ಬಾಯಿಯ ದುರ್ವಾಸನೆ ತಡೆಯಲು ಇಲ್ಲಿದೆ ಸರಳ ಪರಿಹಾರ

ಯಾರನ್ನಾದರೂ ಭೇಟಿಯಾಗುವಾಗ ಅಥವಾ ಮಾತನಾಡುವಾಗ, ಬಾಯಿಯಿಂದ ಕೆಟ್ಟ ವಾಸನೆ ಬಂದರೆ ಮುಜುಗರವಾಗುತ್ತದೆ. ಇದಕ್ಕೆ ಪರಿಹಾರವಾಗಿ ಚೂಯಿಂಗ್ ಗಮ್ ಅಗಿಯುವುದು, ಮೌತ್ ವಾಶ್‌ಗಳ ಬಳಕೆ ಮಾಡುವ ಬದಲು ನಾವು ಪ್ರತಿನಿತ್ಯ ಅನುಸರಿಸುವ ಕೆಲವು ಅಭ್ಯಾಸಗಳಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಈ ರೀತಿ ಮಾಡುವುದರಿಂದ ಬಾಯಿಯಿಂದ ಬರುವ ವಾಸನೆಗೆ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಬಹುದು.

ಬಾಯಿಯ ದುರ್ವಾಸನೆ ತಡೆಯಲು ಇಲ್ಲಿದೆ ಸರಳ ಪರಿಹಾರ
ಬಾಯಿಯ ದುರ್ವಾಸನೆ
Image Credit source: Getty Images

Updated on: May 23, 2025 | 6:21 PM

“ಥೂ… ಹತ್ತಿರ ಬಂದು ಮಾತಾಡಿಸಬೇಡ, ನಿನ್ನ ಬಾಯಿಯಿಂದ ವಾಸನೆ ಬರುತ್ತೆ” ಎಂದು ನಿಮಗೂ ಯಾರಾದರೂ ಹೇಳಿರಬಹುದು. ಬಾಯಿಯಿಂದ ಹೊರ ಹೊಮ್ಮುವ ದುರ್ವಾಸನೆಯೇ ಹಾಗೆ. ಎದುರು ಇದ್ದವರನ್ನು ಒಂದು ಕ್ಷಣ ಮೂಗು ಮುಚ್ಚಿಕೊಳ್ಳುವ ಹಾಗೆ ಮಾಡಿಬಿಡುತ್ತದೆ. ನಾನು ಪ್ರತಿದಿನ ಸರಿಯಾಗಿಯೇ ಹಲ್ಲು (Teeth) ಉಜ್ಜುತ್ತೀನಿ, ಮೌತ್ ವಾಶ್‌ಗಳನ್ನೂ ಬಳಸ್ತೀನಿ ಆದರೂ ಬಾಯಿಯಿಂದ ಬರುವ ದುರ್ವಾಸನೆ (Bad Breath) ಮಾತ್ರ ಕಡಿಮೆ ಆಗ್ತಿಲ್ಲ ಅನ್ನೋದು ಹಲವರ ಮಾತು. ಅಷ್ಟಕ್ಕೂ ಬಾಯಿಯ ದುರ್ವಾಸನೆಗೆ ಕಾರಣ ಮತ್ತು ಪರಿಹಾರಗಳೇನು? ಇದನ್ನು ತಡೆಯಲು ನಾವು ಸುಲಭವಾಗಿ ಮತ್ತು ಸರಳವಾಗಿ ಏನು ಮಾಡಬಹುದು ಎಂಬುದರ ಬಗ್ಗೆ ಶ್ರವಣ್ ಎನ್ನುವವರು ತಮ್ಮ ಇನ್ಸ್ಟಾ ಖಾತೆ kannadahealthandfitness ಎಂಬುದರಲ್ಲಿ ಕೆಲವು ಮಾಹಿತಿ ಹಂಚಿಕೊಂಡಿದ್ದು ಈ ಬಗೆಗಿನ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಬಾಯಿಯ ವಾಸನೆಗೆ ಪ್ರಮುಖ ಕಾರಣಗಳು:

  • ಅತಿಯಾದ ಮದ್ಯ ಸೇವನೆಯು ಬಾಯಿಯ ವಾಸನೆಗೆ ಕಾರಣವಾಗಬಹುದು. ಕೆಲವರು ಇತಿ ಮಿತಿ ಇಲ್ಲದೆ ಮದ್ಯ ಸೇವನೆ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಇಂತವರಲ್ಲಿಯೇ ಬಾಯಿಯ ವಾಸನೆಯ ಸಮಸ್ಯೆ ಹೆಚ್ಚು ಎನ್ನುವುದು ಹಲವು ಅಧ್ಯಯನಗಳು ದೃಢಪಡಿಸಿವೆ.
  • ಅತಿಯಾಗಿ ಧೂಮಪಾನ ಮತ್ತು ತಂಬಾಕು ಸೇವನೆ ಮಾಡುವವರೂ ಸಾಮಾನ್ಯವಾಗಿ ಬಾಯಿಯ ದುರ್ವಾಸನೆ ಸಮಸ್ಯೆಯಿಂದ ಬಳಲುವುದು ಹೆಚ್ಚು.
  • ದೇಹದ ನಿರ್ಜಲೀಕರಣವೂ ಬಾಯಿಯ ವಾಸನೆಗೆ ಕಾರಣವಾಗಲಿದೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದು ಕೂಡ ಇಂತಹ ಸಮಸ್ಯೆ ತಂದೊಡ್ಡಲಿದೆ.
  • ಬೆಳ್ಳುಳ್ಳಿ, ಶುಂಠಿ ಸೇರಿ ಇನ್ನು ಕೆಲವು ಮಸಾಲೆ ಪಾದರ್ಥಗಳ ಅತಿಯಾದ ಸೇವನೆಯೂ ಬಾಯಿಯ ವಾಸನೆಗೆ ಕಾರಣವಾಗಬಹುದು.

ಇದನ್ನೂ ಓದಿ: Treatment For Bad Breath: ಪೇರಳೆ ಎಲೆಗಳನ್ನು ಈ ರೀತಿ ಬಳಸಿ, ಬಾಯಿಯ ದುರ್ವಾಸನೆ ದೂರವಾಗಿಸಿ

ಬಾಯಿಯ ವಾಸನೆ ಸಮಸ್ಯೆಯಿಂದ ದೂರ ಇರುವುದು ಹೇಗೆ?

  • ಬೆಳಗಿನ ಉಪಾಹಾರ ಅಥವಾ ಊಟದಲ್ಲಿ ನೀವು ಸೇವಿಸುವ ಆಹಾರ ಸಾಧ್ಯವಾದಷ್ಟು ಸೌಮ್ಯವಾಗಿರಲಿ. ಮಸಾಲೆಯುಕ್ತ ಆಹಾರ ಸೇವನೆಯಿಂದ ದೂರವಿರಿ. ಜಂಕ್‌ಫುಡ್‌ಗಳೂ ಒಳಿತಲ್ಲ.
  • ಪ್ರತಿಸಲ ಆಹಾರ ಸೇವನೆ ಮಾಡಿದ ಬಳಿಕ ಒಂದೆರೆಡು ಪುದೀನಾ ಎಲೆಯನ್ನ ಚೆನ್ನಾಗಿ ಅಗೆದು ತಿನ್ನಿ. ಇದು ಬಾಯಿಯ ವಾಸನೆ ತಡೆಯಲು ಸಹಕಾರಿಯಾಗಲಿದೆ.
  • ಹಲ್ಲು ಉಜ್ಜುವಾಗ ಬೇಕಿಂಗ್ ಸೋಡಾವನ್ನ ಬಳಕೆ ಮಾಡಿ. ಇದು ಬಾಯಿಯಲ್ಲಿನ ಬ್ಯಾಕ್ಟೀರಿಯಾಗಳನ್ನು ನಾಶ ಪಡಿಸುವ ಜೊತೆಗೆ ಹಲ್ಲು, ದವಡೆ ಮತ್ತು ವಸಡಿನ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಲಿದೆ.
  • ಬಾಯಿಯ ದುರ್ವಾಸನೆ ಸಮಸ್ಯೆ ಅನುಭವಿಸುತ್ತಿರುವವರು ಸಾಧ್ಯವಾದಷ್ಟು ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ. ಇದು ನಿಮ್ಮ ಬಾಯಿಯನ್ನು ಸ್ವಚ್ಛವಾಗಿಡುವ ಮೂಲಕ ವಾಸನೆ ತಡೆಗೂ ನೆರವಾಗಲಿದೆ.
  • ಬಾಯಿ ವಾಸನೆ ಎಂದು ಪದೇ ಪದೆ ಚೂಯಿಂಗ್ ಗಮ್ ಅಗಿಯುವುದು, ಮೌತ್ ವಾಶ್‌ಗಳ ಬಳಕೆ ಬೇಡ. ಇವು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಇದನ್ನೂ ಓದಿ
ಮುಟ್ಟಿದರೆ ಮುನಿಯುವ ಈ ಗಿಡದಲ್ಲಿದೆ ಹಲವು ಪ್ರಯೋಜನ
ಗರ್ಭಾವಸ್ಥೆಯಲ್ಲಿ ಪತಿಯ ಬೆಂಬಲ ಹೇಗಿರಬೇಕು?
ಬೆಳಗ್ಗೆ ಬೇಗ ಏಳಬೇಕು ಎಂದು ಅಲಾರಾಂ ಇಡುವವರು ಈ ಸ್ಟೋರಿ ತಪ್ಪದೆ ಓದಿ
ಈ ಒಂದು ಗಿಡದ ಎಲೆ ದೇಹ ಆರೋಗ್ಯಕ್ಕೆ ರಕ್ಷಣಾ ಕವಚ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ