Weight Loss: ತೂಕ ಇಳಿಸುವವರು ಚಹಾ ಸೇವಿಸಬಹುದೇ?

|

Updated on: Feb 28, 2024 | 4:28 PM

ಚಹಾ ಸೇವಿಸುವುದರಿಂದ ಹಲವರಿಗೆ ಮೂಡ್ ಫ್ರೆಶ್ ಆಗುತ್ತದೆ, ತಲೆನೋವು ನಿವಾರಣೆಯಾಗುತ್ತದೆ. ದಿನವೂ 10 ಲೋಟಕ್ಕಿಂತ ಹೆಚ್ಚು ಚಹಾ ಕುಡಿಯುವವರು ಕೂಡ ಇದ್ದಾರೆ. ಆದರೆ, ಅತಿಯಾದ ಚಹಾ ಸೇವನೆಯಿಂದ ಅಡ್ಡಪರಿಣಾಮಗಳು ಕೂಡ ಉಂಟಾಗುತ್ತವೆ. ನೀವೇನಾದರೂ ತೂಕ ಇಳಿಸಲು ಪ್ರಯತ್ನಿಸುತ್ತಿದ್ದರೆ ಚಹಾ ಸೇವನೆಯನ್ನು ನಿಲ್ಲಿಸುವುದೇ ಉತ್ತಮ.

Weight Loss: ತೂಕ ಇಳಿಸುವವರು ಚಹಾ ಸೇವಿಸಬಹುದೇ?
ಚಹಾ
Image Credit source: iStock
Follow us on

ಚಹಾ (Tea) ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ ಎಂಬುದು ಸತ್ಯ. ಸುವಾಸನೆಭರಿತ ಚಹಾ ಹಲವು ರೀತಿಯಲ್ಲಿ ನಮ್ಮ ಆರೋಗ್ಯವನ್ನು ಹೆಚ್ಚಿಸುತ್ತದೆ. ಶತಮಾನಗಳಿಂದ ಮುಂಜಾನೆಯ ಪಾನೀಯವಾಗಿ ಜಗತ್ತಿನಾದ್ಯಂತ ಟೀಯನ್ನು ಬಳಸಲಾಗುತ್ತಿದೆ. ಆದರೆ, ನೀವೇನಾದರೂ ಫಿಟ್​ನೆಸ್​ (Fitness Tips) ಬಗ್ಗೆ ಯೋಚಿಸುತ್ತಿದ್ದರೆ, ತೂಕ ಇಳಿಸಿಕೊಳ್ಳಲು (Weight Loss) ಪ್ರಯತ್ನಿಸುತ್ತಿದ್ದರೆ ಚಹಾ ಸೇವಿಸುವುದನ್ನು ಕಡಿಮೆ ಮಾಡುವುದು ಒಳ್ಳೆಯದು.

ಈ ಬಗ್ಗೆ ಪೌಷ್ಟಿಕತಜ್ಞರಾದ ಲೀಮಾ ಮಹಾಜನ್ ಇನ್​ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದಾರೆ. ಹಾಲಿನ ಕೊಬ್ಬಿನಂಶವನ್ನು ಅವಲಂಬಿಸಿ ಒಂದು ಕಪ್ ಚಹಾವು 33-66 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಪೂರ್ಣ ಕೆನೆಯ ಬದಲು ಕೆನೆರಹಿತ ಹಾಲನ್ನು ಬಳಸುವುದರಿಂದ ಕ್ಯಾಲೊರಿಗಳನ್ನು ಅರ್ಧದಷ್ಟು ಕಡಿತಗೊಳಿಸಬಹುದು ಎಂದು ಅವರು ವಿವರಿಸಿದ್ದಾರೆ.

ಅನೇಕ ಜನರು ತಮ್ಮ ಚಹಾದಲ್ಲಿ ಹೆಚ್ಚು ಸಕ್ಕರೆಯನ್ನು ಸೇರಿಸುತ್ತಾರೆ. ಇದು ತೂಕ ಹೆಚ್ಚಾಗಲು ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ. 1 ಟೀಸ್ಪೂನ್ ಸಕ್ಕರೆಯಲ್ಲಿ 19 ಕ್ಯಾಲೊರಿಗಳಿವೆ, 1 ಟೀಸ್ಪೂನ್ ಪ್ಯಾಕಿಂಗ್ 48 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಪ್ರತಿ ಕಪ್‌ಗೆ 20 ಕ್ಯಾಲೋರಿಗಳ ವ್ಯತ್ಯಾಸವು ಅತ್ಯಲ್ಪವೆಂದು ತೋರುತ್ತದೆಯಾದರೂ, ಪ್ರತಿ ಟೀಚಮಚ ಸಕ್ಕರೆಯಿಂದ ಹೆಚ್ಚುವರಿ ಕ್ಯಾಲೊರಿಗಳನ್ನು ಪರಿಗಣಿಸಿದರೆ ಇದು ಎಷ್ಟು ಹೆಚ್ಚುವರಿಯೆಂದು ತಿಳಿಯುತ್ತದೆ ಎಂದು ಅವರು ಹೇಳಿದ್ದಾರೆ. ದಿನಕ್ಕೆ ಸಕ್ಕರೆಯ ಪ್ರಮಾಣವನ್ನು 10 ಗ್ರಾಂಗೆ ಇಳಿಸುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Milk Tea: ಪ್ರತಿದಿನ ಹಾಲು ಹಾಕಿದ ಟೀ ಕುಡಿಯುವ ಮುನ್ನ ಈ ಬಗ್ಗೆಯೂ ಯೋಚಿಸಿ

ಬಹಳಷ್ಟು ಭಾರತೀಯರು ತಮ್ಮ ಚಹಾದ ಜೊತೆಗೆ ರಸ್ಕ್‌ಗಳು, ಬಿಸ್ಕತ್ತುಗಳು ಮತ್ತು ಕುರುಕುಲು ತಿಂಡಿಯನ್ನು ಸೇವಿಸುತ್ತಾರೆ. ಇವೆಲ್ಲವೂ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳಾಗಿವೆ. 100 ಗ್ರಾಂ ರಸ್ಕ್ 445 ಕ್ಯಾಲೊರಿಗಳನ್ನು ಮತ್ತು 30 ಗ್ರಾಂ ಸಕ್ಕರೆಯನ್ನು ನೀಡುತ್ತದೆ. 100 ಗ್ರಾಂ ಭುಜಿಯಾ ಸುಲಭವಾಗಿ 500 ಕ್ಯಾಲೊರಿಯನ್ನು ಹೊಂದಿರುತ್ತದೆ. ಆದ್ದರಿಂದ, ಈ ಪದಾರ್ಥಗಳ ದೈನಂದಿನ ಸೇವನೆಯನ್ನು ಮಿತಿಗೊಳಿಸಬೇಕು.

ಆದರೂ ನೀವು ಚಹಾವನ್ನು ಸೇವಿಸಲು ಬಯಸಿದರೆ, ಪೌಷ್ಟಿಕತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ.

1. ಚಹಾ ಸೇವನೆಯನ್ನು ಬಿಡಲು ಆಗದಿದ್ದರೆ ದಿನಕ್ಕೆ 2 ಕಪ್​ಗಿಂತ ಜಾಸ್ತಿ ಸೇವಿಸಬೇಡಿ. ಚಹಾದ ಜೊತೆ ಬೇರೇನನ್ನೂ ತಿನ್ನಬೇಡಿ.

2. ಊಟದೊಂದಿಗೆ ಚಹಾವನ್ನು ಸೇವಿಸಬೇಡಿ. ನೀವು ಸೀಡ್ಸ್ ತಿನ್ನುತ್ತಿದ್ದರೆ 40 ನಿಮಿಷದಿಂದ 1 ಗಂಟೆಯ ಅಂತರವನ್ನು ಕಾಯ್ದುಕೊಂಡು, ನಂತರ ಟೀ ಕುಡಿಯಿರಿ.

ಇದನ್ನೂ ಓದಿ: Jaggery Tea: ಸಕ್ಕರೆ ಟೀಗಿಂತ ಬೆಲ್ಲದ ಚಹಾ ಯಾಕೆ ಬೆಸ್ಟ್?

3. ನೀವು ಆತಂಕ, ನಿದ್ರಾಹೀನತೆ ಅಥವಾ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಹೊಂದಿದ್ದರೆ, ಮಲಗುವ ಸಮಯಕ್ಕೂ 2 ಗಂಟೆಯ ಮೊದಲು ಚಹಾವನ್ನು ಸೇವಿಸಬೇಡಿ.

4. ಅಸಿಡಿಟಿಯನ್ನು ತಡೆಯಲು ಖಾಲಿ ಹೊಟ್ಟೆಯಲ್ಲಿ ಚಹಾ ಸೇವನೆಯಿಂದ ದೂರವಿರಿ.

5. ಆಸಿಡ್ ಮಟ್ಟವನ್ನು ದುರ್ಬಲಗೊಳಿಸಲು ಮತ್ತು ಜೀರ್ಣಕ್ರಿಯೆಯ ಸಮಸ್ಯೆ ನಿವಾರಿಸಲು ಚಹಾ ಅಥವಾ ಕಾಫಿಯ ನಂತರ 30 ನಿಮಿಷಗಳ ಮೊದಲು ಮತ್ತು ನಂತರ ಒಂದು ಲೋಟ ನೀರು ಕುಡಿಯಿರಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ