ಜನವರಿ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಕೊರೊನಾ ಪ್ರಕರಣಗಳು ಹೆಚ್ಚಾಗದೇ ಇರಬಹುದು. ಆದರೆ ಕೊರೊನಾ ಸಾಂಕ್ರಾಮಿಕವು ಇನ್ನೂ ಮುಗಿದಿಲ್ಲ. ಆಗೊಮ್ಮೆ ಈಗೊಮ್ಮೆ ಹೊಸ ರೂಪಾಂತರವು ಜಗತ್ತಿಗೆ ಸವಾಲನ್ನು ಒಡ್ಡುತ್ತಲೇ ಇದೆ. ಪ್ರಸ್ತುತ, ಸ್ಟೆಲ್ತ್ ಓಮಿಕ್ರಾನ್ ಎಂದು ಕರೆಯಲ್ಪಡುವ ಓಮಿಕ್ರಾನ್‌ನ BA.2 (Omicron BA 2) ಉಪವಿಭಾಗವು ಪ್ರಪಂಚದಾದ್ಯಂತ ಹರಡುತ್ತಿರುವ ಪ್ರಬಲವಾದ ತಳಿಯಾಗಿದೆ. ಈ ರೂಪಾಂತರಿ ತಳಿಯಿಂದ ಉಂಟಾಗುವ ರೋಗ ಲಕ್ಷಣಗಳು ಮಾಮೂಲಿ ಕೆಲವು ಕಾಲದಲ್ಲಿ ಕಂಡುಬರುವ ಅಲರ್ಜಿಗಳಂತೆಯೇ ಇರುತ್ತದೆ. ಹೀಗಾಗಿ ಅಲರ್ಜಿ ಹಾಗೂ ಕೊರೊನಾದ ವ್ಯತ್ಯಾಸ ತಿಳಿಯದೇ ಇರಬಹುದು. ಸಾಮಾನ್ಯವಾಗಿ ಈ ಸಮಯದಲ್ಲಿ (ವಸಂತಕಾಲ) ಶೀತ, ನೆಗಡಿಗೆ ಸಂಬಂಧಿಸಿದಂತೆ ಅಲರ್ಜಿಗಳಾಗುತ್ತವೆ. ಕೊರೊನಾ ಸೋಂಕು ಹಾಗೂ ಈ ಅಲರ್ಜಿ ಎರಡೂ ಉಸಿರಾಟದ ಸಮಸ್ಯೆಗೆ ಸಂಬಂಧಿಸಿವೆ.
ಇವುಗಳ ಕೆಲವು ಸಾಮಾನ್ಯ ಲಕ್ಷಣಗಳು ಹೀಗಿವೆ:
ಕೆಮ್ಮು
ತಲೆನೋವು
ಸುಸ್ತು
ಗಂಟಲು ಕೆರತ
ಸೀನು
ತುರಿಕೆ ಅಥವಾ ನೀರು ತುಂಬಿದ ಕಣ್ಣುಗಳು
ನೆಗಡಿ, ಮೂಗು ಕಟ್ಟಿಕೊಳ್ಳುವುದು
ನೀವೇಕೆ ಪರೀಕ್ಷೆ ಮಾಡಿಸಿಕೊಳ್ಳಬೇಕು?
ಕೊರೊನಾ ಹಾಗೂ ಅಲರ್ಜಿಗಳ ಲಕ್ಷಣಗಳು ಬಹುತೇಕ ಒಂದೇ ಆಗಿರುವುದರಿಂದ ಅವುಗಳ ನಡುವೆ ವ್ಯತ್ಯಾಸವನ್ನು ಗುರುತಿಸುವುದು ಕಷ್ಟಕರವಾಗಬಹುದು. ಅಲ್ಲದೆ, ಓಮಿಕ್ರಾನ್ ತಳಿಯು ಸೌಮ್ಯವಾದ ರೋಗಲಕ್ಷಣಗಳನ್ನು ಉಂಟುಮಾಡಿದರೂ ಕೂಡ ಚಿಕಿತ್ಸೆ ಪಡೆಯದಿದ್ದಲ್ಲಿ ದೀರ್ಘಾವಧಿಯಲ್ಲಿ ಸಮಸ್ಯೆಯಾಗಬಹುದು. ರೋಗಕ್ಕೆ ಸಂಬಂಧಿಸಿದ ಅಪಾಯಗಳನ್ನು ತಗ್ಗಿಸಲು, ತಜ್ಞರು ನೀವು ವಸಂತಕಾಲದಲ್ಲಿ ಪರೀಕ್ಷಿಸಬೇಕಾದ ಮೂರು ಸಂದರ್ಭಗಳನ್ನು ಪಟ್ಟಿ ಮಾಡಿದ್ದಾರೆ.
ಹೆಚ್ಚು ಜನ ಸೇರುವ ಸ್ಥಳಕ್ಕೆ ನೀವು ತೆರಳಿದರೆ:
ಈಗ ರೆಸ್ಟೋರೆಂಟ್‌ಗಳು, ಸಿನಿಮಾ ಹಾಲ್‌ಗಳು ಮತ್ತು ಇತರ ಎಲ್ಲಾ ಮನರಂಜನೆಯ ಕ್ಷೇತ್ರಗಳು ಪುನರಾರಂಭಗೊಂಡಿವೆ. ಹೆಚ್ಚಿನ ಜನರು ವಾರಾಂತ್ಯದಲ್ಲಿ ಮನೆಯಿಂದ ಹೊರಬರುತ್ತಾರೆ. ಹೊರಗೆ ಹೋದರೂ ಕೂಡ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸಲು ಮರೆಯಬೇಡಿ. ಸಾಧ್ಯವಾದಷ್ಟು ಜನನಿಬಿಡ ಸ್ಥಳಗಳನ್ನು ತಪ್ಪಿಸಿ. ಪ್ರಸ್ತುತ ಜನಸಂದಣಿ ಸೇರುವ ಸ್ಥಳದಲ್ಲಿ ಜನರು ಮಾಸ್ಕ್ ಧರಿಸುತ್ತಿಲ್ಲ, ಆದ್ದರಿಂದ ನೀವು ಅಂತಹ ಸ್ಥಳಕ್ಕೆ ಭೇಟಿ ನೀಡಿದರೆ ಮನೆಗೆ ಮರಳಿದ ನಂತರ ಪರೀಕ್ಷಿಸಿಕೊಳ್ಳುವುದು, ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ.
ಹೈರಿಸ್ಕ್ ಜನರನ್ನು ಭೇಟಿಯಾಗುವ ಮುನ್ನ:
ವಯಸ್ಸಾದವರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರು ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ ಸಾಂಕ್ರಾಮಿಕ ರೋಗಗಳಿಗೆ ಹೆಚ್ಚು ಒಳಗಾಗುತ್ತಾರೆ. ಆದ್ದರಿಂದ, ನಿಮ್ಮಿಂದ ಅವರಿಗೆ ವೈರಸ್ ಹರಡುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರನ್ನು ಭೇಟಿ ಮಾಡುವ ಮೊದಲು ಪರೀಕ್ಷಿಸಿಕೊಳ್ಳಿ.
ನಿಮಗೆ ಯಾವುದಾದರೂ ಲಕ್ಷಣಗಳು ಕಂಡುಬಂದರೆ:
ಔಷಧಿಗಳನ್ನು ತೆಗೆದುಕೊಂಡ ನಂತರವೂ 2-3 ದಿನಗಳಲ್ಲಿ ಉಸಿರಾಟದ ವ್ಯವಸ್ಥೆ ಉತ್ತಮವವಾಗದೇ ನೀವು ರೋಗ ಲಕ್ಷಣ ಹೊಂದಿದ್ದರೆ ಕೊರೊನಾ ಟೆಸ್ಟ್ (ಆರ್ಟಿಪಿಸಿಆರ್) ಮಾಡಿಸಿಕೊಳ್ಳುವುದು ಉತ್ತಮ. ರೋಗಲಕ್ಷಣಗಳು ಸೌಮ್ಯವಾಗಿರುತ್ತವೆ ಎಂಬ ಕಾರಣದಿಂದಾಗಿ ಪರಿಸ್ಥಿತಿಯನ್ನು ನಿರ್ಲಕ್ಷಿಸಬೇಡಿ. ಇದು ಅಪಾಯ ಹೆಚ್ಚಿಸಬಹುದು.
ಇದನ್ನೂ ಓದಿ: Spiritual Health Practices: ಯಾವುದೇ ಕಾಯಿಲೆ ಓಡಿಸುವ ಪುರಾತನ, ಸಾರ್ವಕಾಲಿಕ, ಸರಳ ಚಿಕಿತ್ಸಾ ಸೂತ್ರಗಳು ಇಲ್ಲಿವೆ
Published On - 8:26 am, Sat, 9 April 22