Pregnancy: ಗರ್ಭಾವಸ್ಥೆಯಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ?

| Updated By: ನಯನಾ ರಾಜೀವ್

Updated on: Jun 14, 2022 | 4:20 PM

ಗರ್ಭಾವಸ್ಥೆ ಎಂಬುದು ದೇವರು ಕೊಟ್ಟ ವರವಿದ್ದಂತೆ, ಪ್ರತಿ ಕ್ಷಣವೂ ಖುಷಿಯಿಂದಿರಬೇಕು. ಗರ್ಭಾವಸ್ಥೆಯಲ್ಲಿ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ.

Pregnancy: ಗರ್ಭಾವಸ್ಥೆಯಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ?
Pregnant
Follow us on

ಗರ್ಭಾವಸ್ಥೆ ಎಂಬುದು ದೇವರು ಕೊಟ್ಟ ವರವಿದ್ದಂತೆ, ಪ್ರತಿ ಕ್ಷಣವೂ ಖುಷಿಯಿಂದಿರಬೇಕು. ಗರ್ಭಾವಸ್ಥೆಯಲ್ಲಿ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಗರ್ಭಿಣಿಯರ ಮಾನಸಿಕ ಆರೋಗ್ಯವನ್ನು ಎಂದೂ ನಿರ್ಲಕ್ಷಿಸಬಾರದು, ಕೇವಲ ಗರ್ಭಾವಸ್ಥೆಯಲ್ಲಿ ಮಾತ್ರವಲ್ಲ ಮಗುವನ್ನು ಪಡೆದುಕೊಳ್ಳಬೇಕು ಎಂದು ನಿರ್ಧರಿಸಿದಾಗಿನಿಂದಲೂ ಹರಿಗೆ ಬಳಿಕವೂ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಬೇಕು.

ಮಾನಸಿಕ ಆರೋಗ್ಯವನ್ನು ನೀವು ಕಾಪಾಡಿಕೊಂಡಿದ್ದರೆ ಹೆರಿಗೆ ಸುಸೂತ್ರವಾಗಿ ಆಗುವುದರ ಜತೆಗೆ ಮಗುವು ಆರೋಗ್ಯದಾಯಕವಾಗಿರುತ್ತದೆ.
ಗರ್ಭಾವಸ್ಥೆಯಲ್ಲಿ ಕಾಡುವ ಸಮಸ್ಯೆಗಳು
ಮಧುಮೇಹ
ಹೈಪರ್​ಟೆನ್ಷನ್
ಆತಂಕ
ಖಿನ್ನತೆ
ಥೈರಾಯ್ಡ್​
ಮೂಲವ್ಯಾಧಿ
ಪೌಷ್ಠಿಕಾಂಶದ ಕೊರತೆ
ಅನಿಮಿಯಾ


ಸೇರಿದಂತೆ ಹಲವು ಆರೋಗ್ಯ ಸಂಬಂಧಿತ ಸಮಸ್ಯೆಗಳು ಕಾಡುತ್ತವೆ, ನೀವು ಆರೋಗ್ಯಯುತ ಮಗುವಿಗೆ ಜನ್ಮ ನೀಡಬೇಕೆಂದಿದ್ದರೆ ನಿಮ್ಮ ಮಾನಸಿಕ ಆರೋಗ್ಯವನ್ನು ಸರಿಯಾಗಿಟ್ಟುಕೊಳ್ಳಬೇಕು.

ಉತ್ತಮ ಆಹಾರ ಸೇವಿಸಿ: ಗರ್ಭಾವಸ್ಥೆಯಲ್ಲಿ ನೀವು ತಿನ್ನುವ ಆಹಾರದ ಮೇಲೆ ಮಗುವಿನ ಬೆಳವಣಿಗೆ ನಿಂತಿರುತ್ತದೆ. ತರಕಾರಿ, ಹೆಚ್ಚು ಕ್ಯಾನ್ಶಿಯಂ ಇರುವ ಆಹಾರಗಳು, ಫೋಲಿಕ್ ಆ್ಯಸಿಡ್, ಐರನ್​ಯುಕ್ತ ಆಹಾರವನ್ನು ಸೇವಿಸಬೇಕು. ಕೊಬ್ಬು ಹೆಚ್ಚಿರುವ, ಎಣ್ಣೆಯ ಪದಾರ್ಥಗಳು, ಕರಿದ ಆಹಾರಗಳನ್ನು ತಿನ್ನಬಾರದು. ಹೆಚ್ಚು ನೀರನ್ನು ಕುಡಿಯಬೇಕು. ಧೂಮಪಾನ, ಮದ್ಯಪಾನವನ್ನು ನಿಲ್ಲಿಸಬೇಕು.

ಖಿನ್ನತೆ ಬಗ್ಗೆ  ಎಚ್ಚರವಿರಲಿ: ಗರ್ಭಾವಸ್ಥೆ ಹಾಗೂ ಹೆರಿಗೆ ಬಳಿಕವೂ ಮಹಿಳೆಯು ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಂತಹ ಸಂದರ್ಭದಲ್ಲಿ ವೈದ್ಯರ ಸಲಹೆ ಪಡೆದು ಕೌನ್ಸೆಲಿಂಗ್​ಗೆ ಒಳಗಾಗುವುದು ಒಳಿತು.

ರೆಗ್ಯುಲರ್ ಚೆಕ್​ಅಪ್: ರೆಗ್ಯುಲರ್ ಚೆಕ್​ಅಪ್ ಮಾಡಿಸಿ, ಮಗುವಿನ ತೂಕ, ಆರೋಗ್ಯದ ಬಗ್ಗೆ ವೈದ್ಯರಿಂದ ಸಲಹೆ ಪಡೆಯಿರಿ. ಉತ್ತಮ ನಿದ್ದೆ ಮಾಡಿ,

ಒತ್ತಡದಿಂದ ದೂರವಿರಿ: ಜ್ವರ ಬರುವ ಸಾಧ್ಯತೆಗಳೂ ಹೆಚ್ಚಿದ್ದು, ಮಗು ಹಾಗೂ ತಾಯಿ ಇಬ್ಬರಿಗೂ ಇದರಿಂದ ತೊಂದರೆಯುಂಟಾಗಬಹುದು.
ನಿತ್ಯ ವ್ಯಾಯಾಮ ಮಾಡಿ: ಗರ್ಭಿಣಿಯರಿಗೆಂದೇ ಕೆಲವು ಆಸನಗಳಿವೆ, ಈ ಆಸನಗಳನ್ನು ಮಾಡುವುದರಿಂದ ಸಹಜ ಹೆರಿಗೆಯಾಗಲಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 4:20 pm, Tue, 14 June 22