Contaminated Water: ನೀವು ಕುಡಿಯುವ ನೀರು ಕಲುಷಿತವಾಗಿದೆಯೇ? ಈ ಕಾಯಿಲೆಗಳು ನಿಮಗೆ ಬರಬಹುದು ಎಚ್ಚರ

| Updated By: ನಯನಾ ರಾಜೀವ್

Updated on: Aug 21, 2022 | 11:40 AM

ದೇಹವನ್ನು ಹೈಡ್ರೇಟ್ ಆಗಿರಿಸಲು ಸಾಕಷ್ಟು ಪ್ರಮಾಣದ ನೀರು ಕುಡಿಯುವುದು ಬಹಳ ಮುಖ್ಯ. ಹಾಗಾಗಿ ದಿನಕ್ಕೆ ಕನಿಷ್ಠ 10 ರಿಂದ 12 ಗ್ಲಾಸ್ ನೀರು ಕುಡಿಯಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

Contaminated Water: ನೀವು ಕುಡಿಯುವ ನೀರು ಕಲುಷಿತವಾಗಿದೆಯೇ?  ಈ ಕಾಯಿಲೆಗಳು ನಿಮಗೆ ಬರಬಹುದು ಎಚ್ಚರ
Contaminated Water
Follow us on

ದೇಹವನ್ನು ಹೈಡ್ರೇಟ್ ಆಗಿರಿಸಲು ಸಾಕಷ್ಟು ಪ್ರಮಾಣದ ನೀರು ಕುಡಿಯುವುದು ಬಹಳ ಮುಖ್ಯ. ಹಾಗಾಗಿ ದಿನಕ್ಕೆ ಕನಿಷ್ಠ 10 ರಿಂದ 12 ಗ್ಲಾಸ್ ನೀರು ಕುಡಿಯಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಆದಾಗ್ಯೂ, ನೀರು ಸಂಪೂರ್ಣವಾಗಿ ಶುದ್ಧವಾಗಿರಬೇಕು ಮತ್ತು ಉತ್ತಮವಾಗಿರಬೇಕು ಎಂದು ಕೂಡ ಹೇಳಲಾಗುತ್ತದೆ.

ಕೊಳಕು ನೀರು ಆರೋಗ್ಯಕ್ಕೆ ಹಾನಿಕಾರಕ. ನಾವು ಕುಡಿಯುವ ನೀರು ಶುದ್ಧವೋ ಅಥವಾ ಕೊಳಕು ಎಂಬುದೂ ಅಷ್ಟೇ ಮುಖ್ಯ. ಇಂತಹ ಸಂದರ್ಭಗಳಲ್ಲಿ ಕಲುಷಿತ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಆಗುವ ದುಷ್ಪರಿಣಾಮಗಳನ್ನು ತಿಳಿದುಕೊಳ್ಳುವುದು ಅಗತ್ಯ. ಈಗ ತಿಳಿಯಿರಿ ಕಲುಷಿತ ನೀರು ಕುಡಿದರೆ ಆರೋಗ್ಯಕ್ಕೆ ಆಗುವ ಹಾನಿಗಳ ಬಗ್ಗೆ ತಿಳಿಯೋಣ.

ಕಲುಷಿತ ನೀರು ಸೇವಿಸಿದರೆ ಆ ವ್ಯಕ್ತಿಗೆ ಉದರಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುತ್ತವೆ. ಕಲುಷಿತ ನೀರು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ ವಾಂತಿ, ಭೇದಿ, ಹೊಟ್ಟೆನೋವು ಮುಂತಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಕೊಳಕು ನೀರಿನ ಸೇವನೆಯು ಮೆದುಳಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕೊಳಕು ನೀರು ಕುಡಿಯುವುದರಿಂದ ಮಾನಸಿಕ ಸಮಸ್ಯೆಗಳು ಹೆಚ್ಚಾಗುತ್ತವೆ.

ನೀರು ಸೇವನೆಯಿಂದ ವ್ಯಕ್ತಿಗೆ ನಿರ್ಜಲೀಕರಣ ಸಮಸ್ಯೆ ಇರುವುದಿಲ್ಲ. ಆದರೆ, ಕೊಳಕು ನೀರನ್ನು ಸೇವಿಸಿದರೆ, ಅಂತಹ ವ್ಯಕ್ತಿಯು ನಿರ್ಜಲೀಕರಣದ ಸಮಸ್ಯೆಯನ್ನು ಹೊಂದಿರಬಹುದು. ಅಲ್ಲದೆ ಮೂರ್ಛೆ, ತಲೆತಿರುಗುವಿಕೆ ಇತ್ಯಾದಿಗಳನ್ನು ಉಂಟುಮಾಡುತ್ತದೆ

ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಕಲುಷಿತ ನೀರು ಸೇವನೆಯಿಂದ ಕಿಡ್ನಿ ಸಂಬಂಧಿ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ. ಇಡೀ ಮೂತ್ರಪಿಂಡವು ನೀರಿನಲ್ಲಿದೆ. ಇಂತಹ ಸಂದರ್ಭದಲ್ಲಿ ಇದರ ಸೇವನೆಯಿಂದ ಕಿಡ್ನಿ ಸ್ಟೋನ್ ನಂತಹ ಸಮಸ್ಯೆಗಳು ಬರುತ್ತವೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ