Liver Health: ನೀವು ನಿತ್ಯ ಸೇವಿಸುವ ಈ ಆಹಾರಗಳಿಂದ ಲಿವರ್ಗೆ ಸಮಸ್ಯೆಯಾಗಬಹುದು
ನೀವು ದಿನನಿತ್ಯ ತಿನ್ನುವ ಆಹಾರಗಳಲ್ಲಿ ಕೆಲವು ಆಹಾರಗಳು ನಿಮ್ಮ ಲಿವರ್ನ ಮೇಲೆ ದುಷ್ಪರಿಣಾಮ ಉಂಟುಮಾಡಬಲ್ಲದು ಎಂದು ವೈದ್ಯರು ಹೇಳಿದ್ದಾರೆ.
ನೀವು ದಿನನಿತ್ಯ ತಿನ್ನುವ ಆಹಾರಗಳಲ್ಲಿ ಕೆಲವು ಆಹಾರಗಳು ನಿಮ್ಮ ಲಿವರ್ನ ಮೇಲೆ ದುಷ್ಪರಿಣಾಮ ಉಂಟುಮಾಡಬಲ್ಲದು ಎಂದು ವೈದ್ಯರು ಹೇಳಿದ್ದಾರೆ. ಲಿವರ್ ನಮ್ಮ ದೇಹದ ದೊಡ್ಡ ಅಂಗವೆಂದೇ ಹೇಳಬಹುದು, ಲಿವರ್ಗೆ ಸಂಬಂಧಿಸಿದ ಕಾಯಿಲೆಗಳು ಬರುವವರೆಗೂ ಲಿವರ್ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಆಲೋಚನೆಯನ್ನು ಮಾಡುವುದೇ ಇಲ್ಲ.
ಮದ್ಯಪಾನ, ಅತಿ ಹೆಚ್ಚು ಔಷಧಿ, ಮಾತ್ರೆಗಳ ಸೇವನೆ, ಹೆಚ್ಚು ಪ್ರಮಾಣದ ಸಕ್ಕರೆ ಹಾಗೂ ಕ್ಯಾಲೊರಿಗಳಿರುವ ಆಹಾರ ಸೇವನೆಯಿಂದ ಲಿವರ್ಗೆ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ.
ಎಂದಿಗೂ ನಿಮ್ಮ ಆರೋಗ್ಯವನ್ನು ಕಾಪಾಡಬಲ್ಲ ಆಹಾರವನ್ನೇ ಸೇವಿಸಬೇಕು. ನೀವು ತಿನ್ನುವ ಈ ಆಹಾರಗಳು ಲಿವರ್ ಸಮಸ್ಯೆಯನ್ನುಂಟು ಮಾಡಬಹುದು.
ಸಕ್ಕರೆ: ಹೆಚ್ಚು ಸಕ್ಕರೆ ಸೇವನೆ ಮಾಡುವುದರಿಂದ ಲಿವರ್ ಸಮಸ್ಯೆಗಳು ಹೆಚ್ಚಾಗಲಿವೆ, ಕ್ಯಾಂಡಿ, ಬಿಸ್ಕತ್ತು, ಸೋಡಾವನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗಲಿದೆ. ಆಲ್ಕೋಹಾಲ್ನಷ್ಟೇ ಸಕ್ಕರೆಯು ಕೂಡ ನಿಮ್ಮ ಲಿವರ್ಗೆ ಸಮಸ್ಯೆಯನ್ನುಂಟು ಮಾಡಲಿದೆ.
ಮದ್ಯಪಾನ: ಹೆಚ್ಚೆಚ್ಚು ಮದ್ಯಪಾನ ಮಾಡುವುದರಿಂದ ಲಿವರ್ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಲಿದೆ. ಹೆಚ್ಚು ಮದ್ಯಪಾನ ಮಾಡಿದಾಗ ಲಿವರ್ ಸಿರೋಸಿಸ್ ರೋಗ ಉಂಟಾಗಿ ರಕ್ತ ವಾಂತಿ, ಜಾಂಡೀಸ್, ಲಿವರ್ ಕ್ಯಾನ್ಸರ್ಗೂ ಕಾರಣವಾಗಬಹುದು. ಒಂದೊಮ್ಮೆ ನೀವು ಮದ್ಯಪಾನ ಮಾಡಿದರೂ ನಿಮ್ಮ ಲಿಮಿಟ್ ಅನ್ನು ಮೀರಬೇಡಿ.
ಕೆಂಪು ಮಾಂಸ: ಕೆಂಪು ಮಾಂಸದಲ್ಲಿ ಹೆಚ್ಚು ಕೊಬ್ಬಿನಾಂಶ ಇದ್ದು, ಎತೇಚ್ಚವಾಗಿ ಸೇವಿಸುವುದರಿಂದ ಲಿವರ್ಗೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು. ಇದು ಲಿವರ್ ಅಷ್ಟೇ ಅಲ್ಲದೆ ಮೆದುಳು ಹಾಗೂ ಕಿಡ್ನಿ ಮೇಲೂ ದುಷ್ಪರಿಣಾಮ ಬೀರುತ್ತದೆ.
ಫಾಸ್ಟ್ ಫುಡ್: ಹೈ ಸ್ಯಾಚ್ಯುರೇಟೆಡ್ ಫ್ಯಾಟ್ ಇರುವ ಆಹಾರಗಳು ಅಂದರೆ ಪಿಜ್ಜಾ, ಬರ್ಗರ್, ಫ್ರೆಂಚ್ ಫ್ರೈಸ್, ವೇಫರ್ಸ್ ಸೇರಿದಂತೆ ಇತರೆ ಆಹಾರಗಳು ಜೀರ್ಣವಾಗಲು ತುಂಬಾ ಸಮಯವನ್ನು ತೆಗೆದುಕೊಳ್ಳುತ್ತದೆ. ಹಾಗೆಯೇ ಕೊಬ್ಬು ದೇಹದಲ್ಲಿಯೇ ಉಳಿದುಬಿಡುತ್ತದೆ. ಹೆಚ್ಚು ಕೊಲೆಸ್ಟ್ರಾಲ್ ಉತ್ಪಾದನೆಯಾಗಿ ಹೃದಯ ಸಂಬಂಧಿ ಕಾಯಿಲೆಗಳು ಬರಬಹುದು.
ಬಿಳಿ ಹಿಟ್ಟು/ಟ್ರಾನ್ಸ್ ಕೊಬ್ಬು: ಪ್ಯಾಕ್ ಮಾಡಿದ ಆಹಾರಗಳು ಹಾಗೂ ಬೇಯಿಸಿದ ಉತ್ಪನ್ನಗಳಲ್ಲಿ ಟ್ರಾನ್ಸ್ ಕೊಬ್ಬು ಕಂಡುಬರುತ್ತದೆ. ಇದು ಮಾನವ ನಿರ್ಮಿತ ಕೊಬ್ಬಾಗಿದ್ದು, ರಕ್ತವು ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದು. ಬಿಳಿಯ ಹಿಟ್ಟಿನಲ್ಲಿ ತಯಾರಿಸಿ ಯಾವುದೇ ಆಹಾರಗಳನ್ನು ತಿನ್ನುವುದು ಕಡಿಮೆ ಮಾಡಿ. ಇದು ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಳಕ್ಕೆ ಕಾರಣವಾಗುತ್ತದೆ. ಪಿಜ್ಜಾ, ಬರ್ಗರ್, ಬಿಸ್ಕತ್, ಬ್ರೆಡ್, ಪಾಸ್ತಾ ಸೇರಿದಂತೆ ಇತರೆ ಆಹಾರಗಳ ಸೇವನೆ ಬೇಡ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ