AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಕರ್ ಬಳಸುವುದರಿಂದ ಮಗು ನಡೆಯುವುದನ್ನು ಕಲಿಯುವ ಬದಲು ಮರೆಯುತ್ತದೆ

ಸಾಮಾನ್ಯವಾಗಿ ಅಂಬೆಗಾಲಿಡುವ ಮಕ್ಕಳಿಗೆ ಮನೆಯಲ್ಲಿಯೇ ಓಡಾಡಲು ವಾಕರ್ ತಂದುಕೊಡುತ್ತಾರೆ. ಇದರಿಂದ ಮಕ್ಕಳು ಬೇಗ ನಡೆಯುವುದನ್ನು ಕಲಿಯುತ್ತಾರೆ, ಕಾಲು ಬಲಗೊಳ್ಳುತ್ತದೆ ಎಂಬಿತ್ಯಾದಿ ಅಂಶಗಳನ್ನು ನಾವು ಸತ್ಯ ಎಂದು ಭಾವಿಸಿ ಮಕ್ಕಳಿಗೆ ವಾಕರ್ ಗಳಲ್ಲಿ ಓಡಾಡಲು ವ್ಯವಸ್ಥೆ ಮಾಡಿಸುತ್ತಾರೆ. ಆದರೆ ನಿಮಗೆ ಗೊತ್ತೆ? ಮಕ್ಕಳ ಆರೋಗ್ಯ ತಜ್ಞರು ವಾಕರ್ ಬಳಸುವುದರಿಂದ ಬರುವ ಅನಾನುಕೂಲಗಳ ಬಗ್ಗೆ ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ. ಹಾಗಾದರೆ ಮಕ್ಕಳಿಗೆ ವಾಕರ್ ಬಳಸುವುದು ಉತ್ತಮವಲ್ಲವೇ? ಇದರಿಂದ ಮಗುವಿಗೆ ಯಾವ ರೀತಿಯ ತೊಂದರೆಗಳು ಬರುತ್ತವೆ ಎಂಬುದನ್ನು ತಿಳಿದುಕೊಳ್ಳಿ.

ವಾಕರ್ ಬಳಸುವುದರಿಂದ ಮಗು ನಡೆಯುವುದನ್ನು ಕಲಿಯುವ ಬದಲು ಮರೆಯುತ್ತದೆ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Oct 07, 2024 | 4:51 PM

Share

ಮಕ್ಕಳು ಇದ್ದ ಮನೆ ನಂದಗೋಕುಲವಿದ್ದಂತೆ. ತಮ್ಮ ಮಗು ಖುಷಿಯಾಗಿರುವುದರ ಜೊತೆಗೆ ಯಾವಾಗಲೂ ಆರೋಗ್ಯವಾಗಿರಲು ಪೋಷಕರು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಾರೆ. ಆದರೆ ತಂದೆ- ತಾಯಿ ತಿಳಿದೋ, ತಿಳಿಯದೆಯೋ ಮಾಡುವ ತಪ್ಪುಗಳು ಮಕ್ಕಳ ಮೇಲೆ ಪರಿಣಾಮ ಬೀರಬಹುದು. ಸಾಮಾನ್ಯವಾಗಿ ಅಂಬೆಗಾಲಿಡುವ ಮಕ್ಕಳಿಗೆ ಮನೆಯಲ್ಲಿಯೇ ಓಡಾಡಲು ವಾಕರ್ ತಂದುಕೊಡುತ್ತಾರೆ. ಇದರಿಂದ ಮಕ್ಕಳು ಬೇಗ ನಡೆಯುವುದನ್ನು ಕಲಿಯುತ್ತಾರೆ, ಕಾಲು ಬಲಗೊಳ್ಳುತ್ತದೆ ಎಂಬಿತ್ಯಾದಿ ಅಂಶಗಳನ್ನು ನಾವು ಸತ್ಯ ಎಂದು ಭಾವಿಸಿ ಮಕ್ಕಳಿಗೆ ವಾಕರ್ ಗಳಲ್ಲಿ ಓಡಾಡಲು ವ್ಯವಸ್ಥೆ ಮಾಡಿಸುತ್ತಾರೆ. ಆದರೆ ನಿಮಗೆ ಗೊತ್ತೆ? ಮಕ್ಕಳ ಆರೋಗ್ಯ ತಜ್ಞರು ವಾಕರ್ ಬಳಸುವುದರಿಂದ ಬರುವ ಅನಾನುಕೂಲಗಳ ಬಗ್ಗೆ ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ. ಹಾಗಾದರೆ ಮಕ್ಕಳಿಗೆ ವಾಕರ್ ಬಳಸುವುದು ಉತ್ತಮವಲ್ಲವೇ? ಇದರಿಂದ ಮಗುವಿಗೆ ಯಾವ ರೀತಿಯ ತೊಂದರೆಗಳು ಬರುತ್ತವೆ ಎಂಬುದನ್ನು ತಿಳಿದುಕೊಳ್ಳಿ.

ಡಾ. ಸೈಯದ್ ಮುಜಾಹಿದ್ ಹುಸೇನ್ ಅವರು ತಮ್ಮ ಇನ್ಸ್ಟಾ (dr_hifive) ಖಾತೆಯಲ್ಲಿ ಈ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು ವಾಕರ್ ಬಳಸುವುದರಿಂದ ಮಕ್ಕಳಿಗಾಗುವ ಅನಾನುಕೂಲಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಅಂಬೆಗಾಲಿಡುವವರಿಗೆ ವಾಕರ್ ಬಳಸುವುದರಿಂದ ಉಂಟಾಗುವ ಅನಾನುಕೂಲಗಳು;

  1. ಚಿಕ್ಕ ಮಕ್ಕಳಿಗೆ ವಾಕರ್ ನೀಡುವುದರಿಂದ ಅವರು ಕಾಲ್ಬೆರಳುಗಳ ಮೇಲೆ ನಡೆಯಲು ಆರಂಭ ಮಾಡಬಹುದು ಅಂದರೆ ಕೆಲವು ಮಕ್ಕಳು ಪಾದಗಳನ್ನು ನೆಲದ ಮೇಲೆ ಊರುವುದಿಲ್ಲ ಅಥವಾ ಇಡುವುದಿಲ್ಲ. ಏಕೆಂದರೆ ಮಕ್ಕಳು ಅವುಗಳನ್ನು ಬಳಸುವಾಗ ತಮ್ಮ ದೇಹವನ್ನು ಮೇಲಕ್ಕೆತ್ತುತ್ತಾರೆ. ಇದರಿಂದ ಕಾಲ್ಬೆರಳುಗಳ ಸಹಾಯದಿಂದಲೇ ಮುಂದೆ ಹೋಗುತ್ತಾರೆ. ಮುಂದೆ ಇದು ಅಭ್ಯಾಸವಾಗಿ, ವಾಕರ್ ಇಲ್ಲದಾಗಲೂ ಕೂಡ ಅವರು ಹಾಗೆಯೇ ನಡೆಯಲು ನೋಡುತ್ತಾರೆ. ಇದು ಮಕ್ಕಳಿಗೆ ಒಳ್ಳೆಯದಲ್ಲ.
  2. ಮಕ್ಕಳು ವಾಕರ್ ತಂದರೆ ಬೇಗ ನಡೆಯುತ್ತಾರೆ ಎಂದು ಕೊಳ್ಳುತ್ತಾರೆ. ಆದರೆ ಇದು ನಿಮ್ಮ ನಂಬಿಕೆಗೆ ವಿರುದ್ಧವಾಗಿರುತ್ತದೆ, ಈ ವಾಕರ್ ಮಕ್ಕಳಿಗೆ ಮುಂಚಿತವಾಗಿ ನಡೆಯಲು ಸಹಾಯ ಮಾಡುವ ಬದಲು ನಡಿಗೆಯ ಬೆಳವಣಿಗೆಯನ್ನು ವಿಳಂಬಗೊಳಿಸಬಹುದು ಎಂದು ತಜ್ಞರು ಹೇಳುತ್ತಾರೆ.
  3. ಅದಲ್ಲದೆ ಮಕ್ಕಳು ವಾಕರ್ ಬಳಸುವುದರಿಂದ ಗಾಯಗಳ ಅಪಾಯ ಹೆಚ್ಚಾಗಬಹುದು, ಏಕೆಂದರೆ ಮಕ್ಕಳು ಇದರಲ್ಲಿ ನಿಂತು ಎಲ್ಲಿಗೆ ಬೇಕಾದರೂ ಹೋಗಬಹುದಾದ್ದರಿಂದ ಅಪಾಯಕಾರಿ ಪ್ರದೇಶಗಳಿಗೂ ಹೋಗಬಹುದು ಅಥವಾ ಅವು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಮಕ್ಕಳಿಗೆ ಪೆಟ್ಟಾಗುವ ಸಂಭವವಿರುತ್ತದೆ.
  4. ತಜ್ಞರು ಹೇಳುವ ಪ್ರಕಾರ, ವಾಕರ್ ಗಳನ್ನು ಬಳಸುವುದರಿಂದ ಯಾವುದೇ ರೀತಿಯ ಪ್ರಯೋಜನಗಳಿಲ್ಲ, ಬದಲಾಗಿ ಇದು, ನಿಮ್ಮ ಮಗು ತನ್ನಿಂದ ತಾನೇ ನಡೆಯಲು ಕಲಿಯುವುದಕ್ಕೂ ಕೂಡ ಭಂಗ ತರುತ್ತದೆ.
  5. ನಿಮ್ಮ ಮಗುವನ್ನು ಸ್ವತಂತ್ರವಾಗಿ ನಡೆಯಲು ಪ್ರೋತ್ಸಾಹಿಸುವುದು ಅದರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಇದಕ್ಕೆ ವಾಕರ್ ಅಗತ್ಯವಿಲ್ಲ. ಆರೋಗ್ಯಕರವಾಗಿ ನಡೆಯಲು ಕಲಿಯುವುದು ಮಗುವಿನ ಬೆಳವಣಿಗೆಯನ್ನು ಕೂಡ ಹೆಚ್ಚಿಸುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ