
‘ಹೃದಯಾಘಾತ’ (heart attack) ಇತ್ತಿಚೀಗಿನ ದಿನಗಳಲ್ಲಿ ಮನುಷ್ಯರನ್ನು ಬಿಟ್ಟುಬಿಡದೆ ಕಾಡುತ್ತಿದೆ, ಇದಕ್ಕೆ ಸಣ್ಣವರು, ದೊಡ್ಡವರು ಎನ್ನುವ ಭೇದವಿಲ್ಲ. ಆದರೆ ಈ ಅಪಾಯದಿಂದ ಅನೇಕ ಜೀವಗಳು ಹೋಗಿದೆ. ಈ ಹೃದಯಾಘಾತದಿಂದ ತಪ್ಪಿಸಿಕೊಳ್ಳಲು ಹಲವು ರೀತಿಯ ಜೀವನ ಕ್ರಮಗಳನ್ನು, ಆಹಾರಗಳನ್ನು ಸೇವನೆ ಮಾಡುತ್ತಿರಬಹುದು. ಆದರೆ ಅದು ಎಷ್ಟಿರ ಮಟ್ಟಿಗೆ ಹೃದಯದ ಮೇಲೆ ಅಥವಾ ಹೃದಯಾಘಾತವನ್ನು ತಡೆಗಟ್ಟುತ್ತದೆ ಎಂಬುದನ್ನು ನೋಡಬೇಕಿದೆ. ಮಾತ್ರೆ ಇಲ್ಲದೆ ಈ ಹೃದಯಾಘಾತವನ್ನು ಆಹಾರದಿಂದಲ್ಲೇ ತಡೆಗಟ್ಟಬಹುದು ಎಂಬುದನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಜಪಾನ್‌ನ ಟೋಕಿಯೊದಲ್ಲಿರುವ ಟೊಹೊ ವಿಶ್ವವಿದ್ಯಾಲಯದ ಹೊಸ ಸಂಶೋಧನೆಯ ಪ್ರಕಾರ, ಅಕ್ಕಿ, ಕಾಫಿ ಮತ್ತು ಪಾಲಕ್‌ನಂತಹ ಸಾಮಾನ್ಯ ಆಹಾರಗಳಲ್ಲಿ ಕಂಡುಬರುವ ಫೆರುಲಿಕ್ ಆಮ್ಲ ಎಂಬ ನೈಸರ್ಗಿಕ ಉತ್ಕರ್ಷಣ ನಿರೋಧಕ ಹೃದಯಕ್ಕೆ ಪ್ರಮುಖ ಔಷಧವಾಗಿದೆ ಎಂದು ಹೇಳಿದ್ದಾರೆ.
ದಿ ಸನ್ ವರದಿಯ ಪ್ರಕಾರ , ಡಾ. ಕೆಂಟೊ ಯೋಶಿಯೋಕಾ ನೇತೃತ್ವದ ಮತ್ತು ಜರ್ನಲ್ ಆಫ್ ಕಾರ್ಡಿಯೋವಾಸ್ಕುಲರ್ ಫಾರ್ಮಾಕಾಲಜಿಯಲ್ಲಿ ಪ್ರಕಟವಾದ ಅಧ್ಯಯನದಲ್ಲಿ ತಿಳಿಸಿರುವ ಪ್ರಕಾರ, ಎದೆ ನೋವು, ಹೃದಯಾಘಾತ ಮತ್ತು ಮಾರಕ ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಲು ಫೆರುಲಿಕ್ ಆಮ್ಲದ ಪರಿಣಾಮ ಎಂದು ಹೇಳಲಾಗಿದೆ. ಮಾನವ ಹೃದಯ ನಾಳಗಳನ್ನು ನಿಕಟವಾಗಿ ಸರಿಹೊಂದುವ ಹಂದಿ ಪರಿಧಮನಿ ಅಪಧಮನಿಗಳನ್ನು ಬಳಸಿಕೊಂಡು ಫೆರುಲಿಕ್ ಆಮ್ಲ ಬಗ್ಗೆ ಅಧ್ಯಯನ ಮಾಡಲಾಗಿದೆ. ಇದು ಹೃದಯದ ಸಂಕೋಚನಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುವುದಲ್ಲದೆ, ಎರಡು ಪ್ರಬಲ ಅಘಾತಕ್ಕೆ ಕಾರಣವಾಗಿದೆ.
ಮೊದಲನೇ ಕಾರಣ, ಇದು ಅಪಧಮನಿಯ ಸಂಕೋಚನಗಳಿಗೆ ನೇರವಾಗಿ ಕಾರಣವಾಗುತ್ತದೆ. ಇದು ಸ್ನಾಯು ಕೋಶಗಳಿಗೆ ಕ್ಯಾಲ್ಸಿಯಂ ಹೋಗುವುದನ್ನು ತಡೆಯುತ್ತದೆ. ಎರಡನೇ ಕಾರಣ ಕ್ಯಾಲ್ಸಿಯಂ ಒಂದು ಅಂಶವಾಗಿಲ್ಲದಿದ್ದರೂ, ಇದು ಫೆರುಲಿಕ್ ಆಮ್ಲವು ಸ್ನಾಯುಗಳನ್ನು ಬಿಗಿಗೊಳಿಸಲು ಅಗತ್ಯವಾದ ಪ್ರೋಟೀನ್ ನೀಡುತ್ತದೆ. ಆಗಾ ಅಪಧಮನಿ ವಿಶ್ರಾಂತಿ ಮಾಡುವಲ್ಲಿ ಯಶಸ್ವಿ ಮಾಡುತ್ತದೆ. ಹೃದಯ ಸಮಸ್ಯೆಗಳಿರುವ ರೋಗಿಗಳಿಗೆ ಸಾಮಾನ್ಯವಾಗಿ ವಾಸೋಡಿಲೇಟರ್ ಔಷಧವಾದ ಡಿಲ್ಟಿಯಾಜೆಮ್ಗಿಂತ ಈ ಫೆರುಲಿಕ್ ಆಮ್ಲ ತುಂಬಾ ಉತ್ತಮ. ಫೆರುಲಿಕ್ ಆಮ್ಲವು ಸಸ್ಯ ಆಧಾರಿತ ಮತ್ತು ಸುರಕ್ಷಿತವೆಂದು ಹೇಳಲಾಗಿದೆ. ಇದು ಆರೋಗ್ಯಕರ ಆಹಾರ ಪದಾರ್ಥ, ಇದು ಭವಿಷ್ಯದ ಹೃದಯ ಔಷಧಿಗಳಿಗೆ ಅಡಿಪಾಯವಾಗಲಿದೆ ಎಂದು ಹೇಳಲಾಗಿದೆ ಎಂದು ಜರ್ನಲ್ ಆಫ್ ಕಾರ್ಡಿಯೋವಾಸ್ಕುಲರ್ ಫಾರ್ಮಾಕಾಲಜಿ ಡಾ. ಯೋಶಿಯೋಕಾ ತಿಳಿಸಿದ್ದಾರೆ.
ಇದನ್ನೂ ಓದಿ: ಮೊದಲ ಬಾರಿಗೆ ಯೋಗ ಮಾಡ್ತಾ ಇದ್ದೀರಾ? ತಜ್ಞರು ಹೇಳಿರುವ ಈ ವಿಷಯಗಳನ್ನು ಮರಿಬೇಡಿ
ಫೆರುಲಿಕ್ ಆಮ್ಲವು ಯಾವುದೇ ವಿಲಕ್ಷಣ ಗಿಡಮೂಲಿಕೆ ಅಥವಾ ಅಪರೂಪದ ಹಣ್ಣುಗಳಲ್ಲಿ ಇಲ್ಲ. ಇದು ನೀವು ಪ್ರತಿದಿನ ಸೇವಿಸುವ ಆಹಾರದಲ್ಲಿದೆ. ಅಕ್ಕಿ, ಕಾಫಿ ಮತ್ತು ಪಾಲಕ್ ಇಂತಹ ಆಹಾರಗಳಲ್ಲಿ ಈ ಫೆರುಲಿಕ್ ಆಮ್ಲ ಇದೆ ಎಂದು ಸಂಶೋಧನೆ ಹೇಳಿದೆ. ಇದು ಹೃದಯಾಘಾತ ಹಾಗೂ ಹೃದಯ ಆರೋಗ್ಯವನ್ನು ವೃದ್ಧಿಸುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:44 pm, Wed, 18 June 25