Health Tips: ಈ ಸಮಸ್ಯೆ ಇರುವವರಿಗೆ ಎಳನೀರು ವಿಷಕ್ಕೆ ಸಮಾನ

ಎಳನೀರಿನಲ್ಲಿ ಸಾಕಷ್ಟು ರೀತಿಯ ಪೋಷಕಾಂಶಗಳಿವೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದರಲ್ಲಿ ಸಂದೇಹವಿಲ್ಲ. ಎಳನೀರು ದೇಹದ ನಿರ್ಜಲೀಕರಣದಿಂದ ನಮ್ಮನ್ನು ರಕ್ಷಿಸುತ್ತದೆ. ದೇಹಕ್ಕೆ ತಕ್ಷಣ ಶಕ್ತಿಯನ್ನು ನೀಡುತ್ತದೆ. ಆದರೆ ಎಳನೀರು ಕುಡಿಯುವ ಮೊದಲು, ಅದು ನಿಮ್ಮ ದೇಹಕ್ಕೆ ಆರೋಗ್ಯಕರವೇ ಅಥವಾ ಅಲ್ಲವೇ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಎಳನೀರು ಕುಡಿಯುವುದರಿಂದ ಎಲ್ಲರಿಗೂ ಒಳ್ಳೆಯ ಫಲಿತಾಂಶವೇ ಸಿಗಬೇಕು ಎಂಬುದಿಲ್ಲ. ನೀವು ಕೂಡ ಇಲ್ಲಿ ಕೆಳಗೆ ತಿಳಿಸಿರುವ 5 ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ. ಎಳನೀರು ಕುಡಿಯುವುದನ್ನು ತಪ್ಪಿಸಿ. ಇಲ್ಲದಿದ್ದರೆ, ನಿಮ್ಮ ಆರೋಗ್ಯವೂ ಹದಗೆಡಬಹುದು ಎಂದು ತಜ್ಞರು ಹೇಳುತ್ತಾರೆ.

Health Tips: ಈ ಸಮಸ್ಯೆ ಇರುವವರಿಗೆ ಎಳನೀರು ವಿಷಕ್ಕೆ ಸಮಾನ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 08, 2024 | 4:39 PM

ಎಳನೀರು ಅಮೃತಕ್ಕೆ ಸಮಾನ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದಕ್ಕಾಗಿಯೇ ಎಳನೀರು ಕುಡಿಯಬೇಕು ಎಂದು ತಜ್ಞರು ಹೇಳುತ್ತಾರೆ. ಆದರೆ ಇಷ್ಟೆಲ್ಲಾ ಒಳ್ಳೆಯ ಗುಣಗಳನ್ನು ಹೊಂದಿರುವ ಈ ಎಳನೀರು, ಕೆಲವು ಆರೋಗ್ಯ ಸಮಸ್ಯೆಗಳಿರುವವರು ಕುಡಿಯುವುದರಿಂದ ಅವು ಹೆಚ್ಚಾಗುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ಹೇಳುತ್ತಾರೆ. ವಾಸ್ತವದಲ್ಲಿ, ಎಳನೀರಿನಲ್ಲಿ ಸಾಕಷ್ಟು ರೀತಿಯ ಪೋಷಕಾಂಶಗಳಿವೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದರಲ್ಲಿ ಸಂದೇಹವಿಲ್ಲ. ಎಳನೀರು ದೇಹದ ನಿರ್ಜಲೀಕರಣದಿಂದ ನಮ್ಮನ್ನು ರಕ್ಷಿಸುತ್ತದೆ. ದೇಹಕ್ಕೆ ತಕ್ಷಣ ಶಕ್ತಿಯನ್ನು ನೀಡುತ್ತದೆ. ಆದರೆ ಎಳನೀರು ಕುಡಿಯುವ ಮೊದಲು, ಅದು ನಿಮ್ಮ ದೇಹಕ್ಕೆ ಆರೋಗ್ಯಕರವೇ ಅಥವಾ ಅಲ್ಲವೇ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಎಳನೀರು ಕುಡಿಯುವುದರಿಂದ ಎಲ್ಲರಿಗೂ ಒಳ್ಳೆಯ ಫಲಿತಾಂಶವೇ ಸಿಗಬೇಕು ಎಂಬುದಿಲ್ಲ. ನೀವು ಕೂಡ ಇಲ್ಲಿ ಕೆಳಗೆ ತಿಳಿಸಿರುವ 5 ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ. ಎಳನೀರು ಕುಡಿಯುವುದನ್ನು ತಪ್ಪಿಸಿ. ಇಲ್ಲದಿದ್ದರೆ, ನಿಮ್ಮ ಆರೋಗ್ಯವೂ ಹದಗೆಡಬಹುದು ಎಂದು ತಜ್ಞರು ಹೇಳುತ್ತಾರೆ.

ಯಾವ ಸಮಸ್ಯೆ ಇರುವವರು ಎಳನೀರನ್ನು ಕುಡಿಯಬಾರದು;

ಮೂತ್ರಪಿಂಡದ ಕಾಯಿಲೆ: ಎಳನೀರಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಸಾಮಾನ್ಯವಾಗಿ ಮೂತ್ರಪಿಂಡದ ಸಮಸ್ಯೆ ಇರುವವರು ಇದನ್ನು ಕುಡಿಯಬಾರದು ಜೊತೆಗೆ ಪೊಟ್ಯಾಸಿಯಮ್ ಕಡಿಮೆ ಮಾಡುವ ಔಷಧಿಗಳನ್ನು ಬಳಸುವವರಿಗೆ ಇದು ಹಾನಿಕಾರಕವಾಗಿದೆ.

ರಕ್ತದೊತ್ತಡ: ಬಿಪಿ ಇದ್ದವರು ವೈದ್ಯರನ್ನು ಸಂಪರ್ಕಿಸದೆ ಎಳನೀರನ್ನು ಕುಡಿಯಬೇಡಿ. ವಾಸ್ತವವದಲ್ಲಿ ಇದು ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ. ಇದು ರಕ್ತದೊತ್ತಡದ ಮಟ್ಟವನ್ನು ಹದಗೆಡಿಸಿ ನಿಮ್ಮ ಆರೋಗ್ಯವನ್ನು ಹಾಳು ಮಾಡಬಹುದು.

ಮಧುಮೇಹ: ಎಳನೀರಿನಲ್ಲಿ ನೈಸರ್ಗಿಕ ಸಕ್ಕರೆ ಅಂಶವಿರುತ್ತದೆ. ಮಧುಮೇಹ ರೋಗಿಗಳು ಈ ಕಾರಣದಿಂದಾಗಿ ಬಹಳ ಸೀಮಿತ ಪ್ರಮಾಣದ ಎಳನೀರನ್ನು ಕುಡಿಯಬೇಕು ಎಂದು ತಜ್ಞರು ಸೂಚಿಸುತ್ತಾರೆ. ಇಲ್ಲದಿದ್ದರೆ, ರಕ್ತದಲ್ಲಿನ ಸಕ್ಕರೆ ಹೆಚ್ಚಾಗುವ ಅಪಾಯವಿದೆ.

ಜೀರ್ಣಕಾರಿ ಸಮಸ್ಯೆಗಳು: ಎಳನೀರು ಕುಡಿದ ನಂತರ ಅನೇಕರು ಹೊಟ್ಟೆ ನೋವು ಅಥವಾ ಅತಿಸಾರದಂತಹ ಸಮಸ್ಯೆಗಳಿಂದ ಬಳಲುತ್ತಾರೆ. ಜೀರ್ಣಾಂಗ ವ್ಯವಸ್ಥೆಯಲ್ಲಿ ನಿಮಗೆ ಯಾವುದೇ ರೀತಿಯ ಸಮಸ್ಯೆಗಳಿದ್ದರೆ, ನೀವು ಎಳನೀರನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಿ.

ತೂಕ ಹೆಚ್ಚಾಗುವ ಅಪಾಯ: ಎಳನೀರು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದ್ದರೂ, ಕೆಲವು ಸಂದರ್ಭಗಳಲ್ಲಿ ಅದರಲ್ಲಿ ಕ್ಯಾಲೊರಿ ಅಂಶ ಹೆಚ್ಚಾಗಿರುವುದರಿಂದ ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಇದನ್ನು ನಿಯಮಿತವಾಗಿ ಕುಡಿಯುವುದನ್ನು ತಪ್ಪಿಸಿ. ಇದು ನಿಮ್ಮ ತೂಕ ಇಳಿಕೆಗೆ ಅಡ್ಡಿ ಪಡಿಸಬಹುದು.

(ಸೂಚನೆ: ಇಲ್ಲಿ ನೀಡಿರುವ ವಿಷಯಗಳು ಕೇವಲ ಮಾಹಿತಿಗಾಗಿ ಮಾತ್ರ. ಯಾವುದೇ ರೀತಿಯ ಸಂದೇಹಗಳಿದ್ದರೂ ಕೂಡ ತಜ್ಞರನ್ನು ಸಂಪರ್ಕಿಸಿ.)

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಮೈಸೂರು ಕಾರ್ಯಕರ್ತನ ಮನೆಯಲ್ಲಿ ಸ್ಪೆಷಲ್ ದೋಸೆ ಸವಿದ ಸತೀಶ್ ಜಾರಕಿಹೊಳಿ!
ಮೈಸೂರು ಕಾರ್ಯಕರ್ತನ ಮನೆಯಲ್ಲಿ ಸ್ಪೆಷಲ್ ದೋಸೆ ಸವಿದ ಸತೀಶ್ ಜಾರಕಿಹೊಳಿ!
ಸಿಎಂ ಬದಲಾಯಿಸುವ ಸನ್ನಿವೇಶ ರಾಜ್ಯದಲ್ಲಿ ಸೃಷ್ಟಿಯಾಗಿಲ್ಲ: ಜಿ ಪರಮೇಶ್ವರ್
ಸಿಎಂ ಬದಲಾಯಿಸುವ ಸನ್ನಿವೇಶ ರಾಜ್ಯದಲ್ಲಿ ಸೃಷ್ಟಿಯಾಗಿಲ್ಲ: ಜಿ ಪರಮೇಶ್ವರ್
IND vs BAN: ಡೋಲು ಬಜಾನದೊಂದಿಗೆ ಟೀಮ್ ಇಂಡಿಯಾಗೆ ಭರ್ಜರಿ ಸ್ವಾಗತ
IND vs BAN: ಡೋಲು ಬಜಾನದೊಂದಿಗೆ ಟೀಮ್ ಇಂಡಿಯಾಗೆ ಭರ್ಜರಿ ಸ್ವಾಗತ
ಚಡ್ಡಿ ಗ್ಯಾಂಗ್ ಕಳ್ಳರ ಹಾವಳಿ ಪುನಃ ಶುರು, ಬೆಂಗಳೂರು ನಿವಾಸಿಗಳೇ ಎಚ್ಚರ!
ಚಡ್ಡಿ ಗ್ಯಾಂಗ್ ಕಳ್ಳರ ಹಾವಳಿ ಪುನಃ ಶುರು, ಬೆಂಗಳೂರು ನಿವಾಸಿಗಳೇ ಎಚ್ಚರ!
ಲೋಕಾಯುಕ್ತ ದಾಳಿ, ಹುಮ್ನಾಬಾದ್ ಸಾರಿಗೆ ತನಿಖಾ ಕಚೇರಿ ಸಿಬ್ಬಂದಿಗೆ ಶಾಕ್!
ಲೋಕಾಯುಕ್ತ ದಾಳಿ, ಹುಮ್ನಾಬಾದ್ ಸಾರಿಗೆ ತನಿಖಾ ಕಚೇರಿ ಸಿಬ್ಬಂದಿಗೆ ಶಾಕ್!
ಬಿಗ್ ಬಾಸ್​ನಲ್ಲಿ ದರ್ಶನ್ ವಿಚಾರ ಏಕೆ ಬರಲಿಲ್ಲ?
ಬಿಗ್ ಬಾಸ್​ನಲ್ಲಿ ದರ್ಶನ್ ವಿಚಾರ ಏಕೆ ಬರಲಿಲ್ಲ?
ಕ್ಯಾಪ್ಟನ್​ಗೆ ಲೈನ್ ಹಾಕೋಕೆ ಆರಂಭಿಸಿದ ಜಗದೀಶ್
ಕ್ಯಾಪ್ಟನ್​ಗೆ ಲೈನ್ ಹಾಕೋಕೆ ಆರಂಭಿಸಿದ ಜಗದೀಶ್
ನವರಾತ್ರಿ 6ನೇ ದಿನ ಕಾತ್ಯಾಯಿನಿ ದೇವಿ ಆರಾಧನೆ ಮಹತ್ವ ತಿಳಿಯಿರಿ
ನವರಾತ್ರಿ 6ನೇ ದಿನ ಕಾತ್ಯಾಯಿನಿ ದೇವಿ ಆರಾಧನೆ ಮಹತ್ವ ತಿಳಿಯಿರಿ