ಪುರುಷರೇ ಈ ಲಕ್ಷಣ ನಿಮಗೂ ಕಂಡುಬರುತ್ತಿದ್ದರೆ ನೀವು ಅಪಾಯದಲ್ಲಿದ್ದೀರಿ
ಟೆಸ್ಟೋಸ್ಟೆರಾನ್ ಹಾರ್ಮೋನ್ ಸ್ನಾಯು, ಮೂಳೆ ಮತ್ತು ಲೈಂಗಿಕ ಆರೋಗ್ಯಕ್ಕೆ ಅಗತ್ಯವೆಂದು ಪರಿಗಣಿಸಲಾಗಿದೆ. ಇದು ಪುರುಷರ ಶಕ್ತಿ ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಪುರುಷರಲ್ಲಿ ಈ ಹಾರ್ಮೋನ್ ಕೊರತೆಯು ಅವರ ಲೈಂಗಿಕ, ಮಾನಸಿಕ ಮತ್ತು ಸಾಮಾನ್ಯ ಆರೋಗ್ಯದ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ. ವಯಸ್ಸಾದಂತೆ ಟೆಸ್ಟೋಸ್ಟೆರಾನ್ ಮಟ್ಟವು ಕಡಿಮೆಯಾಗುವುದು ನೈಸರ್ಗಿಕ ಪ್ರಕ್ರಿಯೆಯಾಗಿದೆ, ಆದರೆ ಪ್ರೌಢಾವಸ್ಥೆಯಲ್ಲಿ ಅದು ಕಡಿಮೆಯಾದರೆ, ಅದು ಪುರುಷರಿಗೆ ಸಮಸ್ಯೆಯಾಗಬಹುದು. ನಿಮಗೂ ಇದರ ಕೊರತೆಯಾಗಿದ್ದರೆ ದೇಹದಲ್ಲಿ ಕಂಡು ಬರುವ ಕೆಲವು ಲಕ್ಷಣಗಳ ಮೂಲಕ ನೀವು ತಿಳಿಯಬಹುದು. ಈ ಸಮಸ್ಯೆಯನ್ನು ನೀವು ಮೊದಲೇ ಪತ್ತೆ ಹಚ್ಚಿದರೆ ಇದಕ್ಕೆ ಮದ್ದು ನೀಡುವುದು ಸುಲಭ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಟೆಸ್ಟೋಸ್ಟೆರಾನ್ ಹಾರ್ಮೋನ್ ಮಟ್ಟ ಕಡಿಮೆಯಾಗಿದೆ ಎಂದು ತಿಳಿಯುವುದು ಹೇಗೆ? ರೋಗಲಕ್ಷಣಗಳ ಬಗ್ಗೆ ತಿಳಿದುಕೊಳ್ಳಿ.
ನಿಮಗೆ ತಿಳಿದಿರಬಹುದು, ನಮ್ಮ ದೇಹದಲ್ಲಿ 50ಕ್ಕೂ ಹೆಚ್ಚು ಹಾರ್ಮೋನುಗಳಿವೆ ಎಂದು ಗುರುತಿಸಲಾಗಿದೆ. ಇವುಗಳಲ್ಲಿ ಟೆಸ್ಟೋಸ್ಟೆರಾನ್ ಕೂಡ ಒಂದು. ಈ ಹಾರ್ಮೋನ್ ಸ್ನಾಯು, ಮೂಳೆ ಮತ್ತು ಲೈಂಗಿಕ ಆರೋಗ್ಯಕ್ಕೆ ಅಗತ್ಯವೆಂದು ಪರಿಗಣಿಸಲಾಗಿದೆ. ಇದು ಪುರುಷರ ಶಕ್ತಿ ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಪುರುಷರಲ್ಲಿ ಈ ಹಾರ್ಮೋನ್ ಕೊರತೆಯು ಅವರ ಲೈಂಗಿಕ, ಮಾನಸಿಕ ಮತ್ತು ಸಾಮಾನ್ಯ ಆರೋಗ್ಯದ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ. ವಯಸ್ಸಾದಂತೆ ಟೆಸ್ಟೋಸ್ಟೆರಾನ್ ಮಟ್ಟವು ಕಡಿಮೆಯಾಗುವುದು ನೈಸರ್ಗಿಕ ಪ್ರಕ್ರಿಯೆಯಾಗಿದೆ, ಆದರೆ ಪ್ರೌಢಾವಸ್ಥೆಯಲ್ಲಿ ಅದು ಕಡಿಮೆಯಾದರೆ, ಅದು ಪುರುಷರಿಗೆ ಸಮಸ್ಯೆಯಾಗಬಹುದು. ನಿಮಗೂ ಇದರ ಕೊರತೆಯಾಗಿದ್ದರೆ ದೇಹದಲ್ಲಿ ಕಂಡು ಬರುವ ಕೆಲವು ಲಕ್ಷಣಗಳ ಮೂಲಕ ನೀವು ತಿಳಿಯಬಹುದು. ಈ ಸಮಸ್ಯೆಯನ್ನು ನೀವು ಮೊದಲೇ ಪತ್ತೆ ಹಚ್ಚಿದರೆ ಇದಕ್ಕೆ ಮದ್ದು ನೀಡುವುದು ಸುಲಭ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಟೆಸ್ಟೋಸ್ಟೆರಾನ್ ಹಾರ್ಮೋನ್ ಮಟ್ಟ ಕಡಿಮೆಯಾಗಿದೆ ಎಂದು ತಿಳಿಯುವುದು ಹೇಗೆ? ರೋಗಲಕ್ಷಣಗಳ ಬಗ್ಗೆ ತಿಳಿದುಕೊಳ್ಳಿ.
ಸ್ನಾಯು ಬಲವನ್ನು ಕಡಿಮೆ ಮಾಡುತ್ತದೆ: ಟೆಸ್ಟೋಸ್ಟೆರಾನ್ ಹಾರ್ಮೋನ್ ಸ್ನಾಯುಗಳ ಬೆಳವಣಿಗೆ ಮತ್ತು ದೈಹಿಕ ಶಕ್ತಿ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಸ್ನಾಯು ಶಕ್ತಿ ಕಡಿಮೆಯಾಗುತ್ತಿದೆ ಅಥವಾ ಮೊದಲಿನಂತೆ ನಿಮಗೆ ಭಾರವಾದ ವಸ್ತುಗಳನ್ನು ಎತ್ತಲು ಸಾಧ್ಯವಾಗುವುದಿಲ್ಲ ಎಂದು ಅನಿಸಿದರೆ ಇದು ಟೆಸ್ಟೋಸ್ಟೆರಾನ್ ಕೊರತೆಯ ಲಕ್ಷಣವಾಗಿರಬಹುದು.
ಲೈಂಗಿಕ ಶಕ್ತಿ ಕಡಿಮೆಯಾಗುವುದು: ಟೆಸ್ಟೋಸ್ಟೆರಾನ್ ಪುರುಷರ ಲೈಂಗಿಕ ಶಕ್ತಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ನಿಮಗೆ ಲೈಂಗಿಕ ಬಯಕೆಗಳಲ್ಲಿ ಆಸಕ್ತಿ ಕಡಿಮೆಯಾದರೆ ಅದು ಟೆಸ್ಟೋಸ್ಟೆರಾನ್ ಕೊರತೆಯ ಸಂಕೇತವೂ ಆಗಿರಬಹುದು.
ಮಾನಸಿಕ ಖಿನ್ನತೆ: ಕಡಿಮೆ ಟೆಸ್ಟೋಸ್ಟೆರಾನ್ ಮಟ್ಟವು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಮನಸ್ಥಿತಿಯಲ್ಲಿ ಬದಲಾವಣೆ, ಆತಂಕ ಮತ್ತು ಖಿನ್ನತೆಯ ರೋಗಲಕ್ಷಣಗಳು ಟೆಸ್ಟೋಸ್ಟೆರಾನ್ ಕೊರತೆಯೊಂದಿಗೆ ಸಂಬಂಧ ಹೊಂದಿರಬಹುದು. ನೀವು ನಿರಂತರವಾಗಿ ಖಿನ್ನತೆ ಅಥವಾ ಆತಂಕದಿಂದ ಬಳಲುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು.
ನಿದ್ರೆಯ ಸಮಸ್ಯೆ: ಟೆಸ್ಟೋಸ್ಟೆರಾನ್ ಕೊರತೆಯು ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳಿಗೂ ಕಾರಣವಾಗಬಹುದು. ನೀವು ನಿದ್ರಾಹೀನತೆ ಅಥವಾ ನಿರಂತರ ಆಯಾಸ ಅನುಭವಿಸುತ್ತಿದ್ದರೆ, ಇದು ಟೆಸ್ಟೋಸ್ಟೆರಾನ್ ಕೊರತೆಯ ಲಕ್ಷಣವಾಗಿರಬಹುದು.
ಹೊಟ್ಟೆಯ ಬಳಿ ಕೊಬ್ಬಿನ ಶೇಖರಣೆ: ಟೆಸ್ಟೋಸ್ಟೆರಾನ್ ಕಡಿಮೆಯಾದರೆ ದೇಹದಲ್ಲಿ ಕೊಬ್ಬು ಹೆಚ್ಚಾಗಲು ಪ್ರಾರಂಭಿಸುತ್ತದೆ. ವಿಶೇಷವಾಗಿ ಹೊಟ್ಟೆಯ ಸುತ್ತಲೂ, ಕೊಬ್ಬು ಹೆಚ್ಚಾಗುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ