ಸದಾ ಬೇರೊಬ್ಬರಿಗೆ ಖುಷಿಯನ್ನೇ ನಿರೀಕ್ಷಿಸುವ ನೀವು ನಿಮ್ಮ ಖುಷಿ ಯಾವುದರಲ್ಲಿದೆ ಎಂದು ಕಂಡುಕೊಳ್ಳುವುದನ್ನೇ ಮರೆತಿರುತ್ತೀರಿ. ಯಾರದ್ದೋ ಕಾಳಜಿ ಮಾಡುವುದರ ಜತೆಗೆ ನಿಮ್ಮ ಆರೈಕೆಗೂ ನೀವು ಗಮನಕೊಡಲೇಬೇಕು. ವಿಶೇಷವಾಗಿ ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ, ಅನಿಶ್ಚಿತತೆ, ಬದಲಾದ ದೈನಂದಿನ ದಿನಚರಿಗಳು, ಆರ್ಥಿಕ ಒತ್ತಡ ಮತ್ತು ಸಾಮಾಜಿಕ ಪ್ರತ್ಯೇಕತೆಯ ನಡುವೆ ಜೀವನದಲ್ಲಿ ನಡೆಯುತ್ತಿರುವ ಸವಾಲುಗಳನ್ನು ನಿಭಾಯಿಸುವ ನಮ್ಮ ಸಾಮರ್ಥ್ಯವನ್ನು ಕೊಂಚ ಹೆಚ್ಚಿದೆ.
ನಿಮ್ಮ ದಿನವು ವ್ಯಾಯಾಮ, ಕೆಲಸ, ಆರೈಕೆ, ವಿರಾಮ ಇವೆಲ್ಲವನ್ನೂ ಒಳಗೊಂಡಿರುಬೇಕು.
-ಓದುವುದು ಸ್ವಯಂ-ಆರೈಕೆಯ ಉತ್ತಮ ಮಾರ್ಗವಾಗಿದೆ ಮತ್ತು ಪುಸ್ತಕಗಳನ್ನು ಓದಲು ಮತ್ತು ಆನಂದಿಸಲು ಒಂದು ಜಾಗವನ್ನು ನೀವು ಸೃಷ್ಟಿಸಬೇಕು.
-ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಿ ಇದರಿಂದ ನಿಮ್ಮ ದೇಹ ಮತ್ತು ಮನಸ್ಸನ್ನು ಪುನರುಜ್ಜೀವನಗೊಳಿಸಲು ನೆರವಾಗುತ್ತದೆ.
– ನಿಮ್ಮ ದೇಹಕ್ಕೆ ಎಣ್ಣೆ ಬಳಸಿ ಹಿತವಾದ ಮಸಾಜ್ ಮಾಡಿ.
-ಮಳೆ ಮತ್ತು ತಾಪಮಾನದಲ್ಲಿನ ಹಠಾತ್ ಬದಲಾವಣೆಯಿಂದಾಗಿ ಆಗಾಗ ಆರೋಗ್ಯಕ್ಕೆ ಸಂಬಂಧಿಸಿದ ಬಹಳಷ್ಟು ಸಮಸ್ಯೆಗಳನ್ನು ಉಂಟುಮಾಡುತ್ತದೆ
– ನೀರನ್ನು ಕುದಿಸಿ ಕುಡಿಯಬೇಕು
-ರಸ್ತೆ ಬದಿಯಲ್ಲಿ ಕತ್ತರಿಸಿದ ಹಣ್ಣುಗಳು, ಪಾನೀಯಗಳು ಮತ್ತು ಆಹಾರಗಳು ಕಲುಷಿತಗೊಳ್ಳುವ ಸಾಧ್ಯತೆಯಿದೆ.
– ಶೀತ ವಾತಾವರಣದಲ್ಲಿ ವೈರಲ್ ಸೋಂಕುಗಳು ಹೆಚ್ಚಾಗಿ ಕಂಡುಬರುತ್ತವೆ, ಆದ್ದರಿಂದ ಕೈ ನೈರ್ಮಲ್ಯ ತಂತ್ರಗಳನ್ನು ಅನುಸರಿಸುವುದು, ಸಾಮಾಜಿಕ ಅಂತರವನ್ನು ಅನುಸರಿಸುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ಗಳನ್ನು ಧರಿಸುವುದು ಸ್ವಲ್ಪ ಮಟ್ಟಿಗೆ ನಿಮ್ಮನ್ನು ರಕ್ಷಿಸಬಹುದು.
-ಆಹಾರ ಸೇವಿಸುವ ಮೊದಲು ಮತ್ತು ನಂತರ ಕೈ ತೊಳೆಯುವುದು, ವೈಯಕ್ತಿಕ ನೈರ್ಮಲ್ಯ, ಆರೋಗ್ಯಕರ ಸರಿಯಾಗಿ ಬೇಯಿಸಿದ ಊಟ, ತರಕಾರಿಗಳು ಮತ್ತು ಹಣ್ಣುಗಳನ್ನು ತಿನ್ನುವುದು ಮುಂತಾದ ಆರೋಗ್ಯಕರ ಅಭ್ಯಾಸಗಳು ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.