ನಿದ್ರಾಹೀನತೆ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿದೆ ಪರಿಣಮಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ ಒತ್ತಡದ ಜೀವನಶೈಲಿ ಹಾಗೂ ಕಳಪೆ ಆಹಾರ ಕ್ರಮ. ನಿದ್ರಾಹೀನತೆ ಕೇವಲ ನಿಮ್ಮ ನಿದ್ದೆಗೆ ಅಡ್ಡಿಪಡಿಸುವುದು ಮಾತ್ರವಲ್ಲದೇ ಒಟ್ಟಾರೆ ಆರೋಗ್ಯದ ಮೇಲೂ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ. ಈ ಅಸ್ವಸ್ಥತೆಯು ನಿಮಗೆ ಸಾಕಷ್ಟು ಕಿರಿಕಿರಿಯನ್ನುಂಟು ಮಾಡುವುದರ ಜೊತೆಗೆ ಮಾನಸಿಕ ಆರೋಗ್ಯದ ಮೇಲೂ ಸಾಕಷ್ಟು ಸಮಸ್ಯೆಯನ್ನುಂಟು ಮಾಡುತ್ತದೆ. ಆಹಾರದ ವಿಷಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ನೀವು ಹಗಲಿನಲ್ಲಿ ಸೇವಿಸುವ ಕೆಲವೊಂದು ಆಹಾರಗಳು ರಾತ್ರಿಯಲ್ಲಿ ನಿದ್ದೆಗೆ ಅಡ್ಡಿಯುಂಟು ಮಾಡಬಹುದು. ಆದ್ದರಿಂದ ನಿದ್ರಾಹೀನತೆಗೆ ಕಾರಣವಾಗುವ ಕೆಲವೊಂದು ಪ್ರಮುಖ ಮೂರು ಆಹಾರಗಳು ಕುರಿತು ಮಾಹಿತಿ ಇಲ್ಲಿದೆ.
ಉತ್ತಮ ನಿದ್ರೆಗಾಗಿ, ಒಬ್ಬರು ಯಾವಾಗ ಏನು ತಿನ್ನುತ್ತಾರೆ ಎಂಬುದನ್ನು ಪರಿಶೀಲಿಸುವುದು ಕಡ್ಡಾಯವಾಗಿದೆ ಎಂದು ತಜ್ಞರು ಹೇಳುತ್ತಾರೆ. ನಿದ್ರಾಹೀನತೆಗೆ ಪ್ರಮುಖ ಕಾರಣವೆಂದರೆ ಸರಿಯಾದ ರೀತಿಯ ಆಹಾರವನ್ನು ಸೇವಿಸದಿರುವುದು. ಸಾಮಾನ್ಯವಾಗಿ ಚಾಕೊಲೇಟ್ ಹಾಗೂ ಡಾರ್ಕ್ ಚಾಕೊಲೇಟ್ ಹಗಲಿನಲ್ಲಿ ಅತಿಯಾಗಿ ಸೇವಿಸುವುದು ಕೂಡ ನಿದ್ರಾಹೀನತೆಗೆ ಪ್ರಮುಖ ಕಾರಣ ಎಂದು ತಜ್ಞರು ಎಚ್ಚರಿಸುತ್ತಾರೆ. ಹಾಲಿನಲ್ಲಿರುವ ಹೆಚ್ಚಿನ ಸಕ್ಕರೆಯು ಬಿಳಿ ಚಾಕೊಲೇಟ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು ಮತ್ತು ನಿದ್ರೆಗೆ ಅಡ್ಡಿಪಡಿಸಬಹುದು . ಮತ್ತೊಂದೆಡೆ, ಡಾರ್ಕ್ ಚಾಕೊಲೇಟ್ ಹೆಚ್ಚಿನ ಕೆಫೀನ್ ಅಂಶದಿಂದಾಗಿ ಕೆಫೀನ್, ಉತ್ತೇಜಕವಾಗಿರುವುದರಿಂದ, ದೇಹದಲ್ಲಿ ನಿದ್ರೆಯ ಹಾರ್ಮೋನುಗಳ ಬಿಡುಗಡೆಯನ್ನು ತಡೆಯುತ್ತದೆ.
ನಿದ್ರಾಹೀನತೆಗೆ ಕಾರಣವಾಗುವ ಮತ್ತೊಂದು ಪ್ರಮುಖ ಆಹಾರವೆಂದರೆ ಚೀಸ್. ಈ ಆಹಾರವು ಹೆಚ್ಚಿನ ಮಟ್ಟದ ಟೈರಮೈನ್ ಅನ್ನು ಹೊಂದಿರುತ್ತದೆ, ಇದು ರಾತ್ರಿಯ ನಿದ್ರೆಗೆ ಅಡ್ಡಿಯುಂಟು ಮಾಡುತ್ತದೆ. ಇದರಲ್ಲಿರುವ ಹೆಚ್ಚುವರಿ ಉಪ್ಪು ವ್ಯಕ್ತಿಯನ್ನು ನಿರ್ಜಲೀಕರಣಗೊಳಿಸುತ್ತದೆ ಮತ್ತು ನೀರಿನ ಧಾರಣವನ್ನು ಪ್ರೇರೇಪಿಸುತ್ತದೆ. ಇದರೊಂದಿಗೆ, ಅಧಿಕ ಉಪ್ಪಿನಿಂದ ಕೂಡಿದ ಮತ್ತೊಂದು ಆಹಾರವೆಂದರೆ ಚಿಪ್ಸ್. ಹಗಲಿನ ಹೊತ್ತಿನಲ್ಲಿ ಅತಿಯಾಗಿ ಚಿಪ್ಸ್ ತಿನ್ನುವುದು ರಾತ್ರಿ ಹೊತ್ತು ನಿಮ್ಮ ರಾತ್ರಿಯ ನಿದ್ದೆಗೆ ಅಡ್ಡಿಯುಂಟು ಮಾಡುತ್ತದೆ.
ಇದನ್ನೂ ಓದಿ: ಮಕ್ಕಳಲ್ಲಿ ಏಕಾಗ್ರತೆ ಕಡಿಮೆ ಮಾಡಿ ಹೈಪರ್ಆ್ಯಕ್ಟಿವ್ ಮಾಡುವ 5 ಆಹಾರಗಳಿವು
ಮಿಲ್ಕ್ ಚಾಕೊಲೇಟ್‌ನಂತಹ ಸಿಹಿತಿಂಡಿಗಳನ್ನು ಹಂಬಲಿಸುವ ಜನರು, ಬದಲಿಗೆ ಚೆರ್ರಿಗಳಂತಹ ಹಣ್ಣುಗಳನ್ನು ಸೇವಿಸಿ ಎಂದು ತಜ್ಞರು ಎಚ್ಚರಿಸುತ್ತಾರೆ. ಈ ಹಣ್ಣಿನಲ್ಲಿ ಮೆಲಟೋನಿನ್ ಅಧಿಕವಾಗಿದ್ದು, ಇದು ನಿದ್ರೆಗೆ ಪ್ರಚೋಧನೆ ನೀಡುತ್ತದೆ. ಜೊತೆಗೆ ನೀವು ಬಾದಾಮಿಯನ್ನು ಸೇವಿಸಬಹುದು. ಮೆಗ್ನೀಸಿಯಮ್‌ನಲ್ಲಿ ಸಮೃದ್ಧವಾಗಿರುವ ಬಾದಾಮಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: