ಜಾಂಡಿಸ್ ಬಂದಾಗ ನಮ್ಮ ಕಣ್ಣು, ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು ಇದೇ ಕಾರಣಕ್ಕೆ!

ಕಾಮಾಲೆ ನಾವು ಅಂದ್ಕೊಂಡಷ್ಟು ಸಾಮಾನ್ಯ ಅಲ್ಲವೇ ಅಲ್ಲ. ಇದೊಂದು ಯಕೃತ್ತಿನ ಕಾರ್ಯಕ್ಕೆ ಸಂಬಂಧಿತ ಕಾಯಿಲೆಯಾಗಿದ್ದು ಇದನ್ನು ನಿರ್ಲಕ್ಷ್ಯ ಮಾಡದೆಯೇ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಸಮತೋಲಿತ ಆಹಾರ ಸೇವನೆ, ನಿಯಮಿತ ವ್ಯಾಯಾಮ ಮಾಡುವ ಮೂಲಕ ಯಕೃತ್ತು ಚೆನ್ನಾಗಿರುವಂತೆ ನೋಡಿಕೊಳ್ಳಬಹುದು. ಆದರೆ ಈ ಕಾಮಾಲೆ ಯಾಕೆ ಬರುತ್ತೆ? ಕಾಮಾಲೆ ಅಥವಾ ಜಾಂಡಿಸ್ ಬಂದಾಗ ಕಣ್ಣಿನ ಬಿಳಿ ಭಾಗ, ನಮ್ಮ ಚರ್ಮ, ಉಗುರು ಹಳದಿ ಬಣ್ಣಕ್ಕೆ ತಿರುಗುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ತಿಳಿದುಕೊಳ್ಳಿ.

ಜಾಂಡಿಸ್ ಬಂದಾಗ ನಮ್ಮ ಕಣ್ಣು, ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು ಇದೇ ಕಾರಣಕ್ಕೆ!
ಜಾಂಡಿಸ್

Updated on: Jun 24, 2025 | 8:35 PM

ಕಾಮಾಲೆ (Jaundice) ಒಂದು ಸಾಮಾನ್ಯ ಆರೋಗ್ಯ ಸಮಸ್ಯೆ ಅಲ್ಲವೇ ಅಲ್ಲ. ಆದರೆ ದೇಹ ಹಳದಿಯಾದಾಗಲೇ ಇದನ್ನು ಗುರುತಿಸಲಾಗುತ್ತದೆ. ಕಾಮಾಲೆ, ಜಾಂಡಿಸ್ ಅಥವಾ ಹಳದಿ ರೋಗದಿಂದ ಕಣ್ಣು, ಚರ್ಮ ಎಲ್ಲವೂ ಹಳದಿಯಾಗಿ ಗೋಚರಿಸುತ್ತವೆ. ಕೆಲವೊಮ್ಮೆ, ಇದನ್ನು ನಿರ್ಲಕ್ಷಿಸುವುದರಿಂದ ನಮ್ಮ ದೇಹಕ್ಕೆ ಅಪಾಯ ಹೆಚ್ಚಾಗಬಹುದು. ಏಕೆಂದರೆ ಇದನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿ ಗುಣಪಡಿಸಿಕೊಳ್ಳದಿದ್ದರೆ ಇದು ತೀವ್ರ ಹಂತಕ್ಕೆ ತಲುಪುವ ಸಾಧ್ಯತೆ ಇರುತ್ತದೆ. ಹಾಗಾಗಿಯೇ ಮೊದಲು ಇವುಗಳಿಗೆ ಸರಿಹೊಂದುವ ಮದ್ದನ್ನು ಮಾಡಬೇಕು. ಇದಕ್ಕೆ ನಾಟಿ ಔಷಧಿಯನ್ನೇ ಹೆಚ್ಚು ಆಯ್ಕೆ ಮಾಡುವುದರಿಂದ ಇದರಿಂದ ಆಗುವ ಅಪಾಯ ಕೂಡ ಕಡಿಮೆಯಾಗುತ್ತದೆ. ಜೊತೆಗೆ ಈ ಸಮಯದಲ್ಲಿ ಹೆಚ್ಚಿನ ಆರೈಕೆ, ವಿಶ್ರಾಂತಿ ರೋಗಿಗೆ ಬೇಕಾಗುತ್ತದೆ. ಆದರೆ ನಿಮಗೆ ಗೊತ್ತಾ? ಈ ರೋಗ ಬರುವುದಕ್ಕೆ ಕಾರಣವೇನು? ಯಾಕೆ ಕಾಮಾಲೆ ಅಥವಾ ಜಾಂಡಿಸ್ ಬಂದಾಗ ಕಣ್ಣಿನ ಬಿಳಿ ಭಾಗ, ನಮ್ಮ ಚರ್ಮ, ಉಗುರು ಹಳದಿ ಬಣ್ಣಕ್ಕೆ (Yellow Eyes and Nails) ತಿರುಗುತ್ತದೆ? ಈ ಎಲ್ಲಾ ಪ್ರಶ್ನೆಗೆ ಮಾಹಿತಿ ಈ ಲೇಖನದಲ್ಲಿದೆ.

ಸಾಮಾನ್ಯವಾಗಿ ಜಾಂಡಿಸ್ ಎಂಬ ಆರೋಗ್ಯ ಸಮಸ್ಯೆಯ ಬಗ್ಗೆ ತಿಳಿದುಕೊಂಡಾಗ ಮಾತ್ರ, ಅವುಗಳನ್ನು ವಾಸಿ ಮಾಡುವುದು ಹೇಗೆ ಎಂಬುದು ಅರ್ಥವಾಗುತ್ತದೆ. ಹಾಗಾಗಿ ಜಾಂಡಿಸ್ ಬಂದಾಗ ನಮ್ಮ ಕಣ್ಣು ಮತ್ತು ಚರ್ಮವು ಏಕೆ ಹಳದಿ ಬಣ್ಣಕ್ಕೆ ತಿರುಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಆರೋಗ್ಯ ತಜ್ಞರು ಹೇಳುವ ಪ್ರಕಾರ, ಕೆಂಪು ರಕ್ತ ಕಣಗಳಲ್ಲಿ ಬಿಲಿರುಬಿನ್ ಕಂಡುಬರುತ್ತದೆ. ಸಾಂದರ್ಭಿಕವಾಗಿ, ದೇಹದಲ್ಲಿ ಕೆಂಪು ರಕ್ತ ಕಣಗಳು ರೂಪುಗೊಂಡು ಸಾಯುತ್ತವೆ. ಯಕೃತ್ತು ಸತ್ತ ಜೀವಕೋಶಗಳನ್ನು ಫಿಲ್ಟರ್ ಮಾಡುತ್ತದೆ. ಅದು ಸಾಧ್ಯವಾಗದಿದ್ದಾಗ, ರಕ್ತದಲ್ಲಿನ ಬಿಲಿರುಬಿನ್ ಪ್ರಮಾಣವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದು ದೇಹದ ಇತರ ಭಾಗಗಳನ್ನು ತಲುಪುತ್ತದೆ. ಆಗ ನಮ್ಮ ದೇಹ ಪೂರ್ತಿ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದನ್ನು ಕಾಮಾಲೆ ಎಂದು ಕರೆಯಲಾಗುತ್ತದೆ. ಈ ರೋಗವನ್ನು ರಕ್ತ ಪರೀಕ್ಷೆಯ ಮೂಲಕ ಗುರುತಿಸಬಹುದಾಗಿದೆ.

ಜಾಂಡಿಸ್ ಲಕ್ಷಣಗಳು:

  • ಕಣ್ಣು, ಒಸಡು ಮೂತ್ರ ಮತ್ತು ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು
  • ಹಸಿವು ಕಡಿಮೆಯಾಗುವುದು
  • ವಾಂತಿ ಹೆಚ್ಚಾಗುವುದು
  • ಏನನ್ನೂ ತಿನ್ನಲು ಇಷ್ಟವಿಲ್ಲದಿರುವುದು
  • ಹೊಟ್ಟೆ ನೋವು
  • ದಣಿದ ಭಾವನೆ
  • ತೂಕ ಇಳಿಕೆ
  • ಆರಂಭಿಕ ಹಂತದ ವೈರಲ್ ಜ್ವರ
  • ಶೀತದ ಅನುಭವ
  • ಕಪ್ಪು ಬಣ್ಣದ ಮಲ

ಇದರಿಂದ ನಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?

  • ಕಲುಷಿತ ಆಹಾರ ಸೇವನೆ ಮಾಡುವುದನ್ನು ತಪ್ಪಿಸಿ.
  • ಮದ್ಯ ಸೇವಿಸಬೇಡಿ
  • ಕಾಯಿಸಿ, ಆರಿಸಿದ ನೀರನ್ನು ಕುಡಿಯಿರಿ
  • ಎಣ್ಣೆಯುಕ್ತ ಆಹಾರವನ್ನು ತಪ್ಪಿಸಿ ಜಂಕ್ ಫುಡ್ ನಿಂದ ದೂರವಿರಿ
  • ತಿನ್ನುವಾಗ ಶುಚಿತ್ವಕ್ಕೆ ವಿಶೇಷ ಗಮನ ಕೊಡಿ. ಯಾವುದೇ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ

ಇದನ್ನೂ ಓದಿ: ನವಜಾತ ಶಿಶುಗಳಿಗೆ ಕಾಮಾಲೆ ಏಕೆ ಬರುತ್ತದೆ? ಇಲ್ಲಿದೆ ಕಾರಣ

ಇದನ್ನೂ ಓದಿ
ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಲಕ್ಷಣಗಳು ಹೇಗಿರುತ್ತೆ ಗೊತ್ತಾ?
ಎಸಿಯಲ್ಲಿ ಗಂಟೆಗಟ್ಟಲೆ ಸಮಯ ಕಳೆಯುವವರಿಗೆ ಈ ಸಮಸ್ಯೆ ತಪ್ಪಿದ್ದಲ್ಲ
ರಾತ್ರಿ ಈ ರೀತಿ ಲಕ್ಷಣ ಕಂಡು ಬರುವುದು ಕಿಡ್ನಿ ಫೇಲ್ಯೂರ್ ಆಗುವ ಮುನ್ಸೂಚನೆ

ಜಾಂಡಿಸ್ ಬರುವುದಕ್ಕೆ ಕಾರಣಗಳು!

ಹೆಪಟೈಟಿಸ್ ಎ, ಬಿ, ಸಿ, ಡಿ ಮತ್ತು ಇ ನಂತಹ ವೈರಲ್ ಸೋಂಕುಗಳಿಂದ ಈ ಸಮಸ್ಯೆಗಳು ಉಂಟಾಗಬಹುದು.
ಪ್ಯಾರೆಸಿಟಮಾಲ್ ನಂತಹ ಕೆಲವು ಔಷಧಿಗಳ ಮಿತಿಮೀರಿದ ಸೇವನೆಯಿಂದಲೂ ಕೂಡ ಈ ರೀತಿಯ ಸಮಸ್ಯೆ ಕಾಣಿಸಿಕೊಳ್ಳಬಹುದು.
ವಿಷಕಾರಿ ಅಣಬೆ, ಇನ್ನಿತರ ವಿಷಕಾರಿ ಪದಾರ್ಥಗಳ ಸೇವನೆಯು ಇದಕ್ಕೆ ಕಾರಣವಾಗಬಹುದು.
ಪಿತ್ತರಸ ನಾಳಗಳು ಅಥವಾ ಪಿತ್ತಗಲ್ಲುಗಳ ಅಡಚಣೆಯು ಯಕೃತ್ತಿನ ಸಮಸ್ಯೆಗಳನ್ನು ಉಂಟುಮಾಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ