ಕೊರೊನಾ ಕಾರಣದಿಂದ ದೇಶದ ಜನರಲ್ಲಿ ಮಾನಸಿಕ ಸಮಸ್ಯೆಗಳು ಹೆಚ್ಚು ಕಾಣಿಸಿಕೊಳ್ಳುತ್ತಿವೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಜನರ ಮಾನಸಿಕ ಸ್ಥಿತಿಗತಿಯನ್ನು ಸರಿಪಡಿಸಲು ಈ ಬಾರಿಯ ಬಜೆಟ್ನಲ್ಲಿ ನ್ಯಾಷನಲ್ ಟೆಲಿ ಮೆಂಟಲ್ ಹೆಲ್ತ್ (National Tele Mental Health) ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ನಿನ್ನೆ (ಫೆ.1) ನಡೆದ ಕೇಂದ್ರ ಬಜೆಟ್ನಲ್ಲಿ (Union Budget 2022) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರಿನ ನಿಮ್ಹಾನ್ಸ್ಅನ್ನು ನೊಡಲ್ ಕೇಂದ್ರವನ್ನಾಗಿಸಿ ಈ ಕಾರ್ಯಕ್ರಮವನ್ನು ಘೋಷಿಸಿದೆ. ಐಐಐಟಿ ಬೆಂಗಳೂರು (IIITB) ಇ ಮಾನಸ್ ಸಾಫ್ಟ್ವೇರ್ ಒದಗಿಸುವ ಮೂಲಕ ಈ ಯೋಜನೆಗೆ ತಾಂತ್ರಿಕ ಬೆಂಬಲವನ್ನು ನೀಡುತ್ತಿದೆ. ದೇಶದಲ್ಲಿ ಒಟ್ಟು 23 ಕೇಂದ್ರಗಳನ್ನು ತೆರೆಯುವ ಮೂಲಕ ಜನರ ಮಾನಸಿಕ ಸಮಸ್ಯೆಗೆ ಪರಿಹಾರವನ್ನು ನೀಡಲು ಸರ್ಕಾರ ನಿರ್ಧರಿಸಿದೆ.
ಈ ಕುರಿತು ಬೆಂಗಳೂರಿನ ನಿಮ್ಹಾನ್ಸ್ ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ ನ್ಯೂಸ್9 ಜೊತೆ ಮಾತನಾಡಿದ್ದು, ಮಾಹಿತಿ ಹಂಚಿಕೊಂಡಿದ್ದಾರೆ. ಕೆಂದ್ರ ಸರ್ಕಾರದ ಟೆಲಿ ಮೆಂಟಲ್ ಸರ್ವಿಸ್ ಯೋಜನೆ ಉತ್ತಮ ನಡೆಯಾಗಿದೆ. ಸರ್ಕಾರ ಗುರುತಿಸಿದ 23 ಕೇಂದ್ರಗಳಿಗೆ ನಿಮ್ಹಾನ್ಸ್ ಸಹಕಾರ ನೀಡಲಿದೆ. ಟೆಲಿ ಮಾನಸಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯಗಳಿಗೆ ನಿಮ್ಹಾನ್ಸ್ ಸಹಾಯ ಮಾಡುತ್ತದೆ. ಟೆಲಿ ಮೆಂಟಲ್ ಹೆಲ್ತ್ ಕರೆಗಳನ್ನು ಸ್ವೀಕರಿಸಲು ಮತ್ತು ಸಮಾಲೋಚನೆಗಳನ್ನು ನಡೆಸಲು ತರಬೇತಿ ಪಡೆದ ಸಮಾಲೋಚಕರನ್ನು ಪ್ರತೀ ರಾಜ್ಯಗಳಿಗೆ ನೇಮಿಸಲಾಗುವುದು ಎಂದು ಡಾ. ಪ್ರತಿಮಾ ತಿಳಿಸಿದ್ದಾರೆ ಮುಂದುವರೆದು ಮಾತನಾಡಿ, ನೇಮಕವಾದ ಸಿಬ್ಬಂದಿ ಸಮಸ್ಯೆ ಹೊಂದಿರುವ ಜನರನ್ನು ಗುರುತಿಸಿ ಚಿಕಿತ್ಸೆ ಪಡೆಯಲು ಸರಿಯಾದ ಸ್ಥಳ ಮತ್ತು ವೈದ್ಯರನ್ನು ಸೂಚಿಸುತ್ತಾರೆ. ಬಹಳಷ್ಟು ಜನರಿಗೆ ಮಾನಸಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಯಾರಲ್ಲಿ ಹೋಗಬೇಕು ಎನ್ನುವುದು ತಿಳಿದಿರುವುದದಿಲ್ಲ. ಹೀಗಾಗಿ ಈ ಯೋಜನೆ ಅಂತಹವರಿಗೆ ನೆರವಾಗಲಿದೆ. ಕೇಂದ್ರ ಸರ್ಕಾರದ ಈ ಯೋಜನೆ ದೇಶದ 692 ಜಿಲ್ಲೆಗಳನ್ನು ಒಳಗೊಂಡಿರುತ್ತದೆ. ಈ ಯೋಜನೆಗೆ ಸರ್ಕಾರ 40 ಕೋಟಿ ರೂಗಳನ್ನು ನೀಡುತ್ತದೆ ಎಂದಿದ್ದಾರೆ.
ಕೊರೊನಾದಿಂದ ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿವೆ
ಕೊರೊನಾ ನಂತರ ಜಗತ್ತಿನೆಲ್ಲೆಡೆ ಜನರು ಹೆಚ್ಚು ಮಾನಸಿಕ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಆರೋಗ್ಯ ಕಾರ್ಯಕರ್ತರೂ ಕೂಡ ಜನರನ್ನು ಆರೋಗ್ಯವಾಗಿಡಲು ಕೆಲಸ ಮಾಡುತ್ತಿದ್ದಾರೆ. ಮಕ್ಕಳೂ ಕೂಡ ಇದಕ್ಕೆ ಹೊರತಾಗಿಲ್ಲ. ದಿ ಲ್ಯಾನ್ಸೆಟ್ ವರದಿಯ ಪ್ರಕಾರ ಕೊರೊನಾ ನಂತರ ಮಾನಸಿಕ ಸಮಸ್ಯೆಗಳು ಮೊದಲಿಗಿಂತ ಕಾಲು ಭಾಗ ಹೆಚ್ಚಾಗಿದೆ. ದುರಂತ ಎಂದರೆ ಈ ರೀತಿ ಖಿನ್ನತೆಗೆ ಒಳಗಾದವರಲಿ ಮಹಿಳೆಯರು ಮತ್ತು ಯುವ ಜನಾಂಗವೆ ಹೆಚ್ಚು. ವೈದ್ಯರು ಜನರ ಮಾನಸಿಕ ಸಮಸ್ಯೆಯನ್ನು ಪರಿಹರಿಸಲು ಸಮಾಲೋಚನೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಕಳೆದ ಅಕ್ಟೋಬರ್ 15ರ ಹೊತ್ತಿಗೆ ದೇಶದದಲ್ಲಿ ಒಟ್ಟು 23.8 ಲಕ್ಷ ಮಂದಿಗೆ ವೈದ್ಯರು ಕೌನ್ಸಲಿಂಗ್ ನಡೆಸಿ, ಖಿನ್ನತೆಗೆ ಚಿಕಿತ್ಸೆ ನೀಡಿದ್ದಾರೆ.
ಇನ್ನು ಕರ್ನಾಟಕದಲ್ಲಿ 24,445 ಮಂದಿ ಆರೋಗ್ಯ ಕಾರ್ಯಕರ್ತರು 24 ಲಕ್ಷ ಟೆಲಿ ಕೌನ್ಸಿಲಿಂಗ್ ಸೆಷನ್ಗಳನ್ನು ನಡೆಸಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ. ಕೊರೊನಾ ಸಮಯದಲ್ಲಿ ನಿಮ್ಹಾನ್ಸ್ ದೇಶದಾದ್ಯಂತ 24*7 ಸಹಾಯವಾಣಿಯನ್ನು ಆರಂಭಿಸಿತ್ತು. ಈ ಸಹಾಯವಾಣಿಗೆ ತಿಂಗಳಿಗೆ 10 ಸಾವಿರ ಕರೆಗಳು ಬರುತ್ತಿದ್ದವು. ಸಾಂಕ್ರಾಮಿಕದ ಸಮಯದಲ್ಲಿ ಮಾನಸಿಕ ಸಮಸ್ಯೆಗಳ ಬಗ್ಗೆ ಜನರು ಮಾತನಾಡುತ್ತಿದ್ದರು, ಅದರ ಸರಿಯಾದ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಕೆಂದ್ರ ಸರ್ಕಾರದ ಈ ಯೋಜನೆ ಜನರ ಮತ್ತು ಚಿಕಿತ್ಸಕರ ನಡುವಿನ ಅಂತರವನ್ನು ಕಡಿಮೆ ಮಾಡಿ, ಖಿನ್ನತೆಗೆ ಒಳಗಾದವರಿಗೆ ನೆರವಾಗಲಿದೆ ಎಂದಿದ್ದಾರೆ.
ಮಾನಸಿಕ ಸಮಸ್ಯೆ ಇರುವವರಿಗೆ ಅಥವಾ ಖಿನ್ನತೆಯ ಲಕ್ಷಣಗಳನ್ನು ಹೊಂದಿರುವವರಿಗೆ ಸಮಾಲೋಚನೆ ಸಾಕಾಗುತ್ತದೆ. ಅವರೊಂದಿಗೆ ಮಾತನಾಡಿದಾಗ ಅವರು ಯಾವ ಹಂತದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ. ಈ ರೀತಿ ಸಮಾಲೋಚನೆ ನಡೆಸುವುದರಿಂದ ಆತ್ಮಹತ್ಯೆಯಂತಹ ಪ್ರಕರಣಗಳು ಕಡಿಮೆಯಾಗುತ್ತವೆ ಎನ್ನುತ್ತಾರೆ ಡಾ. ಮೂರ್ತಿ. ಮಾನಸಿಕ ಸಮಸ್ಯೆಗಳನ್ನು ಟೆಲಿ ಕಾಲ್ ಮೂಲಕ ಬಗೆಹರಿಸಿದ ಎಷ್ಟೊ ಉದಾಹರಣೆಗಳಿವೆ ಎನ್ನುವ ಅವರು ಜಗತ್ತಿನಾದ್ಯಂತ ಇದು ಸಾಬೀತು ಕೂಡ ಆಗಿದೆ. ಇದು ಕೇವಲ ಟೆಲಿ ಮೆಂಟಲ್ ಹೆಲ್ತ್ ಸರ್ವಿಸ್ ಮಾತ್ರವಲ್ಲ, ಇದು ಟೆಲಿ ಮೆಂಟಲ್ ಕೌನ್ಸಿಲಿಂಗ್ ಸಹ ಆಗಿದೆ. ವೈದ್ಯರು ಮತ್ತು ರೋಗಿಯ ನಡುವೆ ಸರಿಯಾದ ಸಂಭಾಷಣೆ ನಡೆದಾಗ ಮಾತ್ರ ಸಮಸ್ಯೆ ಪರಿಹಾರವಾಗುತ್ತದೆ ಆದರೆ ಕೆಲವರು ಮಾತ್ರ ಕೌನ್ಸಿಲಿಂಗ್ ಪಡೆಯುತ್ತಾರೆ. ಇನ್ನೂ ಕೆಲವೊಮ್ಮ ವ್ಯದ್ಯರು ಕೆಲಸದಲ್ಲಿ ನಿರತರಾದಾಗ ಸರಿಯಾಗಿ ಸಂವಹನ ನಡೆಸಲು ಸಾಧ್ಯವಾಗುವುದಿಲ್ಲ. ಅನೇಕ ದೇಶಗಳಲ್ಲಿ ಈ ರೀತಿಯ ಕಾರ್ಯಕ್ರಮಗಳ ಸಂಯೋಜನೆ ಉಪಯುಕ್ತವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:
Published On - 10:56 am, Wed, 2 February 22