯಾಘಾತ, ಪಾರ್ಶ್ವವಾಯುವಿನಿಂದ ದೂರವಿರಿ

ತಲೆ ತಿರುಗುವಿಕೆ

ತಲೆ ಭಾರವಾಗುವುದು ಅಥವಾ ತಲೆತಿರುಗಿದಂತಹ ಭಾವನೆ ಕೂಡ ಕೊಲೆಸ್ಟ್ರಾಲ್ ಹೆಚ್ಚಳವನ್ನು ಸೂಚಿಸುತ್ತದೆ. ಅದರಲ್ಲಿಯೂ ಮೆಟ್ಟಿಲುಗಳನ್ನು ಹತ್ತುವಾಗ ಅಥವಾ ಬೇಗನೆ ದಣಿದಾಗ ಉಸಿರಾಟದ ತೊಂದರೆಯಾಗುತ್ತಿದ್ದರೆ ಅದನ್ನು ಎಂದಿಗೂ ನಿರ್ಲಕ್ಷಿಸಬಾರದು.

ಕಣ್ಣುಗಳ ಸುತ್ತ ಹಳದಿಯಾಗುವುದು

ಸಾಮಾನ್ಯವಾಗಿ ಕಣ್ಣುಗಳ ಸುತ್ತ ಹಳದಿಯಾಗುವುದು ಅಥವಾ ಅಲ್ಲಲ್ಲಿ ಹಳದಿ ಬಣ್ಣದಲ್ಲಿ ಉಂಗುರಗಳ ರಚನೆಯಾಗುವುದು ಕೂಡ ಕೊಲೆಸ್ಟ್ರಾಲ್‌ ಹೆಚ್ಚಳದ ಲಕ್ಷಣಗಳಾಗಿರಬಹುದು. ನೀವು ಕೂಡ ದೇಹದಲ್ಲಿ ಇಂತಹ ಬದಲಾವಣೆಗಳನ್ನು ಗಮನಿಸಿದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಸಮಯೋಚಿತ ರೋಗನಿರ್ಣಯ ಈ ಸ್ಥಿತಿ ತೀವ್ರವಾಗುವುದನ್ನು ತಡೆಯಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ