ನೀವು ಮಾಡುವ ಈ ತಪ್ಪುಗಳೇ ನಿಮ್ಮ ದೇಹದ ತೂಕ ಹೆಚ್ಚಳಕ್ಕೆ ಕಾರಣ!

| Updated By: ಆಯೇಷಾ ಬಾನು

Updated on: Sep 01, 2021 | 7:49 AM

ನೀವು ಮಾಡುವ ಕೆಲವು ತಪ್ಪುಗಳು ತೂಕ ಇಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಿರುವಾಗ ಈ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.

ನೀವು ಮಾಡುವ ಈ ತಪ್ಪುಗಳೇ ನಿಮ್ಮ ದೇಹದ ತೂಕ ಹೆಚ್ಚಳಕ್ಕೆ ಕಾರಣ!
ಸಾಂದರ್ಭಿಕ ಚಿತ್ರ
Follow us on

ಕೆಲವರು ತೂಕ ಇಳಿಸಿಕೊಳ್ಳಬೇಕು ಎಂದು ಸಾಕಷ್ಟು ಪ್ರಯತ್ನ ಪಡುತ್ತಾರೆ. ಅದೆಷ್ಟೋ ಔಷಧಿಗಳನ್ನೂ ಸಹ ಮಾಡುತ್ತಿರುತ್ತಾರೆ. ಆದರೆ ದೇಹದ ತೂಕ ಮಾತ್ರ ಇಳಿಯುತ್ತಲೇ ಇಲ್ಲ ಎಂಬುದೊಂದೇ ಅವರ ಚಿಂತೆ. ನೀವು ಮಾಡುವ ಕೆಲವು ತಪ್ಪುಗಳು ತೂಕ ಇಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಿರುವಾಗ ಈ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ. ಇವುಗಳು ನಿಮ್ಮ ಪ್ರತಿನಿತ್ಯದ ಚಟುವಟಿಕೆಯಲ್ಲಿದ್ದರೆ ನಿಮ್ಮ ತೂಕ ಇಳಿಕೆಯಾಗದಿರಲು ಇವುಗಳೇ ಕಾರಣ.

ನೀವು ದಪ್ಪಗಿದ್ದೀರಿ ಎಂದ ಮಾತ್ರಕ್ಕೆ ಊಟ ಬಿಡುವ ಯೋಚನೆಯನ್ನು ಎಂದೂ ಮಾಡಬೇಡಿ. ಏಕೆಂದರೆ ಇದು ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಆಹಾರದಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನಂತಹ ಅಂಶಗಳು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ಹಿತಮಿತವಾದ ಆಹಾರ ಸೇವನೆಯಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

ನಿಯಮಿತ ವ್ಯಾಯಾಮವಿಲ್ಲ
ಪ್ರತಿನಿತ್ಯ ವ್ಯಾಯಾಮ ಮಾಡುವ ಅಭ್ಯಾಸವನ್ನು ಎಂದಿಗೂ ಮರೆಯದಿರಿ. ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಜತೆಗೆ ನಿಮ್ಮ ದೇಹದಲ್ಲಿನ ಹೆಚ್ಚುವರಿ ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ಇದು ನಿಮ್ಮ ತೂಕ ಇಳಿಸುವಿಕೆಗೆ ಸಹಾಯಕ.

ನಡೆಯುವ ಅಭ್ಯಾಸ ಮರೆತಿದ್ದೀರಿ
ಪ್ರತಿನಿತ್ಯವೂ ಸಹ ನಡೆಯುವ ಅಭ್ಯಾಸವನ್ನು ಮಾಡಿಕೊಳ್ಳಿ. ಕುಳಿತಲ್ಲಿಯೇ ಕುಳಿತಿರುವುದು ದೈಹಿಕವಾಗಿ ದುರ್ಬಲರನ್ನಾಗಿ ಮಾಡುತ್ತದೆ. ಜತೆಗೆ ಕೊಬ್ಬಿನ ಅಂಶದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹಾಗಾಗಿ ನಡೆಯುವ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದು.

ಜಂಕ್ ಫುಡ್ ಸೇವನೆ ಮಾಡುತ್ತಿದ್ದೀರಿ
ಆರೋಗ್ಯದ ದೃಷ್ಟಿಯಿಂದಲೂ ಹಾಗೂ ದೇಹದ ತೂಕದ ದೃಷ್ಟಿಯಿಂದಲೂ ಜಂಕ್ ಫುಡ್​ಗಳ ಸೇವನೆ ಒಳ್ಳೆಯದಲ್ಲ. ಬಾಯಿಗೆ ರುಚಿ ಎಂದು ಅತಿಯಾಗಿ ಜಂಕ್​ ಫುಡ್​ಗಳನ್ನು ಸೇವಿಸುವುದರಿಂದಾಗಿ ತೂಕ ಹೆಚ್ಚಳವಾಗುತ್ತದೆ. ನೀವು ಸೇವಿಸುವ ಜಂಕ್​ ಫುಡ್​ಗಳಲ್ಲಿ ಕ್ಯಾಲೊರಿ ಅಂಶ ಹೆಚ್ಚಾಗಿರುವದರಿಂದ ಇದು ನಿಮ್ಮ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನೀವು ದೇಹದ ತೂಕ ಇಳಿಸಿಕೊಳ್ಳಬೇಕು ಎಂಬ ಆಸೆ ಹೊಂದಿದ್ದರೆ ಜಂಕ್​ ಫುಡ್​ಗಳ ಸೇವನೆಯನ್ನು ತ್ಯಜಿಸಿ.

ಇದನ್ನೂ ಓದಿ:

Health Tips: ದೇಹ ತೂಕ ಕಡಿಮೆ ಮಾಡಲು ರಾತ್ರಿ ಈ ಆಹಾರಗಳನ್ನು ಸೇವಿಸಿ

Weight Loss Tips: ತೂಕ ಇಳಿಕೆಗೆ ಕಲ್ಲಂಗಡಿ ಬೀಜದಿಂದ ತಯಾರಿಸಿದ ಲಡ್ಡು ಸೇವಿಸಿ