Coconut Oil Benefits: ಒಮ್ಮೊಮ್ಮೆ ತೆಂಗಿನೆಣ್ಣೆಯಿಂದಲೂ ಅಡುಗೆ ಮಾಡಿ, ಆರೋಗ್ಯ ಎಷ್ಟೊಂದು ಲಾಭ ಇದೆ ಗೊತ್ತೇ?
ನೀವು ಅಡುಗೆ ಎಣ್ಣೆಯನ್ನು ಆಯ್ಕೆ ಮಾಡಿಕೊಳ್ಳುವಾಗ ಯಾವಾಗಲೂ ನಿಮ್ಮ ಆರೋಗ್ಯ, ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಎಣ್ಣೆಯೇ ಬೇಕೆಂದು ಹುಡುಕುತ್ತೀರ. ನೀವು ಕೂಡ ಅದೇ ರೀತಿ ಯೋಚನೆ ಮಾಡುತ್ತಿದ್ದರೆ, ತೆಂಗಿನೆಣ್ಣೆಯು ಉತ್ತಮ ಆಯ್ಕೆಯಾಗಿದೆ.
ನೀವು ಅಡುಗೆ ಎಣ್ಣೆಯನ್ನು ಆಯ್ಕೆ ಮಾಡಿಕೊಳ್ಳುವಾಗ ಯಾವಾಗಲೂ ನಿಮ್ಮ ಆರೋಗ್ಯ, ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಎಣ್ಣೆಯೇ ಬೇಕೆಂದು ಹುಡುಕುತ್ತೀರ. ನೀವು ಕೂಡ ಅದೇ ರೀತಿ ಯೋಚನೆ ಮಾಡುತ್ತಿದ್ದರೆ, ತೆಂಗಿನೆಣ್ಣೆಯು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಇದು ಕ್ಯಾಲ್ಸಿಯಂ, ಪೊಟ್ಯಾಷಿಯಂ, ಮೆಗ್ನೀಷಿಯಂ, ವಿಟಮಿನ್ ಸಿ ಹಾಗೂ ಆಂಟಿಮೈಕ್ರೊಬಿಯಲ್ ಮತ್ತು ಆಂಟಿ ಆಕ್ಸಿಡೆಂಟ್ಗಳನ್ನು ಹೊಂದಿರುತ್ತದೆ. ನಿಮ್ಮ ಆಂತರಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಇವೆಲ್ಲವೂ ಅತ್ಯವಶ್ಯಕ.
ತೆಂಗಿನೆಣ್ಣೆ ಬಳಕೆಯಿಂದಾಗುವ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯಿರಿ
1. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ ತೆಂಗಿನ ಎಣ್ಣೆಯು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿ ಕಂಡುಬರುವ ಪೋಷಕಾಂಶಗಳು ನಿಮ್ಮ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ಅನುಕೂಲ ಮಾಡಿಕೊಡುತ್ತದೆ. 2009 ರಲ್ಲಿ ಅನಿಮಲ್ ಸ್ಟಡೀಸ್ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ತೆಂಗಿನ ಎಣ್ಣೆಯಲ್ಲಿ ಕಂಡುಬರುವ ಸ್ಯಾಚುರೇಟೆಡ್ ಕೊಬ್ಬು ಇನ್ಸುಲಿನ್ ಹೆಚ್ಚಾಗುವುದನ್ನು ತಡೆಯುತ್ತದೆ. ಇದರಿಂದ ದೇಹದಲ್ಲಿ ಸಕ್ಕರೆ ಅಂಶ ನಿಯಂತ್ರಣದಲ್ಲಿರುತ್ತದೆ.
2. ಮೆದುಳಿನ ಆರೋಗ್ಯಕ್ಕೆ ಪ್ರಯೋಜನಕಾರಿ ತೆಂಗಿನೆಣ್ಣೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ತೆಂಗಿನ ಎಣ್ಣೆಯು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆ ಸಂಶೋಧನೆಯಲ್ಲಿ ಕಂಡುಹಿಡಿದಿದೆ, ಇದರಿಂದಾಗಿ ಇದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರೊಂದಿಗೆ ತೆಂಗಿನ ಎಣ್ಣೆಯ ಪೋಷಕಾಂಶಗಳು ಖಿನ್ನತೆಯ ಸಮಸ್ಯೆಗೆ ಸಹಕಾರಿ ಎಂದು ಸಂಶೋಧನೆಯು ಕಂಡುಹಿಡಿದಿದೆ.
3. ಆರೋಗ್ಯಕರ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ತೆಂಗಿನ ಎಣ್ಣೆಯ ನಿಯಮಿತ ಸೇವನೆಯು ನಿಮ್ಮ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ತೆಂಗಿನಕಾಯಿಯಲ್ಲಿ ಕಂಡುಬರುವ ಸಂಯುಕ್ತ ಮಧ್ಯಮ ಸರಪಳಿ ಟ್ರೈಗ್ಲಿಸರೈಡ್‌ಗಳು (MCT) ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಪಬ್ ಮೆಡ್‌ಸೆಂಟ್ರಲ್‌ನ ಸಂಶೋಧನೆಯು ಕಂಡುಹಿಡಿದಿದೆ. ತೆಂಗಿನ ಎಣ್ಣೆಯನ್ನು 8 ವಾರಗಳ ಕಾಲ ಸೇವಿಸಿದರೆ, ಉತ್ತಮ ಫಲಿತಾಂಶವನ್ನು ಪಡೆಯಬಹುದು ಎಂದು ಸಂಶೋಧನೆಯು ಕಂಡುಹಿಡಿದಿದೆ.
4. ಯಕೃತ್ತಿನ ರೋಗವನ್ನು ತಡೆಯುತ್ತದೆ ಯಕೃತ್ತಿನ ಸಮಸ್ಯೆಗಳಿಗೆ ತೆಂಗಿನ ಎಣ್ಣೆ ಉತ್ತಮ ಆಯ್ಕೆಯಾಗಿದೆ. ವೈಲಿ ಆನ್‌ಲೈನ್ ಲೈಬ್ರರಿಯಿಂದ ಇಲಿಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ, ತೆಂಗಿನ ಎಣ್ಣೆಯನ್ನು ಸೇವಿಸಿದ ಇಲಿಗಳು 4 ವಾರಗಳಲ್ಲಿ ತಮ್ಮ ಯಕೃತ್ತಿನ ಆರೋಗ್ಯದಲ್ಲಿ ಉತ್ತಮ ಫಲಿತಾಂಶಗಳನ್ನು ಹೊಂದಿವೆ ಎಂದು ಕಂಡುಬಂದಿದೆ. ನೀವು ಯಾವುದೇ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದರೆ, ನಿಮ್ಮ ವೈದ್ಯರ ಸಲಹೆಯೊಂದಿಗೆ ನೀವು ನಿಯಮಿತವಾಗಿ ಸೇವಿಸಲು ಪ್ರಾರಂಭಿಸಬಹುದು.
5. ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿ ತೆಂಗಿನ ಎಣ್ಣೆಯನ್ನು ದೀರ್ಘಕಾಲದವರೆಗೆ ಮನೆಮದ್ದುಗಳಿಗಾಗಿ ಬಳಸಲಾಗುತ್ತದೆ. ವಿಟಮಿನ್ ಸಿ ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ಇದರಲ್ಲಿ ಕಂಡುಬರುತ್ತವೆ. ಇದರಿಂದಾಗಿ ಇದು ಚರ್ಮ ಮತ್ತು ಕೂದಲನ್ನು ಬಾಹ್ಯವಾಗಿ ಸುಧಾರಿಸುತ್ತದೆ ಮತ್ತು ಆಂತರಿಕವಾಗಿ ಆರೋಗ್ಯಕರವಾಗಿರಿಸುತ್ತದೆ.
6. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ನೀವು ತೂಕ ನಷ್ಟಕ್ಕೆ ಉತ್ತಮ ಅಡುಗೆ ಎಣ್ಣೆಯನ್ನು ಹುಡುಕುತ್ತಿದ್ದರೆ, ತೆಂಗಿನ ಎಣ್ಣೆಯು ಉತ್ತಮ ಆಯ್ಕೆಯಾಗಿದೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳ ಪ್ರಕಾರ, ತೆಂಗಿನ ಎಣ್ಣೆಯ ಸ್ಯಾಚುರೇಟೆಡ್ ಕೊಬ್ಬಿನ ಮಧ್ಯಮ ಸರಣಿ ಟ್ರೈಗ್ಲಿಸರೈಡ್‌ಗಳು (MCT) ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ನಿಮ್ಮ ಮುಂದಿನ ಊಟದಲ್ಲಿ ಕಡಿಮೆ ಕ್ಯಾಲೊರಿಗಳನ್ನು ಸೇವಿಸಲು ಸಹಾಯ ಮಾಡುತ್ತದೆ.
ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ