
ಸಾಮಾನ್ಯವಾಗಿ ಮುಖದಲ್ಲಿ ಮೊಡವೆಗಳಾಗುವುದು ಸಹಜ. ಆದರೆ ಅದೇ ರೀತಿಯಲ್ಲಿ ಚರ್ಮದ ಮೇಲೆ ಕೆಂಪು ಗುಳ್ಳೆಯಾಗಿ ಅದರಲ್ಲಿ ಕೀವು ತುಂಬಿಕೊಳ್ಳುವುದನ್ನು ಕುರ (Carbuncle) ಅಥವಾ ಕುರು (Butt Acne) ಎನ್ನಲಾಗುತ್ತದೆ. ಇದು ಆದಂತಹ ಜಾಗದಲ್ಲಿ ಉರಿ ಮತ್ತು ವಿಪರೀತ ನೋವು ಉಂಟಾಗುತ್ತದೆ. ಈ ರೀತಿಯ ಕುರು ಕಂಡು ಬರುವುದಕ್ಕೆ ಮುಖ್ಯ ಕಾರಣ, ನಮ್ಮ ದೇಹದಲ್ಲಿ ನಂಜಿನ ಅಂಶ ಹೆಚ್ಚಾಗಿರುವುದು ಅಥವಾ ಕೆಟ್ಟ ರಕ್ತವಿದ್ದಾಗ, ನಮ್ಮ ದೇಹ ಆ ಕುರುವಿನ ಮೂಲಕ ಅದನ್ನು ಹೊರಹಾಕಲು ಪ್ರಯತ್ನಿಸುತ್ತದೆ. ಇವು ಹೆಚ್ಚಾಗಿ ತೊಡೆ, ಪೃಷ್ಠದ ಭಾಗದಲ್ಲಿ ಕಂಡುಬರುತ್ತದೆ. ಇದು ಆದ ಸಂದರ್ಭದಲ್ಲಿ ನಡೆದಾಡಲು ಅಥವಾ ಕುಳಿತುಕೊಳ್ಳಲು ಕಷ್ವವಾಗುತ್ತದೆ. ಕೆಲವರಿಗೆ ಈ ನೋವಿನಿಂದ ಜ್ವರವೂ ಬರಬಹುದು. ಹಾಗಾದರೆ ಈ ರೀತಿ ನೋವು ನೀಡುವ ಕುರುವಿನಿಂದ ಮುಕ್ತಿ ಪಡೆಯಲು (prevention method of butt acne) ಏನೆಲ್ಲಾ ಮಾಡಬಹುದು? ಇದನ್ನು ಕಡಿಮೆ ಮಾಡಲು ಯಾವ ರೀತಿಯ ಮನೆಮದ್ದು (Home remedies) ಗಳನ್ನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ.
ಆಯುರ್ವೇದದ ಪ್ರಕಾರ ಪಿತ್ತ ಮತ್ತು ವಾತದೋಷದಿಂದ, ದೇಹದಲ್ಲಿ ಕಲ್ಮಶವಿದ್ದರೆ ಪದೇ ಪದೇ ಕುರು ಉಂಟಾಗುತ್ತದೆ. ಆಗ ರಕ್ತಶುದ್ಧೀಕರಣ ಮಾಡುವುದು ಅಗತ್ಯವಾಗಿರುತ್ತದೆ. ಕೆಲವು ಕುರುಗಳು ಕೇವಲ ಚರ್ಮದ ಮೇಲೆ ಕೆಂಪು ಗುಳ್ಳೆಗಳಾಗುತ್ತವೆ. ಇನ್ನು ಕೆಲವು ಕೀವು ತುಂಬಿಕೊಂಡ ಕುರುಗಳಾಗುತ್ತವೆ. ಎರಡೂ ಕೂಡ ಅತೀವ ನೋವನ್ನು ನೀಡುತ್ತವೆ. ಹಾಗಾಗಿ ಇದನ್ನು ಕಡಿಮೆ ಮಾಡುವುದರ ಜೊತೆಗೆ ದೇಹದಲ್ಲಿನ ಕಲ್ಮಶ ಹೊರಹಾಕಲು ಮತ್ತು ರಕ್ತ ಶುದ್ದೀಕರಿಸಲು ಸಹಾಯ ಮಾಡುವ ಆಹಾರಗಳನ್ನು ಕೂಡ ಸೇವನೆ ಮಾಡಬೇಕಾಗುತ್ತದೆ. ಹಾಗಾದರೆ ಈ ರೀತಿ ಕುರು ಕಂಡು ಬಂದಾಗ ಮನೆಯಲ್ಲಿಯೇ ಯಾವ ರೀತಿಯ ಮನೆಮದ್ದುಗಳನ್ನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ