Skin Cancer: ಮಾನವನ ಕೃತಕ ಚರ್ಮವು ಕ್ಯಾನ್ಸರ್ ಚಿಕಿತ್ಸೆಗೆ ದಾರಿ: ಸಂಶೋಧನೆ
ಮಾನವನ ಕೃತಕ ಚರ್ಮವನ್ನು ಬಳಸಿಕೊಂಡು ಕೋಪನ್ ಹ್ಯಾಗನ್ ವಿಶ್ವವಿದ್ಯಾಲಯದ ಸಂಶೋಧನಾ ತಂಡ ಚರ್ಮದ ಕ್ಯಾನ್ಸರ್‌ಗೆ ಒಂದು ಹೊಸ ಚಿಕಿತ್ಸೆಯನ್ನು ಕಂಡುಕೊಂಡಿದೆ. ಚರ್ಮದ ಕ್ಯಾನ್ಸರ್ ಮಾದರಿಯಲ್ಲಿ ಆಕ್ರಮಣಕಾರಿ ಬೆಳವಣಿಗೆಯನ್ನು ತಡೆಯುವಲ್ಲಿ ಈ ಚಿಕಿತ್ಸೆ ಯಶಸ್ವಿಯಾಗಿದೆ.
ಮಾನವನ ಕೃತಕ ಚರ್ಮವನ್ನು ಬಳಸಿಕೊಂಡು ಕೋಪನ್ ಹ್ಯಾಗನ್ ವಿಶ್ವವಿದ್ಯಾಲಯದ ಸಂಶೋಧನಾ ತಂಡ ಚರ್ಮದ ಕ್ಯಾನ್ಸರ್ ಮಾದರಿಯಲ್ಲಿ ಆಕ್ರಮಣಕಾರಿ ಬೆಳವಣಿಗೆಯನ್ನು ತಡೆಯುವಲ್ಲಿ ಯಶಸ್ವಿಯಾಗಿದೆ ಎಂಬುದನ್ನು ಕಂಡುಕೊಂಡಿದೆ. ಈ ಅಧ್ಯಯನವನ್ನು ಸೈನ್ಸ್ ಸಿಗ್ನಲಿಂಗ್‌ನಲ್ಲಿ ಪ್ರಕಟಿಸಲಾಗಿದೆ. ನಾವು ಜೀವಕೋಶಗಳ ಸಿಗ್ನಲಿಂಗ್ ಮಾರ್ಗಗಳಲ್ಲಿ ಒಂದಾದ TGF ಬೀಟಾ ಮಾರ್ಗವನ್ನು ಅಧ್ಯಯನ ಮಾಡುತ್ತಿದ್ದೇವೆ. ಈ ಮಾರ್ಗವು ಜೀವಕೋಶದ ಸುತ್ತಮುತ್ತಲಿನ ಸಂವಹನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಮತ್ತು ಇದು ಜೀವಕೋಶದ ಬೆಳವಣಿಗೆ ಮತ್ತು ಕೋಶ ವಿಭಜನೆಯನ್ನು ನಿಯಂತ್ರಿಸುತ್ತದೆ. ಈ ಕಾರ್ಯವಿಧಾನಗಳು ಹಾನಿಗೊಳಗಾದಾಗ, ಜೀವಕೋಶವು ಕ್ಯಾನ್ಸರ್ ಕೋಶವಾಗಿ ಬದಲಾಗಬಹುದು ಮತ್ತು ಸುತ್ತಮುತ್ತಲಿನ ಅಂಗಾಂಶವನ್ನು ಆಕ್ರಮಿಸಬಹುದು ಎಂದು ಕೋಪನ್ ಹ್ಯಾಗನ್ ವಿಶ್ವವಿದ್ಯಾಲಯದ ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಮೆಡಿಸಿನ್ ವಿಭಾಗದ ಪ್ರೊಫೆಸರ್ ಹ್ಯಾನ್ಸ್ ವಾಂಡಾಲ್ ಅವರು ವಿವರಿಸುತ್ತಾರೆ.
ನಾವು ಈಗಾಗಲೇ ಈ ಸಿಗ್ನಲಿಂಗ್ ಮಾರ್ಗಗಳನ್ನು ನಿರ್ಬಂಧಿಸುವ ಮತ್ತು ಪರೀಕ್ಷೆಗಳಲ್ಲಿ ಬಳಸಬಹುದಾದ ವಿವಿಧ ಔಷಧಿಗಳನ್ನು ಹೊಂದಿದ್ದೇವೆ. ಈ ಅಧ್ಯಯನದ ಪ್ರಕಾರ ಆ ಔಷಧಿಗಳಲ್ಲಿ ಕೆಲವೊಂದನ್ನು ಬಳಸಿದ್ದೇವೆ ಎಂದು ಸ್ಕೂಲ್ ಆಫ್ ಡೆಂಟಿಸ್ಟಿಯ ಅಸೋಸಿಯೇಟ್ ಪ್ರೊಫೆಸರ್ ಮತ್ತು ಈ ಅಧ್ಯಯನದ ಸಹ ಲೇಖಕ ಸ್ಯಾಲಿ ಡೇಬೆಲ್‌ಸ್ಟೀನ್ ವಿವರಿಸುತ್ತಾರೆ.
ಇದನ್ನೂ ಓದಿ: Lung Cancer : ಶ್ವಾಸಕೋಶದ ಕ್ಯಾನ್ಸರ್ ಚಿಕಿತ್ಸೆಗೆ ‘ಬೆರ್ಬೆರಿನ್’ ಶಾಶ್ವತ ಪರಿಹಾರವಾಗಹುದೆ?
ಈ ಔಷಧಿಗಳಲ್ಲಿ ಕೆಲವು ಈಗಾಗಲೇ ಮಾನವರ ಮೇಲೆ ಪರೀಕ್ಷಿಸಲ್ಪಟ್ಟಿವೆ. ಮತ್ತು ಕೆಲವು ಇತರ ರೀತಿಯ ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ಪರೀಕ್ಷಿಸಲ್ಪಡುವ ಪ್ರಕ್ರಿಯೆಯಲ್ಲಿವೆ. ಅವುಗಳನ್ನು ನಿರ್ಧಿಷ್ಟವಾಗಿ ಚರ್ಮದ ಕ್ಯಾನ್ಸರ್‌ಗೆ ಸಂಬಮಧಿಸಿದಂತೆ ಪರೀಕ್ಷಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ. ಈ ಹೊಸ ಅಧ್ಯಯನದಲ್ಲಿ ಸಂಶೋಧಕರು ಬಳಸಿದ ಕೃತಕ ಚರ್ಮವು ತಳೀಯವಾಗಿ ಕುಶಲತೆಯಿಂದ ಮಾನವನ ಚರ್ಮದ ಕೋಶಗಳನ್ನು ಒಳಗೊಂಡಿದೆ. ಈ ಚರ್ಮದ ಕೋಶಗಳು ಕಾಲಜನ್‌ನಿಂದ ಮಾಡಿದ ಚರ್ಮದಡಿಯ ಅಂಗಾಂಶದ ಮೇಲೆ ಉತ್ಪತ್ತಿಯಾಗುತ್ತವೆ. ಇದು ನಿಜವಾದ ಮಾನವನ ಚರ್ಮದಂತೆಯೇ ಜೀವಕೋಶಗಳ ಪದರಗಳನ್ನು ಬೆಳೆಯುವಂತೆ ಮಾಡುತ್ತದೆ.
Published On - 6:48 pm, Thu, 9 March 23