Vitamin K: ವಿಟಮಿನ್ ಕೆ ಸೇವನೆಯಿಂದ ದೇಹಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತೇ? ಉಪಯುಕ್ತ ಮಾಹಿತಿ ಇಲ್ಲಿದೆ

ಇಂದು ವಯಸ್ಕರಿಗಿಂತ ಹೆಚ್ಚಾಗಿ ಮಕ್ಕಳು,ಯುವಕರಲ್ಲೇ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿದ್ದು, ಪ್ರಾಣಹಾನಿಗಳು ಕಂಡುಬರುತ್ತಿದೆ. ಆದ್ದರಿಂದ ಹೃದಯದ ಆರೋಗ್ಯಕ್ಕೆ ಸಂಬಂಧಿಸಿದಂತೆ ವಿಟಮಿನ್ ಕೆ ಎಷ್ಟು ಉಪಯುಕ್ತ ಎಂಬ ಮಾಹಿತಿ ಇಲ್ಲಿದೆ.

Vitamin K: ವಿಟಮಿನ್ ಕೆ ಸೇವನೆಯಿಂದ ದೇಹಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತೇ? ಉಪಯುಕ್ತ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ತImage Credit source: tv9 Hindi
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Oct 21, 2022 | 12:53 PM

ಇಂದಿನ ಜೀವನಶೈಲಿಯು ಆರೋಗ್ಯಕರ ಆಹಾರಗಳತ್ತ ವಾಲುವ ಬದಲಾಗಿ ಕಲಬೆರಕೆಯೊಂದಿಗಿನ ನಾಲಿಗೆಗೆ ರುಚಿಯೆನಿಸುವ ಆಹಾರಗಳತ್ತ ವಾಲುತ್ತಿದೆ. ಆದರೆ ನಮ್ಮ ದೇಹಕ್ಕೆ ನಿಜವಾದ ಪೌಷ್ಟಿಕಾಂಶಗಳನ್ನು ಕೊಡುವ ನಾಲಿಗೆಗೆ ರುಚಿಸದ್ದಿದ್ದರೂ ಕೂಡ ಸಾವಯವ ತರಕಾರಿ, ಸೊಪ್ಪು, ನಾರಿನಾಂಶವುಳ್ಳ ಆಹಾರ ಮತ್ತು ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಆದರೆ ನಾವು ಅವುಗಳನ್ನು ತಿನ್ನುವ ಮನಸ್ಸು ಮಾಡಬೇಕು ಅಷ್ಟೇ.

ಈ ಲೇಖನದಲ್ಲಿ ನಮ್ಮ ದೇಹಕ್ಕೆ ಅಗತ್ಯವಿರುವ ವಿಟಮಿನ್ ಕೆ ಅಂಶ ಯಾವ ಆಹಾರಗಳಲ್ಲಿ ಸಿಗುತ್ತದೆ ಮತ್ತು ದಿನ ನಿತ್ಯದ ಆಹಾರ ಪದ್ದತಿಯಲ್ಲಿ ಅಳವಡಿಸಿಕೊಂಡು, ಹೃದಯದ ಆರೋಗ್ಯವನ್ನು ಮತ್ತು ಮೂಳೆಗಳ ಸದೃಢತೆಯನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ.

ಹೃದಯದ ಆರೋಗ್ಯ: ವಿಟಮಿನ್ ಕೆ ಸೇವನೆಯು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆಯೇ?

ಇಂದು ವಯಸ್ಕರಿಗಿಂತ ಹೆಚ್ಚಾಗಿ ಮಕ್ಕಳು,ಯುವಕರಲ್ಲೇ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿದ್ದು, ಪ್ರಾಣಹಾನಿಗಳು ಕಂಡುಬರುತ್ತಿದೆ. ಆದ್ದರಿಂದ ಹೃದಯದ ಆರೋಗ್ಯಕ್ಕೆ ಸಂಬಂಧಿಸಿದಂತೆ ವಿಟಮಿನ್ ಕೆ ಎಷ್ಟು ಉಪಯುಕ್ತ ಎಂಬ ಮಾಹಿತಿ ಇಲ್ಲಿದೆ.

ವಿಟಮಿನ್ ಸಿ ಮತ್ತು ಡಿ ನಂತಹ ಕೆಲವು ಜೀವಸತ್ವಗಳ ಉಪಯೋಗಗಳ ಮಾಹಿತಿಗಳು ಸಾಕಷ್ಟು ಲಭ್ಯವಿರುತ್ತದೆ. ಆದರೆ ವಿಟಮಿನ್ ಕೆ ನಂತಹ ಜೀವಸತ್ವದ ಮಾಹಿತಿಗಳು ವಿರಳ. ವಿಟಮಿನ್ ಕೆ ನಮ್ಮ ಆರೋಗ್ಯಕ್ಕೆ ಅಷ್ಟೇ ನಿರ್ಣಾಯಕವಾಗಿವೆ. ಇತ್ತೀಚಿನ ಅಧ್ಯಯನದ ಪ್ರಕಾರ, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿಟಮಿನ್ ಕೆ ಅತ್ಯಂತ ಅಗತ್ಯವಾಗಿದೆ.

ವಿಟಮಿನ್ ಕೆ ಎಂದರೇನು? ವಿಟಮಿನ್ ಕೆ ಎರಡು ವಿಧಗಳಿವೆ:

  • ವಿಟಮಿನ್ ಕೆ 1
  • ವಿಟಮಿನ್ ಕೆ 2.

ವಿಟಮಿನ್ ಕೆ 1 ಹೆಚ್ಚಾಗಿ ಸೊಪ್ಪು ತರಕಾರಿಗಳಲ್ಲಿ ಕಂಡುಬರುತ್ತದೆ. ವಿಟಮಿನ್ ಕೆ 2 ಚೀಸ್, ಮೊಟ್ಟೆ, ಮಾಂಸ, ಇತ್ಯಾದಿಗಳಲ್ಲಿ ಕಂಡುಬರುತ್ತದೆ. ಅವು ವಿಭಿನ್ನ ಶಾರೀರಿಕ ಪರಿಣಾಮಗಳನ್ನು ಹೊಂದಿದ್ದರೂ, ಎರಡೂ ವಿಟಮಿನ್ ಗಳು ದೇಹದ ಆರೋಗ್ಯಕ್ಕೆ ಅತ್ಯಂತ ಸಹಾಯಕವಾಗಿದೆ.

ಮನುಷ್ಯನಿಗೆ ಹೆಚ್ಚು ಆಯಾಸ ಮತ್ತು ಸುಸ್ತು ಆಗಬಾರದು ಎಂದರೆ ಆತನ ದೇಹದ ಮೂಳೆಗಳು ಗಟ್ಟಿಯಾಗಿರಬೇಕು. ಹೃದಯ ಬಡಿತ ಚೆನ್ನಾಗಿರಬೇಕು. ಇವುಗಳಲ್ಲಿ ಒಂದು ಸರಿಯಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದರೆ ಅದರಿಂದ ಆರೋಗ್ಯಕ್ಕೆ ಆಪತ್ತು ಖಂಡಿತ. ಆದ್ದರಿಂದ ತಾವು ಸೇವನೆ ಮಾಡುವಂತಹ ಆಹಾರಗಳಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳತ್ತ ಗಮಹರಿಸುವುದು ಅತ್ಯಂತ ಅಗತ್ಯವಾಗಿದೆ.

ಮತ್ತಷ್ಟು ಓದಿ

ರಕ್ತ ಹೆಪ್ಪುಗಟ್ಟುವಿಕೆ ಮತ್ತು ಮೂಳೆ ಬೆಳವಣಿಗೆಗೆ ಅಗತ್ಯವಾದ ಅನೇಕ ಪ್ರೊಟೀನ್‌ಗಳ ಉತ್ಪಾದನೆಯು ವಿಟಮಿನ್ ಕೆ ಸಹಾಯ ಮಾಡುತ್ತದೆ. ರಕ್ತ ಹೆಪ್ಪುಗಟ್ಟುವಿಕೆಗೆ ನೇರವಾಗಿ ಸಂಬಂಧಿಸಿರುವ ಥ್ರಂಬಿನ್ ಎಂಬ ಪ್ರೋಟೀನ್ ವಿಟಮಿನ್ ಕೆ ಮೇಲೆ ಅವಲಂಬಿತವಾಗಿರುತ್ತದೆ. ಆರೋಗ್ಯಕರ ಮೂಳೆ ಅಂಗಾಂಶವನ್ನು ಉತ್ಪಾದಿಸಲು ವಿಟಮಿನ್ ಕೆ ಅಗತ್ಯವಿರುವ ಮತ್ತೊಂದು ಪ್ರೊಟೀನ್ ಆಗಿದೆ.

ವಯಸ್ಕರಲ್ಲಿ ವಿಟಮಿನ್ ಕೆ ಕೊರತೆಯು ಅಸಾಮಾನ್ಯವಾಗಿದ್ದರೂ, ಇದು ಪ್ರತಿಜೀವಕಗಳನ್ನು ಬಳಸುವ ವ್ಯಕ್ತಿಗಳಲ್ಲಿ, ಆಹಾರ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ದುರ್ಬಲಗೊಳಿಸುವ ರೋಗಗಳಿರುವ ವ್ಯಕ್ತಿಗಳಲ್ಲಿ ಅಥವಾ ವಿಟಮಿನ್ ಕೆ ಚಯಾಪಚಯವನ್ನು ಅಡ್ಡಿಪಡಿಸುವ ಔಷಧಿಗಳನ್ನು ತೆಗೆದುಕೊಳ್ಳುವ ಜನರಲ್ಲಿ ಸಂಭವಿಸಬಹುದು.

ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿ ಅದರ ಪ್ರಯೋಜನಗಳ ಹೊರತಾಗಿಯೂ, ವಿಟಮಿನ್ ಕೆ ಯಲ್ಲಿ ಸಮೃದ್ಧವಾಗಿರುವ ಹೆಚ್ಚಿನ ಆಹಾರಗಳು ನಮ್ಮ ಒಟ್ಟಾರೆ ಆರೋಗ್ಯದ ಸುಧಾರಣೆಗೆ ಸಹಾಯ ಮಾಡುವ ಹಲವಾರು ಇತರ ಪೋಷಕಾಂಶಗಳಲ್ಲಿ ಹೇರಳವಾಗಿವೆ. ನಿಮ್ಮ ವಿಟಮಿನ್ ಕೆ ಸೇವನೆಯನ್ನು ಹೆಚ್ಚಿಸಲು ಸಾಕಷ್ಟು ತರಕಾರಿಗಳು, ಮೊಟ್ಟೆಗಳು, ಮಾಂಸಗಳನ್ನು ಆಹಾರದಲ್ಲಿ ಸೇರಿಸಿ ಸೇವಿಸುವುದು ಉತ್ತಮ.

ವಿಟಮಿನ್ ಕೆ ಸೇವನೆಯು ನಮ್ಮ ದೇಹಕ್ಕೆ ಅತ್ಯಂತ ಮುಖ್ಯವಾದುದು ಮತ್ತು ಅದು ನಮ್ಮ ಹೃದಯದ ಆರೋಗ್ಯದ ಮೇಲೆ ಸಾಕಷ್ಟು ಪ್ರಯೋಜನಕಾರಿ ಎಂಬುದನ್ನು ಅರ್ಥಮಾಡಿಕೊಳ್ಳೋಣ.

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು