Monkeypox: ಮನೆಯಲ್ಲಿ ಉಪಯೋಗ ಮಾಡುವ ವಸ್ತುಗಳಿಂದ ಮಂಕಿಪಾಕ್ಸ್‌ ಹರಡುವಿಕೆ? : ಹೊಸ ಅಧ್ಯಯನ ಹೇಳಿದ್ದೇನು ಗೊತ್ತಾ?

ಮಂಕಿಪಾಕ್ಸ್‌ ಮನೆಯಲ್ಲಿರುವ ವಸ್ತುಗಳ ಮೇಲೆಯು ಹರಡುತ್ತದೆ ಎಂದು ತಜ್ಞರು ತಮ್ಮ ಹೊಸ ಅಧ್ಯಯನದಲ್ಲಿ ಕಂಡು ಹಿಡಿದಿದ್ದಾರೆ. ವೈರಸ್ ಅನೇಕ ಸಾಮಾನ್ಯ ಮನೆಯ ವಸ್ತುಗಳ ಮೇಲೆ ಹಲವಾರು ದಿನಗಳವರೆಗೆ ಕಾಲಹರಣ ಮಾಡಬಹುದು ಎಂದು ಸೂಚಿಸುತ್ತದೆ.

Monkeypox: ಮನೆಯಲ್ಲಿ ಉಪಯೋಗ ಮಾಡುವ ವಸ್ತುಗಳಿಂದ ಮಂಕಿಪಾಕ್ಸ್‌ ಹರಡುವಿಕೆ? : ಹೊಸ ಅಧ್ಯಯನ ಹೇಳಿದ್ದೇನು ಗೊತ್ತಾ?
monkeypox
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 20, 2022 | 5:56 PM

ಯುಎಸ್ ರೋಗ ನಿಯಂತ್ರಣ ಸಂಸ್ಥೆ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಮಂಕಿಪಾಕ್ಸ್‌ ಹೊಸ ಅಧ್ಯಯನವನ್ನು ಕಂಡುಹಿಡಿದ್ದಾರೆ. ಮಂಕಿಪಾಕ್ಸ್‌ ಹರಡುವಿಕೆ ಜನರು ಉಪಯೋಗ ಮಾಡುವ ವಸ್ತುಗಳಲ್ಲಿ ಇರುತ್ತದೆ ಎಂದು ಹೇಳಿದೆ. ಆದರೆ, ಇದರಿಂದ ಸೋಂಕು ಹರಡಬಹುದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಅಧ್ಯಯನಕ್ಕಾಗಿ, ಇಬ್ಬರು ಮಂಕಿಪಾಕ್ಸ್ ರೋಗಿಗಳನ್ನು ಮಾದರಿಯಾಗಿ ಉಪಯೋಗಿಸಿಕೊಳ್ಳಲಾಯಿತು. ಮೇಲ್ಮೈಗಳನ್ನು ಸೋಂಕುರಹಿತಗೊಳಿಸಿದರು, ದಿನಕ್ಕೆ ಹಲವಾರು ಬಾರಿ ತಮ್ಮ ಕೈಗಳನ್ನು ತೊಳೆದುಕೊಳ್ಳುತ್ತಾರೆ ಮತ್ತು ನಿಯಮಿತವಾಗಿ ಸ್ನಾನ ಮಾಡುತ್ತಾರೆ ಎಂದು ಅವರು ಹೇಳಿದರು.

ಸಿಡಿಸಿ ಪ್ರಕಾರ, ರೋಗಲಕ್ಷಣಗಳು ಪ್ರಾರಂಭವಾದ 20 ದಿನಗಳ ನಂತರ 70 ಪ್ರತಿಶತದಷ್ಟು ಹೆಚ್ಚಿನ ಸಂಪರ್ಕದ ಪ್ರದೇಶಗಳಲ್ಲಿ ತಜ್ಞರು ವೈರಸ್​ನ್ನು ಕಂಡುಕೊಂಡಿದ್ದಾರೆ. ಮಂಚಗಳು, ಹೊದಿಕೆಗಳು, ಕಾಫಿ ಯಂತ್ರ, ಕಂಪ್ಯೂಟರ್ ಮೌಸ್ ಮತ್ತು ಲೈಟ್ ಸ್ವಿಚ್‌ಗಳಲ್ಲಿ ವೈರಸ್ ಪತ್ತೆಯಾಗಿದೆ.

ಯಾವುದೇ ವಸ್ತುಗಳು ಅಥವಾ ಮೇಲ್ಮೈಗಳಲ್ಲಿ ಯಾವುದೇ ಪ್ರತ್ಯಕ್ಷ (ಕಾಣುವಂತಹ)ವಾಗಿ ಕಾಣುವುದು ಕಡಿಮೆ ಎಂದು ಹೇಳಿದೆ. ಸ್ವಚ್ಛತೆ ಇಲ್ಲದಿರುವುದು ಮತ್ತು ಸೋಂಕುಗಳಿಂದ ಮನೆಯಲ್ಲಿ ಈ ವೈರಸ್​ಗಳು ಕಾಣುತ್ತದೆ ಎಂದು ಸಿಡಿಸಿ ಹೇಳಿದೆ.

ಅಧ್ಯಯನದ ಪ್ರಕಾರ, ಎರಡೂ ರೋಗಿಗಳು ಮಂಕಿಪಾಕ್ಸ್ ಪ್ರಕರಣಗಳನ್ನು ಮೇ ತಿಂಗಳಲ್ಲಿ ವರದಿಯಾಗಿದೆ. ಕೆಲವೊಬ್ಬರಿಗೆ ಜನನಾಂಗ, ಕೈ, ಎದೆ, ತುಟಿ ಮತ್ತು ನೆತ್ತಿಯ ಮೇಲೆ ಗಾಯಗಳಾಗಿದ್ದರೆ, ಇನ್ನೊಬ್ಬರಿಗೆ ಕಾಲು, ಮತ್ತು ಬೆರಳಿನ ಮೇಲೆ ಗಾಯಗಳಾಗಿವೆ. ವರದಿಯ ಪ್ರಕಾರ ಇಬ್ಬರೂ ಸುಮಾರು ಒಂದು ತಿಂಗಳ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು.

ಮಂಕಿಪಾಕ್ಸ್ ಇರುವವರ ಮನೆಗೆ ಭೇಟಿ ನೀಡುವಾಗ ಮಾಸ್ಕ್, ಮುಂಜಾಗೃತ ಕ್ರಮಗಳನ್ನು ಪಾಲಿಸಿ, ಬಹುಶಃ ಕಲುಷಿತ ವಸ್ತುಗಳನ್ನು ಸ್ಪರ್ಶಿಸುವುದನ್ನು ತಪ್ಪಿಸುವುದು ಒಳ್ಳೆಯದು, ಕೈ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು, ತಿನ್ನುವ ಪಾತ್ರೆಗಳು, ಬಟ್ಟೆ, ಹಾಸಿಗೆ ಅಥವಾ ಟವೆಲ್‌ಗಳನ್ನು ಹಂಚಿಕೊಳ್ಳದಂತೆ ನೋಡಿಕೊಳ್ಳಬೇಕು. ಮನೆಯ ಸೋಂಕುನಿವಾರಕ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ಸಿಡಿಸಿ ಸೂಚಿಸಿದೆ.

ಯಾವುದೇ ಒಬ್ಬ ವ್ಯಕ್ತಿ ಪ್ರಾಣಿ, ಮನುಷ್ಯ ಅಥವಾ ವೈರಸ್‌ನಿಂದ ಕಲುಷಿತಗೊಂಡ ವಸ್ತುಗಳನ್ನು ಉಪಯೋಗ ಮಾಡಿದಾಗ ವೈರಸ್ ಹರಡುತ್ತದೆ. ಯುಎಸ್ ಬೇಸ್ಡ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ವೈರಸ್ ಮುರಿದ ಚರ್ಮ (ಗೋಚರವಾಗದಿದ್ದರೂ ಸಹ), ಉಸಿರಾಟದ ಪ್ರದೇಶ ಅಥವಾ ಲೋಳೆಯ ಪೊರೆಗಳ (ಕಣ್ಣುಗಳು, ಮೂಗು ಅಥವಾ ಬಾಯಿ) ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಕಚ್ಚುವಿಕೆ ಅಥವಾ ಸ್ಕ್ರಾಚ್, ಬುಷ್ ಮಾಂಸ ತಯಾರಿಕೆ, ದೇಹದ ದ್ರವಗಳು ಅಥವಾ ಲೆಸಿಯಾನ್ ವಸ್ತುಗಳೊಂದಿಗೆ ನೇರ ಸಂಪರ್ಕ, ಅಥವಾ ಕಲುಷಿತ ಹಾಸಿಗೆಯ ಮೂಲಕ ಲೆಸಿಯಾನ್ ವಸ್ತುಗಳೊಂದಿಗೆ ಪರೋಕ್ಷ ಸಂಪರ್ಕದಿಂದ ಪ್ರಾಣಿಯಿಂದ ಮನುಷ್ಯನಿಗೆ ಹರಡಬಹುದು.

ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು