ಕ್ಯಾನ್ಸರ್ ರೋಗಿಗಳಲ್ಲಿ ಮಧುಮೇಹ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಡಯಾಬಿಟಿಸ್ ಕೇರ್ ಎಂಬ ಜರ್ನಲ್ನಲ್ಲಿ ಪ್ರಕಟವಾದ ವರದಿಯಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ. ಡೆನ್ಮಾರ್ಕ್ನಲ್ಲಿ ಕ್ಯಾನ್ಸರ್ನಿಂದ ಮೃತಪಡುತ್ತಿರುವವರ ಸಂಖ್ಯೆ ಅಧಿಕವಿದ್ದು, 2019ರಲ್ಲಿ 45,000 ಮಂದಿಗೆ ಕ್ಯಾನ್ಸರ್ ಇರುವುದು ತಿಳಿದುಬಂದಿತ್ತು. ಇದೀಗ ಈ ವರ್ಷವೂ ಕೂಡ ಡೆನ್ಮಾರ್ಕ್ನಲ್ಲಿ ಕ್ಯಾನ್ಸರ್ನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.
ಹಾಗೆಯೇ ಕ್ಯಾನ್ಸರ್ನಿಂದ ಗುಣಮುಖರಾದವರು ಮಧುಮೇಹ ತೀವ್ರತೆಯಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಏರಿಕೆ ಕಂಡಿದೆ.
ಸಂಶೋಧಕರು 112 ಮಿಲಿಯನ್ ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದರು, ಅದರಲ್ಲಿ 1.3 ಮಿಲಿಯನ್ ರಕ್ತದ ಮಾದರಿಯು ಡೆನ್ಮಾರ್ಕ್ ಜನರದ್ದಾಗಿತ್ತು. ಅದರಲ್ಲಿ 50000 ಮಂದಿಗೆ ಕ್ಯಾನ್ಸರ್ ಇರುವುದು ತಿಳಿದುಬಂದಿದೆ.
ಮಧುಮೇಹವಿಲ್ಲದವರು ಕೇವಲ ಕ್ಯಾನ್ಸರ್ ಒಂದರಿಂದಲೇ ಬಳಲುತ್ತಿರುವವರು ದೀರ್ಘಕಾಲ ಬದುಕಿದ್ದಾರೆ ಎಂಬುದು ತಿಳಿದುಬಂದಿದೆ. ಮಧುಮೇಹ ಹೊಂದಿರುವ ಕ್ಯಾನ್ಸರ್ ರೋಗಿಗಳು ಸಾವನ್ನಪ್ಪುವ ಪ್ರಮಾಣ ಶೇ.21ರಷ್ಟು ಹೆಚ್ಚಿದೆ.
ಪರಿಸರದಲ್ಲಿ ಹೆಚ್ಚುತ್ತಿರುವ ಮಾಲಿನ್ಯ, ಕೃಷಿ ಮತ್ತು ಆಹಾರ ಉತ್ಪಾದನೆಯಲ್ಲಿ ರಾಸಾಯನಿಕಗಳ ಅತಿಯಾದ ಸೇವನೆಯು ಕ್ಯಾನ್ಸರ್ ಪ್ರಕರಣಗಳ ಹೆಚ್ಚಳಕ್ಕೆ ಕಾರಣಗಳಾಗಿವೆ. ವಾಸ್ತವವಾಗಿ, ಕ್ಯಾನ್ಸರ್ ಅನ್ನು ಗುಣಪಡಿಸಲು ಮತ್ತು ತಡೆಗಟ್ಟಲು, ದೈನಂದಿನ ಆಹಾರದಲ್ಲಿ ಈ ಅತ್ಯುತ್ತಮ ಆಹಾರಗಳ ಸೇರ್ಪಡೆಯು ಸಹಾಯ ಮಾಡುತ್ತದೆ.
ಈ ಹಣ್ಣುಗಳನ್ನು ತಿನ್ನಬಹುದು
-ಬ್ರೊಕಲಿಯಲ್ಲಿ ಖನಿಜಾಂಶಗಳು ಯೆಥೇಚ್ಛವಾಗಿರುತ್ತವೆ. ಇವುಗಳ ದೇಹಕ್ಕೆ ಕ್ಯಾನ್ಸರ್ ವಿರುದ್ಧ ಹೋರಾಡಲು ಬೇಕಾದ ಶಕ್ತಿಯನ್ನು ಉತ್ತಮ ಮಟ್ಟದಲ್ಲಿ ಪೂರೈಸುತ್ತದೆ.
-ಕ್ಯಾರೆಟ್ ಖನಿಜಗಳು, ವಿಟಮಿನ್ಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಜೊತೆಗೆ, ಕ್ಯಾರೆಟ್ ಹೆಚ್ಚಿನ ಪ್ರಮಾಣದಲ್ಲಿ ಬೀಟಾ ಕ್ಯಾರೋಟಿನ್ ಅನ್ನು ಹೊಂದಿರುತ್ತದೆ. ಇದು ಅನೇಕ ರೀತಿಯ ಕ್ಯಾನ್ಸರ್ಗಳನ್ನು ತಡೆಯುತ್ತದೆ ಮತ್ತು ಗುಣಪಡಿಸುತ್ತದೆ.
-ಸೇಬಿನಲ್ಲಿ ಪಾಲಿಫಿನಾಲ್ಸ್ ಎಂಬ ಸಸ್ಯ ಆಧಾರಿತ ಸಂಯುಕ್ತಗಳು ಸಮೃದ್ಧವಾಗಿವೆ. ಇದು ಉರಿಯೂತ, ಹೃದ್ರೋಗ ಮತ್ತು ಸೋಂಕುಗಳನ್ನು ತಡೆಯುತ್ತಾರೆ. ಕೆಲವು ಅಧ್ಯಯನಗಳ ಪ್ರಕಾರ, ಸೇಬಿನಲ್ಲಿರುವ ಪಾಲಿಫಿನಾಲ್ಗಳು ಕ್ಯಾನ್ಸರ್ ವಿರೋಧಿ ಮತ್ತು ಆಂಟಿ ಟ್ಯೂಮರ್ ಗುಣಲಕ್ಷಣಗಳನ್ನು ಹೊಂದಿವೆ.
-ಬೆರ್ರಿಗಳು ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ಗಳಿಂದ ಸಮೃದ್ಧವಾಗಿವೆ. ಇವುಗಳಲ್ಲಿನ ಉತ್ಕರ್ಷಣ ನಿರೋಧಕಗಳು ಶಕ್ತಿಯುತವಾದ ಕ್ಯಾನ್ಸರ್ ವಿರೋಧಿ ಆಹಾರವನ್ನಾಗಿ ಮಾಡುತ್ತದೆ.
-ವಾಲ್ ನಟ್ಸ್ ತಿನ್ನುವುದರಿಂದ ಅನೇಕ ರೀತಿಯ ಕ್ಯಾನ್ಸರ್ಗಳನ್ನು ತಡೆಯಬಹುದು. ಅಮೇರಿಕನ್ ಇನ್ಸ್ಟಿಟ್ಯೂಟ್ ಫಾರ್ ಕ್ಯಾನ್ಸರ್ ರಿಸರ್ಚ್ ಪ್ರಕಾರ, ಹೆಚ್ಚಿನ ಬೀಜಗಳು ಕ್ಯಾನ್ಸರ್-ವಿರೋಧಿ ಗುಣಲಕ್ಷಣಗಳನ್ನು ಹೊಂದಿವೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ