Clean Your Tiffin Box: ಟಿಫಿನ್ ಬಾಕ್ಸ್‌ನ ಶುಚಿತ್ವದ ಬಗ್ಗೆ ಕಡೆಗಣಿಸಬೇಡಿ, ಸೂಕ್ಷ್ಮಜೀವಿಗಳ ತಾಣವಾಗಬಹುದು
ಟಿಫಿನ್ ಬಾಕ್ಸ್ ಸ್ವಚ್ಛತೆ ಆರೋಗ್ಯಕ್ಕೆ ಅತ್ಯಂತ ಮುಖ್ಯ. ಪ್ರತಿದಿನ ಬಳಸುವ ಟಿಫಿನ್ ಬಾಕ್ಸ್ ಅನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ರೋಗಕಾರಕಗಳು ಬೆಳೆಯಬಹುದು. ಬಿಸಿ ನೀರು, ಡಿಶ್ ಸೋಪ್, ವಿನೆಗರ್, ನಿಂಬೆಹಣ್ಣು ಇತ್ಯಾದಿಗಳನ್ನು ಬಳಸಿ ಸ್ವಚ್ಛಗೊಳಿಸಬಹುದು. ತೊಳೆದ ನಂತರ ಚೆನ್ನಾಗಿ ಒಣಗಿಸುವುದು ಅತ್ಯಗತ್ಯ. ಸ್ವಚ್ಛವಾದ ಟಿಫಿನ್ ಬಾಕ್ಸ್ ಆರೋಗ್ಯಕರ ಊಟಕ್ಕೆ ಅನುಕೂಲವಾಗುತ್ತದೆ.

ಪ್ರತಿದಿನವೂ ಟಿಫಿನ್ ಬಾಕ್ಸ್ ಶಾಲೆ, ಕಾಲೇಜು ಅಥವಾ ಕೆಲಸಕ್ಕೆ ಊಟದೊಂದಿಗೆ ಹೋಗುತ್ತದೆ. ಆದರೆ ಈ ಬಾಕ್ಸ್ ಅನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಅದು ಕೆಟ್ಟ ವಾಸನೆ , ಗಲೀಜಾಗುವ, ತಿಂದರೆ ತೊಂದರೆ ಆಗುವಂತಹ ಸೂಕ್ಷ್ಮಜೀವಿಗಳ ತಾಣವಾಗಬಹುದು. ಆದ್ದರಿಂದ, ಟಿಫಿನ್ ಬಾಕ್ಸ್‌ನ ಶುದ್ಧತೆಯೂ ಆರೋಗ್ಯದ ರಕ್ಷಣೆಗೂ ಅವಿಭಾಜ್ಯವಾಗಿ ಸಂಬಂಧಿಸಿದೆ.
ಇಲ್ಲಿ ಕೆಲವು ಸರಳ ಮತ್ತು ಪರಿಣಾಮಕಾರಿ ಉಪಾಯಗಳಿವೆ:
ತಕ್ಷಣ ತೊಳೆಯುವುದು ಅನಿವಾರ್ಯ:
ಮನೆಗೆ ಬಂದ ಕೂಡಲೆ ಬಾಕ್ಸ್ ತೊಳೆಯಿರಿ. ಕೇವಲ ನೀರಿನಿಂದ ತೊಳೆದರೂ ಉತ್ತಮ. ನಂತರ ಒಣ ಬಟ್ಟೆಯಿಂದ ಒರೆಸಿ.
ಬಿಸಿ ನೀರು ಬಳಸಿ:
ಎಣ್ಣೆಯ ಆಹಾರ ಇದ್ದರೆ ಬಿಸಿ ನೀರು ಮತ್ತು ಕೆಲ ಹನಿ ಡಿಶ್ ಸೋಪ್ ಬಳಸಿ ನಿಧಾನವಾಗಿ ಸ್ಕ್ರಬ್ ಮಾಡಿ. ಇದು ಎಣ್ಣೆಯ ಕಲೆ ಮತ್ತು ದುರ್ಗಂಧವನ್ನು ದೂರ ಮಾಡುತ್ತದೆ.
ಸಂದು ಮೂಲೆಗಳಿಗೆ – ಟೂತ್‌ಬ್ರಷ್ ಬಳಸಿ:
ಬಾಕ್ಸ್‌ನ ಮೂಲೆಗಳಲ್ಲಿ ಆಹಾರದ ಕಣಗಳು ಇರುತ್ತವೆ. ಹಳೆಯ ಟೂತ್‌ಬ್ರಷ್‌ನಲ್ಲಿ ಡಿಶ್ ಸೋಪ್ ಹಚ್ಚಿ ಸ್ವಚ್ಛಗೊಳಿಸಿ. ಇದರಿಂದ ಬಾಕ್ಸ್‌ನ ಮೂಲೆಗಳಲ್ಲಿಯೂ ಸ್ವಚ್ಛವಾಗುತ್ತವೆ.
ಶುದ್ಧತೆಗಾಗಿ ವಿನೆಗರ್:
ಒಂದು ಚಿಕ್ಕ ಪಾತ್ರೆಯಲ್ಲಿ ಅರ್ಥದಷ್ಟು ನೀರು ಹಾಕಿ ಅದಕ್ಕೆ 2 ಸ್ಪೂನ್ ವಿನೆಗರ್ ಮತ್ತು ಕೆಲ ಹನಿ ಡಿಶ್ ಸೋಪ್ ಬಳಸಿ. ಇದರಲ್ಲಿ ಬಾಕ್ಸ್ ಅನ್ನು 15 ನಿಮಿಷ ನೆನೆಸಿ. ನಂತರ ಬಿಸಿ ನೀರಿನಲ್ಲಿ ತೊಳೆಯಿರಿ.
ನಿಂಬೆಹಣ್ಣಿನ ಸ್ಕ್ರಬ್:
ಅರ್ಧ ನಿಂಬೆಹಣ್ಣಿಗೆ ಡಿಶ್ ಸೋಪ್ ಹಚ್ಚಿ ಬಾಕ್ಸ್ ಮೇಲೆ ಸ್ಕ್ರಬ್ ಮಾಡಿ. ಇದು ತಾಜಾತನ ನೀಡುತ್ತದೆ ಮತ್ತು ವಾಸನೆ ದೂರ ಮಾಡುತ್ತದೆ.
ಟಿಫಿನ್ ಬಾಕ್ಸ್ ಒಣಗಿಸುವ ಪ್ರಕ್ರಿಯೆ:
ತೊಳೆಯುತ್ತಿದ್ದಂತೆ ಮುಚ್ಚಬೇಡಿ. ಸಂಪೂರ್ಣ ಗಾಳಿಯಲ್ಲಿ ಒಣಗಲು ಬಿಡಿ. ಸಾಧ್ಯವಾದರೆ ಸೂರ್ಯನ ಬೆಳಕಿನಲ್ಲಿ ಇಡಿ. ಒಂದು ಟಿಫಿನ್ ಬಾಕ್ಸ್ ಅಥವಾ ಬ್ಯಾಗ್ ಕೇವಲ ಪಾತ್ರೆಯಲ್ಲ, ಅದು ನಿತ್ಯ ಆರೋಗ್ಯದ ಕಾವಲುಗಾರ. ಅದನ್ನು ಸ್ವಚ್ಛವಾಗಿ ಇಡುವುದು ನಮ್ಮ ಆರೋಗ್ಯದ ಮೇಲೆಯೇ ಪ್ರತಿಬಿಂಬಿಸುತ್ತದೆ.
ಲೇಖನ: ಡಾ ರವಿಕಿರಣ ಪಟವರ್ಧನ ಶಿರಸಿ
ಆಯುರ್ವೇದ ವೈದ್ಯರು, ಶಿರಸಿ – 581401
ದೂರವಾಣಿ: 08384-225836
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
