ಸೌಮ್ಯವಾದ ಜ್ವರವು ಔಷಧಿಗಳಿಗಿಂತ ವೇಗವಾಗಿ ದೇಹದ ಸೋಂಕು ಕಡಿಮೆ ಮಾಡಲು ಸಹಾಯ ಮಾಡುತ್ತದೆ: ಅಧ್ಯಯನ
ಜರ್ನಲ್ ಇಮ್ಯುನೊಲಾಜಿ ಮತ್ತು ಇನ್ಫ್ಲಮೆಷನ್‌ನಲ್ಲಿ ಪ್ರಕಟವಾದ ಅಧ್ಯಯನವೊಂದು, ಸೌಮ್ಯವಾದ ಜ್ವರವು ನಿಮ್ಮ ದೇಹದ ಸೋಂಕುಗಳನ್ನು ತ್ವರಿತವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಉರಿಯೂತವನ್ನು ನಿಯಂತ್ರಿಸುತ್ತದೆ ಮತ್ತು ಅಂಗಾಂಶಗಳ ಹಾನಿಯನ್ನು ಸರಿಪಡಿಸುತ್ತದೆ ಎಂದು ತಿಳಿಸಿದೆ.
ಜರ್ನಲ್ ಇಮ್ಯುನೊಲಾಜಿ ಮತ್ತು ಇನ್ಫ್ಲಮೆಷನ್‌ನಲ್ಲಿ ಪ್ರಕಟವಾದ ಅಧ್ಯಯನವೊಂದು, ಸೌಮ್ಯವಾದ ಜ್ವರವು ನಮ್ಮ ದೇಹದ ಸೋಂಕುಗಳನ್ನು ತ್ವರಿತವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮತ್ತು ಉರಿಯೂತವನ್ನು ನಿಯಂತ್ರಿಸುತ್ತದೆ ಮತ್ತು ಅಂಗಾಂಶಗಳ ಹಾನಿಯನ್ನು ಸರಿಪಡಿಸುತ್ತದೆ ಎಂದು ತೋರಿಸಿದೆ. ಪ್ರಕೃತಿ ಏನು ಮಾಡುತ್ತದೆ ಎಂಬುವುದನ್ನು ನಾವು ತೋರಿಸುತ್ತೇವೆ. ಈ ಸಂದರ್ಭದಲ್ಲಿ ಇದು ಧನಾತ್ಮಕ ವಿಷಯವಾಗಿದೆ ಎಂದು ಕೆನಡಾದ ಆಲ್ಬರ್ಟಾ ವಿಶ್ವವಿದ್ಯಾನಿಲಯದ ಅಧ್ಯಯನದ ಪ್ರಮುಖ ಲೇಖಕ ಹಾಗೂ ಇಮ್ಯುನೊಲೊಜಿಸ್ಟ್ ಡೇನಿಯಲ್ ಬ್ಯಾರೆಡಾ ಹೇಳುತ್ತಾರೆ.
ಮಾನವರಿಗೆ ನೈಸರ್ಗಿಕ ಜ್ವರದ ಆರೋಗ್ಯ ಪ್ರಯೋಜನಗಳ ಕುರಿತು ಇನ್ನೂ ಸಂಶೋಧನೆಯ ಮೂಲಕ ದೃಢೀಕರಿಸಬೇಕಾಗಿದೆ ಎಂದು ಸಂಶೋಧಕರು ಗಮನಿಸಿದರು. ಸೌಮ್ಯವಾದ ಜ್ವರ ಸ್ಟಿರಾಯ್ಡ್ ಅಲ್ಲದ ಉರಿಯೂತದ ಲಕ್ಷಣಗಳನ್ನು ಹೊಂದಿರುತ್ತವೆ. ಎನ್‌ಎಸ್‌ಎಐಡಿಗಳು ಜ್ವರದಿಂದ ಅನುಭವಿಸುವ ಅಸ್ವಸ್ಥತೆಯನ್ನು ತೆಗೆದುಹಾಕುತ್ತವೆ. ಆದರೆ ಈ ನೈಸರ್ಗಿಕ ಪ್ರಕ್ರಿಯೆಯು ಇನ್ನೂ ಕೆಲವು ಪ್ರಯೋಜನಗಳನ್ನು ಹೊಂದಿದೆ ಎಂದು ಬ್ಯಾರೆಡಾ ಹೇಳುತ್ತಾರೆ.
ಸೌಮ್ಯವಾದ ಜ್ವರದ ಪ್ರಯೋಜನಗಳಿಗೆ ಕಾರಣವಾಗುವ ಕಾರ್ಯವಿಧಾನಗಳ ಕುರಿತು ತಿಳಿಯಲು ಈ ಅಧ್ಯಯನ ಸಹಾಯ ಮಾಡುತ್ತದೆ. ಮೀನುಗಳ ಮೇಲೆ ಈ ಸಂಶೋಧನೆಯನ್ನು ಮಾಡಲಾಯಿತು. ಅಧ್ಯಯನಕ್ಕಾಗಿ ಮೀನುಗಳಿಗೆ ಬ್ಯಾಕ್ಟೀರಿಯಾ ಸೋಂಕುಗಳನ್ನು ನೀಡಲಾಯಿತು ಮತ್ತು ನಂತರ ಅವುಗಳ ನಡವಳಿಕೆಗಳನ್ನು ಪತ್ತೆಹಚ್ಚಲಾಯಿತು. ಕೃತಕ ಬುದ್ಧಿಮತ್ತತೆಯ ಒಂದು ರೂಪವಾದ ಯಂತ್ರ ಕಲಿಕೆಯನ್ನು ಬಳಸಿಕೊಂಡು ಇದನ್ನು ಮೌಲ್ಯಮಾಪನ ಮಾಡಲಾಯಿತು. ನಿಶ್ಚಲತೆ, ಆಯಾಸ ಮತ್ತು ಅಸ್ವಸ್ಥತೆ ಸೇರಿದಂತೆ ಜ್ವರದಿಂದ ಮಾನವರಲ್ಲಿ ಕಂಡುಬರುವ ಬಾಹ್ಯ ಲ್ಷಣಗಳು ಹೋಲುತ್ತದೆ ಎಂದು ಈ ಅಧ್ಯಯನದಲ್ಲಿ ಸಂಶೋಧಕರು ಕಂಡುಕೊಂಡರು.
ಇದನ್ನೂ ಓದಿ: ದಿನವಿಡೀ ತಲೆನೋವಿನಿಂದ ಬಳಲುತ್ತಿದ್ದೀರಾ? ಈ 5 ಆಹಾರಗಳು ತಲೆನೋವಿಗೆ ರಾಮಬಾಣ
ನೈಸರ್ಗಿಕ ಜ್ವರವು ಸೋಂಕಿನ ವಿರುದ್ಧ ರಕ್ಷಣೆಯನ್ನು ಸಕ್ರಿಯಗೊಳಿಸುವುದಲ್ಲದೆ, ಅದನ್ನು ನಿಯಂತ್ರಿಸಲು ಸಹಾಯ ಮಾಡುವ ಸಮಗ್ರ ಪ್ರತಿಕ್ರಿಯೆಯನ್ನು ನೀಡುತ್ತದೆ ಎಂದು ಈ ಸಂಶೋಧನೆಯಿಂದ ತಿಳಿದುಬಂದಿದೆ. ಜ್ವರವು ಸುಮಾರು ಏಳು ದಿನಗಳಲ್ಲಿ ಮೀನಿನ ಸೋಂಕುಗಳನ್ನು ತೆರವುಗೊಳಿಸಲು ಸಹಾಯ ಮಾಡಿದೆ ಎಂಬುದನ್ನು ಅಧ್ಯಯನದಲ್ಲಿ ಸಂಶೋಧಕರು ಕಂಡುಕೊಂಡಿದ್ದಾರೆ. ಜೊತೆಗೆ ಜ್ವರವು ಉರಿಯೂತವನ್ನು ಕಡಿಮೆ ಮಾಡಲು ಹಾಗೂ ಗಾಯಗೊಂಡ ಅಂಗಾಶಗಳನ್ನು ಸರಿಪಡಿಸಲು ಸಹಾಯ ಮಾಡಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 12:34 pm, Sat, 18 March 23