Ringworm: ರಿಂಗ್ವರ್ಮ್ ಸಮಸ್ಯೆಗೆ ತೆಂಗಿನ ಎಣ್ಣೆಯೇ ಮದ್ದು
ಬೆವರು ನೈಸರ್ಗಿಕ ಸಮಸ್ಯೆಯಾಗಿದ್ದರೂ ಕೂಡ ಇದು ಪದೇ ಪದೇ ಕಿರಿಕಿರಿ ಉಂಟುಮಾಡುತ್ತದೆ, ವಿಶೇಷವಾಗಿ ಇದು ರಿಂಗ್ವರ್ಮ್ ಅಥವಾ ಹುಳುಕಡ್ಡಿ (Ring Worm), ಚರ್ಮದ ದದ್ದುಗಳು ಮತ್ತು ಇತರ ಸಮಸ್ಯೆಗಳನ್ನು ಉಂಟು ಮಾಡುತ್ತದೆ, ಇದು ತುರಿಕೆಗೂ ಕಾರಣವಾಗುತ್ತದೆ. ರಿಂಗ್ ವರ್ಮ್ ಬೇಸಿಗೆ ಮತ್ತು ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಜೊತೆಗೆ ಇದಕ್ಕೆ ಚಿಕಿತ್ಸೆ ನೀಡುವುದು ಸವಾಲಿನ ಸಂಗತಿಯಾಗಿದೆ.
ಬೆವರು ಸಂಬಂಧಿತ ಆರೋಗ್ಯ ಸಮಸ್ಯೆಗಳು ಯಾವಾಗ ಬೇಕಾದರೂ ಕಾಣಿಸಿಕೊಳ್ಳಬಹುದು. ಬೆವರು ನೈಸರ್ಗಿಕ ಸಮಸ್ಯೆಯಾಗಿದ್ದರೂ ಕೂಡ ಇದು ಪದೇ ಪದೇ ಕಿರಿಕಿರಿ ಉಂಟುಮಾಡುತ್ತದೆ, ವಿಶೇಷವಾಗಿ ಇದು ರಿಂಗ್ವರ್ಮ್ ಅಥವಾ ಹುಳುಕಡ್ಡಿ (Ring Worm), ಚರ್ಮದ ದದ್ದುಗಳು ಮತ್ತು ಇತರ ಸಮಸ್ಯೆಗಳನ್ನು ಉಂಟು ಮಾಡುತ್ತದೆ, ಇದು ತುರಿಕೆಗೂ ಕಾರಣವಾಗುತ್ತದೆ. ರಿಂಗ್ ವರ್ಮ್ ಬೇಸಿಗೆ ಮತ್ತು ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಜೊತೆಗೆ ಇದಕ್ಕೆ ಚಿಕಿತ್ಸೆ ನೀಡುವುದು ಸವಾಲಿನ ಸಂಗತಿಯಾಗಿದೆ. ಇದು ಚರ್ಮದ ಮೇಲೆ ಎಲ್ಲಿಯಾದರೂ ಕಂಡುಬರಬಹುದು. ಹೆಚ್ಚಾಗಿ ತೋಳು ಮತ್ತು ನೆತ್ತಿಯಲ್ಲಿ ಅಥವಾ ಬೆವರು ಹೆಚ್ಚಾಗಿ ಕಂಡುಬರುವಲ್ಲಿ ಕಾಣಿಸಿಕೊಳ್ಳಬಹುದು.
ರಿಂಗ್ವರ್ಮ್ ಎಂದರೇನು? ಇದಕ್ಕೆ ಕಾರಣಗಳೇನು?
ನಿಮ್ಮ ಚರ್ಮದ ಮೇಲೆ ಕೆಂಪು ಬಣ್ಣ, ತುರಿಕೆ ಕಾಣಿಸಿಕೊಂಡು ಅದು ಕಾಲಾನಂತರದಲ್ಲಿ ಉಂಗುರದ ಆಕಾರಕ್ಕೆ ಬಂದರೆ ಇದನ್ನು ಹುಳುಕಡ್ಡಿ ಅಥವಾ ರಿಂಗ್ವರ್ಮ್ ಎಂದು ಕರೆಯುತ್ತಾರೆ. ಇದು ಶಿಲೀಂಧ್ರ ಸೋಂಕಿನಿಂದ ಬರುತ್ತದೆ. ಟಿನಿಯಾ ಎಂಬ ಒಂದು ರೀತಿಯ ಶಿಲೀಂಧ್ರದಿಂದ ಉಂಟಾಗುತ್ತದೆ. ಇದು ಸಾಮಾನ್ಯವಾಗಿ ನಿಮ್ಮ ಚರ್ಮದ ಸತ್ತ ಅಂಗಾಂಶಗಳು, ಕೂದಲು ಮತ್ತು ಉಗುರುಗಳ ಮೇಲೆ ವಾಸಿಸುತ್ತದೆ. ಈ ಸೋಂಕು ನಿಮ್ಮ ಮುಖ ಸೇರಿದಂತೆ ನಿಮ್ಮ ಚರ್ಮದ ಮೇಲೆ ಎಲ್ಲಿಯಾದರೂ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಇದು ಕೆಲವು ಕಾರಣಗಳಿಂದ ಸುಲಭವಾಗಿ ಹರಡಬಹುದು. ದುರ್ಬಲ ರೋಗನಿರೋಧಕ ವ್ಯವಸ್ಥೆ, ರಿಂಗ್ವರ್ಮ್ ಹೊಂದಿರುವ ವ್ಯಕ್ತಿ ಅಥವಾ ಪ್ರಾಣಿಗಳೊಂದಿಗೆ ನಿಕಟ ಸಂಪರ್ಕ, ಬಿಗಿಯಾದ ಬಟ್ಟೆಗಳನ್ನು ಧರಿಸುವುದು, ಬ್ರಶ್ ಅಥವಾ ಬಾಚಣಿಗೆಯಂತಹ ವಸ್ತುಗಳನ್ನು ಶೇರ್ ಮಾಡಿಕೊಳ್ಳುವುದರಿಂದ, ಹಗ್ ಮಾಡಿಕೊಳ್ಳುವುದು ಅಥವಾ ಶೇಕ್ ಹ್ಯಾಂಡ್ ಮಾಡಿದಾಗ ಚರ್ಮದಿಂದ ಚರ್ಮಕ್ಕೆ ಸಂಪರ್ಕ ಉಂಟಾಗಿ ಬರುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: ಸ್ಮೈಲಿಂಗ್ ಡಿಪ್ರೆಶನ್ ಎಂದರೇನು? ಯಾರು ಅಪಾಯದಲ್ಲಿದ್ದಾರೆ ತಿಳಿದುಕೊಳ್ಳಿ
ತೆಂಗಿನ ಎಣ್ಣೆಯೇ ಮದ್ದು!
ಇತ್ತೀಚಿನ ವರ್ಷಗಳಲ್ಲಿ ಇದರಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಇದನ್ನು ಕಡಿಮೆ ಮಾಡಲು ಇರುವ ಸಂಭಾವ್ಯ ಮನೆಮದ್ದುಗಳನ್ನು ಮಾಡಿ ನೋಡಬಹುದು. ಇದಕ್ಕೆ ಮನೆಯಲ್ಲಿರುವ ಉತ್ತಮ ಔಷಧವೆಂದರೆ ಅದು ತೆಂಗಿನ ಎಣ್ಣೆ. ಇದು ಆಂಟಿಮೈಕ್ರೊಬಿಯಲ್ ಮತ್ತು ಶಿಲೀಂಧ್ರ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುತ್ತದೆ, ಇದು ರಿಂಗ್ ವರ್ಮ್ ಗಳಿಂದ ಉಂಟಾಗುವ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಯು ನೆತ್ತಿಯ ರಿಂಗ್‌ವರ್ಮ್‌ಗೆ ಸೂಕ್ತವಾದ ಚಿಕಿತ್ಸೆಯಾಗಿದೆ ಏಕೆಂದರೆ ಇದು ನೆತ್ತಿಗೆ ಹಚ್ಚಲು ಸುಲಭ ಮತ್ತು ಪರಿಣಾಮಕಾರಿಯಾಗಿದೆ. ಅಲ್ಲದೆ ಇದು ಉರಿಯೂತ ನಿವಾರಕ ಗುಣಲಕ್ಷಣಗಳನ್ನು ಸಹ ಹೊಂದಿದೆ, ಅದು ಸೋಂಕನ್ನು ಹರಡದಂತೆ ತಡೆಯುತ್ತದೆ, ಜೊತೆಗೆ ತೆಂಗಿನ ಎಣ್ಣೆ ಚರ್ಮವನ್ನು ಮೃದುಗೊಳಿಸುತ್ತದೆ ಜೊತೆಗೆ ಚರ್ಮದ ಸುತ್ತಲೂ ಕಂಡು ಬರುವ ಉರಿಯೂತವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ನೀವು ಕೊಬ್ಬರಿ ಎಣ್ಣೆ ಮಾತ್ರ ಬಳಸುವ ಬದಲು ಇದರೊಂದಿಗೆ ಟೀ ಟ್ರೀ ಆಯಿಲ್, ಅಥವಾ ಅರಿಶಿನ, ಆಪಲ್ ಸೈಡರ್ ವಿನೆಗರ್ ಅಥವಾ ಅಲೋವೆರಾ ಇದರಲ್ಲಿ ಯಾವುದಾದರೂ ಒಂದನ್ನು ಸೇರಿಸಿ ಆ ಜಾಗಕ್ಕೆ ಹಚ್ಚಬಹುದು. ಇದು ರಿಂಗ್ವರ್ಮ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: