ಮೊಳಕೆಯೊಡೆದ ಈರುಳ್ಳಿಯನ್ನು ಎಸೆಯುತ್ತಿದ್ದೀರಾ? ಈ ತಪ್ಪನ್ನು ಎಂದಿಗೂ ಮಾಡಬೇಡಿ

ಮನೆಯಲ್ಲಿ ದೀರ್ಘಕಾಲ ಸಂಗ್ರಹಿಸಿಟ್ಟ ಈರುಳ್ಳಿ ಮೊಳಕೆಯೊಡೆಯುವುದು ತುಂಬಾ ಸಾಮಾನ್ಯ. ಆದರೆ ಕೆಲವರು ಇಂತಹ ಈರುಳ್ಳಿಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಎಸೆಯುತ್ತಾರೆ. ನೀವು ಕೂಡ ಈ ತಪ್ಪು ಮಾಡುತ್ತಿದ್ದೀರಾ? ಹಾಗಾದರೆ ಈ ಅಭ್ಯಾಸವನ್ನು ಇವತ್ತಿಗೆ ನಿಲ್ಲಿಸಿಬಿಡಿ. ಏಕೆಂದರೆ ಮೊಳಕೆಯೊಡೆದ ಈರುಳ್ಳಿ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಹೇಳುತ್ತಾರೆ. ಹೌದು, ಇದು ಕೇಳುವುದಕ್ಕೆ ಸ್ವಲ್ಪ ಆಶ್ಚರ್ಯ ಹುಟ್ಟಿಸಬಹುದು ಆದರೆ ಸತ್ಯ. ಹಾಗಾದಲ್ಲಿ ಇದರ ಸೇವನೆಯಿಂದ ಸಿಗುವ ಪ್ರಯೋಜನಗಳೇನು? ಯಾಕಾಗಿ ಸೇವನೆ ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮೊಳಕೆಯೊಡೆದ ಈರುಳ್ಳಿಯನ್ನು ಎಸೆಯುತ್ತಿದ್ದೀರಾ? ಈ ತಪ್ಪನ್ನು ಎಂದಿಗೂ ಮಾಡಬೇಡಿ
Sprouted Onions

Updated on: Dec 26, 2025 | 4:05 PM

ಪ್ರತಿಯೊಬ್ಬರ ಅಡುಗೆ ಮನೆಯಲ್ಲಿಯೂ ಈರುಳ್ಳಿ (Onions) ಪ್ರಮುಖ ಸ್ಥಾನವನ್ನು ಪಡೆದುಕೊಂಡಿರುತ್ತದೆ. ಸಸ್ಯಾಹಾರಿಗಳಿಂದ ಮಾಂಸಾಹಾರಿಗಳ ವರೆಗೆ ಎಲ್ಲರೂ ಸಹ ಈರುಳ್ಳಿಯನ್ನು ಸೇವನೆ ಮಾಡಿಯೇ ಮಾಡುತ್ತಾರೆ. ಏಕೆಂದರೆ ಈರುಳ್ಳಿ ಇಲ್ಲದೆ, ಭಕ್ಷ್ಯಗಳ ಪರಿಮಳ ಹೆಚ್ಚಾಗಲು ಸಾಧ್ಯವಿಲ್ಲ. ಅದಕ್ಕಾಗಿಯೇ ಮನೆಗಳಲ್ಲಿ ಅವುಗಳನ್ನು ಖಾಲಿಯಾಗದಂತೆ ನೋಡಿಕೊಳ್ಳುತ್ತಾರೆ. ಆದರೆ ಅವು ಮೊಳಕೆಯೊಡೆದಾಗ ಅವುಗಳನ್ನು ತಿನ್ನುವುದು ಸುರಕ್ಷಿತವೇ ಎಂಬ ಅನುಮಾನ ಮೂಡುತ್ತದೆ. ಕೆಲವರು ಈ ರೀತಿ ಮೊಳಕೆಯೊಡೆದ ಈರುಳ್ಳಿಯನ್ನು ಸೇವನೆ ಮಾಡಬಾರದು ಎಂದು ಹೇಳುತ್ತಾರೆ. ಆದರೆ ಇನ್ನು ಕೆಲವರು ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು ಇದನ್ನು ಸೇವನೆ ಮಾಡುವುದರಿಂದ ಯಾವುದೇ ರೀತಿಯ ತೊಂದರೆ ಇಲ್ಲ ಎನ್ನುತ್ತಾರೆ. ಹಾಗಾದರೆ ಇದು ಒಳ್ಳೆಯದೋ, ಅಲ್ಲವೋ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಈರುಳ್ಳಿಗೆ ಬರುವ ಹಸಿರು ಮೊಳಕೆ ವಿಷಕಾರಿಯಲ್ಲ. ವಾಸ್ತವವದಲ್ಲಿ, ಈರುಳ್ಳಿ ಹಳೆಯದಾದಾಗ ಮತ್ತು ಸ್ವಲ್ಪ ತೇವಾಂಶ ಪಡೆದುಕೊಂಡಾಗ ಅದು ಮತ್ತೆ ಮೊಳಕೆಯೊಡೆಯಲು ಪ್ರಾರಂಭಿಸುತ್ತದೆ. ದಿನಗಳು ಕಳೆದಂತೆ, ಅದರಿಂದ ಹಸಿರು ಎಲೆ ಹೊರಹೊಮ್ಮುತ್ತದೆ. ಈ ಎಲೆಯ ಸೇವನೆ ಮಾಡುವುದು ಒಳ್ಳೆಯದು. ಭಯಪಡುವ ಯಾವುದೇ ಅವಶ್ಯಕತೆ ಇಲ್ಲ. ಆದರೆ ಈರುಳ್ಳಿ ತಿನ್ನಲು ಸುರಕ್ಷಿತವಾಗಿದ್ದರೂ, ಅವುಗಳ ಗುಣಲಕ್ಷಣಗಳಲ್ಲಿ ಕೆಲವು ಬದಲಾವಣೆಗಳು ಸಂಭವಿಸುತ್ತವೆ. ಈರುಳ್ಳಿ ಮೊಳಕೆಯೊಡೆದಾಗ, ಒಳಭಾಗವು ಸ್ವಲ್ಪ ಮೃದು ಅಥವಾ ಕೋಮಲವಾಗುತ್ತದೆ.

ಇದನ್ನೂ ಓದಿ: ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರಬಾರದೆಂದರೆ ಈ ಸರಳ ಸಲಹೆಯನ್ನು ಪಾಲಿಸಿ

ಇನ್ನು ಈ ಈರುಳ್ಳಿ ಸಾಮಾನ್ಯ ಈರುಳ್ಳಿಯಂತೆ ರುಚಿ ಕೊಡದಿರಬಹುದು. ಸ್ವಲ್ಪ ಕಹಿ ರುಚಿಯನ್ನು ಹೊಂದಿರಬಹುದು. ನೀವು ಅಡುಗೆ ಮಾಡುವಾಗ ಮೊಳಕೆಗಳನ್ನು ಕತ್ತರಿಸಿ ಸಲಾಡ್‌ ಅಥವಾ ಇನ್ನಿತರ ಆಹಾರಗಳಲ್ಲಿ ಬಳಸಬಹುದು. ಏಕೆಂದರೆ ಅವು ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವುದರಿಂದ ಇದರ ಸೇವನೆ ಆರೋಗ್ಯಕ್ಕೂ ಒಳ್ಳೆಯದು. ಆದರೆ ಮೊಳಕೆಯೊಡೆದ ಈರುಳ್ಳಿಯನ್ನು ಒತ್ತಿದಾಗ ತುಂಬಾ ಮೃದುವಾಗಿದ್ದರೆ ಅಥವಾ ತುಂಬಾ ಒಣಗಿದ್ದರೆ ಅಥವಾ ಅದರ ಮೇಲೆ ಕಪ್ಪು ಕಲೆಗಳಿದ್ದರೆ, ಅದನ್ನು ಬಳಸಬೇಡಿ. ಅಂತಹ ಈರುಳ್ಳಿ ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ