ಇಂಥ ಲಕ್ಷಣಗಳಿದ್ದರೆ ಕೊರೊನಾ ಬಂದಿರುವ ಸಾಧ್ಯತೆಯಿದೆ, ಒಮ್ಮೆ ಟೆಸ್ಟ್ ಮಾಡಿಸಿ

ಕೊವಿಡ್ ನಿಮ್ಮ ಗಂಟಲಿನ ಕಫದಲ್ಲಿ ನೆಲೆ ನಿಲ್ಲುವ ಶಕ್ತಿ ಹೊಂದಿದೆ. ಕೆಲ ದಿನಗಳಿಂದ ಧ್ವನಿಯಲ್ಲಿ ತೀವ್ರ ಬದಲಾವಣೆ, ಕಫ ಹೆಚ್ಚಿದ್ದರೆ ನೀವು ಕೊರೊನಾ ಸೋಂಕು ಪತ್ತೆ ಮಾಡಿಸಿಕೊಳ್ಳಬೇಕು.

  • TV9 Web Team
  • Published On - 7:14 AM, 10 Apr 2021
ಇಂಥ ಲಕ್ಷಣಗಳಿದ್ದರೆ ಕೊರೊನಾ ಬಂದಿರುವ ಸಾಧ್ಯತೆಯಿದೆ, ಒಮ್ಮೆ ಟೆಸ್ಟ್ ಮಾಡಿಸಿ
ಕೊರೊನಾ ಟೆಸ್ಟ್ ಪ್ರಾತಿನಿಧಿಕ ಚಿತ್ರ

ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೂ ಹೆಚ್ಚುತ್ತಿವೆ. ಬರೀ ಹೆಚ್ಚುತ್ತಿವೆ ಎನ್ನುವುದಕ್ಕಿಂತ ವೇಗವಾಗಿ ಮತ್ತು ತೀವ್ರವಾಗಿ ಹೆಚ್ಚುತ್ತಿದೆ ಎನ್ನುವುದೇ ಸರಿಯೇನೋ. ಬರೋಬ್ಬರಿ ಒಂದು ವರ್ಷದ ಹಿಂದೆ ದೇಶದಲ್ಲಿ ಹೇಗೆ ಕೊರೊನಾ ಭಯ ಮನೆಮಾಡಿತ್ತೋ ಹಾಗೇ, ಈಗಲೂ ಕೊವಿಡ್ ಎಂದರೆ ಜನ ಥರಥಗುಡುತ್ತಿದ್ದಾರೆ. ಬಿಟ್ಟನೆಂದರೂ ಬಿಡದೀ ಕೊರೊನಾ ಎನ್ನುತ್ತಿದ್ದಾರೆ. ಇಷ್ಟು ದಿನಕ್ಕೇ ಕೊರೊನಾ ಬಂದು ಹೋಗಿರಬಹುದು, ಟೆಸ್ಟ್ ಮಾಡಿಸಿದ್ದರೆ ಪಾಸಿಟಿವ್ವೇ ಬರುತ್ತಿತ್ತೋನೋ ಎಂದುಕೊಂಡವರು ಅದೆಷ್ಟು ಜನರೋ. ಇಷ್ಟು ದಿನಗಳಲ್ಲಿ ನಮಗೆ ಗೊತ್ತಿಲ್ಲದೇ ನಮ್ಮ ದೇಹದಲ್ಲಿ ಕೊರೊನಾ ಸೋಂಕು ಹೊಕ್ಕಿರಬಹುದು. ಟೆಸ್ಟ್ ಮಾಡಿಸಿದರೆ ತಿಳಿಯುತ್ತೆ, ಆದರೆ ಟೆಸ್ಟ್ ಮಾಡಿಸುವುದು ಯಾವಾಗ? ನಿಮ್ಮ ದೇಹದಲ್ಲಿ ಈ ರೀತಿ ಆಗುತ್ತಿದ್ದರೆ ನೀವು ಖಂಡಿತಾ ಕೊರೊನಾ ಟೆಸ್ಟ್ ಮಾಡಿಸಬೇಕು.

ನಿದ್ರೆಗೆಡದೇ ಇದ್ದರೂ ಅಥವಾ ಕಣ್ಣಿನ ಬೇರೆ ಯಾವುದೇ ತೊಂದರೆ ಇಲ್ಲದಿದ್ದರೂ ಸುಖಾಸುಮ್ಮನೆ ನಿಮ್ಮ ಕಣ್ಣುಗಳು ಕೆಂಪಗಾಗಿದ್ದರೆ ನಿಮಗೆ ಕೊರೊನಾ ಸೋಂಕು ತಗಲಿರುವ ಸಾಧ್ಯತೆಯಿದೆ. ಇತರ ಕೆಲವು ಸೋಂಕು ತಗುಲಿದರೂ ಕಣ್ಣು ಕೆಂಪಗಾಗುವ ಸಾಧ್ಯತೆಯಿದೆ. ಆದರೆ ಈ ಸಂದರ್ಭದಲ್ಲಿ ಕೊರೊನಾ ಭಯ ಇರುವ ಕಾರಣ ಕೊರೊನಾ ಟೆಸ್ಟ್ ಮಾಡಿಸುವುದು ಸರ್ವೋತ್ತಮ.

ನಿಮಗೆ ಇತ್ತೀಚಿಗೆ ಮರೆವು ಹೆಚ್ಚಾಗುತ್ತಿದೆಯೇ? ಪದೇ ಪದೇ ದಿನನಿತ್ಯದ ವಿಷಯಗಳು ಕೆಲಸಗಳು ಮರೆತುಹೋಗುತ್ತಿವೆಯೇ? ಅಯ್ಯೋ, ಏನು ಮಾಡಲಿ ಇಂದು ಯಾವುದೋ ಮಹತ್ವದ ಕೆಲಸ ಮಾಡಬೇಕಿತ್ತು. ಆದರೆ, ಏನೆಂತಲೇ ನೆನಪಾಗುತ್ತಿಲ್ಲ ಎಂದು ಹಣೆ ಚಚ್ಚಿಕೊಳ್ಳುತ್ತಿದ್ದೀರಾ? ನಿಮಗೆ ಕೆಲ ದಿನಗಳಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಗೊಂದಲ ಕಾಡುತ್ತಿದೆಯೇ? ನಿರ್ಧಾರ ತೆಗೆದುಕೊಳ್ಳಲು ಆಗುತ್ತಿಲ್ಲವೇ, ಗೊಂದಲ, ಭಯ, ಹತಾಶೆಗಳು ಕಾಡುತ್ತಿವೆಯೇ? ಹಾಗಾದರೆ ನೀವೊಮ್ಮೆ ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು.

ಕೊವಿಡ್ ನಿಮ್ಮ ಗಂಟಲಿನ ಕಫದಲ್ಲಿ ನೆಲೆ ನಿಲ್ಲುವ ಶಕ್ತಿ ಹೊಂದಿದೆ. ಕೆಲ ದಿನಗಳಿಂದ ಧ್ವನಿಯಲ್ಲಿ ತೀವ್ರ ಬದಲಾವಣೆ, ಕಫ ಹೆಚ್ಚಿದ್ದರೆ ನೀವು ಕೊರೊನಾ ಸೋಂಕು ಪತ್ತೆ ಮಾಡಿಸಿಕೊಳ್ಳಬೇಕು. ಇಷ್ಟೇ ಅಲ್ಲ, ಕೊರೊನಾ ಟೆಸ್ಟ್ ಮಾಡಿಸಲು ಇನ್ನೊಂದು ಅತಿ ಪ್ರಮುಖ ಕಾರಣವೆಂದರೆ ಮೈ ತಾಪಮಾನ. ನಿಮ್ಮ ದೇಹ ಸುಡುತ್ತಿದ್ದರೆ, ಬಿಟ್ಟುಬಿಡದೇ ದೇಹದ ಉಷ್ಣಾಂಶ ಹೆಚ್ಚುತ್ತಾ ಇದ್ದರೆ ಕೊರೊನಾ ಟೆಸ್ಟ್ ಮಾಡಿಸಬೇಕು.

ಕೊರೊನಾ ಟೆಸ್ಟ್ ಮಾಡಿಸಲು ಇನ್ನೊಂದು ಬಲವಾದ ಕಾರಣ ಉಸಿರಾಟದ ಸಮಸ್ಯೆ. ನಿಮಗೆ ಕೆಲ ದಿನಗಳಿಂದ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ. ಜತೆಗೆ ಸುಸ್ತು, ತಲೆನೋವು ಮುಂತಾದವುಗಳು ನಿಮ್ಮನ್ನು ಬಾಧಿಸುತ್ತಿದ್ದರೂ ಸಹ ನೀವು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲೇಬೇಕು.

ಇಂತಹ ಹಲವು ಲಕ್ಷಣಗಳು ನಿಮ್ಮನ್ನು ಕಾಡುತ್ತಿದ್ದರೆ ಕೊರೊನಾ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಕೊರೊನಾ ಬಂದಿದೆಯೋ ಇಲ್ಲವೋ ಎಂಬ ಅನುಮಾನ-ಭಯ-ಗೊಂದಲದಲ್ಲಿ ದಿನ ದೂಡುವುದಕ್ಕಿಂತ ಒಮ್ಮೆ ಟೆಸ್ಟ್ ಮಾಡಿಸಿಕೊಂಡು ಖಚಿತಪಡಿಸಿಕೊಳ್ಳುವುದು ಒಳ್ಳೆಯದು. ಇದ್ದರೂ ಇಲ್ಲದಿದ್ದರೂ ಕೊರೊನಾ ತಡೆಗಟ್ಟಲು ಹೇಳಿರುವ ನಿಯಮ ಪಾಲಿಸಬೇಕಷ್ಟೇ.

ಇದನ್ನೂ ಓದಿ: ಕೊರೊನಾ ಸೋಂಕು ಹೆಚ್ಚಳ: ಮಹಾರಾಷ್ಟ್ರ, ಒಡಿಶಾ, ಛತ್ತೀಸಗಡ, ಮಧ್ಯಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ನಿರ್ಬಂಧ ಜಾರಿ

ಪ್ರತಿದಿನ 1 ಲಕ್ಷ ಜನರಿಗೆ ಕೊವಿಡ್ ಟೆಸ್ಟ್ ಮಾಡುತ್ತೇವೆ‌; ಆರೋಗ್ಯ ಸಚಿವ ಡಾ ಸುಧಾಕರ್

(Signs you already have Covid 19 positive without knowing in Kannada)