
ದೇಹದ ಪ್ರತಿಯೊಂದು ಭಾಗವೂ ಕೂಡ ಬಹಳ ಮುಖ್ಯವಾಗುತ್ತದೆ. ಅದರಲ್ಲಿಯೂ ನಮ್ಮ ಮುಷ್ಟಿಯಷ್ಟೇ ದೊಡ್ಡದಿರುವ ಮೂತ್ರಪಿಂಡಗಳಿಗೆ ಹಲವಾರು ಕಾರ್ಯಗಳನ್ನು ನಿರ್ವಹಿಸುವ ಜವಾಬ್ದಾರಿ ಇದೆ. ಮೂತ್ರಪಿಂಡದ ಕಾಯಿಲೆ ಒಮ್ಮೆ ಬಂತೆಂದತೆ, ಇದು ಉಲ್ಬಣಗೊಳ್ಳುತ್ತಾ ನಿಧಾನವಾಗಿ ತನ್ನ ಕ್ಷಮತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಅದರಲ್ಲೂ ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ಮೂತ್ರಪಿಂಡದ ಕಾಯಿಲೆಯ ಕುಟುಂಬದ ಇತಿಹಾಸ ಇರುವ ವ್ಯಕ್ತಿಗಳಿಗೆ ಹೆಚ್ಚಾಗಿ ಆವರಿಸುತ್ತದೆ. ಉಳಿದಂತೆ, ಹುಟ್ಟುವಾಗ ಅತಿ ಕಡಿಮೆ ತೂಕ ಇರುವುದು, ದೀರ್ಘಾವಧಿಯಲ್ಲಿ ಸೇವಿಸುತ್ತಾ ಬಂದಿರುವ ಯಾವುದೇ ಔಷಧಿಗಳ ಪರಿಣಾಮ, ಗಂಭೀರವಾದ ಮೂತ್ರನಾಳದ ಸೋಂಕು, ಸ್ಥೂಲಕಾಯ ಹಾಗೂ ಮೂತ್ರಪಿಂಡದ ಕಲ್ಲುಗಳು ಮೂತ್ರಪಿಂಡದ ಕಾಯಿಲೆಗಳಿಗೆ ಕಾರಣವಾಗಬಹುದು. ಹಾಗಾದರೆ ಮೂತ್ರಪಿಂಡಗಳು ಆರೋಗ್ಯವಾಗಿ ಇದೆಯೋ, ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಸಾಮಾನ್ಯವಾಗಿ ಮೂತ್ರಪಿಂಡ ಸುಮಾರು 90 ಪ್ರತಿಶತದಷ್ಟು ಹಾನಿಗೊಳಗಾಗುವ ವರೆಗೂ ರೋಗಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಮೂತ್ರಪಿಂಡಗಳು ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತದೆ ಆದರೆ ಅದಕ್ಕೆ ಬರುವ ರೋಗಗಳು ಸದ್ದಿಲ್ಲದೆ ಹರಡುತ್ತವೆ ಎಂದು ತಜ್ಞರು ಹೇಳುತ್ತಾರೆ. ಅದಕ್ಕಾಗಿಯೇ ಅವುಗಳನ್ನು ಮೊದಲೇ ಗುರುತಿಸುವುದು ಮುಖ್ಯ. ನಿಮಗೆ ತಿಳಿದಿರಬಹುದು ಮೂತ್ರಪಿಂಡಗಳು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ, ದೇಹದಲ್ಲಿ ವಿಷಕಾರಿ ಅಂಶಗಳು ಸಂಗ್ರಹವಾಗುತ್ತವೆ. ಇದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಮೂತ್ರಪಿಂಡಗಳನ್ನು ಲಘುವಾಗಿ ತೆಗೆದುಕೊಳ್ಳಬಾರದು. ಅವು ದೇಹದ ನೈಸರ್ಗಿಕ ಫಿಲ್ಟರ್ ವ್ಯವಸ್ಥೆಯಂತೆ. ಆರೋಗ್ಯಕರ ಮೂತ್ರಪಿಂಡವು ನಿಮ್ಮ ದೇಹವನ್ನು ಹಾನಿಕಾರಕ ತ್ಯಾಜ್ಯದಿಂದ ಮುಕ್ತಗೊಳಿಸುತ್ತದೆ. ಹಾಗಾಗಿ ಅವುಗಳ ಆರೋಗ್ಯದ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಹೇಳುತ್ತಾರೆ.
ಮೂತ್ರಪಿಂಡದ ಕಾಯಿಲೆಗೆ ಅನೇಕ ಕಾರಣಗಳಿವೆ. ಜೀವನಶೈಲಿಯಲ್ಲಿ ಕೆಲವು ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳುವುದರ ಜೊತೆಗೆ ಸಮಯೋಚಿತ ವೈದ್ಯಕೀಯ ಆರೈಕೆಯಿಂದ ಇವುಗಳನ್ನು ತಡೆಗಟ್ಟಬಹುದು. ಅನಿಯಂತ್ರಿತ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಮೂತ್ರಪಿಂಡದ ಹಾನಿಗೆ ಮುಖ್ಯ ಕಾರಣಗಳಾಗಿವೆ. ರಕ್ತದಲ್ಲಿ ಅಧಿಕ ಸಕ್ಕರೆ ಮಟ್ಟವು ಕಾಲಾನಂತರದಲ್ಲಿ ಮೂತ್ರಪಿಂಡದ ಅಂಗಾಂಶವನ್ನು ಹಾನಿಗೊಳಿಸುತ್ತದೆ. ಅನಿಯಂತ್ರಿತ ರಕ್ತದೊತ್ತಡವು ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ. ಮೂತ್ರಪಿಂಡದ ಕಾರ್ಯವನ್ನು ಕಡಿಮೆ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಇದನ್ನೂ ಓದಿ: ನೀವು ಅಡುಗೆ ಮಾಡುವ ವಿಧಾನ ಅನಾರೋಗ್ಯಕ್ಕೆ ದಾರಿ ಮಾಡಿಕೊಡಬಹುದು ಹುಷಾರ್
ಮೂತ್ರಪಿಂಡದ ಕಾಯಿಲೆಯು ಸಾಮಾನ್ಯವಾಗಿ ಗಮನಾರ್ಹ ರೋಗಲಕ್ಷಣಗಳಿಲ್ಲದೆ ಹರಡುತ್ತದೆ. ಆರಂಭಿಕ ಚಿಹ್ನೆಗಳನ್ನು ಗುರುತಿಸುವುದು ಮುಖ್ಯ. ಈ ಕುರಿತಾದ ತಜ್ಞರು ಉಲ್ಲೇಖಿಸಿದ ಎಂಟು ರೋಗಲಕ್ಷಣಗಳು ಇಲ್ಲಿವೆ.
(ಸೂಚನೆ: ಇಲ್ಲಿರುವ ವಿಷಯಗಳು ಮಾಹಿತಿಗಾಗಿ ಮಾತ್ರ. ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿದ್ದ ಸಂದರ್ಭದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ