ಸ್ಮೂದಿ ಅಥವಾ ಜ್ಯೂಸ್​ಗಳಲ್ಲಿ ಹಣ್ಣು, ತರಕಾರಿಗಳ ಮಿಶ್ರಣ ಮಾಡಬಹುದೇ?

| Updated By: ನಯನಾ ರಾಜೀವ್

Updated on: Jun 10, 2022 | 12:45 PM

ನೀವು ನಿತ್ಯ ರುಚಿ ರುಚಿಯಾದ ಸ್ಮೂದಿ ಕುಡಿಯುತ್ತೀರಾ ಹಾಗಾದರೆ ಅದರಲ್ಲಿ ತರಕಾರಿ ಹಾಗೂ ಹಣ್ಣುಗಳ ಮಿಶ್ರಣ ಮಾಡಬೇಡಿ, ಆರೋಗ್ಯ ಸಮಸ್ಯೆಗಳು ಎದುರಾದೀತು.

ಸ್ಮೂದಿ ಅಥವಾ ಜ್ಯೂಸ್​ಗಳಲ್ಲಿ ಹಣ್ಣು, ತರಕಾರಿಗಳ ಮಿಶ್ರಣ ಮಾಡಬಹುದೇ?
Smoothies
Follow us on

ನೀವು ನಿತ್ಯ ರುಚಿ ರುಚಿಯಾದ ಸ್ಮೂದಿ ಕುಡಿಯುತ್ತೀರಾ ಹಾಗಾದರೆ ಅದರಲ್ಲಿ ತರಕಾರಿ ಹಾಗೂ ಹಣ್ಣುಗಳ ಮಿಶ್ರಣ ಮಾಡಬೇಡಿ, ಆರೋಗ್ಯ ಸಮಸ್ಯೆಗಳು ಎದುರಾದೀತು. ಜನರು ತಮ್ಮ ಆರೋಗ್ಯ ಹಾಗೂ ಫೆಟ್​ನೆಸ್​ಗಳಿಗೆ ಹೆಚ್ಚು ಒತ್ತು ನೀಡುತ್ತಾರೆ, ಸ್ಮೂದಿ ಅಥವಾ ಜ್ಯೂಸ್​ಗಳು ಸಾಕಷ್ಟು ಪೋಷಕಾಂಶಗಳು, ವಿಟಮಿನ್ ಹಾಗೂ ಆಂಟಿಆಕ್ಸಿಡೆಂಟ್ಸ್​ಗಳನ್ನು ಒಳಗೊಂಡಿದೆ. ಜತೆಗೆ ತುಂಬಾ ರುಚಿಕರವಾಗಿಯೂ ಇರುತ್ತದೆ.

ಆದರೆ ಸ್ಮೂದಿಯಲ್ಲಿ ಎಂದೂ ಹಣ್ಣು ಹಾಗೂ ತರಕಾರಿಗಳನ್ನು ಮಿಶ್ರಣ ಮಾಡಬೇಡಿ ಎಂದು ವೈದ್ಯರು ಸಲಹೆ ನಿಡುತ್ತಾರೆ. ಹೀಗೆ ಮಾಡುವುದರಿಂದ ಒಂದೊಮ್ಮೆ ನಿಮ್ಮ ಕರುಳು ತುಂಬಾ ಸೆನ್ಸಿಟೀವ್ ಆಗಿದ್ದರೆ, ವಾಕರಿಕೆ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಎದುರಿಸಬಹುದು.

ಆದರೆ ನೀವು ಸೇಬುಹಣ್ಣು ಅಥವಾ ಬೆರಿಗಳನ್ನು ಬಳಕೆ ಮಾಡಬಹುದು ಅದರಿಂದ ಸಾಕಷ್ಟು ಪೋಷಕಾಂಶಗಳು ನಿಮಗೆ ದೊರೆಯಲಿದೆ.

ಪೌಷ್ಠಿಕಾಂಶಯುಕ್ತ ಹಣ್ಣುಗಳಿವು

ಸೇಬು: ಜನರು ಹೆಚ್ಚು ಇಷ್ಟಪಡುವ ಹಣ್ಣಾಗಿದ್ದು, ಕರುಳು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಪೆಕ್ಟಿನ್​ ಮತ್ತು ಫೈಬರ್​ನಿಂದ ಸೇಬುಹಣ್ಣು ರಚನೆಯಾಗಿದೆ. ನಿಮ್ಮ ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು, ಜೊತೆಗೆ ಉತ್ತಮ ಜೀರ್ಣಕ್ರಿಯೆ ಹೊಂದಲು ಸೇಬು ಸಹಾಯಕಾರಿ.

ಬಾಳೆಹಣ್ಣು: ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಪ್ರಮಾಣ ಹೆಚ್ಚಾಗಿರುವುದರಿಂದಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣು ಸೇವನೆಯಿಂದ ದೇಹದಲ್ಲಿನ ಖನಿಜಗಳ ಸಮತೋಲನವನ್ನು ಏರುಪೇರು ಮಾಡುತ್ತದೆ. ಬಾಳೆಹಣ್ಣಿನಲ್ಲಿ ಹೆಚ್ಚು ಪೊಟ್ಯಾಶಿಯಂ ಅಂಶವಿರುತ್ತದೆ. ವಿಟಮಿನ್​ ಬಿ6 ಶೇ.27, ವಿಟಮಿನ್​ ಸಿ ಶೇ.12 ಹಾಗೂ ಶೇ. 8ರಷ್ಟು ಮೆಗ್ನೇಶಿಯಂ ಅಂಶವನ್ನು ಬಾಳೆಹಣ್ಣು ಸೇವನೆಯಿಂದ ಪಡೆಯಬಹುದು.

ಕಿತ್ತಳೆ: ಕಿತ್ತಳೆ ಹಣ್ಣನ್ನು ಸೇವಿಸುವುದರಿಂದ ಉರಿಯೂತ, ರಕ್ತದೊತ್ತಡ, ಕೊಲೆಸ್ಟ್ರಾಲ್​ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಬಹುದಾಗಿದೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ.

ಬೆರಿ ಹಣ್ಣು: . ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ದೇಹಕ್ಕೆ ಹಾನಿ ಉಂಟು ಮಾಡುವ ಜೀವಕಣಗಳ ವಿರುದ್ಧ ಹೋರಾಡುತ್ತದೆ. ಬೆರಿ ಹಣ್ಣುಗಳು ನೀಲಿ-ನೇರಳೆ ಬಣ್ಣದಿಂದ ಕೂಡಿರುತ್ತದೆ ಹೃದಯರೋಗ, ಅಧಿಕ ತೂಕ, ಬೊಜ್ಜು, ರಕ್ತದೊತ್ತಡದಂತಹ ಸಮಸ್ಯೆಗೆ ಉತ್ತಮ ಪರಿಹಾರ.

ಡ್ರ್ಯಾಗನ್ ಫ್ರೂಟ್: ಆಗ್ನೆಯ ಏಷ್ಯಾದ ಜನರು ಡ್ರ್ಯಾಗನ್ ಫ್ರೂಟ್​ನಿಂದ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಬಹುದು ಎಂದು ಪರಿಗಣಿಸಿದ್ದಾರೆ. ಡ್ರ್ಯಾಗನ್​ ಹಣ್ಣಿನಲ್ಲಿ ಫೈಬರ್​, ಕಬ್ಬಿಣ, ಮೆಗ್ನೀಶಿಯಂ ಮತ್ತು ವಿಟಮಿನ್​ ಸಿ ಮತ್ತು ಇ ಅಂಶಗಳಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ