ಮಧ್ಯರಾತ್ರಿ 1 ಗಂಟೆಗೆ ಉಕ್ರೇನ್ ಮೇಲೆ ರಷ್ಯಾ ದಾಳಿ: ಅಮೆರಿಕ ಗುಪ್ತಚರ ಮೂಲಗಳಿಂದ ಗುಟ್ಟು ರಟ್ಟು

ರಷ್ಯಾದ ಸುಮಾರು 2 ಲಕ್ಷ ಸೈನಿಕರು ಉಕ್ರೇನ್ ಗಡಿ ದಾಟಿ ದಾಳಿ ನಡೆಸಲಿದ್ದಾರೆ. ಈ ವೇಳೆ ದೊಡ್ಡಮಟ್ಟದಲ್ಲಿ ಕ್ಷಿಪಣಿ ದಾಳಿಗೂ ರಷ್ಯಾ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ

ಮಧ್ಯರಾತ್ರಿ 1 ಗಂಟೆಗೆ ಉಕ್ರೇನ್ ಮೇಲೆ ರಷ್ಯಾ ದಾಳಿ: ಅಮೆರಿಕ ಗುಪ್ತಚರ ಮೂಲಗಳಿಂದ ಗುಟ್ಟು ರಟ್ಟು
ಉಕ್ರೇನ್ ಗಡಿಯಲ್ಲಿ ರಷ್ಯಾ ಸೇನೆ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 15, 2022 | 9:03 PM

ವಾಷಿಂಗ್​ಟನ್: ಉಕ್ರೇನ್-ರಷ್ಯಾ ಗಡಿ ಸಂಘರ್ಷವು ನಿರ್ಣಾಯಕ ಘಟಕ್ಕೆ ಬಂದಿದ್ದು ಬುಧವಾರ (ಫೆ 16) ನಸುಕಿನ 1 ಗಂಟೆಗೆ ರಷ್ಯಾದ ಸುಮಾರು 2 ಲಕ್ಷ ಸೈನಿಕರು ಉಕ್ರೇನ್ ಗಡಿ ದಾಟಿ ದಾಳಿ ನಡೆಸಲಿದ್ದಾರೆ. ಈ ವೇಳೆ ದೊಡ್ಡಮಟ್ಟದಲ್ಲಿ ಕ್ಷಿಪಣಿ ದಾಳಿಗೂ ರಷ್ಯಾ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಅಮೆರಿಕದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಈ ಮೊದಲು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಉಕ್ರೇನ್ ಗಡಿಯಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿರುವುದಾಗಿ ಹೇಳಿದ್ದರು. ಈ ಹೇಳಿಕೆಯನ್ನು ಅಮೆರಿಕ ನೇತೃತ್ವದ ರಕ್ಷಣಾ ಮೈತ್ರಿಕೂಟ ಸಂಘಟನೆ ನ್ಯಾಟೊ ಸಾರಾಸಗಟಾಗಿ ತಳ್ಳಿ ಹಾಕಿತ್ತು.

‘ಉಕ್ರೇನ್ ಗಡಿಯಿಂ ರಷ್ಯಾ ಸೇನೆ ಹಿಂದಿರುಗುತ್ತಿರುವ ಬಗ್ಗೆ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಬದಲಾಗಿ ರಷ್ಯಾ ವಲಯದಲ್ಲಿ ಸೇನಾ ಚಟುವಟಿಕೆಗಳು ಹೆಚ್ಚಾಗಿವೆ. ಉಕ್ರೇನ್ ಗಡಿಯಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುವುದು ಎಂಬ ರಷ್ಯಾದ ಹೇಳಿಕೆಯನ್ನು ನಂಬಲು ಸಾಧ್ಯವಿಲ್ಲ’ ಎಂದು ನ್ಯಾಟೊ ಮಹಾಪ್ರಧಾನ ಕಾರ್ಯದಶಿರ್ ಜೆನ್ಸ್​ ಸ್ಟೋಲ್ಟೆನ್​ರ್ಬಗ್​ ಬ್ರಸೆಲ್ಸ್​ನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಈ ಹೇಳಿಕೆಯನ್ನು ಬಿಬಿಸಿ ಸುದ್ದಿವಾಹಿನಿ ಪ್ರಸಾರ ಮಾಡಿದೆ.

ಉಕ್ರೇನ್ ವಿಚಾರವಾಗಿ ಪಾಶ್ಚಿಮಾತ್ಯ ದೇಶಗಳೊಂದಿಗೆ ಮಾತುಕತೆ ನಡೆಸಲು ಸಿದ್ಧ ಎಂದು ರಷ್ಯಾ ಸೋಮವಾರವಷ್ಟೇ (ಫೆ 14) ಘೋಷಿಸಿತ್ತು. ಇದ್ದಕ್ಕಿದ್ದ ಉಕ್ರೇನ್ ಗಡಿಯಲ್ಲಿ ಸೇನಾ ಚಟುವಟಿಕೆ ಹೆಚ್ಚಾದ ಕುರಿತು ಸ್ಪಷ್ಟನೆ ನೀಡಿದ್ದ ರಷ್ಯಾ, ಒಂದಿಷ್ಟು ತುಕಡಿಗಳು ತಮ್ಮ ಮೂಲ ನೆಲೆಗೆ ಹೊರಟಿವೆ. ಉಕ್ರೇನ್ ಮೇಲಿನ ದಾಳಿ ಭೀತಿ ಅನಗತ್ಯ ಎಂದಿತ್ತು. ಮಾಸ್ಕೋದಲ್ಲಿ ರಷ್ಯಾ ಆಡಳಿತದ ಉನ್ನತ ಪ್ರತಿನಿಧಿಗಳು ಈ ಹೇಳಿಕೆ ಹರಿಬಿಟ್ಟ ಬೆನ್ನಿಗೇ ನ್ಯಾಟೊ ಪಡೆಗಳು ಉಕ್ರೇನ್ ಮೇಲಿನ ರಷ್ಯಾ ದಾಳಿಗೆ ಮುಹೂರ್ತ ನಿಗದಿಯಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿವೆ.

ಉಕ್ರೇನ್ ಮೇಲೆ ದಾಳಿ ನಡೆಸಿದರೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಅಮೆರಿಕ ಮತ್ತು ಅದರ ನ್ಯಾಟೊ ಸಹವರ್ತಿ ದೇಶಗಳು ಹಲವು ಬಾರಿ ಎಚ್ಚರಿಸಿವೆ. ಆದರೆ ಈ ವಿಚಾರದಲ್ಲಿ ನ್ಯಾಟೊದ ಎಲ್ಲ ಸದಸ್ಯ ದೇಶಗಳು ಈವರೆಗೆ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಪ್ರತಿ ದೇಶವೂ ರಷ್ಯಾದೊಂದಿಗೆ ವಿಭಿನ್ನ ರೀತಿಯ ಸಂಬಂಧ ಹೊಂದಿವೆ.

ಉಕ್ರೇನ್ ಗಡಿಯಲ್ಲಿ ನಡೆಯುತ್ತಿರುವ ಸೇನಾ ಚಟುವಟಿಕೆಗಳ ಬಗ್ಗೆ ಪಾಶ್ಚಿಮಾತ್ಯ ದೇಶಗಳ ಆಕ್ಷೇಪಗಳು ಮತ್ತು ಆತಂಕಗಳನ್ನು ರಷ್ಯಾ ತಳ್ಳಿ ಹಾಕಿತ್ತು. ತನಗೆ ಸೇರಿದ ಭೂಪ್ರದೇಶದಲ್ಲಿ ಎಲ್ಲಿ ಬೇಕಾದರೂ ಸೇನಾ ತುಕಡಿಗಳನ್ನು ನಿಯೋಜಿಸುವ ಸ್ವಾತಂತ್ರ್ಯ ನನಗಿದೆ ಎಂದು ರಷ್ಯಾ ಹೇಳಿತ್ತು. ಪೂರ್ವ ಉಕ್ರೇನ್​ನಲ್ಲಿ ರಷ್ಯಾ ಪರ ಬಂಡುಕೋರರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶದಲ್ಲಿ ಸೇನಾ ಚಟುವಟಿಕೆ ಹೆಚ್ಚಿಸುವ ಮೂಲಕ ಉಕ್ರೇನ್ ಉದ್ವಿಗ್ನ ಸ್ಥಿತಿ ತಲೆದೋರಲು ಕಾರಣವಾಗಿದೆ ಎಂದಿದ್ದರು.

ಇದನ್ನೂ ಓದಿ: Oil Price: ಉಕ್ರೇನ್ ನೆಪದಲ್ಲಿ ಅಮೆರಿಕ ವಿರುದ್ಧ ತೊಡೆತಟ್ಟಿ ನಿಂತ ರಷ್ಯಾ: ಭಾರತಕ್ಕೆ ತೈಲ ಬೆಲೆ ಏರಿಕೆಯ ಜೊತೆಗೆ ಆರ್ಥಿಕ ಕುಸಿತದ ಭೀತಿ

ಇದನ್ನೂ ಓದಿ: ಉಕ್ರೇನ್​ ಮೇಲೆ ಯುದ್ಧದ ಕಾರ್ಮೋಡ; ತಾತ್ಕಾಲಿಕವಾಗಿ ದೇಶ ತೊರೆಯುವಂತೆ ಅಲ್ಲಿರುವ ಭಾರತೀಯರಿಗೆ ಸೂಚನೆ ನೀಡಿದ ರಾಯಭಾರಿ ಕಚೇರಿ

ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ