ಸಾಮಾನ್ಯವಾಗಿ ನಮ್ಮ ಸುತ್ತಮುತ್ತ, ಸುಗಂಧ ದ್ರವ್ಯವನ್ನು ಇಷ್ಟ ಪಡುವವರ ಸಂಖ್ಯೆ ಹೆಚ್ಚಾಗಿಯೇ ಇದೆ. ಹಲವರು ಇದನ್ನು ನಿಯಮಿತವಾಗಿ ಬಳಸುತ್ತಾರೆ. ಇದರ ಒಂದೊಂದು ರೀತಿಯ ಪರಿಮಳ ಒಬ್ಬೊಬ್ಬರಿಗೆ ಇಷ್ಟವಾಗುತ್ತದೆ. ಕೆಲವರಿಗೆ ಇದನ್ನು ಬಳಸುವುದು ಅಭ್ಯಾಸವಾಗಿರುತ್ತದೆ. ಅದರಲ್ಲಿಯೂ ಇದರ ಪರಿಮಳ ಮನಸ್ಸಿಗೆ ತುಂಬಾ ಒಳ್ಳೆಯದು ಎನ್ನಲಾಗುತ್ತದೆ. ಆದರೆ ವಾಸ್ತವದಲ್ಲಿ ಸುಗಂಧ ದ್ರವ್ಯದಲ್ಲಿ, ಆಲ್ಕೋಹಾಲ್ ಅನ್ನು ಮತ್ತು ವಿವಿಧ ರೀತಿಯ ರಾಸಾಯನಿಕಗಳನ್ನು ಬೆರೆಸುವ ಮೂಲಕ ತಯಾರಿಸಲಾಗುತ್ತದೆ. ಹೆಚ್ಚಾಗಿ ಜನ ಆ ಸುಗಂಧ ದ್ರವ್ಯವನ್ನು ನೇರವಾಗಿ ಚರ್ಮದ ಮೇಲೆ ಹಚ್ಚುವುದರಿಂದ ಚರ್ಮದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಇದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ? ಇಲ್ಲಿದೆ ತಜ್ಞರ ಅಭಿಪ್ರಾಯ.
ತಜ್ಞರು ಹೇಳುವ ಪ್ರಕಾರ, ಈ ರೀತಿ ಮಾಡುವುದು ಒಳ್ಳೆಯದಲ್ಲ. ಸುಗಂಧ ದ್ರವ್ಯವನ್ನು ನೇರವಾಗಿ ಚರ್ಮದ ಮೇಲೆ ಹಚ್ಚುವುದರಿಂದ ವಿವಿಧ ರೀತಿಯ ಸೋಂಕುಗಳು ಉಂಟಾಗಬಹುದು. ಇದರಲ್ಲಿರುವ ಆಲ್ಕೋಹಾಲ್ ಅಂಶವು ಚರ್ಮದಲ್ಲಿನ ತೇವಾಂಶವನ್ನು ಹೀರಿಕೊಂಡು ಚರ್ಮವನ್ನು ಶುಷ್ಕವಾಗಿಸುತ್ತದೆ. ಸುಗಂಧ ದ್ರವ್ಯಗಳಲ್ಲಿರುವ ನ್ಯೂರೋಟಾಕ್ಸಿನ್ ಗಳು ನರಮಂಡಲದ ಮೇಲೂ ಪರಿಣಾಮ ಬೀರುತ್ತವೆ ಎಂದು ಹೇಳಲಾಗುತ್ತದೆ.
ದಿನನಿತ್ಯ ಚರ್ಮದ ಮೇಲೆ ಸುಗಂಧ ದ್ರವ್ಯವನ್ನು ನೇರವಾಗಿ ಬಳಸುವುದರಿಂದ ಚರ್ಮದ ಕಿರಿಕಿರಿ ಉಂಟಾಗುತ್ತದೆ. ವಿಶೇಷವಾಗಿ ಸೂಕ್ಷ್ಮ ಚರ್ಮ ಹೊಂದಿರುವವರಿಗೆ ಹೆಚ್ಚು ಹಾನಿಕಾರಕ ಎಂದು ತಜ್ಞರು ಹೇಳುತ್ತಾರೆ. ಅದಲ್ಲದೆ ಇದರಿಂದ ಚರ್ಮದ ಮೇಲೆ ಬ್ಯಾಕ್ಟೀರಿಯಾ ಬೆಳೆಯಬಹುದು. ಸುಗಂಧ ದ್ರವ್ಯಗಳಲ್ಲಿರುವ ರಾಸಾಯನಿಕಗಳು ಹಾರ್ಮೋನುಗಳ ಸಮತೋಲನವನ್ನು ಕೂಡ ಭಂಗಗೊಳಿಸಬಹುದು. ಇದು ಚರ್ಮದ ಕ್ಯಾನ್ಸರ್ ಅಪಾಯವನ್ನು ಕೂಡ ಹೆಚ್ಚಿಸುತ್ತದೆ.
ಇದನ್ನೂ ಓದಿ: ಪುರುಷರೇ ಈ ಲಕ್ಷಣ ನಿಮಗೂ ಕಂಡುಬರುತ್ತಿದ್ದರೆ ನೀವು ಅಪಾಯದಲ್ಲಿದ್ದೀರಿ
ಹೆಚ್ಚಿನ ಸುಗಂಧ ದ್ರವ್ಯಗಳಲ್ಲಿ ಥಾಲೇಟ್ ಗಳು, ಸ್ಟೈರೀನ್, ಗ್ಯಾಲೋಕ್ಸೋಲೈಡ್ ಗಳು ಮತ್ತು ಗ್ಲೈಕಾಲ್ ಗಳಂತಹ ಸಂಯುಕ್ತಗಳನ್ನು ಹೊಂದಿರುತ್ತವೆ. ಅವು ದೇಹವನ್ನು ಪ್ರವೇಶಿಸಿದರೆ, ಅದು ಉಸಿರಾಟದ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಜೊತೆಗೆ ಈ ಸಂಯುಕ್ತಗಳು ಕೆಲವರ ಚರ್ಮದ ಮೇಲೆ ಅನೇಕ ರೀತಿಯ ಪರಿಣಾಮಗಳಿಗೆ ಕಾರಣವಾಗುತ್ತದೆ. ಕೆಲವರಿಗೆ ಅಲರ್ಜಿಯಾಗುತ್ತದೆ. ಪರಿಣಾಮವಾಗಿ, ಉಸಿರಾಟದ ಸಮಸ್ಯೆಗಳು ಉದ್ಭವಿಸುತ್ತವೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ