AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Smelling lemon: ಪ್ರಯಾಣ ಮಾಡುವಾಗ ಅನಾರೋಗ್ಯ ಸಮಸ್ಯೆಯಾಗದಂತೆ ತಡೆಯಲು ಈ ಟಿಪ್ಸ್ ಪಾಲಿಸಿ

ಕೆಲವರಿಗೆ ಹತ್ತಿರದ ಅಥವಾ ದೂರದ ಪ್ರಯಾಣವಾಗಲಿ ಆಗಾಗ ತಲೆತಿರುಗುವುದು, ತಲೆನೋವು, ವಾಕರಿಕೆ ಇತ್ಯಾದಿ ಸಮಸ್ಯೆಗಳು ಅನುಭವಕ್ಕೆ ಬರುತ್ತದೆ. ಕಾರಿನಲ್ಲಿರಲಿ, ಅಥವಾ ರೈಲು, ದೋಣಿ ಅಥವಾ ವಿಮಾನದಲ್ಲಿರಲಿ ಎಲ್ಲಿಯಾದರೂ ಅನಾರೋಗ್ಯಕ್ಕೆ ಒಳಗಾಗಬಹುದು. ಆದರೆ ನೀವು ದೂರದ ಊರುಗಳಿಗೆ ಚಲಿಸುತ್ತಿರುವಾಗ ಯಾವುದೇ ರೀತಿಯ ಅನಾರೋಗ್ಯ ಸಮಸ್ಯೆ ಕಾಡದಂತೆ ನೋಡಿಕೊಳ್ಳಲು ನಿಂಬೆಯ ಪರಿಮಳ ಅಥವಾ ಸುವಾಸನೆ ನಿಮಗೆ ಸಹಾಯ ಮಾಡುತ್ತದೆ. ಹೇಗೆ ಗೊತ್ತಾ? ಇಲ್ಲಿದೆ ಮಾಹಿತಿ.

Smelling lemon: ಪ್ರಯಾಣ ಮಾಡುವಾಗ ಅನಾರೋಗ್ಯ ಸಮಸ್ಯೆಯಾಗದಂತೆ ತಡೆಯಲು ಈ ಟಿಪ್ಸ್ ಪಾಲಿಸಿ
ಪ್ರೀತಿ ಭಟ್​, ಗುಣವಂತೆ
| Edited By: |

Updated on: May 20, 2024 | 5:42 PM

Share

ಪ್ರಯಾಣ ಮಾಡುವುದು ಎಂದರೆ ಯಾರಿಗೆ ಇಷ್ಟವಿಲ್ಲಾ ಹೇಳಿ? ಆದರೆ ಕೆಲವರಿಗೆ ಪ್ರವಾಸದ ಸಮಯದಲ್ಲಿ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಹಾಗಾಗಿ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ. ಕೆಲವರು ಹತ್ತಿರದ ಅಥವಾ ದೂರದ ಪ್ರಯಾಣವಾಗಲಿ ಆಗಾಗ ತಲೆತಿರುಗುವುದು, ತಲೆನೋವು, ವಾಕರಿಕೆ ಇತ್ಯಾದಿ ಸಮಸ್ಯೆಗಳು ಅನುಭವಕ್ಕೆ ಬರುತ್ತದೆ. ಕಾರಿನಲ್ಲಿರಲಿ, ಅಥವಾ ರೈಲು, ದೋಣಿ ಅಥವಾ ವಿಮಾನದಲ್ಲಿರಲಿ ಎಲ್ಲಿಯಾದರೂ ಅನಾರೋಗ್ಯಕ್ಕೆ ಒಳಗಾಗಬಹುದು. ಆದರೆ ನೀವು ದೂರದ ಊರುಗಳಿಗೆ ಚಲಿಸುತ್ತಿರುವಾಗ ಯಾವುದೇ ರೀತಿಯ ಅನಾರೋಗ್ಯ ಸಮಸ್ಯೆ ಕಾಡದಂತೆ ನೋಡಿಕೊಳ್ಳಲು ನಿಂಬೆಯ ಪರಿಮಳ ಅಥವಾ ಸುವಾಸನೆ ನಿಮಗೆ ಸಹಾಯ ಮಾಡುತ್ತದೆ. ಹೇಗೆ ಗೊತ್ತಾ? ಇಲ್ಲಿದೆ ಮಾಹಿತಿ.

ನಿಂಬೆಯ ಪರಿಮಳ ಪ್ರಯಾಣದ ಅಸ್ವಸ್ಥತೆಯನ್ನು ಹೇಗೆ ಹೋಗಲಾಡಿಸುತ್ತದೆ?

ವೈಜ್ಞಾನಿಕವಾಗಿ ಸಿಟ್ರಸ್ ಲಿಮನ್ ಎಂದು ಕರೆಯಲ್ಪಡುವ ನಿಂಬೆ, ಸಿಟ್ರಸ್ ಹಣ್ಣು, ಅದರ ತೆಳುವಾದ ಪರಿಮಳ ಮತ್ತು ವಿವಿಧ ರೀತಿಯ ಪಾಕಪದ್ದತಿಗೆ ಹೆಚ್ಚು ಮುಖ್ಯವಾಗಿದೆ. ಖಾರದ ಭಕ್ಷ್ಯಗಳ ರುಚಿಯನ್ನು ಹೆಚ್ಚಿಸುತ್ತದೆ, ಪಾನೀಯಗಳಲ್ಲಿ ಉಲ್ಲಾಸದಾಯಕವಾದ ಸ್ವಾದವನ್ನು ನೀಡುತ್ತದೆ. ಇದೆಲ್ಲದರ ಜೊತೆಗೆ ಹಲವು ಅಧ್ಯಯನಗಳ ಪ್ರಕಾರ, ನಿಂಬೆ ವಾಕರಿಕೆ ಮತ್ತು ವಾಂತಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸಾಬೀತಾಗಿದೆ. ನಿಂಬೆಯ ಪರಿಮಳವು ಅನಾರೋಗ್ಯದ ಲಕ್ಷಣಗಳಿಂದ, ವಿಶೇಷವಾಗಿ ಹೊಟ್ಟೆಯಲ್ಲಿ ಆಗುವ ಅಹಿತಕರ ಸಂವೇದನೆಯಿಂದ ಪರಿಹಾರ ನೀಡುತ್ತದೆ ಎಂದು ಆಹಾರ ತಜ್ಞ ಸಿಮ್ರತ್ ಕಥುರಿಯಾ ಹೇಳುತ್ತಾರೆ.

ಇದನ್ನೂ ಓದಿ: ಪ್ರೊಟೀನ್ ಸಪ್ಲಿಮೆಂಟ್ಸ್ ಸೇವನೆ ಆರೋಗ್ಯಕ್ಕೆ ಹಾನಿಕಾರಕ, ಎಚ್ಚರಿಕೆ ನೀಡಿದ ಕೇಂದ್ರ

ಪ್ರಯಾಣದಲ್ಲಿ ಕಂಡುಬರುವ ಅಸ್ವಸ್ಥತೆಯನ್ನು ತಡೆಗಟ್ಟಲು ತಾಜಾ ನಿಂಬೆ ರಸವನ್ನು ಒಂದು ಲೋಟ ನೀರಿಗೆ, ಚಿಟಿಕೆ ಉಪ್ಪನ್ನು ಸೇರಿಸಿ ಕುಡಿಯಬಹುದು. ಇಲ್ಲವಾದಲ್ಲಿ ಅದನ್ನು ಕತ್ತರಿಸಿ ಅದರ ಪರಿಮಳವನ್ನು ಗ್ರಹಿಸಬಹುದು. ಆದರೆ ಇದನ್ನು ಅತಿಯಾಗಿ ಸೇವಿಸಬಾರದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ