Spiritual Health Practices: ಯಾವುದೇ ಕಾಯಿಲೆ ಓಡಿಸುವ ಪುರಾತನ, ಸಾರ್ವಕಾಲಿಕ, ಸರಳ ಚಿಕಿತ್ಸಾ ಸೂತ್ರಗಳು ಇಲ್ಲಿವೆ

ಪೂರ್ವಾಪರ ವಿಮರ್ಶೆ ಹಾಗೂ ವಿವೇಕಗಳನ್ನು ನಿಮ್ಮದಾಗಿಸಿಕೊಂಡಲ್ಲಿ ಎಂಥ ವಿಷಮ ಪರಿಸ್ಥಿತಿಯನ್ನೂ, ಸಂದಿಗ್ಧ ಸನ್ನಿವೇಶಗಳಲ್ಲೂ ಯಶಸ್ಸು ನಿಮ್ಮದಾಗಬಹುದು. ಎಂಥ ವಿಷಮ ಪರಿಸ್ಥಿತಿಯನ್ನೂ ಸರಿಪಡಿಸುವ ನವಶಕ್ತಿ ಸಂಜೀವಿನಿಯ ರಸಭರಿತ ಟಾನಿಕ್ ಇದಲ್ಲದೆ ಬೇರೆ ಇರದು.

Spiritual Health Practices: ಯಾವುದೇ ಕಾಯಿಲೆ ಓಡಿಸುವ ಪುರಾತನ, ಸಾರ್ವಕಾಲಿಕ, ಸರಳ ಚಿಕಿತ್ಸಾ ಸೂತ್ರಗಳು ಇಲ್ಲಿವೆ
ಯಾವುದೇ ಕಾಯಿಲೆಯನ್ನು ಓಡಿಸುವ ಪುರಾತನ, ಸಾರ್ವಕಾಲಿಕ ಸರಳ ಚಿಕಿತ್ಸಾ ಸೂತ್ರಗಳು ಇಲ್ಲಿವೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Apr 07, 2022 | 6:06 AM

ನೀವು ಶಿವಲಿಂಗದ ಮೇಲಿರುವ ಧಾರಾಪಾತ್ರೆಯನ್ನು ನೋಡಿದ್ದೀರಾ? ಆದರಿಂದ ಹನಿ ಹನಿಯಾಗಿ ಬೀಳುವ ಜಲದಂತೆ ದಿನ ನಿತ್ಯವೂ ಹಟ ತೊಟ್ಟು ಈ ಕೆಳಗಿನ ಭಾವನೆಗಳನ್ನು ನಿಮ್ಮದಾಗಿಸಿಕೊಂಡರೆ ಮನಸ್ಸು ಪ್ರಸನ್ನವಾಗಿ ಇರಲು ಸಾಧ್ಯ. ಯಾವುದೇ ಟಾನಿಕ್ಕು, ಮಾತ್ರೆಗಳಿಗಿಂತ ಇದು ಹೆಚ್ಚು ಆರೋಗ್ಯಕಾರಿ. ಸದ್ಭಾವನೆಗಳಿಂದ ಆರೋಗ್ಯಕ್ಕೆ ಎಂದಿಗೂ ಕೆಡಕು ಆಗದು (Everyday Spiritual Health Practices).

  1. ಜೀವಿಗಳಲ್ಲಿ ಅನುಕಂಪ, ದಯೆ, ಸಹಾನುಭೂತಿಗಳನ್ನು ಬೆಳೆಸಿ ಉಳಿಸಿಕೊಂಡಲ್ಲಿ ತನ್ಮೂಲಕ ಆಂತರಿಕ ಸುಖ ಸಂತೋಷ ಹೆಚ್ಚುತ್ತದೆ ಮಾತ್ರವಲ್ಲ, ಎಲ್ಲ ಜೀರ್ಣರಸಗಳ ನಿರಾತಂಕ ಉತ್ಪಾದನೆಯಿಂದ ಸಂಬಂಧಿತ ರೋಗರುಜಿನಗಳು ದೂರವಾಗುತ್ತವೆ.
  2. ಮಾತು ಕಡಿಮೆ – ಜಾಸ್ತಿ ದುಡಿಮೆ ಎಂಬ ತತ್ವದ ಅನ್ವಯ ಅನವಶ್ಯಕ ಮಾತುಕತೆ, ಕ್ಷುಲ್ಲಕ ವ್ಯವಹಾರಗಳನ್ನು ನಿಲ್ಲಿಸಿ ಕಾರ್ಯೋನ್ಮುಖರಾದಲ್ಲಿ ಆಸ್ಪತ್ರೆಯ ಒಳ ರೋಗಿಯಾಗಿ ನರಳುವ ಪ್ರಮೇಯವೇ ಬಾರದು, ಬಂಗಾರದ ಬದುಕು ಕನ್ನಡಿಯೊಳಗಿನ ಗಂಟಿನಂತೆ ಎಂದೆಂದಿಗೂ ಆಗದು.
  3. ಪರೋಪಕಾರ ಗುಣ, ಉದಾರತೆ ಹಾಗೂ ಸಹಕಾರ ಮನೋಭಾವವನ್ನು ದೇಹದ ಕಣಕಣದಲ್ಲೂ ತುಂಬಿಕೊಂಡು, ಹೃದಯದ ಮಿಡಿತದೊಂದಿಗೆ ಪ್ರತಿಸ್ಪಂದಿಸುತ್ತಿದ್ದರೆ, ಕಳ್ಳತನ, ಕೊಲೆ, ಸುಲಿಗೆ, ಅನ್ಯಾಯ, ಅನಾಚಾರಗಳ ಯಾವ ಸಾಂಕ್ರಾಮಿಕ ರೋಗವೂ ಬಂದು ತಟ್ಟದು.
  4. ಬಿಗುಮಾನವನ್ನು ತೊರೆದು ನಗುವನ್ನು ಹೊರಸೂಸುತ್ತಾ, ಆತ್ಮವಿಶ್ವಾಸದ ಕೆಚ್ಚಿನಿಂದ ಮುನ್ನಡೆದಲ್ಲಿ ಪರಸ್ಪರ ವ್ಯಷಮ್ಯದ, ವಿರೋಧದ ಯಾವುದೇ ಗಾಯವನ್ನೂ ಬೇಗ ವಾಸಿಮಾಡಬಹುದು.
  5. ತಾಳಿದವನು ಬಾಳಿಯಾನು ಎಂಬುದನ್ನು ನೆಚ್ಚಿ ಸಹನೆಯನ್ನು ಹೆಚ್ಚಿಸಿಕೊಂಡು ವರ್ತಿಸಿದಲ್ಲಿ ದೂರದೃಷ್ಟಿಯೊಂದಿಗೆ ಅಂತದೃಷ್ಟಿಯೂ ವೃದ್ಧಿಸಿ ಬಾಳು ಬೆಳಗುತ್ತಾ ಹೋದೀತು, ಜೀವನ ಜೇನಾದೀತು!
  6. ಪೂರ್ವಾಪರ ವಿಮರ್ಶೆ ಹಾಗೂ ವಿವೇಕಗಳನ್ನು ನಿಮ್ಮದಾಗಿಸಿಕೊಂಡಲ್ಲಿ ಎಂಥ ವಿಷಮ ಪರಿಸ್ಥಿತಿಯನ್ನೂ, ಸಂದಿಗ್ಧ ಸನ್ನಿವೇಶಗಳಲ್ಲೂ ಯಶಸ್ಸು ನಿಮ್ಮದಾಗಬಹುದು. ಎಂಥ ವಿಷಮ ಪರಿಸ್ಥಿತಿಯನ್ನೂ ಸರಿಪಡಿಸುವ ನವಶಕ್ತಿ ಸಂಜೀವಿನಿಯ ರಸಭರಿತ ಟಾನಿಕ್ ಇದಲ್ಲದೆ ಬೇರೆ ಇರದು.
  7. ದಿನನಿತ್ಯವೂ ಮಾಡುವ ಕ್ರಮಬದ್ಧ ಪ್ರಾರ್ಥನೆಯಿಂದ ದೇಹದ ಸರ್ವೋತೋಮುಖ ಏಳಿಗೆ ಸುಲಭ ಸಾಧ್ಯವಾಗಿ, ಆಂತರಿಕ ಶಕ್ತಿ ಚ್ಯೆತನ್ಯ ಹಾಗು ಸ್ಥಿರತೆ ಹೆಚ್ಚುತ್ತದೆ. ತನ್ಮೂಲಕ ಇತರರಲ್ಲೂ ಈ ಹೊಸತನ ಹಾಗೂ ಸ್ಪೂರ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಪುಟಿದೇಳುತ್ತದೆ. (ಬರಹ – ವಾಟ್ಸಪ್​ ಸಂದೇಶ)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್