ಸೈನಸ್ ತೊಂದರೆಯಿಂದ ಹೊರಬರಲು ಇಲ್ಲಿದೆ ಹೂಕೋಸು ಸೂಪ್ ರೆಸಿಪಿ

ಈ ಸೈನಸ್ ನಿವಾರಕ ಹೂಕೋಸು ಸೂಪ್ ಮೂತ್ರವರ್ಧಕ ಮತ್ತು ಡಯಾಫೊರೆಟಿಕ್ ಗುಣಲಕ್ಷಣಗಳನ್ನು ಹೊಂದಿದ್ದು ಅದು ದೇಹದಿಂದ ಹೆಚ್ಚುವರಿ ದ್ರವಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಶೀತಗಳು, ಕೆಮ್ಮು, ಸೈನಸ್ ಮತ್ತು ಶ್ವಾಸನಾಳದ ಸೋಂಕು ತಡೆಯಲು ಅತ್ಯಂತ ಸಹಾಯಕ ಎಂದು ಹೇಳುತ್ತಾರೆ.

ಸೈನಸ್ ತೊಂದರೆಯಿಂದ ಹೊರಬರಲು ಇಲ್ಲಿದೆ ಹೂಕೋಸು ಸೂಪ್ ರೆಸಿಪಿ
ಸಾಂದರ್ಭಿಕ ಚಿತ್ರImage Credit source: tv9 Hindi
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Oct 21, 2022 | 11:18 AM

ನಿಮ್ಮ ದೇಹದ ಪ್ರತಿಯೊಂದು ಅಂಗಾಂಗಗಳನ್ನು ಆರೋಗ್ಯವಾಗಿ ಇಟ್ಟುಕೊಳ್ಳುವುದು ಆದ್ಯ ಕರ್ತವ್ಯವಾಗಿದೆ. ಆದರಂತೆಯೇ ತಲೆಗೆ ಸಂಬಂಧಪಟ್ಟ ಯಾವುದೇ ಸಮಸ್ಯೆ ಕಂಡುಬಂದರೂ ಸಹ ಜಾಗ್ರತಿ ವಹಿಸುವುದು ಅತ್ಯಂತ ಅಗತ್ಯವಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಎರಡೂ ಕಣ್ಣುಗಳ ನಡುವೆ ಮತ್ತು ಹಣೆಯ ಕೆಳಭಾಗದಲ್ಲಿ, ಟೊಳ್ಳು ಭಾಗವೊಂದಿದೆ. ಇದೇ ಭಾಗ ಸೈನಸ್ ಅಥವಾ ಸೈನಸೈಟಿಸ್. ಈ ಭಾಗದಲ್ಲಿ ಸೋಂಕು ಉಂಟಾದರೆ ಇದರ ಮೂಲಕ ರಕ್ತ ಪರಿಚಲನೆಗೊಳ್ಳುವ ಇತರ ನರಗಳಲ್ಲಿ ಭಾರೀ ಸಂವೇದನೆಯುಂಟಾಗಿ ತಲೆನೋವು, ಮುಖದ ಸ್ನಾಯುಗಳಲ್ಲಿ ನೋವು, ಮೂಗಿನ ಒಳಗಿನಿಂದ ಗಂಟಲವರೆಗೆ ಉರಿ, ನೋವು, ವಾಕರಿಕೆ ಮೊದಲಾದವು ಎದುರಾಗುತ್ತವೆ.

ಈ ಲೇಖನದಲ್ಲಿ, ಪೌಷ್ಟಿಕತಜ್ಞ ಅಂಜಲಿ ಮುಖರ್ಜಿ ಅವರು ಸೈನಸ್ ನಿಂದ ಉಂಟಾಗುವ ತೊಂದರೆಗಳ ಕುರಿತು ನೀಡಿರುವ ಹೂಕೋಸು ಸೂಪ್ ಪಾಕವಿಧಾನವನ್ನು, ಸಲಹೆ ಸೂಚನೆಗಳನ್ನು ಎನ್ ಡಿ ಟಿವಿ ಯಲ್ಲಿ ಪ್ರಕಟಿಸಲಾಗಿದೆ.

ಅಂಜಲಿ ಮುಖರ್ಜಿಯವರ ಈ ಹೂಕೋಸು ಸೂಪ್‌ ಪಾಕವು ಸೈನಸ್ ತೊಂದರೆಯ ತಡೆಗಟ್ಟುವಿಕೆ ಹಾಗೂ ಹವಾಮಾನ ಬದಲಾವಣೆಯ ಸಮಯದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಸೋಂಕುಗಳನ್ನು ತಡೆಗಟ್ಟುವಲ್ಲಿ ಅತ್ಯಂತ ಪ್ರಯೋಜನಕಾರಿ ಪಾಕವಿಧಾನ ಎಂದು ಅವರು ಹೇಳಿದ್ದಾರೆ.

ಅದರಲ್ಲೂ ಸೈನಸ್ ಬ್ಲಾಕ್ ಆದಾಗ ಅಲ್ಲಿ ನೀರು ತುಂಬಿಕೊಂಡು ಬ್ಯಾಕ್ಟೀರಿಯಾ ಬೆಳೆದು ಸೋಂಕು ಕಾಣಿಸಿಕೊಳ್ಳಬಹುದು. ಸೈನಸ್‌ನ ಸೋಂಕು ಶೀತ, ಅಲರ್ಜಿ, ಮೂಗಿನ ಸಂಯುಕ್ತಗಳಿಂದ ಕಾಣಿಸಿಕೊಳ್ಳಬಹುದು. ಸೈನಸ್‌ನಿಂದ ತಲೆನೋವು, ಮುಖದಲ್ಲಿ ನೋವು ಅಥವಾ ಭಾದಿತ ಪ್ರದೇಶದಲ್ಲಿ ನೋವು ಕಾಣಿಸಿಕೊಳ್ಳಬಹುದು.

ಇದು ಸೈನಸ್‌ಗೆ ಸಂಬಂಧಿಸಿದ ನೋವಾಗಿರಬಹುದು. ಅದರಲ್ಲೂ ಸೈನಸ್‌ನಿಂದ ಪೀಡಿತರಾಗಿರುವವರಿಗೆ ತಲೆ ಭಾರವಾದಂತೆ ಅನುಭವವಾಗುವುದು. ಈ ಎಲ್ಲಾ ಸಮಸ್ಯೆಗಳಿಗೆ ಈ ಹೂಕೋಸು ಸೂಪ್‌ ಪಾಕವನ್ನು ಮಾಡಿ ನೋಡಿ ಎನ್ನುತ್ತಾರೆ ಇವರು. ಈ ಹೂಕೋಸು ಸೂಪ್ ನಿಮ್ಮನ್ನು ಒಳಗಿನಿಂದ ಬೆಚ್ಚಗಾಗಲು, ನಿಮ್ಮ ನೋಯುತ್ತಿರುವ ಗಂಟಲು ನಿವಾರಿಸಲು, ನಿಮ್ಮ ಸೈನಸ್‌ಗಳನ್ನು ತೆರೆಯಲು ಮತ್ತು ನೀವು ಮುಕ್ತವಾಗಿ ಉಸಿರಾಡಲು ಸಹಾಯವಾಗುವ ನೈಸರ್ಗಿಕ ಪರಿಹಾರವಾಗಿದೆ..

ಹೂಕೋಸು ಸೂಪ್‌ ಪಾಕ ವಿಧಾನ ಇಲ್ಲಿದೆ

  • ಹೂಕೋಸು: 2 ರಿಂದ 3 ಮಧ್ಯಮ ಗಾತ್ರದ ಹೂಕೋಸು ತುಂಡುಗಳು ಕತ್ತರಿಸಿ
  •  ಸಣ್ಣ ಗಾತ್ರದ 2 ಈರುಳ್ಳಿ
  •  ಸಣ್ಣದಾಗಿ ಕೊಚ್ಚಿದ 1ಶುಂಠಿ
  •  ಪುಡಿಮಾಡಿದ 2-3 ಟೀಸ್ಪೂನ್ ಮೆಣಸಿನಕಾಯಿಗಳು
  •  2 ತುಂಡು ಏಲಕ್ಕಿ
  • ಪೆಪ್ಪರ್
  • ರುಚಿಗೆ ತಕ್ಕಷ್ಟು ಉಪ್ಪು

ಇವಿಷ್ಟು ಪದಾರ್ಥಗಳನ್ನು ಬಳಸಿ ಸೂಪ್ ತಯಾರಿಸಿ, ಸೇವಿಸಿ.

ಈ ಸೈನಸ್ ನಿವಾರಕ ಸೂಪ್ ಮೂತ್ರವರ್ಧಕ ಮತ್ತು ಡಯಾಫೊರೆಟಿಕ್ ಗುಣಲಕ್ಷಣಗಳನ್ನು ಹೊಂದಿದ್ದು ಅದು ದೇಹದಿಂದ ಹೆಚ್ಚುವರಿ ದ್ರವಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಶೀತ ,ಕೆಮ್ಮು, ಸೈನಸ್ ಮತ್ತು ಶ್ವಾಸನಾಳದ ಸೋಂಕು ತಡೆಯಲು ಅತ್ಯಂತ ಸಹಾಯಕ ಎಂದು ಹೇಳುತ್ತಾರೆ.

Published On - 11:18 am, Fri, 21 October 22

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ