Lassa Fever: ಇಂಗ್ಲೆಂಡ್​ನಲ್ಲಿ ಲಸ್ಸಾ ಜ್ವರದಿಂದ ಮೊದಲ ಸಾವು ದಾಖಲು; ಈ ರೋಗದ ಲಕ್ಷಣಗಳೇನು?

ಎಬೋಲಾ, ಡೆಂಗ್ಯೂ ಮಾದರಿಯ ವೈರಸ್​ಗಳಿಂದ ಉಂಟಾಗುವ ಲಸ್ಸಾ ಜ್ವರ ಮಾರಣಾಂತಿಕವಾದುದು. ಬ್ರಿಟನ್​ನಲ್ಲಿ ಲಸ್ಸಾ ಜ್ವರದಿಂದ ಮೊದಲ ಸಾವು ದಾಖಲಾಗಿ ಆತಂಕ ಮೂಡಿಸಿದೆ. ಹಾಗಾದರೆ, ಇಲಿಗಳಿಂದ ಹರಡುವ ಲಸ್ಸಾ ಜ್ವರದ ಲಕ್ಷಣಗಳೇನು? ಇಲ್ಲಿದೆ ಪೂರ್ತಿ ಮಾಹಿತಿ.

Lassa Fever: ಇಂಗ್ಲೆಂಡ್​ನಲ್ಲಿ ಲಸ್ಸಾ ಜ್ವರದಿಂದ ಮೊದಲ ಸಾವು ದಾಖಲು; ಈ ರೋಗದ ಲಕ್ಷಣಗಳೇನು?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Feb 15, 2022 | 1:04 PM

ಇಡೀ ವಿಶ್ವವೇ ಕೊವಿಡ್-19 (Covid-19) ಭೀತಿಯಿಂದ ತತ್ತರಿಸಿದೆ. ಇನ್ನೂ ಹಲವು ದೇಶಗಳಲ್ಲಿ ಒಮಿಕ್ರಾನ್ ರೂಪಾಂತರಿ (Omicron Variant Virus) ವೈರಸ್ ಕೂಡ ಆತಂಕವನ್ನು ಹೆಚ್ಚಿಸಿದೆ. ಇದರ ನಡುವೆ ಇಂಗ್ಲೆಂಡ್​ನಲ್ಲಿ ಲಸ್ಸಾ ಜ್ವರದಿಂದ ಬಳಲುತ್ತಿರುವ ಮೂವರಲ್ಲಿ ಒಬ್ಬರು ಫೆಬ್ರವರಿ 11ರಂದು ಸಾವನ್ನಪ್ಪಿದ್ದಾರೆ. ಈ ಪ್ರಕರಣಗಳು ಪಶ್ಚಿಮ ಆಫ್ರಿಕಾದ ದೇಶಗಳಿಗೂ ಹರಡುವ ಸಾಧ್ಯತೆಯಿದೆ. ಎಬೋಲಾ ಮಾದರಿಯ ವೈರಸ್​ಗಳಿಂದ ಉಂಟಾಗುವ ಲಸ್ಸಾ ಜ್ವರ (Lassa Fever) ಮಾರಣಾಂತಿಕವಾದುದು. ಪಶ್ಚಿಮ ಆಫ್ರಿಕಾಗೆ ಭೇಟಿ ನೀಡಿದ್ದ ಬ್ರಿಟನ್ ಕುಟುಂಬಸ್ಥರಲ್ಲಿ ಮೊದಲ ಬಾರಿಗೆ ಲಸ್ಸಾ ಜ್ವರ ಕಾಣಿಸಿಕೊಂಡು ಇಂಗ್ಲೆಂಡ್​ನಲ್ಲಿ ಆತಂಕ ಮೂಡಿಸಿದೆ. ಹಾಗಾದರೆ, ಇಲಿಗಳಿಂದ ಹರಡುವ ಲಸ್ಸಾ ಜ್ವರದ ಲಕ್ಷಣಗಳೇನು? ಇಲ್ಲಿದೆ ಪೂರ್ತಿ ಮಾಹಿತಿ.

ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಷನ್ ಆ್ಯಂಡ್ ಕಂಟ್ರೋಲ್ ಪ್ರಕಾರ, ಈ ಲಸ್ಸಾ ಜ್ವರದ ಸುಮಾರು ಶೇ. 80ರಷ್ಟು ಪ್ರಕರಣಗಳು ಲಕ್ಷಣರಹಿತವಾಗಿವೆ. ಹೀಗಾಗಿ, ರೋಗನಿರ್ಣಯ ಬಹಳ ಕಷ್ಟಕರದ್ದಾಗಿದೆ. ಕೆಲವು ರೋಗಿಗಳು ಆಸ್ಪತ್ರೆಗೆ ದಾಖಲಾಗಬೇಕಾಗಬಹುದು. ಆಸ್ಪತ್ರೆಗೆ ದಾಖಲಾದ ಶೇ. 15 ರೋಗಿಗಳು ಸಾಯಬಹುದು. ಈ ಲಸ್ಸಾ ಜ್ವರ ಬಂದರೆ ವಿಪರೀತ ಜ್ವರ, ಗುಪ್ತಾಂಗದಲ್ಲಿ ರಕ್ತಸ್ರಾವ ಉಂಟಾಗುತ್ತದೆ.

ಲಸ್ಸಾ ಜ್ವರ ಹೇಗೆ ಹರಡುತ್ತದೆ? ಅದರ ಲಕ್ಷಣಗಳೇನು?: ಲಸ್ಸಾ ಜ್ವರವನ್ನು ಹರಡುವ ವೈರಸ್ ಪಶ್ಚಿಮ ಆಫ್ರಿಕಾದಲ್ಲಿ ಕಂಡುಬಂದಿದೆ. ಇದನ್ನು ಮೊದಲು 1969ರಲ್ಲಿ ನೈಜೀರಿಯಾದ ಲಸ್ಸಾದಲ್ಲಿ ಕಂಡುಹಿಡಿಯಲಾಯಿತು. ನೈಜೀರಿಯಾದಲ್ಲಿ ಇಬ್ಬರು ನರ್ಸ್​ಗಳು ಸಾವನ್ನಪ್ಪಿದ ನಂತರ ಈ ರೋಗದ ಆವಿಷ್ಕಾರವನ್ನು ಮಾಡಲಾಯಿತು. ಈ ಜ್ವರವು ಇಲಿಗಳಿಂದ ಹರಡುತ್ತದೆ. ಈ ಇಲಿ ಜ್ವರ ಪ್ರಾಥಮಿಕವಾಗಿ ಪಶ್ಚಿಮ ಆಫ್ರಿಕಾದ ಸಿಯೆರಾ ಲಿಯೋನ್, ಲೈಬೀರಿಯಾ, ಗಿನಿಯಾ ಮತ್ತು ನೈಜೀರಿಯಾ ಸೇರಿದಂತೆ ಸ್ಥಳೀಯ ದೇಶಗಳಲ್ಲಿ ಕಂಡುಬಂದಿದೆ.

ಸೋಂಕಿತ ಇಲಿಯ ಮೂತ್ರ ಅಥವಾ ಮಲದ ಸಂಪರ್ಕದಿಂದ ಒಬ್ಬ ವ್ಯಕ್ತಿಯು ಲಸ್ಸಾ ಜ್ವರದ ಸೋಂಕಿಗೆ ಒಳಗಾಗಬಹುದು. ಒಬ್ಬ ವ್ಯಕ್ತಿಯು ಅನಾರೋಗ್ಯದ ವ್ಯಕ್ತಿಯ ಸೋಂಕಿತ ದೈಹಿಕ ದ್ರವಗಳೊಂದಿಗೆ ಸಂಪರ್ಕಕ್ಕೆ ಬಂದರೆ ಅಥವಾ ಕಣ್ಣು, ಮೂಗು ಅಥವಾ ಬಾಯಿಯಂತಹ ಲೋಳೆಯ ಪೊರೆಗಳ ಮೂಲಕ ಈ ಜ್ವರ ಹರಡಬಹುದು. ಈ ಲಸ್ಸಾ ಜ್ವರಕ್ಕೆ ಸೂಕ್ತವಾದ ಔಷಧವಿಲ್ಲ. ನಮ್ಮ ದೇಹದಲ್ಲಿರುವ ರೋಗನಿರೋಧಕ ಶಕ್ತಿ ಹೆಚ್ಚಾಗಿದ್ದರೆ ಲಸ್ಸಾ ಜ್ವರ ಬಾರದಂತೆ ತಡೆಯಬಹುದು.

ಆದರೂ, ರೋಗಲಕ್ಷಣಗಳು ಕಾಣಿಸಿಕೊಳ್ಳುವ ಮೊದಲು ಜನರಿಗೆ ಸಾಮಾನ್ಯವಾಗಿ ಈ ಲಸ್ಸಾ ಜ್ವರ ಸಾಂಕ್ರಾಮಿಕವಾಗಿ ಹರಡುವುದಿಲ್ಲ. ತಬ್ಬಿಕೊಳ್ಳುವುದು, ಕೈಕುಲುಕುವುದು ಅಥವಾ ಸೋಂಕಿತ ವ್ಯಕ್ತಿಯ ಬಳಿ ಕುಳಿತುಕೊಳ್ಳುವುದು ಮುಂತಾದ ಸಾಂದರ್ಭಿಕ ಸಂಪರ್ಕದ ಮೂಲಕ ಲಸ್ಸಾ ಜ್ವರ ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ. ಡೆಂಗ್ಯೂ, ಎಬೋಲಾ ಲಕ್ಷಣಗಳಂತೆ ಈ ಲಸ್ಸಾ ಜ್ವರದ ಲಕ್ಷಣಗಳು ಕೂಡ ಇರುತ್ತವೆ.

ಈ ಲಸ್ಸಾ ಜ್ವರ ಬಂದ ನಂತರ 1ರಿಂದ 3 ವಾರಗಳ ನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸೌಮ್ಯವಾದ ರೋಗಲಕ್ಷಣಗಳಲ್ಲಿ ಸ್ವಲ್ಪ ಜ್ವರ, ಆಯಾಸ, ದೌರ್ಬಲ್ಯ ಮತ್ತು ತಲೆನೋವು ಕಾಣಿಸಿಕೊಳ್ಳುತ್ತದೆ. ಹೆಚ್ಚು ಗಂಭೀರವಾದ ರೋಗಲಕ್ಷಣಗಳು ರಕ್ತಸ್ರಾವ, ಉಸಿರಾಟದ ತೊಂದರೆ, ವಾಂತಿ, ಮುಖದ ಊತ, ಎದೆ, ಬೆನ್ನು ಮತ್ತು ಹೊಟ್ಟೆ ಮತ್ತು ಆಘಾತವನ್ನು ಒಳಗೊಂಡಿರುತ್ತದೆ. ಲಸ್ಸಾ ಜ್ವರ ಕಾಣಿಸಿಕೊಂಡರೆ ಈ ವೈರಸ್​ನಿಂದ ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಸಾಮರ್ಥ್ಯ ಕುಗ್ಗುತ್ತದೆ. ಇದರ ಪರಿಣಾಮವಾಗಿ ಬಹು ಅಂಗಾಂಗ ವೈಫಲ್ಯವೂ ಸಂಭವಿಸಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.

ರೋಗಲಕ್ಷಣಗಳ ಪ್ರಾರಂಭದ ಎರಡು ವಾರಗಳಿಂದ ಸಾವು ಸಂಭವಿಸಬಹುದು. ಲಸ್ಸಾ ಜ್ವರ ಬಂದವರಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಜನರು ವಿವಿಧ ಹಂತದ ಕಿವುಡುತನವನ್ನು ಅನುಭವಿಸುತ್ತಾರೆ. ಅಂತಹ ಅನೇಕ ಸಂದರ್ಭಗಳಲ್ಲಿ ಕಿವ ಕೇಳದಂತಾಗುತ್ತದೆ. ಕಿವುಡುತನವು ಜ್ವರದ ಸೌಮ್ಯವಾದ ಮತ್ತು ತೀವ್ರ ಸ್ವರೂಪಗಳೆರಡರಲ್ಲೂ ಸಂಭವಿಸಬಹುದು. ಈ ಲಸ್ಸಾ ಜ್ವರಕ್ಕೆ ಒಳಗಾಗುವುದನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ಇಲಿಗಳ ಸಂಪರ್ಕವನ್ನು ತಪ್ಪಿಸುವುದು. ಇಲಿಗಳು ಮನೆಗೆ ಪ್ರವೇಶಿಸುವುದನ್ನು ತಡೆಯಲು ಇತರ ಪ್ರದೇಶಗಳಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇಲಿ-ನಿರೋಧಕ ಪಾತ್ರೆಗಳಲ್ಲಿ ಆಹಾರವನ್ನು ಇಡುವುದು ಮತ್ತು ಇಲಿ ಬಲೆಗಳನ್ನು ಇಡುವುದರಿಂದ ಲಸ್ಸಾ ಜ್ವರ ಬಾರದಂತೆ ಮುನ್ನೆಚ್ಚರಿಕೆ ವಹಿಸಬಹುದು.

ಇದನ್ನೂ ಓದಿ: Health Tips: ಆ್ಯಸಿಡಿಟಿ, ಅಜೀರ್ಣದಿಂದ ಬಳಲುತ್ತಿದ್ದೀರಾ?; ಆಯುರ್ವೇದದಲ್ಲಿದೆ ಸುಲಭ ಪರಿಹಾರ

Winter Health Tips: ಚಳಿಗಾಲದಲ್ಲಿ ಎದುರಾಗಲಿದೆಯೇ ಶೀತ, ಜ್ವರ? 5 ಆಹಾರ ಪದಾರ್ಥಗಳಲ್ಲಿದೆ ಸಮಸ್ಯೆಗೆ ಪರಿಹಾರ

Published On - 1:03 pm, Tue, 15 February 22

ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ